ಉಕ್ಕು ಸಚಿವಾಲಯ
ಆರ್‌ಸಿಎಸ್ ಉಡಾನ್ ಯೋಜನೆಯಡಿ ರೂರ್ಕೆಲಾ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಎಎಐ ಜತೆ ಎಸ್‌ಎಐಎಲ್ ಒಪ್ಪಂದಕ್ಕೆ ಸಹಿ ಹಾಕಿದೆ.
Posted On:
28 OCT 2022 6:59PM by PIB Bengaluru
ಭಾರತೀಯ ಉಕ್ಕು ಪ್ರಾಧಿಕಾರ ಲಿಮಿಟೆಡ್ (ಎಸ್‌ಎಐಎಲ್) ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಒಡಿಶಾ ರಾಜ್ಯದ ರೂರ್ಕೆಲಾದಿಂದ ವಾಣಿಜ್ಯ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ನವದೆಹಲಿಯಲ್ಲಿಇಂದು ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಮತ್ತು ಎಂ) ಒಪ್ಪಂದಕ್ಕೆ ಸಹಿ ಹಾಕಿದವು.
2018 ರಲ್ಲಿಎಸ್‌ಎಐಎಲ್, ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗಾಗಿ ಉಡಾನ್ ಯೋಜನೆಯಡಿ ತನ್ನದೇ ಆದ ವಿಮಾನ ನಿಲ್ದಾಣವನ್ನು ಬಳಸಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಈಗ, ಎಸ್‌ಎಐಎಲ್ ತನ್ನ ರೂರ್ಕೆಲಾ ಉಕ್ಕು ಘಟಕದ ಮೂಲಕ ಎಎಐನೊಂದಿಗೆ ಒ ಮತ್ತು ಎಂ (ಕಾರ್ಯಚರಣೆ ಮತ್ತು ನಿರ್ವಹಣೆ) ಒಪ್ಪಂದಕ್ಕೆ ಸಹಿ ಹಾಕಿದೆ, ಇದು ರೂರ್ಕೆಲಾದಿಂದ ವಾಣಿಜ್ಯ ವಿಮಾನಗಳ ಪ್ರಾರಂಭಕ್ಕೆ ಅನುಕೂಲ ಮಾಡಿಕೊಡುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯವು ಈ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಆರ್ಥಿಕ ಬೆಂಬಲವನ್ನು ಒದಗಿಸಿದೆ. ಒಡಿಶಾ ಸರ್ಕಾರವು ಇತರ ಸ್ಥಳೀಯ ಅನುಮತಿಗಳೊಂದಿಗೆ ಸಹಾಯ ಮಾಡುವುದರ ಜೊತೆಗೆ ಭದ್ರತೆ, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುತ್ತದೆ. ಎಎಐ, ಎಸ್‌ಎಐಎಲ್ - ರೂರ್ಕೆಲಾ ಉಕ್ಕು ಘಟಕದ ಪರವಾಗಿ, ವಿಮಾನ ನಿಲ್ದಾಣವನ್ನು ಕಾರ್ಯಚರಣೆ ಜತೆಗೆ ನಿರ್ವಹಿಸುತ್ತದೆ.
ಈ ವಿಮಾನ ನಿಲ್ದಾಣವು ಕೈಗಾರಿಕಾ ಪಟ್ಟಣವಾದ ರೂರ್ಕೆಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ಎಲ್ಲಾ ವಿಮಾನ ಪ್ರಯಾಣಿಕರಿಗೆ ಪರಿಹಾರವನ್ನು ಒದಗಿಸುತ್ತದೆ. 2023 ರ ಜನವರಿಯಲ್ಲಿ ರೂರ್ಕೆಲಾದಲ್ಲಿಒಟ್ಟು 44 ಪಂದ್ಯಗಳ ಪೈಕಿ 20 ಪಂದ್ಯಗಳು ನಡೆಯಲಿರುವ ಮುಂಬರುವ ಹಾಕಿ ವಿಶ್ವಕಪ್‌ಅನ್ನು ಗಮನದಲ್ಲಿಟ್ಟುಕೊಂಡು ವಿಮಾನ ಸೇವೆಗಳ ಪ್ರಾರಂಭವು ಸಹ ಮುಖ್ಯವಾಗಿದೆ. ಈ ಜಾಗತಿಕ ಟೂರ್ನಿಯ ಅವಧಿಯಲ್ಲಿ ರೂರ್ಕೆಲಾದಲ್ಲಿಭಾರಿ ಜನಸಂದಣಿಗೆ ಸಾಕ್ಷಿಯಾಗಲಿದೆ ಮತ್ತು ನಗರಕ್ಕೆ ವಿಮಾನ ಸಂಪರ್ಕದ ಅಗತ್ಯವು ವ್ಯವಸ್ಥಾಪನಾ ಕಾರಣಗಳಿಗಾಗಿ ಪ್ರಮುಖ ಅಗತ್ಯವಾಗಿರುತ್ತದೆ.
ದೇಶದ ಅತಿದೊಡ್ಡ ಉಕ್ಕು ಕಂಪನಿಗಳಲ್ಲಿಒಂದಾದ ಎಸ್‌ಎಐಎಲ್ ಮತ್ತು ‘ಮಹಾರತ್ನ’ ಸಿಪಿಎಸ್‌ಇ, ತನ್ನ ಉತ್ಪಾದನಾ ಸೌಲಭ್ಯಗಳ ಸುತ್ತಲಿನ ಬಾಹ್ಯ ಪ್ರದೇಶಗಳ ಅಭಿವೃದ್ಧಿಯಲ್ಲಿಸಕ್ರಿಯವಾಗಿ ಭಾಗವಹಿಸುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಪ್ರಯತ್ನವು ಈ ಪ್ರದೇಶದಲ್ಲಿಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ಸಾಧ್ಯತೆಯಿದೆ.
*****
(Release ID: 1871714)
Visitor Counter : 135