ಇಂಧನ ಸಚಿವಾಲಯ
azadi ka amrit mahotsav

ಔರೈಯಾ ಅನಿಲ ವಿದ್ಯುತ್ ಸ್ಥಾವರದಲ್ಲಿ ಜಲಜನಕ ಸಹ ವಿದ್ಯುತ್ ಉತ್ಪಾದಿಸಲು ಎನ್.ಟಿ.ಪಿ.ಸಿ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಮತ್ತು ಎಂಪಿಐ ನಡುವೆ ತಿಳಿವಳಿಕೆ ಪತ್ರಕ್ಕೆ ಸಹಿ


ಸಿಒ2 ಹೊರಸೂಸುವಿಕೆ ಪ್ರಮಾಣ ತಗ್ಗಿಸಲು ಅನಿಲ ಟರ್ಬೈನ್ ಗಳಲ್ಲಿ ಜಲಜನಕ ಸಹ ಉತ್ಪಾದನೆ ಪ್ರಮುಖ ಪಾತ್ರ ವಹಿಸಲಿದೆ

ಜಲಜನಕ ಸಹ ಉತ್ಪಾದನೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಕ್ರಮಗಳನ್ನು ಗುರುತಿಸಲು ಮತ್ತು ಅಧ್ಯಯನ ನಡೆಸಲು ಈ ತಿಳಿವಳಿಕೆ ಪತ್ರದಲ್ಲಿ ಎರಡೂ ಕಂಪೆನಿಗಳು ಸಹಯೋಗ ಹೊಂದಲಿವೆ.

ಈ ಅಧ್ಯಯನ ಜಲಜನಕದ ವಿವಿಧ ಶೇಕಡವಾರು ಉತ್ಪಾದನೆಯ ಪ್ರಮುಖ ಕ್ರಮಗಳನ್ನು ಗುರುತಿಸಲಿದೆ

Posted On: 17 OCT 2022 2:20PM by PIB Bengaluru

ಉತ್ತರ ಪ್ರದೇಶದ ಎನ್.ಟಿ.ಪಿ.ಸಿಯ ಔರೈಯಾ ಅನಿಲ ವಿದ್ಯುತ್ ಘಟಕದಲ್ಲಿ ಎಂ.ಎಚ್.ಐ 701ಡಿ ಅನಿಲ ಟರ್ಬೈನ್ ಗಳಲ್ಲಿ ನೈಸರ್ಗಿಕ ಅನಿಲದೊಂದಿಗೆ ಬೆರೆತ  ಜಲಜನಕ ಸಹ ವಿದ್ಯುತ್ ಉತ್ಪಾದನೆಯ ಸಾಧ್ಯತೆಗಳನ್ನು ಪ್ರದರ್ಶಿಸಲು ಎನ್.ಟಿ.ಪಿ.ಸಿ ಲಿಮಿಟೆಡ್, ಜಪಾನ್ ಮತ್ತು ಅದರ ಅಂಗಸಂಸ್ಥೆಯಾದ ಮಿತ್ಸುಬಿಷಿ ಪವರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನೊಂದಿಗೆ  ಒಡಂಬಡಿಕೆ [ಎಂ.ಒ.ಯು] ಪತ್ರಕ್ಕೆ ಸಹಿ ಹಾಕಿತು. ಔರೈಯಾ ಅನಿಲ ವಿದ್ಯುತ್ ಸ್ಥಾವರ ಒಟ್ಟು 663 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯ ಹೊಂದಿದ್ದು, ಸಂಯೋಜಿತ ಚಕ್ರದ ಮಾದರಿಯಲ್ಲಿ ಕಾರ್ಯನಿರ್ವಹಿಸುವ ನಾಲ್ಕು ಅನಿಲ ಟರ್ಬೈನ್ ಗಳು ಕಾರ್ಯಾಚರಣೆ ನಡೆಸುತ್ತಿವೆ. ಎನ್.ಟಿ.ಪಿ.ಪಿ ಲಿಮಿಟೆಡ್ ನ ನಿರ್ದೇಶಕ [ಯೋಜನೆಗಳು] ಶ್ರೀ ಉಜ್ವಲ್ ಕಾಂತಿ ಭಟ್ಟಾಚಾರ್ಯ ಅವರ ಸಮ್ಮುಖದಲ್ಲಿ, ಮಿತ್ಸುಬಿಷಿ ಪವರ್ ಇಂಡಿಯಾದ ಸಿಎಂಡಿ ಶ್ರೀ ತತ್ಸುತೊ ನಗಯಸು ಮತ್ತು ಶ್ರೀ ಮಿತ್ಸುಬಿಷಿ ಪವರ್ ಇಂಡಿಯಾದ ಉಪಾಧ್ಯಕ್ಷ ಶ್ರೀ ಹಿರೊಯುಕಿ ಶಿನೊಹರ ಅವರ ಉಪಸ್ಥಿತಿಯಲ್ಲಿ ಎರಡೂ ಕಂಪೆನಿಗಳು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು.

                     

ಎಲ್ಲ ಇಂಧನ ತೀವ್ರ ವಲಯಗಳಲ್ಲಿ ಇಂಗಾಲ ಹೊರಸೂಸುವುದನ್ನು ತಗ್ಗಿಸಲು ಸಂಘಟಿತ ಮತ್ತು ವ್ಯಾಪಕ ವ್ಯಾಪ್ತಿಯ ಮಾರ್ಗಸೂಚಿಯ ಅಗತ್ಯವಿದೆ. ಈ ಮಾರ್ಗನಕ್ಷೆಯ ಭಾಗವಾಗಿ ಸಿಒ2 ಹೊರಸೂಸುವಿಕೆ ಪ್ರಮಾಣ ತಗ್ಗಿಸಲು ಅನಿಲ ಟರ್ಬೈನ್ ಗಳಲ್ಲಿ ಜಲಜನಕ ಸಹ ಉತ್ಪಾದನೆ ಪ್ರಮುಖ ಪಾತ್ರ ವಹಿಸಲಿದೆ. ಭಾರತದ ಅತಿ ದೊಡ್ಡ ವಿದ್ಯುತ್ ಉತ್ಪಾದನೆ ಮಾಡುವ ಎನ್.ಟಿ.ಪಿ.ಸಿ ಇಂಧನ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಮತ್ತು ಕಾಪ್26 ಗುರಿಗಳನ್ನು ಸಾಧಿಸುವ ಬದ್ಧತೆಯನ್ನು ಇದು ಹೊಂದಿದೆ. ಈ ಉಪಕ್ರಮದ ಭಾಗವಾಗಿ ಎನ್.ಟಿ.ಪಿ.ಸಿ ವಿವಿಧ ಹೊಸ ಜಲಜನಕ ಉತ್ಪಾದನಾ ತಂತ್ರಜ್ಞಾನದ ಬಳಕೆ, ಭವಿಷ್ಯದ ಸನ್ನದ್ಧತೆ, ಅಗತ್ಯವಿರುವ ಸಾಮರ್ಥ್ಯದ ಅಭಿವೃದ್ಧಿ ಮತ್ತು ತಾಂತ್ರಿಕ ಪರಿಣತಿಗೆ ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಜಲಜನಕ ಮಿಷನ್ ಮತ್ತು ರಾಷ್ಟ್ರೀಯ ಇಂಗಾಲ ಹೊರಸೂಸುವುದನ್ನು ತಗ್ಗಿಸುವ ಗುರಿಗಳನ್ನು ಸಾಧಿಸಲಿದೆ.

ಎನ್.ಟಿ.ಪಿ.ಸಿಯ ಔರೈಯಾ ಅನಿಲ ಸಂಯೋಜಿತ ವಿದ್ಯುತ್ ಘಟಕದಲ್ಲಿ ಜಲಜನಕ ಸಹ ಉತ್ಪಾದನೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರಮುಖ ಕ್ರಮಗಳನ್ನು ಗುರುತಿಸಲು ಮತ್ತು ಅಧ್ಯಯನ ಮಾಡಲು ಈ ತಿಳಿವಳಿಕೆ ಪತ್ರದಲ್ಲಿ ಎರಡೂ ಕಂಪೆನಿಗಳು ಸಹಯೋಗ ಹೊಂದಲಿವೆ. ಸಹ ಉತ್ಪಾದನೆಯಲ್ಲಿ ವಿವಿಧ ಶೇಕಡಾವಾರು ಪ್ರಮಾಣವನ್ನು ಗುರುತಿಸುವ ಪ್ರಮುಖ ಅಂಶವನ್ನು ಇದು ಹೊಂದಿದೆ.  5%, 15%, 30%, 50% ಮತ್ತು 100% ರಷ್ಟು ಗುರುತಿಸುವ ಮತ್ತು ಯೋಜನೆಗೆ ಅಗತ್ಯವಾಗಿರುವ ಜಲಜನಕವನ್ನು ಎನ್.ಟಿ.ಪಿ.ಸಿ ಪೂರೈಸಲಿದೆ.

“ಭಾರತದ ಇಂಧನ ಪರಿವರ್ತನೆ ಯಾತ್ರೆಯಲ್ಲಿ ಒಟ್ಟಾರೆ ಶೂನ್ಯ ಗುರಿಗಳನ್ನು ಸಾಧಿಸುವ ಮತ್ತು ಹವಾಮಾನ ಬದಲಾವಣೆ ವಲಯದಲ್ಲಿ ಎನ್.ಟಿ.ಪಿ.ಸಿ ಪ್ರಮುಖ ಪಾತ್ರವಹಿಸುವ ಬದ್ಧತೆಯನ್ನು ಹೊಂದಿದೆ. ಜಲಜನಕ ಸಂಬಂಧಿತ ಹಲವಾರು ಉಪಕ್ರಮಗಳಲ್ಲಿ ಎನ್.ಟಿ.ಪಿ.ಸಿ ದೇಶದಲ್ಲೇ ಮುಂಚೂಣಿಯಲ್ಲಿದೆ ಮತ್ತು ಎಲ್ಲರಿಗೂ ಕೈಗೆಟುಕುವ, ಹಸಿರು, ವಿಶ್ವಾಸಾರ್ಹ ಮತ್ತು ಸುಸ್ಥಿರ ಇಂಧನ ಒದಗಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಇದರಲ್ಲಿ ಎನ್.ಟಿ.ಪಿ.ಸಿ ಎಂಒಯು ಮಾಡಿಕೊಂಡಿರುವುದು ಕೆಲವು ಕ್ರಮಗಳಲ್ಲಿ ಒಂದಾಗಿದೆ. ರಾಷ್ಟ್ರೀಯ ಜಲಜನಕ ಮಿಷನ್ ನ ಧ್ಯೇಯಗಳನ್ನು ಸಾಧಿಸಲು ಎಂ.ಎಚ್.ಐ ಲಿಮಿಟೆಡ್ ನಂತಹ ಜಾಗತಿಕ ಪರಿಣತರು ತಂತ್ರಜ್ಞಾನದ ಮೂಲಕ ನೆರವಾಗುತ್ತಿದ್ದಾರೆ” ಎಂದು ಎನ್.ಟಿ.ಪಿ.ಸಿ. ಲಿಮಿಟೆಡ್ ನ ಕಾರ್ಯಕಾರಿ ನಿರ್ದೇಶಕ ಶ್ರೀ ಮನೀಶ್ ಕುಮಾರ್ ಶ್ರೀವಾತ್ಸವ್ ಹೇಳಿದ್ದಾರೆ.

ಮಿತ್ಸುಬಿಷಿ ಪವರ್ ಇಂಡಿಯಾ ಸಿಎಂಡಿ ಶ್ರೀ ತತ್ಸುತೊ ನಗಯಸು ಮಾತನಾಡಿ, “ವಿದ್ಯುತ್ ಉತ್ಪಾದನಾ ವಲಯದಲ್ಲಿ ಇಂಗಾಲಮುಕ್ತಗೊಳಿಸುವ ಗುರಿ ಸಾಧಿಸಲು ಎನ್.ಟಿ.ಪಿ.ಸಿ ಮತ್ತು ಮಿತ್ಸುಬಿಷಿ ಭಾರೀ ಕೈಗಾರಿಕಾ ಸಂಸ್ಥೆಗಳು ತಿಳಿವಳಿಕೆ ಒಡಂಬಡಿಕೆಗೆ ಅಂಕಿತ ಹಾಕಿರುವುದು ಸಮಾರಂಭದ ಮಹತ್ವಪೂರ್ಣ ಅಂಶವಾಗಿದೆ ಮತ್ತು ಹವಾಮಾನ ಬದಲಾವಣೆಯ ತುರ್ತು ಸಮಸ್ಯೆಗಳನ್ನು ಬಗೆಹರಿಸುವ ಬದ್ಧತೆ ಹೊಂದಿದೆ” ಎಂದು ಹೇಳಿದರು.

******


(Release ID: 1868700) Visitor Counter : 180


Read this release in: English , Urdu , Hindi , Telugu