ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ನಿರ್ದೇಶನಗಳ ಅನುಸರಣೆ ಮತ್ತು ಕಟ್ಟುನಿಟ್ಟಾದ ಅನುಷ್ಠಾನದ ಖಾತ್ರಿಗಾಗಿ ಅನುಷ್ಠಾನ ಸಂಸ್ಥೆಗಳಿಗೆ ಸಲಹೆ ನೀಡುವ ಸಿ.ಎ.ಕ್ಯು.ಎಂ


ಶಾಸನಬದ್ಧ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ಸಿ.ಎ.ಕ್ಯು.ಎಂ. ಆಗ್ರಹವಾಯುಮಾಲಿನ್ಯ ಕಾನೂನುಗಳು ಮತ್ತು ಶಾಸನಬದ್ಧ

ನಿರ್ದೇಶನಗಳ ಜಾರಿ ಮತ್ತು ಅನುಸರಣೆಯನ್ನು ಸಕ್ರಿಯವಾಗಿ ಪರಿಶೀಲಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಕಟ್ಟುನಿಟ್ಟಾಗಿ ನಿಗಾ ಇಡಲು 40 ಪರಿಶೀಲನಾ ತಂಡಗಳು / ಫ್ಲೈಯಿಂಗ್ ಸ್ಕ್ವಾಡ್ ಗಳು

ಉಲ್ಲಂಘನೆಗಳು ಮತ್ತು ಅನುಸರಣೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಮತ್ತು ಒಟ್ಟಾರೆ ಉಲ್ಲಂಘನೆಗಳು ತಕ್ಷಣದ ಮುಚ್ಚುವಿಕೆಗೆ ಕಾರಣವಾಗುತ್ತದೆ

8,580 ಕ್ಕೂ ಹೆಚ್ಚು ಸ್ಥಳಗಳನ್ನು ಸಿ.ಎ.ಕ್ಯೂ.ಎಂ. ಫ್ಲೈಯಿಂಗ್ ಸ್ಕ್ವಾಡ್ ಗಳು ಪರಿಶೀಲಿಸಿದ್ದು, 491 ಒಟ್ಟು ಸುಸ್ತಿದಾರರಿಗೆ ಮುಚ್ಚುವಂತೆ ನಿರ್ದೇಶನ ನೀಡಲಾಗಿದೆ

ಮುಂದಿನ ದಿನಗಳಲ್ಲಿ ಗ್ರಾ.ಪಂ.ನ ಪ್ರತಿ ಹಂತದಲ್ಲೂ ನಾಗರಿಕ ಸನ್ನದುಗಳಲ್ಲಿ ಪ್ರತಿಪಾದಿಸಲಾದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ನಾಗರಿಕರಿಗೆ ಸಲಹೆ

Posted On: 15 OCT 2022 1:42PM by PIB Bengaluru

ಮುಂಬರುವ ದಿನಗಳಲ್ಲಿ ದೆಹಲಿ-ಎನ್.ಸಿ.ಆರ್.ಲ್ಲಿ ವಾಯುಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ತನ್ನ ಕ್ರಮಗಳನ್ನು ತೀವ್ರಗೊಳಿಸಿರುವ ಎನ್.ಸಿ.ಆರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿ.ಎ.ಕ್ಯೂ.ಎಂ.) ಕೈಗಾರಿಕೆಗಳು ಹಾಗೂ ನಿರ್ಮಾಣ ಮತ್ತು ಕಟ್ಟಡನಾಶ ಯೋಜನಾ ಪ್ರತಿಪಾದಕರು (ಸಿ ಮತ್ತು ಡಿ) ತಾಣಗಳು ಸೇರಿದಂತೆ ಸಂಬಂಧಪಟ್ಟ ಎಲ್ಲರಿಗೂ ಆಯೋಗವು ಹೊರಡಿಸಿದ ಶಾಸನಬದ್ಧ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಗ್ರಹಿಸಿದೆ.

ಮುಂದಿನ ದಿನಗಳಲ್ಲಿ ಹಂತಹಂತವಾದ ಸ್ಪಂದನಾ ಕ್ರಮ ಯೋಜನೆ (ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (ಜಿ.ಆರ್.ಎ.ಪಿ.) ನ ಪ್ರತಿ ಹಂತದಲ್ಲೂ ನಾಗರಿಕ ಸನ್ನದಿನಲ್ಲಿ ಮುಖ್ಯವಾಗಿ ತಿಳಿಸಲಾಗಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ.

ಆಯೋಗವು ರಚಿಸಿದ 40 ತಪಾಸಣಾ ತಂಡಗಳು / ಫ್ಲೈಯಿಂಗ್ ಸ್ಕ್ವಾಡ್ ಗಳು ದೆಹಲಿ-ಎನ್.ಸಿ.ಆರ್.ನ ವಾಯು ಗುಣಮಟ್ಟವನ್ನು ಸುಧಾರಿಸಲು ಆಯೋಗವು ಹೊರಡಿಸಿದ ಶಾಸನಬದ್ಧ ನಿರ್ದೇಶನಗಳ ಅನುಷ್ಠಾನ ಮತ್ತು ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತೀವ್ರ ನಿಗಾ ಇಡಲು ನಿರ್ದೇಶಿತವಾಗಿವೆ. ಈ ಫ್ಲೈಯಿಂಗ್ ಸ್ಕ್ವಾಡ್ ಗಳು ಕೈಗಾರಿಕಾ ಘಟಕಗಳು, ಸಿ ಮತ್ತು ಡಿ ತಾಣಗಳು, ವಾಣಿಜ್ಯ / ವಸತಿ ಘಟಕಗಳು, ವಾಯುಮಾಲಿನ್ಯದ ಪ್ರಮುಖ ತಾಣಗಳು (ಹಾಟ್ ಸ್ಪಾಟ್ಸ್) ಇತ್ಯಾದಿಗಳಲ್ಲಿ ಹಠಾತ್ ತಪಾಸಣೆಗಳು ಮತ್ತು ಕ್ಷೇತ್ರ ಮಟ್ಟದ ಮಾರುವೇಷದ ತಪಾಸಣೆಗಳನ್ನು ನಡೆಸುತ್ತವೆ. ಈ ಫ್ಲೈಯಿಂಗ್ ಸ್ಕ್ವಾಡ್ ಗಳು ದೆಹಲಿ-ಎನ್.ಸಿ.ಆರ್. ಎಲ್ಲಾ ಭಾಗಗಳನ್ನು ವ್ಯಾಪಕವಾಗಿ ಒಳಗೊಳ್ಳುತ್ತವೆ ಮತ್ತು ಉಲ್ಲಂಘನೆ ಮಾಡುವವರನ್ನು ಪತ್ತೆಹಚ್ಚಲು ಮತ್ತು ಅವರ ವಿರುದ್ಧ ಕಠಿಣ ಕ್ರಮಗಳಿಗಾಗಿ ವಿವರಗಳನ್ನು ಆಯೋಗಕ್ಕೆ ವರದಿ ಮಾಡುತ್ತವೆ.

14.10.2022 ರವರೆಗೆ, ಸಿಎಕ್ಯೂಎಂ ಫ್ಲೈಯಿಂಗ್ ಸ್ಕ್ವಾಡ್ ಗಳು 8,580 ಕ್ಕೂ ಹೆಚ್ಚು ಸ್ಥಳಗಳನ್ನು ಪರಿಶೀಲಿಸಿವೆ ಮತ್ತು ಆಯೋಗದ ಶಾಸನಬದ್ಧ ನಿರ್ದೇಶನಗಳನ್ನು ಉಲ್ಲಂಘಿಸಿದ 491 ಸುಸ್ತಿದಾರರಿಗೆ ಮುಚ್ಚುವಂತೆ ನಿರ್ದೇಶನಗಳನ್ನು ನೀಡಲಾಗಿದೆ, ದೆಹಲಿಯಲ್ಲಿ 110; ಹರಿಯಾಣದಲ್ಲಿ 118 (ಎನ್.ಸಿ.ಆರ್); ಉತ್ತರ ಪ್ರದೇಶದಲ್ಲಿ (ಎನ್.ಸಿ.ಆರ್) 211; ಮತ್ತು ರಾಜಸ್ಥಾನದಲ್ಲಿ (ಎನ್.ಸಿ.ಆರ್) 52.

ಸಿಎಕ್ಯೂಎಂ ತನ್ನ ಶಾಸನಬದ್ಧ ನಿರ್ದೇಶನಗಳು ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಆಯೋಗವು ಹೊರಡಿಸಿದ ವಾಯುಮಾಲಿನ್ಯ ನಿಯಂತ್ರಣ ನಿಯಮಗಳು/ ನಿಬಂಧನೆಗಳ ಉಲ್ಲಂಘನೆ ಮತ್ತು ಅನುಸರಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಸಂಪೂರ್ಣ ಉಲ್ಲಂಘನೆಗಳ ಸಂದರ್ಭದಲ್ಲಿ ಆಯೋಗವು ಮುಚ್ಚುವಂತೆ ಆದೇಶಗಳನ್ನು ಹೊರಡಿಸುವುದಲ್ಲದೆ ಪರಿಸರ ಪರಿಹಾರವನ್ನು (ಇ.ಸಿ) ವಿಧಿಸುತ್ತದೆ ಮತ್ತು ಕಾನೂನು ಕ್ರಮ ಜರುಗಿಸಲು ಪ್ರಾರಂಭಿಸುತ್ತದೆ.

ಆಯೋಗವು ಹೊರಡಿಸಿದ ನಿರ್ದೇಶನಗಳ ಅನುಸರಣೆ ಮತ್ತು ಕಟ್ಟುನಿಟ್ಟಾದ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು (ಎಸ್ಪಿಸಿಬಿಗಳು) ಮತ್ತು ಡಿಪಿಸಿಸಿ ಸೇರಿದಂತೆ ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ಸಿಎಕ್ಯೂಎಂ ಸಲಹೆ ನೀಡಿದೆ.


(Release ID: 1868149) Visitor Counter : 142


Read this release in: English , Urdu , Hindi , Tamil