ಆಯುಷ್
2022 ರ ಅಕ್ಟೋಬರ್ 23 ರಂದು 7 ನೇ ಆಯುರ್ವೇದ ದಿನವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುವುದು
ಜನ ಸಂದೇಶ, ಜನ ಭಾಗೀದಾರಿ ಮತ್ತು ಜನ ಆಂದೋಲನ ಉದ್ದೇಶದೊಂದಿಗೆ 6 ವಾರಗಳ ಕಾಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು
Posted On:
22 OCT 2022 6:15PM by PIB Bengaluru
7 ನೇ ಆಯುರ್ವೇದ ದಿನವನ್ನು 2022 ರ ಅಕ್ಟೋಬರ್ 23 ರಂದು ವಿಶ್ವದಾದ್ಯಂತ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ. ನಮ್ಮ ಅತ್ಯಂತ ಪ್ರಾಚೀನ ಮತ್ತು ಉತ್ತಮವಾಗಿ ದಾಖಲಾದ ವೈದ್ಯಕೀಯ ಪದ್ಧತಿಯನ್ನು ಉತ್ತೇಜಿಸಲು 2016 ರಿಂದ ಧನ್ವಂತರಿ ಜಯಂತಿಯನ್ನು ಆಯುರ್ವೇದ ದಿನವಾಗಿ ಆಚರಿಸಲಾಗುತ್ತಿದೆ. ಇದರ ಮುಖ್ಯ ಕಾರ್ಯಕ್ರಮವು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ ಮತ್ತು ಇಡೀ ಸರ್ಕಾರದ ವಿಧಾನವಾಗಿ ಇತರ ಸಚಿವಾಲಯಗಳ ಬೆಂಬಲದೊಂದಿಗೆ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ವರ್ಷ ಭಾರತೀಯ ಮಿಷನ್ ಗಳು / ರಾಯಭಾರ ಕಚೇರಿಗಳು ಆಯಾ ದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಿವೆ.
ಮುಖ್ಯ ಅತಿಥಿಗಳಾಗಿ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರ ಉಪಸ್ಥಿತಿಯಲ್ಲಿ ಆಯುಷ್, ಬಂದರು, ಹಡಗು ಮತ್ತು ಜಲಸಾರಿಗೆ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್, ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ, ಆಯುಷ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೇಚಾ ಮತ್ತು ಇತರ ಗಣ್ಯರು ಪ್ರಧಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಈ ವರ್ಷದ ಆಯುರ್ವೇದ ದಿನವನ್ನು "ಹರ್ ದಿನ್ ಹರ್ ಘರ್ ಆಯುರ್ವೇದ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ, ಇದರಿಂದ ಆಯುರ್ವೇದದ ಪ್ರಯೋಜನಗಳನ್ನು ದೊಡ್ಡ ಮತ್ತು ತಳಮಟ್ಟದ ಸಮುದಾಯಕ್ಕೆ ಪ್ರಚುರಪಡಿಸಲಾಗುತ್ತಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು, 3- ಜೆ ಗಳ ಅಡಿಯಲ್ಲಿ ಅಂದರೆ ಜನ ಸಂದೇಶ, ಜನ ಭಾಗಿದಾರಿ ಮತ್ತು ಜನ ಆಂದೋಲನ ಅಡಿಯಲ್ಲಿ ಚಟುವಟಿಕೆಗಳನ್ನು ನಡೆಸಲಾಯಿತು ಮತ್ತು 2022 ರ ಸೆಪ್ಟೆಂಬರ್ 12 ರಿಂದ 2022 ರ ಅಕ್ಟೋಬರ್ 23 ರವರೆಗೆ ಆರು ವಾರಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಆಯುರ್ವೇದ ದಿನ 2022 ರ ಆಚರಣೆಯನ್ನು ಇಡೀ ಸರ್ಕಾರದ ವಿಧಾನವಾಗಿ ಕಾರ್ಯಗತಗೊಳಿಸಲಾಗಿದೆ. ಗೃಹ ಸಚಿವಾಲಯ, ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಮತ್ತು ಇತರ ಸಚಿವಾಲಯಗಳ ಸಕ್ರಿಯ ಬೆಂಬಲದೊಂದಿಗೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಮಿಷನ್ / ರಾಯಭಾರ ಕಚೇರಿಗಳ ಬೆಂಬಲದೊಂದಿಗೆ ಆಯುರ್ವೇದ ದಿನ 2022 ಅನ್ನು ಜಾಗತಿಕ ಹಂತಕ್ಕೆ ಕೊಂಡೊಯ್ದಿದೆ.
ಕಳೆದ ಆರು ವಾರಗಳಲ್ಲಿ ಎಲ್ಲಾ ಆಯುಷ್ ಸಂಸ್ಥೆಗಳು / ಮಂಡಳಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿವೆ. ಅವರು ಪತ್ರಿಕಾಗೋಷ್ಠಿಗಳನ್ನು ಸಹ ಆಯೋಜಿಸಿದ್ದರು ಮತ್ತು ಆಯುರ್ವೇದ ದಿನವನ್ನು ಆಚರಿಸುವ ಸಿದ್ಧತೆಗಳ ಯೋಜನೆಯನ್ನು ಆಯಾ ಪ್ರಾದೇಶಿಕ ಮಾಧ್ಯಮಗಳೊಂದಿಗೆ ಹಂಚಿಕೊಂಡರು.
******
(Release ID: 1870352)
Visitor Counter : 185