ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಅಕ್ಟೋಬರ್ 15 ರಂದು ಸಿಎಸ್ಐಆರ್ ಸೊಸೈಟಿ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರು ವಹಿಸಿದ್ದರು


2042ಕ್ಕೆ ಸಿಎಸ್‌ಐಆರ್‌ಗೆ 100 ವರ್ಷ ತುಂಬಿದಾಗ  ಅದರ ಮುನ್ನೋಟವನ್ನು ಅಭಿವೃದ್ಧಿ ಪಡಿಸಲು ಪ್ರಧಾನಮಂತ್ರಿಯವರು ಒತ್ತಾಯಿಸಿದರು

ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಉನ್ನತ ಗುಣಮಟ್ಟ ಮತ್ತು ಮಾನದಂಡಗಳನ್ನು ಕಾಪಾಡಿಕೊಳ್ಳಲು ಪ್ರಧಾನಮಂತ್ರಿಯವರು ಒತ್ತಾಯಿಸಿದರು

ಉದ್ಯಮ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಹೆಚ್ಚಿನ ಸಮನ್ವಯದೊಂದಿಗೆ ಸುಲಲಿತವಾಗಿ ಕೆಲಸ ಮಾಡಲು ಮತ್ತು ಭಾರತದ ಇಂಧನ ಅಗತ್ಯಗಳನ್ನು ಪರಿಹರಿಸಲು ಮತ್ತು ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸಲು ಪ್ರಧಾನಮಂತ್ರಿಯವರು ಕರೆ ನೀಡಿದರು

ಒಬ್ಬ ವ್ಯಕ್ತಿಗೆ ಒಂದು ಪ್ರಯೋಗಾಲಯ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಮಂತ್ರಿಯವರು ವೈಜ್ಞಾನಿಕ ಸಮುದಾಯದ ಮುಖ್ಯಸ್ಥರನ್ನು ಕೇಳಿದರು

ತಂತ್ರಜ್ಞಾನವು ಸಾಮಾನ್ಯ ಜನರನ್ನು ತಲುಪಲು, ವೈಜ್ಞಾನಿಕ, ತಾಂತ್ರಿಕ, ವಾಣಿಜ್ಯ ಮತ್ತು ಸಾಮಾಜಿಕ ಘಟಕಗಳ ಸಮಗ್ರ ವಿಧಾನವು ನಿರ್ಣಾಯಕವಾಗಿದೆ ಎಂದು ಒತ್ತಿಹೇಳಿದರು

Posted On: 15 OCT 2022 6:29PM by PIB Bengaluru

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‍ಐಆರ್)  ಅಧ್ಯಕ್ಷರಾಗಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಮುಂಜಾನೆ ಸಂಖ್ಯೆ 7, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಸಿಎಸ್‍ಐಆರ್ ಸೊಸೈಟಿಯ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕೇಂದ್ರದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ, ಸಿಎಸ್‌ಐಆರ್‌ನ ಉಪಾಧ್ಯಕ್ಷ ಡಾ ಜಿತೇಂದ್ರ ಸಿಂಗ್ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಮತ್ತು ಖ್ಯಾತ ವಿಜ್ಞಾನಿಗಳನ್ನು ಒಳಗೊಂಡಂತೆ ಇತರ ಸಿಎಸ್‌ಐಆರ್ ಸೊಸೈಟಿ ಸದಸ್ಯರು, ಕೈಗಾರಿಕೋದ್ಯಮಿಗಳು ಮತ್ತು ಸರ್ಕಾರದ ವೈಜ್ಞಾನಿಕ ಮತ್ತು ಇತರ ಸಚಿವಾಲಯಗಳ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

https://static.pib.gov.in/WriteReadData/userfiles/image/image001778L.jpg

ಕಳೆದ 80 ವರ್ಷಗಳಲ್ಲಿ ಸಿಎಸ್‌ಐಆರ್‌ನ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಮತ್ತು  2042ಕ್ಕೆ ಸಿಎಸ್‌ಐಆರ್‌ಗೆ 100 ವರ್ಷ ತುಂಬಿದಾಗ  ಅದರ ಮುನ್ನೋಟವನ್ನು ಅಭಿವೃದ್ಧಿ ಪಡಿಸಲು ಒತ್ತಾಯಿಸಿದರು. ಅವರು ಕಳೆದ 80 ವರ್ಷಗಳ ಪ್ರಯಾಣವನ್ನು ದಾಖಲಿಸುವ ಪ್ರಾಮುಖ್ಯವನ್ನು ಎತ್ತಿ ತೋರಿಸಿದರು, ಇದು ಸಾಧಿಸಿದ ಪ್ರಗತಿಯ ವಿಮರ್ಶೆ ಮಾಡಲು ಮತ್ತು ಪರಿಹರಿಸಬಹುದಾದ ಕೊರತೆಯ ಅಂಶಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನವು ಸಾಮಾನ್ಯ ಜನರನ್ನು ತಲುಪಲು, ವೈಜ್ಞಾನಿಕ, ವಾಣಿಜ್ಯ ಮತ್ತು ಸಾಮಾಜಿಕ ಘಟಕಗಳ ಸಮಗ್ರ ವಿಧಾನವನ್ನು ಅನುಸರಿಸಬೇಕು ಎಂದು ಅವರು ಒತ್ತಿ ಹೇಳಿದರು. ಅಂತಹ ಕೇಂದ್ರೀಕೃತ ವಿಧಾನದ ಮೂಲಕ ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ಸಹಾಯ ಮಾಡಲು ಒಬ್ಬ ವ್ಯಕ್ತಿಗೆ ಒಂದು ಪ್ರಯೋಗಾಲಯ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಅವರು ವೈಜ್ಞಾನಿಕ ಸಮುದಾಯದ ಮುಖ್ಯಸ್ಥರನ್ನು ಕೇಳಿದರು. ಎಲ್ಲಾ  ಪ್ರಯೋಗಾಲಯಗಳ ವರ್ಚುವಲ್ ಶೃಂಗಸಭೆಯನ್ನು ನಿಯಮಿತವಾಗಿ ನಡೆಸಬಹುದು, ಇದರಲ್ಲಿ ಅವರು ಪರಸ್ಪರರ ಅನುಭವದಿಂದ ಹೊಸ ವಿಷಯಗಳನ್ನು ಕಲಿಯಬಹುದು ಎಂದು ಅವರು ಸಲಹೆ ನೀಡಿದರು.

ಇಳುವರಿ ಮತ್ತು ಪೌಷ್ಟಿಕಾಂಶದ ಅಂಶವನ್ನು ಸುಧಾರಿಸಲು ಧಾನ್ಯಗಳು ಮತ್ತು ಹೊಸ ತಳಿಗಳ ಸಿರಿಧಾನ್ಯಗಳಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚಿಸಲು ತಾಂತ್ರಿಕ ಪರಿಹಾರಗಳಿಗಾಗಿ ವೈಜ್ಞಾನಿಕ ಸಮುದಾಯಕ್ಕೆ ಪ್ರಧಾನಮಂತ್ರಿಯವರು ಕರೆ ನೀಡಿದರು. ಸ್ಥಳೀಯ ಆಹಾರ ಉತ್ಪನ್ನಗಳ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದ ಪಟ್ಟಿಯನ್ನು  ಅಭಿವೃದ್ಧಿಪಡಿಸಲು ಅವರು ವಿಜ್ಞಾನಿಗಳನ್ನು ಕೇಳಿದರು, ಇದು ಅವರ ಜಾಗತಿಕವಾಗಿ  ಸ್ವೀಕಾರಾರ್ಹತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅವರು ಉದ್ಯಮ ಮತ್ತು ಶೈಕ್ಷಣಿಕ ಹಾಗು ಸಂಶೋಧನಾ ಸಂಸ್ಥೆಗಳು ಹೆಚ್ಚಿನ   ಸಮನ್ವಯದೊಂದಿಗೆ ಸುಲಲಿತವಾಗಿ ಕೆಲಸ ಮಾಡಲು ಮತ್ತು ಭಾರತದ ಇಂಧನ ಅಗತ್ಯಗಳನ್ನು ಪರಿಹರಿಸುವಲ್ಲಿ ಗಮನಹರಿಸಬೇಕು ಜತೆಗೆ ವೃತ್ತಾಕಾರದ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಆರ್ಥಿಕವಾಗಿ ಸಮರ್ಥ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕರೆ ನೀಡಿದರು.

 

https://static.pib.gov.in/WriteReadData/userfiles/image/image002ZUEI.jpg

ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಹಸಿರು ಇಂಧನದ  ಮೇಲೆ ಕೇಂದ್ರೀಕರಿಸುವ ಇಂಧನ ಅಗತ್ಯಗಳನ್ನು ಪರಿಹರಿಸಲು ನವೀನ ವಿಧಾನಗಳನ್ನು ಅನುಸರಿಸಲು ಪ್ರಧಾನಮಂತ್ರಿಯವರು ಕರೆ ನೀಡಿದರು. ಸಾಂಪ್ರದಾಯಿಕ ಜ್ಞಾನದಿಂದ ಹಿಡಿದು ವಿದ್ಯಾರ್ಥಿಗಳ ಆಸಕ್ತಿಗಳೆಡೆಗೆ ಸೆಳೆಯುವ, ಕೌಶಲ್ಯ ಸೆಟ್‌ಗಳು ಮತ್ತು ಸಾಮರ್ಥ್ಯಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಂತಹ ವೈಜ್ಞಾನಿಕ ವಿಧಾನ ಮತ್ತು ತಂತ್ರಜ್ಞಾನವನ್ನು ಬಳಸುವ ಅಗತ್ಯವನ್ನು ಅವರು ಎತ್ತಿ ತೋರಿಸಿದರು, ಇದು ಭಾರತವು ಜಾಗತಿಕ ನಾಯಕನಾಗುವ ಗುರಿಯೊಂದಿಗೆ ವಿಷನ್ 2047 ಕಡೆಗೆ ಸಾಗುವಾಗ ಭವಿಷ್ಯದ ಭಾರತ ಮತ್ತು ಪ್ರಪಂಚದ ಬೇಡಿಕೆಗಳನ್ನು ಪೂರೈಸಲು ಅವರನ್ನು ಹೆಚ್ಚು ಸೂಕ್ತವಾಗಿಸುತ್ತದೆ ಎಂದು ಹೇಳಿದರು. 

ಇದಕ್ಕೂ ಮೊದಲು, ಡಾ ಜಿತೇಂದ್ರ ಸಿಂಗ್ ಅವರು ತಮ್ಮ ಆರಂಭಿಕ ಭಾಷಣದಲ್ಲಿ, ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಸಮಯದಲ್ಲಿ ಈ ವರ್ಷ ಸಿಎಸ್ಐಆರ್ 80 ವರ್ಷಗಳನ್ನು ಪೂರೈಸಿದೆ ಮತ್ತು ಎರಡೂ ಒಟ್ಟಿಗೆ ಪ್ರಯಾಣವನ್ನು ಮಾಡಿವೆ ಎಂದು ಹೇಳಿದರು. ಅವರು ಉದ್ಯಮ, ಶೈಕ್ಷಣಿಕ ಮತ್ತು ಸಂಶೋಧನೆಯ ಸಮನ್ವಯ ಮತ್ತು  ಮಾಹಿತಿ ಹಂಚಿಕೊಳ್ಳುವುದರ ಬಗ್ಗೆ ಒತ್ತು ನೀಡಿದರು.
ಸಿಎಸ್ಐಆರ್ ನ ಮಹಾನಿರ್ದೇಶಕರಾದ  ಡಾ ಎನ್ ಕಲೈಸೆಲ್ವಿ ಅವರು ಸಿಎಸ್ಐಆರ್ ನ ಇತ್ತೀಚಿನ ಸಾಧನೆಗಳು ಮತ್ತು ಕೊಡುಗೆಗಳ ಕುರಿತು ಪ್ರಸ್ತುತಿಯನ್ನು ಮಾಡಿದರು  ಅದರಲ್ಲಿ ಭಾರತದ ಮೊದಲ ಹೈಡ್ರೋಜನ್ ಇಂಧನ ಸೆಲ್ ಬಸ್‌ನ ಇತ್ತೀಚಿನ ಪ್ರಯತ್ನಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ  ನೇರಳೆ ಕ್ರಾಂತಿಗೆ ನಾಂದಿ ಮತ್ತು ಭಾರತದ ಶ್ರೀಮಂತ ಸಾಂಪ್ರದಾಯಿಕ ಆಧಾರದ ಮೇಲೆ ನಾವೀನ್ಯವನ್ನು ಉತ್ತೇಜಿಸಲು  ಟಿಕೆಡಿಎಲ್  ಲೈಬ್ರರಿಯನ್ನು ತೆರೆದಿರುವ ಬಗ್ಗೆ ಬಗ್ಗೆ ವಿವರಿಸಿದರು. ಎಂಆರ್‌ಎನ್‌ಎ ಪ್ಲಾಟ್‌ಫಾರ್ಮ್ ತಂತ್ರಜ್ಞಾನದ ಮೂಲಕ ಭವಿಷ್ಯದ ಸಾಂಕ್ರಾಮಿಕ ರೋಗಗಳಿಗೆ ಸಿದ್ಧತೆ, ಯುವ ವೈಜ್ಞಾನಿಕ ನಾಯಕರನ್ನು ಪೋಷಿಸುವುದು ಮತ್ತು ಸುಸ್ಥಿರ ನವೋದ್ಯಮಗಳು ಮತ್ತು ಜಿಗ್ಯಾಸ ವರ್ಚುವಲ್ ಲ್ಯಾಬ್ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ತಲುಪುವುದು  ಮತ್ತು ಇತರ ಕೆಲವು ಪ್ರಮುಖ ಉಪಕ್ರಮಗಳ ಬಗ್ಗೆ ಮಹಾನಿರ್ದೇಶಕರು ಪ್ರಮುಖವಾಗಿ ತಿಳಿಸಿದರು.  ಅವರು ರಾಷ್ಟ್ರೀಯ ಮಹತ್ವಾಕಾಂಕ್ಷೆಗಳು ಮತ್ತು ವಿಷನ್@2047ಗೆ ಜೋಡಿಸಲಾದ ಸಿಎಸ್‍ಐಆರ್  ವಿಷನ್ 2030ರ  ಯೋಜನೆಯ ಬಗ್ಗೆ ಸಹ ಪ್ರಸ್ತುತಪಡಿಸಿದರು.

 

https://static.pib.gov.in/WriteReadData/userfiles/image/image003ETC0.jpg

*******



(Release ID: 1868348) Visitor Counter : 151