ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗೃಹ ವ್ಯವಹಾರಗಳ ಸಚಿವಾಲಯವು 2021ರಲ್ಲಿ ನಡೆಸಲಾದ ʻವಿಶೇಷ ಅಭಿಯಾನʼದ ಮಾದರಿಯಲ್ಲಿ 2022ರ ಅಕ್ಟೋಬರ್ 2 ರಿಂದ 31, 2022 ರವರೆಗೆ ʻವಿಶೇಷ ಅಭಿಯಾನ 2.0ʼ ಅನ್ನು ನಡೆಸುತ್ತಿದೆ


​​​​​​​ಸ್ವಚ್ಛತಾ ಅಭಿಯಾನಕ್ಕಾಗಿ 5,629 ಪ್ರಚಾರ ಸ್ಥಳಗಳನ್ನು ಗುರುತಿಸಲಾಗಿದೆ

ಸಾರ್ವಜನಿಕರ ಸಂಪರ್ಕ ಹೊಂದಿರುವ ಕ್ಷೇತ್ರ / ಹೊರವಲಯ ಕಚೇರಿಗಳ ಮೇಲೆ ವಿಶೇಷ ಗಮನ

Posted On: 26 OCT 2022 2:30PM by PIB Bengaluru

ಗೃಹ ವ್ಯವಹಾರಗಳ ಸಚಿವಾಲಯವು 2021ರಲ್ಲಿ ನಡೆಸಲಾದ ʻವಿಶೇಷ ಅಭಿಯಾನʼದ ಮಾದರಿಯಲ್ಲಿ  2022ರ ಅಕ್ಟೋಬರ್ 2ರಿಂದ 2022ರ ಅಕ್ಟೋಬರ್ 31ರವರೆಗೆ ʻವಿಶೇಷ ಅಭಿಯಾನ 2.0ʼ ಅನ್ನು ನಡೆಸುತ್ತಿದೆ. ಪೂರ್ವಸಿದ್ಧತಾ ಹಂತದಲ್ಲಿ (ಸೆಪ್ಟೆಂಬರ್ 14ರಿಂದ ಸೆಪ್ಟೆಂಬರ್  30, 2022 ರವರೆಗೆ), ಸಚಿವಾಲಯವು ಒಟ್ಟು 5,629 ಪ್ರಚಾರ ತಾಣಗಳನ್ನು ಸ್ವಚ್ಛತಾ ಅಭಿಯಾನಕ್ಕಾಗಿ ಗುರುತಿಸಿದೆ. ಸಾರ್ವಜನಿಕ ಸಂಪರ್ಕವನ್ನು ಹೊಂದಿರುವ ಕ್ಷೇತ್ರ / ಹೊರಠಾಣೆ ಕಚೇರಿಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಪರಿಣಾಮಕಾರಿ ಇತ್ಯರ್ಥಕ್ಕಾಗಿ ಸಂಸದರ ಉಲ್ಲೇಖಗಳು, ಸಂಸದೀಯ ಭರವಸೆಗಳು, ಐಎಂಸಿ ಉಲ್ಲೇಖಗಳು, ರಾಜ್ಯ ಸರಕಾರದ ಉಲ್ಲೇಖಗಳು, ಪ್ರಧಾನಮಂತ್ರಿಗಳ ಕಚೇರಿಗಳ ಉಲ್ಲೇಖಗಳು, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಜಿ ಅಪೀಲುಗಳಂತಹ ವಿವಿಧ ವಿಭಾಗಗಳಲ್ಲಿ ಬಾಕಿ ಪ್ರಕರಣಗಳನ್ನು ಗುರುತಿಸಲಾಗಿದೆ ಮತ್ತು ವಿಲೇವಾರಿ ಮಾಡಿ ʻಎನ್ಎಐʼಗೆ ಕಳುಹಿಸಲಾಗುವ ಕಡತಗಳನ್ನು ಗುರುತಿಸಲಾಗಿದೆ. 

ಲೆಹ್‌ನಿಂದ ಇಟಾನಗರದವರೆಗೆ ʻಸಿಎಪಿಎಫ್ʼಗಳು ʻವಿಶೇಷ ಅಭಿಯಾನ 2.0ʼ ಅನ್ನು ನಡೆಸುತ್ತಿವೆ. ಇತರ ಅಧೀನ ಕಚೇರಿಗಳು ಸಹ ಸಕ್ರಿಯವಾಗಿ ಭಾಗವಹಿಸುತ್ತಿವೆ. ವಿಶೇಷ ಅಭಿಯಾನದ ಪ್ರಚಾರದ ಭಾಗವಾಗಿ ದೊಡ್ಡ ಸಂಖ್ಯೆಯಲ್ಲಿ http://@PIBHomeAffairsಟ್ಯಾಗ್ ಬಳಸಿದ ಟ್ವೀಟ್‌ಗಳನ್ನು ʻಸಿಎಪಿಎಫ್‌ʼ ಮತ್ತು ದೆಹಲಿ ಪೊಲೀಸ್‌ ಇಲಾಖೆ ಮಾಡುತ್ತಿವೆ, ʻಪಿಐಬಿʼ ಟ್ವಿಟರ್ ಹ್ಯಾಂಡಲ್ ಅದನ್ನು ಮರು-ಟ್ವೀಟ್ ಮಾಡುತ್ತಿದೆ. 
ʻವಿಶೇಷ ಅಭಿಯಾನ 2.0ʼ ಗುರಿಯನ್ನು ಸಾಧಿಸಲು ಗೃಹ ಸಚಿವಾಲಯ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ʻವಿಶೇಷ ಅಭಿಯಾನ 2.0ʼರ ಕೆಲವು ಛಾಯಾಚಿತ್ರಗಳನ್ನು ಕೆಳಗೆ ಪ್ರದರ್ಶಿಸಲಾಗಿದೆ.

https://static.pib.gov.in/WriteReadData/userfiles/image/image0017LWL.jpg https://static.pib.gov.in/WriteReadData/userfiles/image/image002NSQD.jpg

ಮನೇಸರ್‌ಲ್ಲಿರುವ ಸಿ.ಎಚ್‌.(ಎನ್‌.ಎಸ್‌.ಜಿ) ಆಡಳಿತ ಬ್ಲಾಕ್‌ನ ಹಿಂಬದಿಯ ಪ್ರದೇಶದ ಚಿತ್ರಗಳು (ಮೊದಲು ಮತ್ತು ನಂತರ)
 

https://static.pib.gov.in/WriteReadData/userfiles/image/image0031CP4.jpg https://static.pib.gov.in/WriteReadData/userfiles/image/image004QLXD.jpg

236 ಬಿ.ಎನ್. ಜೆಜೆ ಕಾಲೋನಿ ಬಸ್ ನಿಲ್ದಾಣ ಸಂಖ್ಯೆ 02 ಬವಾನಾ, ಎನ್ /ಡಿಎಲ್ಐ (ಸಿಆರ್ಪಿಎಫ್) ಇದರ ಚಿತ್ರಗಳು (ಮೊದಲು ಮತ್ತು ನಂತರ)
 

https://static.pib.gov.in/WriteReadData/userfiles/image/image005J5PF.jpg                           https://static.pib.gov.in/WriteReadData/userfiles/image/image006RKYL.jpg           
ಛತ್ತೀಸ್‌ಗಢದ ಕರನ್‌ಪುರದ ಎಫ್ 204, 204 ʻಸಿ.ಒ.ಬಿ.ಆರ್‌.ಎ (CoBRA) ಚಿತ್ರಗಳು 
(ಮೊದಲು ಮತ್ತು ನಂತರ)

https://static.pib.gov.in/WriteReadData/userfiles/image/image0074XX3.jpg

https://static.pib.gov.in/WriteReadData/userfiles/image/image008VEQ7.jpg

ಚಾಕಿಯಾ ಬಸ್ ನಿಲ್ದಾಣ, ಚಾಂದೌಲಿ, ದಿನಾಂಕ 03/10/2022

https://static.pib.gov.in/WriteReadData/userfiles/image/image009KAM0.jpg

ಜಿ.ಬಿ.ಪಂತ್ ಆಸ್ಪತ್ರೆ, ಬಿ.ಬಿ.ಕಂಟೋನ್ಮೆಂಟ್‌, ಶ್ರೀನಗರ, ದಿನಾಂಕ 12/10/2022 ರಂದು 
 

               https://static.pib.gov.in/WriteReadData/userfiles/image/image010KUEF.jpg

ಬಿ.ಒ.ಸಿ ಚೌಕ್‌, ಗೋಲ್ಪಾರಾ, ದಿನಾಂಕ 11/10/2022

https://static.pib.gov.in/WriteReadData/userfiles/image/image011B8SG.jpg

ಎಂ.ಟಿ. ಪಾರ್ಕ್ (150 ಬಿ.ಎನ್‌., ಸುಕ್ಮಾ, ಛತ್ತೀಸ್‌ಗಢ್) ದಿನಾಂಕ 10/10/2022 ರಂದು ಇದ್ದಂತೆ

******


(Release ID: 1871061) Visitor Counter : 170