ಸಂಪುಟ

ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಹೆಚ್‌ಎಂ) - 2020-21 ರ ಅಡಿಯಲ್ಲಿನ ಪ್ರಗತಿ ಪರಿಶೀಲಿಸಿದ ಕೇಂದ್ರ ಸಚಿವ ಸಂಪುಟ

Posted On: 28 SEP 2022 3:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2020-21ರ ಆರ್ಥಿಕ ವರ್ಷದ ಅವಧಿಯಲ್ಲಿ ತಾಯಂದಿರ ಪ್ರಮಾಣ ದರ (ಎಂಎಂಆರ್), ನವಜಾತ ಶಿಶುಗಳ ಮರಣ ದರ (ಐಎಂಆರ್‌), 5 ವರ್ಷದೊಳಗಿನ ಮಕ್ಕಳ ಮರಣ ದರ (ಯು5ಎಂಆರ್‌) ಮತ್ತು ಒಟ್ಟು ಫಲವತ್ತತೆಯ ದರ (ಟಿಎಫ್‌ಆರ್‌) ನಲ್ಲಿನ ತೀವ್ರ ಕುಸಿತ ಸೇರಿದಂತೆ ಎನ್‌ಹೆಚ್‌ಎಂ ಅಡಿಯಲ್ಲಿನ ಪ್ರಗತಿಯ ಬಗ್ಗೆ ಪರಿಶೀಲಿಸಿತು. ಇದು ಕ್ಷಯ, ಮಲೇರಿಯಾ, ಕಾಲಾ-ಅಜರ್, ಡೆಂಗಿ, ಕುಷ್ಠರೋಗ, ವೈರಲ್ ಹೆಪಟೈಟಿಸ್ ಮುಂತಾದ ವಿವಿಧ ರೋಗಗಳ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪ್ರಗತಿಯ ಬಗ್ಗೆಯೂ ಸಂಪುಟ ಸಭೆಯು ಪರಾಮರ್ಶೆ ನಡೆಸಿತು.

ಖರ್ಚು: ರೂ. 27,989.00 ಕೋಟಿ (ಕೇಂದ್ರ ಪಾಲು) 

ಫಲಾನುಭವಿಗಳ ಸಂಖ್ಯೆ:

ಎನ್‌ಹೆಚ್‌ಎಂಅನ್ನು ಸಾರ್ವತ್ರಿಕ ಪ್ರಯೋಜನಕ್ಕಾಗಿ, ಅಂದರೆ ಸಂಪೂರ್ಣ ಜನಸಂಖ್ಯೆಯ ಸೌಲಭ್ಯಕ್ಕಾಗಿ ಅನುಷ್ಠಾನಗೊಳಿಸಲಾಗಿದೆ. ಇದರಡಿಯಲ್ಲಿ ಸಮಾಜದ ದುರ್ಬಲ ವರ್ಗಕ್ಕೆ ವಿಶೇಷ ಗಮನವನ್ನು ನೀಡುವ ಮೂಲಕ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸೇವೆಗಳನ್ನು ನೀಡಲಾಗುತ್ತದೆ.

ವಿಷಯವಾರು ವಿವರಗಳು: 

ಕೋವಿಡ್-19 ನ ಆರಂಭಿಕ ತಡೆಗಟ್ಟುವಿಕೆ, ಪತ್ತೆ ಮತ್ತು ನಿರ್ವಹಣೆಗಾಗಿ ತಕ್ಷಣದ ಪ್ರತಿಕ್ರಿಯೆಗಾಗಿ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯನ್ನು ವೇಗಗೊಳಿಸಲು ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆ ಪ್ಯಾಕೇಜ್ (ಇಸಿಆರ್‌ಪಿ) ಹಂತ-I ರಲ್ಲಿ ಎನ್‌ಹೆಚ್‌ಎಂನ ಕಾರ್ಯಗತಗೊಳಿಸುವ ಪಾತ್ರವನ್ನು ಸಂಪುಟವು ಪರಿಶೀಲಿಸಿತು. ಇಸಿಆರ್‌ಪಿ ಹಂತ-I ಶೇ.100 ರಷ್ಟು ಕೇಂದ್ರ ಬೆಂಬಲಿತ ಕಾರ್ಯಕ್ರಮವಾಗಿದ್ದಕ್ಕೆ ಮತ್ತು 31.03.2021 ರವರೆಗಿನ ಅವಧಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 8,147.28 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
ಈ ಪ್ಯಾಕೇಜ್‌ನಲ್ಲಿನ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಚೌಕಟ್ಟನ್ನು ಬಳಸಿಕೊಂಡು ಕಾರ್ಯಗತಗೊಳಿಸಲಾಗಿದೆ, ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಲಭ್ಯವಿರುವ ಸಂಪನ್ಮೂಲಗಳಿಗೆ ಇದು ಪೂರಕವಾಗಿದೆ. ಪ್ಯಾಕೇಜ್‌ನ ಉದ್ದೇಶವು ಕೋವಿಡ್‌-19 ಸಾಂಕ್ರಾಮಿಕದ ಹರಡುವಿಕೆಯನ್ನು ನಿಧಾನಗೊಳಿಸುವುದು ಮತ್ತು ಭವಿಷ್ಯಕ್ಕಾಗಿ ತಡೆಗಟ್ಟುವಿಕೆ ಮತ್ತು ಸನ್ನದ್ಧತೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ವ್ಯವಸ್ಥೆಯನ್ನು ಬೆಂಬಲಿಸುವುದು ಮತ್ತು ಬಲಪಡಿಸುವುದಾಗಿದೆ.

ಅನುಷ್ಠಾನ ತಂತ್ರ ಮತ್ತು ಗುರಿಗಳು: 

ಅನುಷ್ಠಾನ ತಂತ್ರ:

ಎನ್‌ಹೆಚ್‌ಎಂ ಅಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅನುಷ್ಠಾನದ ಕಾರ್ಯತಂತ್ರವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಹಣಕಾಸಿನ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುವುದು, ವಿಶೇಷವಾಗಿ ಜಿಲ್ಲಾ ಆಸ್ಪತ್ರೆಗಳಿಗೆ ಪ್ರವೇಶಿಸಬಹುದಾದ, ಕೈಗೆಟುಕುವ, ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆಯನ್ನು  ವಿಶೇಷವಾಗಿ ಬಡ ಮತ್ತು ದುರ್ಬಲ ವರ್ಗಗಳಿಗೆ ಒದಗಿಸಲು ಅನುವು ಮಾಡಿಕೊಡುತ್ತದೆ. ಸುಧಾರಿತ ಆರೋಗ್ಯ ಮೂಲಸೌಕರ್ಯ, ಮಾನವ ಸಂಪನ್ಮೂಲಗಳ ವರ್ಧನೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ಸೇವಾ ವಿತರಣೆಯ ಮೂಲಕ ಗ್ರಾಮೀಣ ಆರೋಗ್ಯ ಸೇವೆಗಳಲ್ಲಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಇದು ಹೊಂದಿದೆ. ಅಗತ್ಯಕ್ಕೆ ತಕ್ಕಂತೆ ಮಧ್ಯಸ್ಥಿಕೆಗಳನ್ನು ಸುಗಮಗೊಳಿಸಲು, ಆಂತರಿಕ ಮತ್ತು ಅಂತರ-ವಲಯಗಳ ಸಮನ್ವಯವನ್ನು ಸುಧಾರಿಸಲು ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಇದು ಉತ್ತೇಜಿಸುತ್ತದೆ.

             2025 ರ ವೇಳೆಗೆ ಎನ್‌ಹೆಚ್‌ಎಂ ಅಡಿಯಲ್ಲಿ ಗುರಿಗಳು: 

•    ತಾಯಂದಿರ ಮರಣ ದರ (ಎಂಎಂಆರ್‌) ವನ್ನು 113 ರಿಂದ 90 ಕ್ಕೆ ಇಳಿಸುವುದು 
•    ನವಜಾತ ಶಿಶು ಮರಣ ದರ (ಐಎಂಆರ್‌) ವನ್ನು 32 ರಿಂದ 23 ಕ್ಕೆ ಇಳಿಸುವುದು 
•    5 ವರ್ಷದೊಳಗಿನ ಮಕ್ಕಳ ಮರಣ ದರ (ಯು5ಎಂಆರ್‌) ವನ್ನು 36 ರಿಂದ 23 ಕ್ಕೆ ಇಳಿಸುವುದು 
•    ಒಟ್ಟು ಫಲವತ್ತತೆ ದರ (ಟಿಎಫ್‌ಆರ್‌) ವನ್ನು 2.1 ರಲ್ಲಿ ಉಳಿಸಿಕೊಳ್ಳುವುದು 
•    ಎಲ್ಲ ಜಿಲ್ಲೆಗಳಲ್ಲಿ ಕುಷ್ಠರೋಗದ ಹರಡುವಿಕೆಯನ್ನು <1/10000 ಜನಸಂಖ್ಯೆಗೆ ಮತ್ತು ಸೊನ್ನೆಗೆ ಕಡಿಮೆ ಮಾಡುವುದು
•    ವಾರ್ಷಿಕ ಮಲೇರಿಯಾ ವ್ಯಾಪ್ತಿ <1/1000 
• ಸಾಂಕ್ರಾಮಿಕ, ಸಾಂಕ್ರಾಮಿಕವಲ್ಲದ ಮರಣ ಮತ್ತು ರೋಗಗಳು ಮತ್ತು ಗಾಯಗಳು ಮತ್ತು ಉದಯೋನ್ಮುಖ ರೋಗಗಳನ್ನು ತಡೆಗಟ್ಟುವುದು, ಕಡಿಮೆ ಮಾಡುವುದು
•    ಒಟ್ಟು ಆರೋಗ್ಯ ವೆಚ್ಚದ ಮೇಲೆ ಕುಟುಂಬದ ವೆಚ್ಚವನ್ನು ಕಡಿಮೆ ಮಾಡುವುದು
•    ದೇಶದಿಂದ 2025 ರ ಹೊತ್ತಿಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವುದು

ಉದ್ಯೋಗ ಸೃಷ್ಟಿಯ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮ:

• 2020-21 ರಲ್ಲಿ ಎನ್‌ಹೆಚ್‌ಎಂ ಅನುಷ್ಠಾನವು ಜಿಡಿಎಂಒಗಳು, ತಜ್ಞರು, ಎಎನ್‌ಎಂಗಳು, ಸ್ಟಾಫ್ ನರ್ಸ್, ಆಯುಷ್ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ, ಆಯುಷ್ ಅರೆವೈದ್ಯಕೀಯ ಸಿಬ್ಬಂದಿ, ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥಾಪಕರು ಸೇರಿದಂತೆ 2.71 ಲಕ್ಷ ಹೆಚ್ಚುವರಿ ಮಾನವ ಸಂಪನ್ಮೂಲವನ್ನು ಗುತ್ತಿಗೆ ಆಧಾರದ ಮೇಲೆ ತೊಡಗಿಸಿಕೊಳ್ಳಲು ಕಾರಣವಾಗಿದೆ.
•  2020-21 ರ ಅವಧಿಯಲ್ಲಿ ಎನ್‌ಹೆಚ್‌ಎಂ ಅನುಷ್ಠಾನವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕಾರಣವಾಗಿದೆ, ಇದು ಭಾರತ ಕೋವಿಡ್‌ 19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆ ಪ್ಯಾಕೇಜ್ ಅನ್ನು ಪರಿಚಯಿಸುವ ಮೂಲಕ ಪರಿಣಾಮಕಾರಿ ಮತ್ತು ಸಂಘಟಿತ ಕೋವಿಡ್‌-19 ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸಿದೆ.
•  ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳ ಮರಣ ದರ (ಯು5ಎಂಆರ್‌) 2013 ರಲ್ಲಿದ್ದ 49 ರಿಂದ 2018 ರಲ್ಲಿ 36 ಕ್ಕೆ ಇಳಿದಿದೆ ಮತ್ತು 2013-2018 ರ ಅವಧಿಯಲ್ಲಿ ಯು5ಎಂಆರ್‌ ಶೇಕಡಾವಾರು ವಾರ್ಷಿಕ ಕುಸಿತದ ದರವು 1990-2012 ರಲ್ಲಿದ್ದ ಶೇ.3.9  ರಿಂದ ಶೇ.6.0 ಕ್ಕೆ ಹೆಚ್ಚಾಗಿದೆ. ಎಸ್‌ಆರ್‌ಎಸ್‌ 2020 ರ ಪ್ರಕಾರ, ಯು5ಎಂಆರ್‌ 32 ಕ್ಕೆ ಕಡಿಮೆಯಾಗಿದೆ.
•   ಭಾರತದ ತಾಯಂದಿರ ಮರಣ ದರವು (ಎಂಎಂಆರ್) 1990 ರಲ್ಲಿದ್ದ ಒಂದು ಲಕ್ಷ ಜೀವಂತ ಜನನಗಳಿಗೆ 556 ರಿಂದ 2016-18 ರಲ್ಲಿ 113 ಕ್ಕೆ ಕಡಿಮೆಯಾಗಿದೆ. ಎಂಎಂಆರ್ ನಲ್ಲಿ 1990 ರಿಂದ ಶೇ.80 ರಷ್ಟು ಇಳಿಕೆಯನ್ನು ಸಾಧಿಸಲಾಗಿದೆ, ಇದು ಶೇ.45 ರ ಜಾಗತಿಕ ಇಳಿಕೆಗಿಂತ ಹೆಚ್ಚಾಗಿದೆ. ಕಳೆದ ಐದು ವರ್ಷಗಳಲ್ಲಿ, ತಾಯಂದಿರ ಮರಣ ಪ್ರಮಾಣ 2011-13 (ಎಸ್‌ಆರ್‌ಎಸ್‌) ರಲ್ಲಿದ್ದ 167 ರಿಂದ 2016-18 (ಎಸ್‌ಆರ್‌ಎಸ್‌) ರಲ್ಲಿ 113 ಕ್ಕೆ ಇಳಿದಿದೆ. ಎಸ್‌ಆರ್‌ಎಸ್‌ 2017-19 ರ ಪ್ರಕಾರ, ಎಂಎಂಆರ್‌ 103 ಕ್ಕೆ ಕಡಿಮೆಯಾಗಿದೆ.
•  ನವಜಾತ ಶಿಶು ಮರಣ ದರ (ಐಎಂಆರ್‌) 1990 ರಲ್ಲಿದ್ದ 80 ರಿಂದ 2018 ರಲ್ಲಿ 32 ಕ್ಕೆ ಕುಸಿದಿದೆ. ಕಳೆದ ಐದು ವರ್ಷಗಳಲ್ಲಿ ಐಎಂಆರ್‌ನಲ್ಲಿನ ಶೇಕಡಾವಾರು ವಾರ್ಷಿಕ ಇಳಿಕೆ ದರವು, 2013 ರಿಂದ 2018 ರ ಅವಧಿಯಲ್ಲಿ, 1990-2012 ರ ಅವಧಿಯಲ್ಲಿದ್ದ ಶೇ.2.9 ರಿಂದ ಶೇ.4.4 ಕ್ಕೆ ಹೆಚ್ಚಾಗಿದೆ. ಎಸ್‌ಆರ್‌ಎಸ್‌ 2020 ರ ಪ್ರಕಾರ, ಐಎಂಆರ್‌ 28 ಕ್ಕೆ ಕಡಿಮೆಯಾಗಿದೆ.
• ಮಾದರಿ ನೋಂದಣಿ ವ್ಯವಸ್ಥೆ (ಎಸ್‌ಆರ್‌ಎಸ್‌) ಪ್ರಕಾರ, ಭಾರತದಲ್ಲಿ ಟಿಎಫ್‌ಆರ್‌ 2013 ರಲ್ಲಿದ್ದ 2.3 ರಿಂದ 2018 ರಲ್ಲಿ 2.2 ಕ್ಕೆ ಕುಸಿದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 (2015-16) ಸಹ 2.2 ರ ಟಿಎಫ್‌ಆರ್‌ ಅನ್ನು ದಾಖಲಿಸಿದೆ. 2013 -2018 ರ ಅವಧಿಯಲ್ಲಿ ಟಿಎಫ್‌ಆರ್‌ನಲ್ಲಿನ ಕುಸಿತದ ಶೇಕಡಾವಾರು ವಾರ್ಷಿಕ ದರವನ್ನು ಶೇ.0.89 ಎಂದು ಗಮನಿಸಲಾಗಿದೆ. ಪ್ರಸ್ತುತ 36 ರಲ್ಲಿ 28 ರಾಜ್ಯಗಳು/ಯುಟಿಗಳು ಫಲವತ್ತತೆಯ ಅಪೇಕ್ಷಿತ ಬದಲಿ ಮಟ್ಟವನ್ನು ಸಾಧಿಸಿವೆ (2.1). ಎಸ್‌ಆರ್‌ಎಸ್‌ 2020 ರ ಪ್ರಕಾರ, ಟಿಎಫ್‌ಆರ್‌ 2.0 ಕ್ಕೆ ಕಡಿಮೆಯಾಗಿದೆ.
•  2020 ರಲ್ಲಿ, ಮಲೇರಿಯಾ ಪ್ರಕರಣಗಳು ಮತ್ತು ಸಾವುಗಳು ಕ್ರಮವಾಗಿ ಶೇ.46.28 ಮತ್ತು ಶೇ.18.18 ರಷ್ಟು ಕಡಿಮೆಯಾಗಿವೆ.
• ಕ್ಷಯರೋಗದ ಸಂಭಾವ್ಯತೆಯನ್ನು 1,00,000 ಜನಸಂಖ್ಯೆಗೆ 2012 ರಲ್ಲಿದ್ದ 234 ರಿಂದ 2019 ರಲ್ಲಿ 193 ಕ್ಕೆ ಇಳಿಸಲಾಗಿದೆ. ಭಾರತದಲ್ಲಿ ಟಿಬಿಯಿಂದ ಮರಣ ಪ್ರಮಾಣವು 1,00,000 ಜನಸಂಖ್ಯೆಗೆ 2012 ರಲ್ಲಿದ್ದ 42 ರಿಂದ 2019 ರಲ್ಲಿ 33 ಕ್ಕೆ ಕಡಿಮೆಯಾಗಿದೆ.
•   10000 ಜನಸಂಖ್ಯೆಗೆ ಒಂದಕ್ಕಿಂತಲೂ ಕಡಿಮೆ ಪ್ರಕರಣದ ಗುರಿಯ ಕಾಲಾ ಅಜರ್‌ ಪ್ರಕರಣದ ನಿರ್ಮೂಲನವನ್ನು ಸಾಧಿಸುವ ನಿಟ್ಟಿನಲ್ಲಿ ಕಾಲಾ ಅಜರ್ ಶೇಕಡಾವಾರು ಪ್ರಮಾಣವು 2014 ರಲ್ಲಿದ್ದ ಶೇ. 74.2 ರಿಂದ 2020-21 ರಲ್ಲಿ ಶೇ.97.5 ಕ್ಕೆ ಏರಿದೆ.
•  ಪ್ರಕರಣ ಮರಣ ದರ (ಸಿಎಫ್‌ಆರ್‌) ವನ್ನು 1 ಪ್ರತಿಶತಕ್ಕಿಂತ ಕಡಿಮೆಗೆ ಉಳಿಸಿಕೊಳ್ಳುವ ರಾಷ್ಟ್ರೀಯ ಗುರಿಯನ್ನು ಸಾಧಿಸಲಾಗಿದೆ. ಡೆಂಗಿ ಪ್ರಕರಣದ ಸಾವಿನ ಪ್ರಮಾಣವು 2019 ರಲ್ಲಿ ಇದ್ದಂತೆ 2020 ರಲ್ಲಿಯೂ ಶೇ. 0.01 ರಷ್ಟಿದೆ.

ಯೋಜನೆಯ ವಿವರಗಳು ಮತ್ತು ಪ್ರಗತಿ:        

             2020-21 ರಲ್ಲಿ ಎನ್‌ಹೆಚ್‌ಎಂ ಅಡಿಯಲ್ಲಿ ಪ್ರಗತಿಯು ಈ ಕೆಳಗಿನಂತಿದೆ:

• 1,05,147 ಆಯುಷ್ಮಾನ್ ಭಾರತ್-ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ 31 ಮಾರ್ಚ್ 2021 ರವರೆಗೆ ಅನುಮೋದನೆ ನೀಡಲಾಗಿದೆ. ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಪೋರ್ಟಲ್‌ನಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿದಂತೆ, ಮಾರ್ಚ್ 31, 2022 ರವರೆಗೆ 1,10,000 ಗುರಿಯ ಬದಲಿಗೆ 1,17,440 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
•   31 ಮಾರ್ಚ್, 2021 ರ ಅಂತ್ಯದ ವೇಳೆಗೆ, ಒಟ್ಟು 5,34,771 ಆಶಾಗಳು, 1,24,732 ಬಹುಪಯೋಗಿ ಕೆಲಸಗಾರರು/ ಸಹಾಯಕ ನರ್ಸ್ ಸೂಲಗಿತ್ತಿ (ಎಎನ್‌ಎಂಗಳು), 26,033 ಸ್ಟಾಫ್ ನರ್ಸ್ ಮತ್ತು 26,633 ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಹೆಚ್‌ಸಿ) ವೈದ್ಯಾಧಿಕಾರಿಗಳು ಅಸಾಂಕ್ರಾಮಿಕ ರೋಗಗಳ ಕುರಿತು ತರಬೇತಿ ಪಡೆದಿದ್ದಾರೆ.
•   ಎನ್‌ಆರ್‌ಹೆಚ್‌ಎಂ/ಎನ್‌ಹೆಚ್‌ಎಂ ಪ್ರಾರಂಭವಾದಾಗಿನಿಂದ ತಾಯಂದಿರ ಮರಣ ಪ್ರಮಾಣ, ಐದು ವರ್ಷದೊಳಗಿನ ಮಕ್ಕಳ ಮರಣ ದರ ಮತ್ತು ಐಎಂಆರ್‌ ಇಳಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಪ್ರಸ್ತುತ ಕುಸಿತದ ದರದಲ್ಲಿ, ಭಾರತವು ತನ್ನ ಎಸ್‌ಡಿಜಿ ಗುರಿಯನ್ನು (ಎಂಎಂಅರ್‌-70, ಯು5ಎಂಆರ್‌-25) ನಿಗದಿತ ವರ್ಷಕ್ಕೂ ಮೊದಲು ಅಂದರೆ 2030 ಕ್ಕೆ ತಲುಪಲು ಸಾಧ್ಯವಾಗುತ್ತದೆ. 
•  ಫೆಬ್ರವರಿ 2021 ರಿಂದ ಮಾರ್ಚ್ 2021 ರವರೆಗೆ ತೀವ್ರಗೊಳಿಸಿದ ಮಿಷನ್ ಇಂದ್ರಧನುಷ್ 3.0 ಅನ್ನು ನಡೆಸಲಾಯಿತು, 29 ರಾಜ್ಯಗಳು/ಯುಟಿಗಳಲ್ಲಿ ಒಟ್ಟು 250 ಜಿಲ್ಲೆಗಳನ್ನು ಗುರುತಿಸಲಾಯಿತು.
•   ಎಲ್ಲ ರಾಜ್ಯಗಳು/ಯುಟಿಗಳಲ್ಲಿ ಸುಮಾರು 6.58 ಕೋಟಿ ಡೋಸ್ ರೋಟವೈರಸ್ ಲಸಿಕೆಯನ್ನು ನೀಡಲಾಯಿತು.
•   6 ರಾಜ್ಯಗಳಲ್ಲಿ ಬಿಹಾರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿ ಸುಮಾರು 204.06 ಲಕ್ಷ ಡೋಸ್‌ಗಳ ನ್ಯುಮೋಕಾಕಲ್ ಸಂಯೋಜಿತ ಲಸಿಕೆ (ಪಿಸಿವಿ) ನೀಡಲಾಯಿತು. 2021-22 ರ ಬಜೆಟ್ ಪ್ರಕಟಣೆಯ ಪ್ರಕಾರ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ (ಯುಐಪಿ) ಅಡಿಯಲ್ಲಿ ಪಿಸಿವಿಯನ್ನು ರಾಷ್ಟ್ರವ್ಯಾಪಿಯಾಗಿ ಹೆಚ್ಚಿಸಲಾಗಿದೆ.
•    ಸುಮಾರು 3.5 ಕೋಟಿ ವಯಸ್ಕರಿಗೆ ವಯಸ್ಕ ಜಪಾನೀಸ್ ಎನ್ಸೆಫಾಲಿಟಿಸ್ ಲಸಿಕೆಯನ್ನು ಹಾಕಲಾಗಿದೆ, ಇದನ್ನು ಅಸ್ಸಾಂ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ 35 ಸ್ಥಳೀಯ ಜಿಲ್ಲೆಗಳಲ್ಲಿ ನಡೆಸಲಾಗಿದೆ. 
•  ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ (ಪಿಎಂಎಸ್‌ಎಂಎ) ಅಡಿಯಲ್ಲಿ ಎಲ್ಲಾ ರಾಜ್ಯ/ಯುಟಿಗಳಲ್ಲಿ 18,400 ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳಲ್ಲಿ 31.49 ಲಕ್ಷ ಎಎನ್‌ಸಿ ತಪಾಸಣೆಗಳನ್ನು ನಡೆಸಲಾಗಿದೆ.
•  ಲಕ್ಷ್ಯ: 202 ಹೆರಿಗೆ ಕೊಠಡಿಗಳು ಮತ್ತು 141 ಹೆರಿಗೆ ಆಪರೇಷನ್ ಥಿಯೇಟರ್‌ಗಳು ರಾಜ್ಯ ಲಕ್ಷ್ಯ ಪ್ರಮಾಣೀಕೃತವಾಗಿವೆ ಮತ್ತು 64 ಹೆರಿಗೆ ಕೊಠಡಿಗಳು ಮತ್ತು 47 ಹೆರಿಗೆ ಆಪರೇಷನ್ ಥಿಯೇಟರ್‌ಗಳು ರಾಷ್ಟ್ರೀಯ ಲಕ್ಷ್ಯ ಪ್ರಮಾಣೀಕೃತವಾಗಿವೆ.
•  ದೇಶದಲ್ಲಿ ಕೋಲ್ಡ್ ಚೈನ್ ವ್ಯವಸ್ಥೆಯನ್ನು ಬಲಪಡಿಸಲು, ಕೋಲ್ಡ್ ಚೈನ್ ಉಪಕರಣಗಳು ಅಂದರೆ ಐಎಲ್ಆರ್ (ದೊಡ್ಡದು)- 1041, ಐಎಲ್ಆರ್ (ಸಣ್ಣ)- 5185, ಡಿಎಫ್ (ದೊಡ್ಡದು)- 1532, ಕೋಲ್ಡ್ ಬಾಕ್ಸ್ (ದೊಡ್ಡದು)- 2674, ಕೋಲ್ಡ್ ಬಾಕ್ಸ್ (ಸಣ್ಣ) - 3700 , ಲಸಿಕೆ ವಾಹಕ - 66,584 ಮತ್ತು ಐಸ್ ಪ್ಯಾಕ್‌ಗಳು - 31,003 ರಾಜ್ಯಗಳು/ಯುಟಿಗಳಿಗೆ ಸರಬರಾಜು ಮಾಡಲಾಗಿದೆ.
•  2020-21ರಲ್ಲಿ ಒಟ್ಟು 13,066 ಆಶಾಗಳನ್ನು ಆಯ್ಕೆ ಮಾಡಲಾಗಿದ್ದು, ಮಾರ್ಚ್ 31, 2021 ರವರೆಗೆ ದೇಶದಾದ್ಯಂತ ಒಟ್ಟು 10.69 ಲಕ್ಷ ಆಶಾಗಳಿದ್ದಾರೆ. 
•   ರಾಷ್ಟ್ರೀಯ ಆಂಬ್ಯುಲೆನ್ಸ್ ಸೇವೆಗಳು (ಎನ್‌ಎಎಸ್‌): ಮಾರ್ಚ್ 2021 ರಂತೆ, 35 ರಾಜ್ಯಗಳು / ಯುಟಿಗಳು ಆಂಬ್ಯುಲೆನ್ಸ್‌ಗೆ ಕರೆ ಮಾಡಲು 108 ಅಥವಾ 102 ಅನ್ನು ಡಯಲ್ ಮಾಡುವ ಸೌಲಭ್ಯವನ್ನು ಹೊಂದಿವೆ. 2020-21ರಲ್ಲಿ 735 ಹೆಚ್ಚುವರಿ ತುರ್ತು ಪ್ರತಿಕ್ರಿಯೆ ಸೇವೆಯ ವಾಹನಗಳನ್ನು ಸೇರಿಸಲಾಗಿದೆ.
•    2020-21ರಲ್ಲಿ, 30 ಹೆಚ್ಚುವರಿ ಮೊಬೈಲ್ ವೈದ್ಯಕೀಯ ಘಟಕಗಳನ್ನು (ಎಂಎಂಯು) ಸೇರಿಸಲಾಗಿದೆ.
•  24x7 ಸೇವೆಗಳು ಮತ್ತು ಮೊದಲ ರೆಫರಲ್ ಸೌಲಭ್ಯಗಳು: 2020-21 ರ ಅವಧಿಯಲ್ಲಿ, 1140 ಸೌಲಭ್ಯಗಳನ್ನು ಎಫ್‌ಆರ್‌ಯುಗಳ ಕಾರ್ಯಾಚರಣೆಯಾಗಿ ಸೇರಿಸಲಾಗಿದೆ.
•    ಕಾಯಕಲ್ಪ: 2020-21ರಲ್ಲಿ ಈ ಯೋಜನೆಯಡಿ 10,717 ಸಾರ್ವಜನಿಕ ಆರೋಗ್ಯ ಸೌಲಭ್ಯಗಳು ಕಾಯಕಲ್ಪ ಪ್ರಶಸ್ತಿಗಳನ್ನು ಪಡೆದಿವೆ.
•    ಮಲೇರಿಯಾ: 2014 ರಲ್ಲಿ ವರದಿಯಾದ 11,02,205 ಪ್ರಕರಣಗಳು ಮತ್ತು 561 ಸಾವುಗಳಿಗೆ ಹೋಲಿಸಿದರೆ 2020 ರಲ್ಲಿ ವರದಿಯಾದ ಒಟ್ಟು ಮಲೇರಿಯಾ ಪ್ರಕರಣಗಳು ಮತ್ತು ಸಾವುಗಳು ಕ್ರಮವಾಗಿ 1,81,831 ಮತ್ತು 63 ರಷ್ಟಿದೆ, ಇದು 2014 ರ ಅವಧಿಗೆ ಹೋಲಿಸಿದರೆ, ಶೇ.83.50 ಮಲೇರಿಯಾ ಪ್ರಕರಣಗಳು ಮತ್ತು ಶೇ.88.77 ಸಾವುಗಳ ಇಳಿಕೆಯನ್ನು  ತೋರಿಸುತ್ತದೆ.
•   ಕಾಲಾ-ಅಜರ್: 10,000 ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಪ್ರಕರಣದ ನಿರ್ಮೂಲನ ಗುರಿಯನ್ನು ಸಾಧಿಸುವ ಕಾಲಾ ಅಜರ್ ಸ್ಥಳೀಯ ಬ್ಲಾಕ್‌ಗಳ ಶೇಕಡಾವಾರು ಪ್ರಮಾಣವು 2014 ರಲ್ಲಿದ್ದ ಶೇ. 74.2 ರಿಂದ 2020-21 ರಲ್ಲಿ ಶೇ.97.5 ಕ್ಕೆ ಏರಿದೆ.
•   ಲಿಂಫಾಟಿಕ್‌ ಫೈಲೇರಿಯಾಸಿಸ್: 2020-21 ರಲ್ಲಿ, 272 ಲಿಂಫಾಟಿಕ್‌ ಫೈಲೇರಿಯಾಸಿಸ್ ಜಿಲ್ಲೆಗಳಲ್ಲಿ, 98 ಜಿಲ್ಲೆಗಳು 1 ಪ್ರಸರಣ ಮೌಲ್ಯಮಾಪನ ಸಮೀಕ್ಷೆಯನ್ನು (ಟಿಎಎಸ್‌-1) ಯಶಸ್ವಿಯಾಗಿ ಮುಗಿಸಿವೆ ಮತ್ತು ಎಂಡಿಎಯನ್ನು ನಿಲ್ಲಿಸಿವೆ ಮತ್ತು ಈ ಜಿಲ್ಲೆಗಳು ಎಂಡಿಎ ನಂತರದ ಕಣ್ಗಾವಲಿನಲ್ಲಿವೆ.
•   ಡೆಂಗಿಗೆ ಸಂಬಂಧಿಸಿದಂತೆ, ಪ್ರಕರಣದ ಸಾವಿನ ಪ್ರಮಾಣವನ್ನು ಒಂದಕ್ಕಿಂತ ಕಡಿಮೆ ಪ್ರತಿಶತದಲ್ಲಿ ಉಳಿಸಿಕೊಳ್ಳುವುದು ರಾಷ್ಟ್ರೀಯ ಗುರಿಯಾಗಿತ್ತು. 2014 ರಲ್ಲಿ ಪ್ರಕರಣದ ಸಾವಿನ ಪ್ರಮಾಣವು ಶೇ.0.3 ಮತ್ತು 2015 ರಿಂದ 2018 ರ ಅವಧಿಯಲ್ಲಿ ಇದು ಶೇ.0.2 ರಷ್ಟಿತ್ತು. 2020 ರಲ್ಲಿ, ಇದು 2019 ರಲ್ಲಿ ಇದ್ದಂತೆ ಶೇ.0.1 ರಲ್ಲಿ ಸ್ಥಿರವಾಗಿದೆ.
• ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ (ಎನ್‌ಟಿಇಪಿ): ಒಟ್ಟು 1,285 ಕಾರ್ಟ್ರಿಡ್ಜ್ ಆಧಾರಿತ ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಷನ್ ಟೆಸ್ಟ್ (ಸಿಬಿಎನ್‌ಎಎಟಿ) ಯಂತ್ರಗಳು ಮತ್ತು 2,206 ಟ್ರೂನಾಟ್ ಯಂತ್ರಗಳು ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. 2020ರಲ್ಲಿ 29.85 ಲಕ್ಷ ಆಣ್ವಿಕ ಪರೀಕ್ಷೆಗಳನ್ನು ನಡೆಸಲಾಗಿದೆ. 2017 ರಲ್ಲಿದ್ದ 7.48 ಲಕ್ಷಕ್ಕೆ ಹೋಲಿಸಿದರೆ ಇದು 4 ಪಟ್ಟು ಹೆಚ್ಚಾಗಿದೆ. ಕಡಿಮೆ ಎಂಡಿಆರ್‌-ಟಿಬಿ ವಿಧಾನ ಮತ್ತು ಬೆಡಾಕ್ವಿಲಿನ್/ಡೆಲಾಮನಿಡ್ (ಹೊಸ ಔಷಧಗಳು) ಆಧಾರಿತ ವಿಧಾನಗಳನ್ನು ಎಲ್ಲಾ ರಾಜ್ಯಗಳು/ಯುಟಿಗಳಲ್ಲಿ ಪರಿಚಯಿಸಲಾಗಿದೆ. 2020 ರಲ್ಲಿ, 30,605 ಎಂಡಿಆರ್‌/ಆರ್‌ಆರ್‌/ಟಿಬಿ ರೋಗಿಗಳನ್ನು ಕಡಿಮೆ ಎಂಡಿಆರ್‌-ಟಿಬಿ ವಿಧಾನಗಳಿಗೆ ಬದಲಿಸಲಾಗಿದೆ. 10,489 ಡಿಆರ್‌-ಟಿಬಿ ರೋಗಿಗಳಿಗೆ ಹೊಸ ವಿಧಾನಗಳನ್ನು (ಬೆಡಾಕ್ವಿಲಿನ್-10,140 ಮತ್ತು ಡೆಲಾಮನಿಡ್-349) ದೇಶಾದ್ಯಂತ ಪ್ರಾರಂಭಿಸಲಾಗಿದೆ.
•    ಎನ್‌ಹೆಚ್‌ಎಂ ಅಡಿಯಲ್ಲಿ ಪಿಪಿಪಿ ಮಾದರಿಯಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯಗಳನ್ನು ಬೆಂಬಲಿಸಲು ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮವನ್ನು (ಪಿಎಂಎನ್‌ಡಿಪಿ) 2016 ರಲ್ಲಿ ಪ್ರಾರಂಭಿಸಲಾಯಿತು. 2020-21 ನೇ ಹಣಕಾಸು ಅವಧಿಯಲ್ಲಿ, ಪಿಎಂಎನ್‌ಡಿಪಿಯನ್ನು 35 ರಾಜ್ಯಗಳು/ಯುಟಿಗಳ 505 ಜಿಲ್ಲೆಗಳಲ್ಲಿ 910 ಡಯಾಲಿಸಿಸ್ ಕೇಂದ್ರಗಳಲ್ಲಿ 5781 ಯಂತ್ರಗಳನ್ನು ನಿಯೋಜಿಸುವ ಮೂಲಕ ಜಾರಿಗೊಳಿಸಲಾಗಿದೆ. 2020-21ರಲ್ಲಿ, ಒಟ್ಟು 3.59 ಲಕ್ಷ ರೋಗಿಗಳು ಡಯಾಲಿಸಿಸ್ ಸೇವೆಗಳನ್ನು ಪಡೆದುಕೊಂಡಿದ್ದಾರೆ ಮತ್ತು 35.82 ಲಕ್ಷ ಹೆಮೋ-ಡಯಾಲಿಸಿಸ್ ಸೆಷನ್‌ಗಳನ್ನು ನಡೆಸಲಾಗಿದೆ.

ಹಿನ್ನೆಲೆ: 

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವನ್ನು 2005 ರಲ್ಲಿ ಪ್ರಾರಂಭಿಸಲಾಯಿತು. ಗ್ರಾಮೀಣ ಜನರಿಗೆ, ವಿಶೇಷವಾಗಿ ದುರ್ಬಲ ವರ್ಗಗಳಿಗೆ, ಜಿಲ್ಲಾ ಆಸ್ಪತ್ರೆಗಳ ಹಂತದವರೆಗೆ ಪ್ರವೇಶಿಸಬಹುದಾದ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಯಿತು. 2012 ರಲ್ಲಿ, ರಾಷ್ಟ್ರೀಯ ನಗರ ಆರೋಗ್ಯ ಮಿಷನ್ (ಎನ್‌ಯುಹೆಚ್‌ಎಂ) ಪರಿಕಲ್ಪನೆ ಮಾಡಲಾಯಿತು ಮತ್ತು ಎನ್‌ಆರ್‌ಹೆಚ್‌ಎಂ ಅನ್ನು ಈ ಎರಡೂ ಉಪ ಮಿಷನ್‌ಗಳೊಂದಿಗೆ ರಾಷ್ಟ್ರೀಯ ಆರೋಗ್ಯ ಮಿಷನ್ ಎಂದು ಮರುನಾಮಕರಣ ಮಾಡಲಾಯಿತು. 
ರಾಷ್ಟ್ರೀಯ ಆರೋಗ್ಯ ಮಿಷನ್‌ನ ಮುಂದುವರಿಕೆಗೆ-1ನೇ ಏಪ್ರಿಲ್ 2017 ರಿಂದ ಮಾರ್ಚ್ 31, 2020 ರವರೆಗೆ ಜಾರಿಗೆ ಬರುವಂತೆ 21ನೇ ಮಾರ್ಚ್ 2018 ರಂದು ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಹಣಕಾಸು ಸಚಿವಾಲಯ, ವೆಚ್ಚದ ಇಲಾಖೆಯು 10ನೇ ಜನವರಿ 2020 ದಿನಾಂಕದ ತನ್ನ ಕಚೇರಿ ಅಧಿಸೂಚನೆ ಸಂಖ್ಯೆ 42(02/PF-II.2014) ಯಲ್ಲಿ 31ನೇ ಮಾರ್ಚ್ 2021 ರವರೆಗೆ ಅಥವಾ 15 ನೇ ಹಣಕಾಸು ಆಯೋಗಗಳ ಶಿಫಾರಸುಗಳು ಜಾರಿಗೆ ಬರುವ ದಿನಾಂಕದವರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್‌ನ ವಿಸ್ತರಣೆಗೆ ಅನುಮೋದನೆ ನೀಡಿದೆ.
ಹಣಕಾಸು ಸಚಿವಾಲಯ, ವೆಚ್ಚ ಇಲಾಖೆಯು ಅದರ OM ಸಂಖ್ಯೆ 01(01)/PFC-I/2022 ದಿನಾಂಕ 01ನೇ ಫೆಬ್ರವರಿ, 2022 ರ ಪ್ರಕಾರ ರಾಷ್ಟ್ರೀಯ ಆರೋಗ್ಯ ಮಿಷನ್ ಅನ್ನು 01.04.2021 ರಿಂದ 31.03.2026 ರವರೆಗೆ ಅಥವಾ ಮುಂದಿನ ಪರಿಶೀಲನೆಯವರೆಗೆ ಅನುಮೋದನೆಯನ್ನು ನೀಡಿದೆ. ಇದು ವೆಚ್ಚ ಹಣಕಾಸು ಸಮಿತಿಯ (ಇಎಫ್‌ಸಿ) ಶಿಫಾರಸುಗಳು ಮತ್ತು ಹಣಕಾಸಿನ ಸೀಲಿಂಗ್‌ಗಳು ಇತ್ಯಾದಿಗಳ ಅನುಸರಣೆಗೆ ಒಳಪಟ್ಟಿರುತ್ತದೆ.
ಎನ್‌ಹೆಚ್‌ಎಂ ಚೌಕಟ್ಟಿಗೆ ಸಂಪುಟ ಅನುಮೋದನೆಯು ಈ ನಿಯೋಜಿತ ಅಧಿಕಾರಗಳನ್ನು ಬಳಸಲು ಎನ್‌(ಆರ್)ಹೆಚ್‌ಎಂಗೆ ಸಂಬಂಧಿಸಿದ ಪ್ರಗತಿ ವರದಿಯ ಜೊತೆಗೆ ಹಣಕಾಸಿನ ಮಾನದಂಡಗಳಲ್ಲಿನ ವಿಚಲನ, ನಡೆಯುತ್ತಿರುವ ಯೋಜನೆಗಳಲ್ಲಿನ ಮಾರ್ಪಾಡುಗಳು ಮತ್ತು ಹೊಸ ಯೋಜನೆಗಳ ವಿವರಗಳನ್ನು ವಾರ್ಷಿಕ ಆಧಾರದ ಮೇಲೆ ಮಾಹಿತಿಗಾಗಿ ಸಂಪುಟದ ಮುಂದೆ ಸಲ್ಲಿಸುವ ಷರತ್ತಿಗೆ ಒಳಪಟ್ಟಿರುತ್ತದೆ.

********



(Release ID: 1863187) Visitor Counter : 321