ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಯುಎಇಯ ಹಸಿರು ಆರ್ಥಿಕತೆ, ವಿಶ್ವ ಹಸಿರು ಆರ್ಥಿಕತೆಯ ಶೃಂಗಸಭೆಯ ಸಚಿವರ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದರು


ವಿವಿಧ ಆರ್ಥಿಕ ವಲಯಗಳಲ್ಲಿ ಕಡಿಮೆ ಇಂಗಾಲದ ಸ್ಥಿತ್ಯಂತರವನ್ನು ತ್ವರಿತಗೊಳಿಸುವುದು ಇಂದಿನ ಅಗತ್ಯವಾಗಿದೆ: ಶ್ರೀ ಭೂಪೇಂದರ್‌ ಯಾದವ್‌

Posted On: 28 SEP 2022 4:30PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್‌ ಯಾದವ್‌ ಅವರು ಇಂದು ಯುಎಇನ ದುಬೈನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ನಡೆದ ವಿಶ್ವ ಹಸಿರು ಆರ್ಥಿಕತೆಯ ಶೃಂಗಸಭೆಯಲ್ಲಿ ಹಸಿರು ಆರ್ಥಿಕತೆಯ ಸಚಿವರ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು. ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಆರ್ಥಿಕ ಅಭಿವೃದ್ಧಿಯ ಜೊತೆಗೆ ಪರಿಸರ ಮತ್ತು ಹವಾಮಾನ ಉದ್ದೇಶಗಳನ್ನು ಪರಿಹರಿಸುವ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರು ಮತ್ತು ವಿವಿಧ ಆರ್ಥಿಕ ವಲಯಗಳಲ್ಲಿ ಕಡಿಮೆ ಇಂಗಾಲದ ಸ್ಥಿತ್ಯಂತರವನ್ನು ತ್ವರಿತಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ಭಾರತವು ಮುನ್ನಡೆಸಿದ ವಿವಿಧ ನೀತಿಗಳು ಮತ್ತು ಪಾಲುದಾರಿಕೆಗಳ ಅಡಿಯಲ್ಲಿನ ಸಾಧನೆಗಳನ್ನು ಸಚಿವರು ವಿವರಿಸಿದರು. ಇಂಧನ, ಕೈಗಾರಿಕೆ, ಸಾರಿಗೆ, ಕೃಷಿ ಮತ್ತು ಅರಣ್ಯದಂತಹ ಪ್ರಮುಖ ವಲಯಗಳಲ್ಲಿಹಸಿರು ಆರ್ಥಿಕತೆಯನ್ನು ಬಲಪಡಿಸಲು ಅಂತಾರಾಷ್ಟ್ರೀಯ ಸೌರ ಮೈತ್ರಿ ಮತ್ತು ಇತರ ಉಪಕ್ರಮಗಳಂತಹ ಜಾಗತಿಕ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಸಾರ್ವಭೌಮ ಹಸಿರು ಬಾಂಡ್‌ಗಳು, ಸಂಯೋಜಿತ ಹಣಕಾಸು ಮತ್ತು ಗಿಫ್ಟ್‌ ನಗರ ಮತ್ತು ಐಎಸ್‌ಎ- ಸೌರ ಅಪಾಯ ತಗ್ಗಿಸುವಿಕೆ ಉಪಕ್ರಮದಂತಹ ಸುಸ್ಥಿರ ಹಣಕಾಸು ಕುರಿತು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದರು.

ಇಂಧನ ದಕ್ಷ ತೆ ಮತ್ತು ಉಷ್ಣ ಸೌಕರ್ಯದ ಆಧಾರದ ಮೇಲೆ ತಂಪಾಗಿಸುವ ಕ್ರಿಯಾ ಯೋಜನೆಯನ್ನು ಹೊಂದಿರುವ ಮೊದಲ ದೇಶ ಭಾರತವಾಗಿದೆ ಮತ್ತು ಉಜಾಲಾ ಯೋಜನೆ ಮತ್ತು ಕೈಗಾರಿಕಾ ಇಂಧನ ದಕ್ಷ ತೆಯ ಯೋಜನೆಗಳು ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಭಾರತದ ಮಹತ್ವಾಕಾಂಕ್ಷೆಯ ನವೀಕರಿಸಬಹುದಾದ ಇಂಧನ ಪ್ರಗತಿಯನ್ನು ಸಹ ಉಲ್ಲೇಖಿಸಲಾಗಿದೆ ಎಂದು ಕೇಂದ್ರ ಪರಿಸರ ಸಚಿವರು ಹೇಳಿದರು.

ಹವಾಮಾನ ಹಣಕಾಸು ಕುರಿತು ಮಾತನಾಡಿದ ಶ್ರೀ ಭೂಪೇಂದರ್‌ ಯಾದವ್‌, 2050ರ ವೇಳೆಗೆ ಗ್ಲ್ಯಾಸ್ಗೋ ಫೈನಾನ್ಷಿಯಲ್‌ ಅಲೈಯನ್ಸ್‌ ಫಾರ್‌ ನೆಟ್‌ ಝೀರೋ ಜಾಗತಿಕ ನಿವ್ವಳ ಶೂನ್ಯಕ್ಕೆ 100 ಟ್ರಿಲಿಯನ್‌ (ಲಕ್ಷ  ಕೋಟಿ) ಅಮೆರಿಕನ್‌ ಡಾಲರ್‌ ಹಣಕಾಸು ಅಗತ್ಯವನ್ನು ಅಂದಾಜು ಮಾಡಿದೆ ಎಂದು ಹೇಳಿದರು. ಆದರೆ, ಅಭಿವೃದ್ಧಿ ಹೊಂದಿದ ದೇಶಗಳು 2020 ರ ವೇಳೆಗೆ ವರ್ಷಕ್ಕೆ 100 ಶತಕೋಟಿ ಡಾಲರ್‌ ಮೊತ್ತವನ್ನು ಸಂಗ್ರಹಿಸುವಲ್ಲಿ ಸಹ ವಿಫಲವಾಗಿವೆ ಮತ್ತು ಭಾರತದ ಎನ್‌ಡಿಸಿಗಳು ದೇಶೀಯ ಹೂಡಿಕೆಯಿಂದ ಹೆಚ್ಚಾಗಿ ಹಣಕಾಸು ಒದಗಿಸುತ್ತವೆ ಎಂದರು.

ದುಂಡುಮೇಜಿನ ಸಭೆಯ ನಂತರ, ಕೇಂದ್ರ ಸಚಿವರು ಯುಎಇ ವಿದೇಶಾಂಗ ವ್ಯಾಪಾರ ಖಾತೆಯ ರಾಜ್ಯ ಸಚಿವ ಡಾ. ಥಾನಿ ಬಿನ್‌ ಅಹ್ಮದ್‌ ಅಲ್‌ ಝೆಯುಡಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಸಭೆಯಲ್ಲಿ, ಸಿಒಪಿ 27, ಸಿಒಪಿ 28, ಭಾರತ ಮತ್ತು ಯುಎಇ ನಡುವಿನ ಹವಾಮಾನ ಕ್ರಮಗಳ ಕುರಿತ ತಿಳಿವಳಿಕಾ ಒಡಂಬಡಿಕೆ  ಹವಾಮಾನ ಬದಲಾವಣೆಯನ್ನು ಎದುರಿಸಲು ಯುಎಇ ಮತ್ತು ಭಾರತ ಮುನ್ನಡೆಸಿದ ಜಾಗತಿಕ ಉಪಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅವರು ಚರ್ಚಿಸಿದರು.


(Release ID: 1863192) Visitor Counter : 163


Read this release in: English , Urdu , Hindi , Marathi