ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಕಾರ್ಯದರ್ಶಿಯಾಗಿ ಶ್ರೀ ಅಮೃತ್ ಲಾಲ್ ಮೀನಾ ಅಧಿಕಾರ ಸ್ವೀಕಾರ

Posted On: 01 NOV 2022 1:02PM by PIB Bengaluru

ಶ್ರೀ ಅಮೃತ್ ಲಾಲ್ ಮೀನಾ ಅವರು ಇಂದು ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಪ್ರಸ್ತುತ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು, 1989 ರ ಬಿಹಾರ ಕೇಡರ್ನ ಐಎಎಸ್ ಅಧಿಕಾರಿ ಶ್ರೀ ಅಮೃತ್ ಲಾಲ್ ಮೀನಾ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ವಿಶೇಷ ಕಾರ್ಯದರ್ಶಿ (ಲಾಜಿಸ್ಟಿಕ್ಸ್) ಉಸ್ತುವಾರಿಯನ್ನು ಹೊಂದಿದ್ದರು.

ಶ್ರೀ ಅಮೃತ್ ಲಾಲ್ ಮೀನಾ ಅವರು ಡಾ. ಅನಿಲ್ ಕುಮಾರ್ ಜೈನ್ ಅವರಿಂದ ಅಧಿಕಾರ ವಹಿಸಿಕೊಂಡರು, ಅವರು ನಿನ್ನೆ ಕಲ್ಲಿದ್ದಲು ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದರು.


(Release ID: 1872739)
Read this release in: English , Urdu , Hindi , Tamil