ಸಂಪುಟ

2022ರ ಜುಲೈ 1ರಿಂದ ಬರಬೇಕಾದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರದ ಹೆಚ್ಚುವರಿ ಕಂತು ಬಿಡುಗಡೆಗೆ ಸಂಪುಟದ ಅನುಮೋದನೆ

Posted On: 28 SEP 2022 4:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷ ತೆಯಲ್ಲಿಇಂದು ನಡೆದ ಸಚಿವ ಸಂಪುಟ ಸಭೆಯು 2022ರ ಜೂನ್‌ಗೆ ಕೊನೆಗೊಳ್ಳುವ ಅವಧಿಯಲ್ಲಿಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ 12 ಮಾಸಿಕ ಸರಾಸರಿಯಲ್ಲಿ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ  2022ರ ಜುಲೈ 1ರಿಂದ ಬರಬೇಕಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಾಕಿ ಇರುವ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ  ಶೇ. 4 ರಷ್ಟು ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲು ತನ್ನ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 2022ರ ಜುಲೈ 1ರಿಂದ ಅನ್ವಯವಾಗುವಂತೆ ಅನುಕ್ರಮವಾಗಿ ಹೆಚ್ಚಿನ ಪ್ರಮಾಣದ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರಕ್ಕೆ ಅರ್ಹರಾಗಿರುತ್ತಾರೆ.

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯ ಈ ಹೆಚ್ಚಳದಿಂದಾಗಿ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ವಾರ್ಷಿಕ 6,591.36 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಮತ್ತು 2022-23ರ ಹಣಕಾಸು ವರ್ಷದಲ್ಲಿ 4,394.24 ಕೋಟಿ ರೂ.ಗಳು (ಅಂದರೆ 2022ರ ಜುಲೈನಿಂದ 2023ರ ಫೆಬ್ರವರಿ ವರೆಗೆ 8 ತಿಂಗಳ ಅವಧಿಗೆ).

ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರದ ಈ ಹೆಚ್ಚಳದಿಂದಾಗಿ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ವಾರ್ಷಿಕ 6,261.20 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಮತ್ತು 2022-23ರ ಹಣಕಾಸು ವರ್ಷದಲ್ಲಿ4,174.12 ಕೋಟಿ ರೂ.ಗಳು (ಅಂದರೆ 2022ರ ಜುಲೈನಿಂದ 2023ರ ಫೆಬ್ರವರಿ ವರೆಗೆ 8 ತಿಂಗಳ ಅವಧಿಗೆ).

ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಎರಡರ ಕಾರಣದಿಂದಾಗಿ ಬೊಕ್ಕಸಕ್ಕೆ ನೀಡುವ ಸಂಯೋಜಿತ ಭತ್ಯೆಯು ವಾರ್ಷಿಕ 12,852.56 ಕೋಟಿ ರೂ.ಗಳಾಗಿರುತ್ತದೆ. ಮತ್ತು 2022-23ರ ಹಣಕಾಸು ವರ್ಷದಲ್ಲಿ8,568.36 ಕೋಟಿ ರೂ.ಗಳು (ಅಂದರೆ 2022ರ ಜುಲೈನಿಂದ 2023ರ  ಫೆಬ್ರವರಿ ವರೆಗೆ 8 ತಿಂಗಳ ಅವಧಿಗೆ).

*******



(Release ID: 1863189) Visitor Counter : 359