ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ʻವಿಶೇಷ ಅಭಿಯಾನ 2.0ʼ ಭಾಗವಾಗಿ 2ನೇ ವಾರದಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್; ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಮತ್ತಷ್ಟು ತೀವ್ರ ವಿಧಾನಕ್ಕೆ ಕರೆ ನೀಡಿದ ಸಚಿವರು
ನೈರ್ಮಲ್ಯವನ್ನು ಸಾಧಿಸುವ ಮತ್ತು ಕಡತ ಇತ್ಯರ್ಥ ಬಾಕಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಚಿವಾಲಯಗಳು / ಇಲಾಖೆಗಳಲ್ಲಿ ಇಮ್ಮಡಿಗೊಂಡ ಉತ್ಸಾಹ
37899 ಪ್ರಚಾರ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದೆ
27.25 ಲಕ್ಷ ಕಡತಗಳನ್ನು ಪರಿಶೀಲಿಸಲಾಗಿದೆ ಮತ್ತು 5.22 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ
ಗುಜರಿ ವಿಲೇವಾರಿಯಿಂದ ಈವರೆಗೆ 233.54 ಕೋಟಿ ರೂ.ಗಳನ್ನು ಗಳಿಸಲಾಗಿದೆ, 2,28,745 ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ, 4201 ಸಂಸದರ ಉಲ್ಲೇಖಗಳಿಗೆ ಉತ್ತರಿಸಲಾಗಿದೆ ಮತ್ತು 480 ನಿಯಮಗಳನ್ನು ಸಡಿಲಗೊಳಿಸಲಾಗಿದೆ
ಪ್ರಕಟಣಾ ದಿನಾಂಕ:
18 OCT 2022 5:04PM by PIB Bengaluru
ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಭಾರತದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ʻವಿಶೇಷ ಅಭಿಯಾನ 2.0ʼ ಇದರ 2ನೇ ವಾರದ ಪ್ರಗತಿಯನ್ನು ಪರಿಶೀಲಿಸಿದರು. 2022ರ ಅಕ್ಟೋಬರ್ 2ರಿಂದ 16ರ ಅವಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು.
ಸ್ವಚ್ಛತಾ ಕಾರ್ಯವನ್ನು ಸಾಂಸ್ಥಿಕಗೊಳಿಸಲು ಮತ್ತು ಕಡತ ಇತ್ಯರ್ಥ ಬಾಕಿಯನ್ನು ಕಡಿಮೆ ಮಾಡಲು ಸಚಿವಾಲಯಗಳು/ ಇಲಾಖೆಗಳಲ್ಲಿ ಅಪಾರ ಉತ್ಸಾಹ ಕಂಡುಬರುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. "ಇಂತಹ ಪ್ರಯತ್ನಗಳು ನವೀನ ಮತ್ತು ಪ್ರಶಂಸನೀಯ ಮಾತ್ರವಲ್ಲದೆ, ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ನಮ್ಮ ಮೂಲಭೂತ ನಾಗರಿಕ ಕರ್ತವ್ಯವನ್ನು ನಮಗೆ ನೆನಪಿಸುತ್ತವೆ," ಎಂಬ ಗೌರವಾನ್ವಿತ ಪ್ರಧಾನ ಮಂತ್ರಿಯವರ ಮಾತುಗಳಿಂದ ಸ್ಫೂರ್ತಿ ಪಡೆಯುವಂತೆ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.

2022ರ ಅಕ್ಟೋಬರ್ 2ರಿಂದ 31ರವರೆಗೆ ಕೈಗೊಳ್ಳಲಾಗುತ್ತಿರುವ ʻವಿಶೇಷ ಅಭಿಯಾನ 2.0ʼ ಅನುಷ್ಠಾನವು ಎರಡು ವಾರಗಳನ್ನು ಪೂರ್ಣಗೊಳಿಸಿದೆ. ಅಕ್ಟೋಬರ್ 2-16, 2022ರ ಅವಧಿಯಲ್ಲಿ, ʻವಿಶೇಷ ಅಭಿಯಾನ 2.0ʼ ಅನ್ನು ದೂರದ ಹೊರಠಾಣೆ ಕಚೇರಿಗಳು, ವಿದೇಶಿ ರಾಯಭಾರ ಕಚೇರಿಗಳು ಮತ್ತು ಅಧೀನ ಕಚೇರಿಗಳು ಹಾಗೂ ನಾಗರಿಕ ಕೇಂದ್ರಿತ ಸ್ವಚ್ಛತಾ ಉಪಕ್ರಮಗಳಲ್ಲಿ ಜಾರಿಗೆ ತರಲಾಗಿದೆ.
ʻವಿಶೇಷ ಅಭಿಯಾನ 2.0ʼ ಉಪಕ್ರಮವು 2 ವಾರಗಳಲ್ಲಿ, ಗಾತ್ರ ಮತ್ತು ಪ್ರಮಾಣದಲ್ಲಿ ಸಮಗ್ರವಾಗಿತ್ತು. ಸಾವಿರಾರು ಅಧಿಕಾರಿಗಳು ಮತ್ತು ನಾಗರಿಕರು ಒಗ್ಗೂಡಿ ಸರಕಾರಿ ಕಚೇರಿಗಳಲ್ಲಿ ಸ್ವಚ್ಛತಾ ಆಂದೋಲನವನ್ನು ಜಾರಿಗೊಳಿಸಿದರು. ಕ್ಯಾಬಿನೆಟ್ ದರ್ಜೆ ಸಚಿವರು, ಸಹಾಯಕ ಸಚಿವರು ಮತ್ತು ಭಾರತ ಸರಕಾರದ ಕಾರ್ಯದರ್ಶಿಗಳು ʻವಿಶೇಷ ಅಭಿಯಾನ 2.0ʼದಲ್ಲಿ ಭಾಗವಹಿಸಿ ಅನುಷ್ಠಾನದಲ್ಲಿ ನಾಯಕತ್ವ ಮತ್ತು ಮಾರ್ಗದರ್ಶನವನ್ನು ಒದಗಿಸಿದರು. 2 ವಾರಗಳಲ್ಲಿ ಅಂಚೆ ಇಲಾಖೆಯು 11037 ಅಂಚೆ ಕಚೇರಿಗಳಲ್ಲಿ, ರೈಲ್ವೆ ಸಚಿವಾಲಯವು 3923 ರೈಲ್ವೆ ನಿಲ್ದಾಣಗಳಲ್ಲಿ, ಔಷಧ ಇಲಾಖೆ 5123 ಪ್ರಚಾರ ಸ್ಥಳಗಳಲ್ಲಿ, ರಕ್ಷಣಾ ಇಲಾಖೆಯು 3923 ಪ್ರಚಾರ ಸ್ಥಳಗಳಲ್ಲಿ ಹಾಗೂ ಗೃಹ ವ್ಯವಹಾರಗಳ ಸಚಿವಾಲಯ 2364 ಪ್ರಚಾರ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿದೆ.

ʻವಿಶೇಷ ಅಭಿಯಾನ 2.0ʼರ ಪ್ರಗತಿಯನ್ನು ಪ್ರತಿದಿನ ವಿಶೇಷ ಪೋರ್ಟಲ್: www.pgportal.gov.in/scdpm22 ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಎಲ್ಲ ಸಚಿವಾಲಯಗಳು / ಇಲಾಖೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇವರು ಕ್ಷೇತ್ರ ಕಚೇರಿಗಳು ಕೈಗೊಳ್ಳುವ ಕೆಲಸಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ʻವಿಶೇಷ ಅಭಿಯಾನ 2.0ʼ ಅನ್ನು ಭಾರತ ಸರಕಾರದ ಕಾರ್ಯದರ್ಶಿಗಳು ವಾರಕ್ಕೊಮ್ಮೆ ಪರಿಶೀಲಿಸುತ್ತಾರೆ. ಸಚಿವಾಲಯಗಳು/ ಇಲಾಖೆಗಳಿಂದ 1100ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಟ್ವೀಟ್‌ಗಳೊಂದಿಗೆ ʻವಿಶೇಷ ಅಭಿಯಾನ 2.0ʼದ ಪ್ರಗತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿ ಮಾಡಲಾಗಿದೆ. ʻಡಿ.ಎ.ಆರ್.ಪಿ.ಜಿ.ʼ ಟ್ವಿಟರ್ ಹ್ಯಾಂಡಲ್‌ನಿಂದ 255 ಟ್ವೀಟ್‌ಗಳು ಮತ್ತು 200 ಇನ್ಫೋಗ್ರಾಫಿಕ್ಸ್‌ಗಳನ್ನು ನೀಡಲಾಗಿದೆ.
ಅಕ್ಟೋಬರ್ 2ರಿಂದ 16, 2022 ರವರೆಗಿನ 2 ವಾರಗಳಲ್ಲಿ ʻವಿಶೇಷ ಅಭಿಯಾನ 2.0ʼದ ಮೂಲಕ ಈ ಕೆಳಗಿನ ಪ್ರಗತಿಯನ್ನು ಸಾಧಿಸಲಾಗಿದೆ:
| ಕ್ರಮ ಸಂಖ್ಯೆ |
ವರ್ಗ
|
ವಿಶೇಷ ಅಭಿಯಾನ 2.0
ಅಕ್ಟೋಬರ್ 16, 2022 ರಂದು ಇದ್ದಂತೆ ಪ್ರಗತಿ
|
|
1
|
ಸ್ವಚ್ಛತಾ ಅಭಿಯಾನ ತಾಣಗಳು
|
37899
|
|
2
|
ದಾಖಲೆಗಳ ನಿರ್ವಹಣೆ:
ಪರಿಶೀಲಿಸಿದ ಕಡತಗಳು(ಭೌತಿಕ ಕಡತ+ ಇ-ಫೈಲ್‌ಗಳು)
|
27.25 lac
|
|
3
|
ಪರಿಹರಿಸಲಾದ ಸಾರ್ವಜನಿಕ ಕುಂದುಕೊರತೆಗಳು+ಅಪೀಲುಗಳು
|
228745
|
|
4
|
ಗಳಿಸಿದ ಆದಾಯ (ಕೋಟಿ ರೂ.ಗಳಲ್ಲಿ)
|
Rs. 233.54 cr
|
|
5
|
ಖಾಲಿಯಾದ ಜಾಗ (ಲಕ್ಷ ಚದರ ಅಡಿಗಳಲ್ಲಿ)
|
5.22 lac sq feet
|
|
6
|
ಸಂಸದರ ಉಲ್ಲೇಖಗಳು
|
4201
|
|
7
|
ಸರಾಗೊಳಿಸಿದ ನಿಯಮಗಳು/ ಪ್ರಕ್ರಿಯೆಗಳು
|
480
|
ʻವಿಶೇಷ ಅಭಿಯಾನ 2.0ʼದ ಅಡಿಯಲ್ಲಿ ಎರಡು ವಾರಗಳಲ್ಲಿ ಹೊರಹೊಮ್ಮಿದ ಅತ್ಯುತ್ತಮ ಕಾರ್ಯವಿಧಾನಗಳೆಂದರೆ:
1. ರಕ್ಷಣೆ- ʻವಿಶೇಷ ಅಭಿಯಾನ 2.0ʼದ ಮೇಲ್ವಿಚಾರಣೆಗಾಗಿ ಅಂತರ- ಇಲಾಖಾ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ.
2. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(MoHUA) – ಅಭಿಯಾನದೊಂದಿಗೆ ಸ್ವಸಹಾಯ ಗುಂಪುಗಳ ಜೋಡಣೆ, ಮಧುಬನಿ ವರ್ಣಚಿತ್ರಗಳನ್ನು ಜನಪ್ರಿಯಗೊಳಿಸಲಾಗಿದೆ.
3. ಸಿಐಎಸ್ಎಫ್ - ವಿಮಾನ ನಿಲ್ದಾಣಗಳಲ್ಲಿ ನಾಗರಿಕರ ಕಾಯುವ ಸಮಯವನ್ನು ಸರಳೀಕರಿಸಲಾಗಿದೆ.
4. ರೈಲ್ವೆ - ಸ್ವಚ್ಛತಾ ಸೇವೆಗಳನ್ನು ಸಂಪೂರ್ಣ ಸ್ವಯಂಚಾಲಿತಗೊಳಿಸಲಾಗಿದೆ.
5. ಅಂಚೆ- ಬ್ಯಾಂಕಿಂಗ್ ಸೇವೆಗಳೊಂದಿಗೆ ಆಧಾರ್ ಜೋಡಣೆ 100% ಸಾಧನೆ.
6. ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (ಡಿ.ಎ.ಆರ್.ಇ) - ಪ್ಲಾಸ್ಟಿಕ್ ಮುಕ್ತ ಮತ್ತು ಪಾರ್ಥೇನಿಯಂ ಮುಕ್ತ ತೋಟಗಳು.
7. ನಾಗರಿಕ ವಿಮಾನಯಾನ - ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಶೌಚಾಲಯ ಆಧುನೀಕರಣ.
8. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (ಡಿ.ಒ.ಪಿ.ಪಿ. ಡಬ್ಲ್ಯು) - ಫೇಸ್ ಅಥೆಂಟಿಕೇಶನ್ ಅಪ್ಲಿಕೇಶನ್ / ಜೀವನ್ ಪ್ರಮಾಣ್ ಅಪ್ಲಿಕೇಶನ್ ಅಭಿಯಾನ.
9. ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು - ಕೈಗಳ ನೈರ್ಮಲ್ಯಕ್ಕಾಗಿ ಅಭಿಯಾನ.
10. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ - ಸ್ವಚ್ಛವಾದ ʻಒನ್‌ಸ್ಟಾಪ್ʼ ಕೇಂದ್ರಗಳಿಗಾಗಿ ಸ್ವಚ್ಛತಾ ಅಭಿಯಾನ
11. ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗಳು - ಅಸ್ಸಾಂನಲ್ಲಿ ಎಂ-ಸೇವಾ ಅಪ್ಲಿಕೇಶನ್
12. ಸಿಬಿಐಸಿ – ಕಚೇರಿ ಸ್ಥಳಾವಕಾಶ ವರ್ಧನೆ, ದಾಖಲೆಗಳ ನಿರ್ವಹಣಾ ಪದ್ಧತಿಗಳ ಅಳವಡಿಕೆ.
13. ಸಿಬಿಡಿಟಿ - ನಾಗರಿಕರ ಸಂವಹನಕ್ಕಾಗಿ ಭಾರತದಾದ್ಯಂತ ʻಆಯಾಕರ್ ಸೇವಾ ಕೇಂದ್ರಗಳು, ಈಶಾನ್ಯ ರಾಜ್ಯಗಳಲ್ಲಿ ʻಆಸ್ಕ್ʼ ಕೇಂದ್ರಗಳು, ಶೂನ್ಯ ಪಿಜಿ ಗುರಿಗಳು, ಎಂಟಿಎಸ್ / ಡಿಇಒಗಳಿಗೆ ಸಮವಸ್ತ್ರಗಳು.
14. ಯುವ ವ್ಯವಹಾರಗಳು – ಎನ್.ವೈ.ಕೆ.ಎಸ್./ಎನ್.ಎಸ್.ಎಸ್.ನ ಸ್ವಯಂಸೇವಕರು ಭಾರತದಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.
15. ವಿಜ್ಞಾನ ಮತ್ತು ತಂತ್ರಜ್ಞಾನ - ಡಿಪಿಸಿಸಿ ದತ್ತಾಂಶದೊಂದಿಗೆ ಲಿಂಕ್ ಮಾಡಲಾದ ವಾಯು ಗುಣಮಟ್ಟ ನಿಗಾ ಸಾಧನ, ತಂತ್ರಜ್ಞಾನ ಭವನದಲ್ಲಿ ಯಾಂತ್ರೀಕೃತ ಶುಚಿಗೊಳಿಸುವಿಕೆ.
16. ಶಿವಾಜಿ ಸ್ಟೇಡಿಯಂ ಕಚೇರಿ ಆವರಣದಲ್ಲಿ ಭೂ ಸಂಪನ್ಮೂಲ - ʻರಿಜುವ್ʼ ಯೋಗ ಕೇಂದ್ರ
17. ಡಿ.ಎ.ಆರ್.ಪಿ.ಜಿ- ಮಹಿಳಾ ಸ್ವಸಹಾಯ ಗುಂಪಿನಿಂದ 3ಆರ್ ʻಕಿಯೋಸ್ಕ್ʼ ಸ್ಥಾಪನೆ; 1908, 1917 ಮತ್ತು 1947ರ ಐತಿಹಾಸಿಕ ದಾಖಲೆಗಳ ಸಂರಕ್ಷಣೆ.
18. ಕಾರ್ಮಿಕ ಮತ್ತು ಉದ್ಯೋಗ – ಗೋರಖ್‌ಪುರದ ʻಆರ್.ಓ.ʼನಲ್ಲಿ ವೃದ್ಧಾಪ್ಯ ಪಿಂಚಣಿದಾರರಿಗೆ ಗಾಲಿಕುರ್ಚಿ ಸೌಲಭ್ಯದ ಪ್ರಾರಂಭ, ಕಡತಗಳ ಡಿಜಿಟಲೀಕರಣ.
19. ಸಂಸ್ಕೃತಿ - ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಜಗದಲ್ ಪುರದ ದೂರದ ಪ್ರದೇಶಗಳು ಸೇರಿದಂತೆ ಎಲ್ಲ ಸಂಘಟನೆಗಳು ಭಾಗವಹಿಸಿದ್ದವು.
ಡಾ. ಜಿತೇಂದ್ರ ಸಿಂಗ್ ಅವರು, ʻವಿಶೇಷ ಅಭಿಯಾನ 2.0ʼದ ಉಳಿದ ಅವಧಿಯಲ್ಲಿ ಶುಚಿತ್ವವನ್ನು ಸಾಂಸ್ಥೀಕರಣಗೊಳಿಸುವ ಮತ್ತು ಇತ್ಯರ್ಥ ಬಾಕಿಯನ್ನು ಕಡಿಮೆ ಮಾಡುವ ಸರಕಾರದ ಘೋಷಿತ ಉದ್ದೇಶವನ್ನು ಈಡೇರಿಸಲು ದಣಿವರಿಯದೆ ಶ್ರಮಿಸುವಂತೆ ಎಲ್ಲ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ಕರೆ ನೀಡಿದರು. ಅಕ್ಟೋಬರ್ 31, 2022ರಂದು ರಾಷ್ಟ್ರೀಯ ಏಕತಾ ದಿನದಂದು ʻವಿಶೇಷ ಅಭಿಯಾನ 2.0ʼ ಕೊನೆಗೊಳ್ಳಲಿದೆ.
*******
(ಪ್ರಕಟಣೆ ಐ.ಡಿ.: 1868987)
ವಿಸಿಟರ್ ಕೌಂಟರ್ : 160