ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಐದು ರಾಜ್ಯಗಳ ಬುಡಕಟ್ಟು ಪ್ರದೇಶಗಳಲ್ಲಿ ಸಾರವರ್ಧಿತ ಅಕ್ಕಿಯ ಕುರಿತಂತೆ ಐಇಸಿ ಅಭಿಯಾನ
ಸಾರವರ್ಧಿತ ಅಕ್ಕಿ ಮೂಲಕ ಪೌಷ್ಟಿಕಾಂಶದ ಭದ್ರತೆಯನ್ನು ಪ್ರತಿಪಾದಿಸಿದ ತಜ್ಞರು
ಪ್ರಕಟಣಾ ದಿನಾಂಕ:
27 SEP 2022 5:53PM by PIB Bengaluru
ಸಾರವರ್ಧಿತ ಅಕ್ಕಿಯ ಪ್ರಯೋಜನದ ಬಗ್ಗೆ ಅದರಲ್ಲೂ ವಿಶೇಷವಾಗಿ ದೇಶದ ಬುಡಕಟ್ಟು ಪ್ರದೇಶಗಳಲ್ಲಿ ಜನಪ್ರಿಯಗೊಳಿಸಲು ಹಾಗೂ ಜಾಗೃತಿ ಮೂಡಿಸಲು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (ಡಿ.ಎಫ್.ಪಿ.ಡಿ) ಮತ್ತು ಗುಜರಾತ್, ಮಹಾರಾಷ್ಟ್ರ, ಛತ್ತೀಸಗಡ, ಮಧ್ಯಪ್ರದೇಶ, ಜಾರ್ಖಂಡ್, ತೆಲಂಗಾಣ ರಾಜಸ್ಥಾನ, ಕೇರಳ ರಾಜ್ಯ ಸರ್ಕಾರಗಳು ತಲಸ್ಸೇಮಿಯಾ ಮತ್ತು ಸಿಕಲ್ ಸೆಲ್ ಅನಿಮಿಯಾ-ರಕ್ತಹೀನತೆಗೆ ತುತ್ತಾಗುವ ಜನಸಂಖ್ಯೆಯನ್ನು ಹೊಂದಿರುವ ಬುಡಕಟ್ಟು ಪ್ರದೇಶಗಳು ಮತ್ತು ಜಿಲ್ಲೆಗಳಲ್ಲಿ ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಿವೆ.
ಗುಜರಾತ್ ನಲ್ಲಿ, ರಾಜ್ಯ ಸರ್ಕಾರವು ಸೆಪ್ಟೆಂಬರ್ 9, 2022 ರಂದು ವಾಪಿಯ ಮೆರಿಲ್ ಅಕಾಡೆಮಿಯಲ್ಲಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಇದರ ನಂತರ, 13.09.2022 ರಂದು ನನುರ್ಬಾರ್ (ಮಹಾರಾಷ್ಟ್ರ), 14.09.2022 ರಂದು ನಾಸಿಕ್ (ಮಹಾರಾಷ್ಟ್ರ), 15.09.2022 ರಂದು ಕಂಕೇರ್ (ಛತ್ತೀಸ್ ಗಢ), 16.09.2022 ರಂದು ಜಮ್ಷೆಡ್ಪುರ (ಜಾರ್ಖಂಡ್), 20.09.2022ರಂದು ಭರ್ವಾನಿ (ಮಧ್ಯಪ್ರದೇಶ), 20.09.2022ರಂದು ಮಂಡ್ಲಾ (ಮಧ್ಯಪ್ರದೇಶ) ಮತ್ತು 24.09.2022 ರಂದು ಶಾಹದೋಲ್ (ಮಧ್ಯಪ್ರದೇಶ)ದಲ್ಲಿ ಡಿಎಫ್‌ಪಿಡಿ, ಅಭಿವೃದ್ಧಿ ಪಾಲುದಾರರು ಮತ್ತು ಎಫ್‌ಸಿಐ ಸಹಯೋಗದಲ್ಲಿ ರಾಜ್ಯ ಸರ್ಕಾರಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ದಂಡಾಧಿಕಾರಿಗಳು, ತಾಂತ್ರಿಕ ತಜ್ಞರು, ಸ್ಥಳೀಯ ತಜ್ಞರು, ವೈದ್ಯರು, ನಾಗರಿಕ ಶಸ್ತ್ರಚಿಕಿತ್ಸಕರು (ಸಿವಿಲ್ ಸರ್ಜನ್ಸ್), ಎನ್.ಜಿ.ಓ.ಗಳು, ನ್ಯಾಯಬೆಲೆ ಅಂಗಡಿ ನಡೆಸುವವರು, ಸರಪಂಚರು, ಬುಡಕಟ್ಟು ಪ್ರದೇಶಗಳ ಮುಖಂಡರು, ನಾಗರಿಕ ಸರಬರಾಜು, ಆರೋಗ್ಯ, ಐಸಿಡಿಎಸ್ ಅಧಿಕಾರಿಗಳು, ಅಭಿವೃದ್ಧಿ ಪಾಲುದಾರರು ಮತ್ತು ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜನರ ಕಳವಳಗಳನ್ನು ಪರಿಹರಿಸಿದ ತಜ್ಞರಲ್ಲಿ - ವಡೋದರದ ಎಂ.ಎಸ್. ವಿಶ್ವವಿದ್ಯಾಲಯದ ಡಾ. ಎಸ್. ನಾಯರ್, ಡಾ. ಎಚ್. ಗಾಂಧಿ, ನವದೆಹಲಿಯ ಏಮ್ಸ್ ನ ಡಾ. ಕೆ. ಯಾದವ್, ಡಾ. ಟಿ. ಆಚಾರಿ, ಎಂ.ಎ.ಎಂ.ಸಿ. ನವದೆಹಲಿಯ ಡಾ. ರಾಘವೇಂದ್ರ ಸಿಂಗ್, ಅಮರಾವತಿಯ ಪಿಡಿಎಂ ವೈದ್ಯಕೀಯ ಕಾಲೇಜಿನ ಡಾ. ಎನ್. ತಾಯಡೆ, ನಾಗಪುರದ ನೆಟ್ ಪ್ರೋ ಫ್ಯಾನ್ ನ ಡಾ. ಎನ್. ಭಾವಾ, ನಂದೂರ್ಬಾರ್, ಡಾ. ಆರ್. ಮೈಂಡೇ, ರಾಯಪುರ ಏಮ್ಸ್ ನ ಡಾ. ಎಂ. ರೂಯ್ಕರ್, ಛತ್ತೀಸಗಢ ಆರೋಗ್ಯ ಇಲಾಖೆಯ ಡಾ. ಎಸ್. ಅಗರ್ವಾಲ್, ಛತ್ತೀಸಗಢದ ಸಿಕಲ್ ಸೆಲ್ ಸಂಸ್ಥೆಯ ಮಹಾ ನಿರ್ದೇಶಕ ಡಾ. ಯು. ಜೋಶಿ, ಕನ್ಕೇರ್ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಕಾಸ ಕೇಂದ್ರದ ವಿಜ್ಞಾನಿಗಳಾದ ಡಾ. ಬಿ. ಸಾಹು, ಡಾ. ಕೆ. ಸಿಂಗ್, ಡಾ. ಎಸ್.ಕೆ. ಮಕರಮ್, ರಾಂಚಿಯ ರಿಮ್ಸ್ ನ ಸಹಾಯಕ ಪ್ರಾಧ್ಯಾಪಕ ಡಾ. ಡಿ. ಕುಮಾರ್, ಭೋಪಾಲ್ ಏಮ್ಸ್ ನ ಡಾ. ಎ. ಚಟರ್ಜಿ ಮತ್ತು ಡಾ. ಡಿ. ಪಾಂಡೇ ಅವರಂತಹ ಪ್ರಮುಖರು ಸೇರಿದ್ದರು. ತಜ್ಞರು ಸಾರವರ್ಧಿತ ಆಹಾರಧಾನ್ಯಗಳು ಮತ್ತು ಕಂಪುರಕ್ತ ಕಣಗಳಿಂದ ಆಗುವ ತಲಸ್ಸೇಮಿಯಾ ಮತ್ತು ಸಿಕಲ್ ಸೆಲ್ ಅನಿಮಿಯಾ ಮೇಲೆ ಅವುಗಳ ಪರಿಣಾಮ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಪ್ರಸ್ತುತಿಗಳ ನಂತರ ಗುಂಪು ಚರ್ಚೆಗಳು ನಡೆದವು, ತಾಂತ್ರಿಕ ತಜ್ಞರು ಮತ್ತು ಆಹಾರ ಮತ್ತು ಪಿಡಿ ಮತ್ತು ಎಫ್.ಸಿ.ಐ.ನ ಅಧಿಕಾರಿಗಳು ಪ್ರಶ್ನೋತ್ತರ ಅಧಿವೇಶನಗಳನ್ನು ನಡೆಸಿಕೊಟ್ಟರು.
ತಜ್ಞರು ಸಾರ್ವಜನಿಕರಿಗೆ ಸಾರವರ್ಧಿತ ಅಕ್ಕಿಯ ಪ್ರಯೋಜನಗಳನ್ನು ಎತ್ತಿ ತೋರಿಸಿದರು ಮತ್ತು ಜನರು ಮತ್ತು ಸ್ಥಳೀಯ ಮಾಧ್ಯಮಗಳ ಕಳಕಳಿಗಳು ಮತ್ತು ಅನುಮಾನಗಳನ್ನು ಪರಿಹರಿಸಿದರು.
ಸಾರವರ್ಧನೆ ಎಂದರೆ ಎಫ್ಎಸ್ಎಸ್ಎಐ ಸೂಚಿಸಿದ ಸೂಕ್ಷ್ಮ ಪೋಷಕಾಂಶಗಳನ್ನು (ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಬಿ 12) ಹೊಂದಿರುವ ಸಾರವರ್ಧಿತ ಅಕ್ಕಿಯ ಅಂತಃಸತ್ವ (ಎಫ್ಆರ್.ಕೆ.) ವನ್ನು ಸಾಮಾನ್ಯ ಅಕ್ಕಿಗೆ (ಕಸ್ಟಮ್ ಮಿಲ್ ಮಾಡಿದ ಅಕ್ಕಿ) 1:100 ರ ಅನುಪಾತದಲ್ಲಿ (100 ಕೆಜಿ ಕಸ್ಟಮ್ ಮಿಲ್ ಮಾಡಿದ ಅಕ್ಕಿಯೊಂದಿಗೆ 1 ಕೆಜಿ ಎಫ್ಆರ್.ಕೆ. ಮಿಶ್ರಣ) ಸೇರಿಸುವ ಪ್ರಕ್ರಿಯೆಯಾಗಿದೆ. ಸಾರವರ್ಧಿತ ಅಕ್ಕಿಯು ಸುವಾಸನೆ, ರುಚಿ ಮತ್ತು ವಿನ್ಯಾಸದಲ್ಲಿ ಸಾಂಪ್ರದಾಯಿಕ ಅಕ್ಕಿಗೆ ಹೆಚ್ಚುಕಡಿಮೆ ಹೋಲುತ್ತದೆ. ಅಕ್ಕಿಯನ್ನು ಗಿರಣಿಗೆ ಹಾಕುವ ಸಮಯದಲ್ಲಿ ಈ ಪ್ರಕ್ರಿಯೆಯನ್ನು ಅಕ್ಕಿ ಗಿರಣಿಗಳಲ್ಲಿ ಮಾಡಲಾಗುತ್ತದೆ.

ಅಕ್ಕಿ ಗಿರಣಿದಾರರು, ಎಫ್ ಆರ್ ಕೆ ತಯಾರಕರು, ಕೈಗಾರಿಕೆಗಳು ಮತ್ತು ಇತರ ಬಾಧ್ಯಸ್ಥರಿಗೆ ಗುರಿಯ ಅಗತ್ಯವನ್ನು ಪೂರೈಸಲು ಬಲವರ್ಧಿತ ಅಕ್ಕಿಯ ಉತ್ಪಾದನೆ ಮತ್ತು ಪೂರೈಕೆಗಾಗಿ ಅಕ್ಕಿ ಸಾರವರ್ಧನೆ ಪರಿಸರ ವ್ಯವಸ್ಥೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ದೇಶದಲ್ಲಿ 9000 ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿವೆ, ಅವು ಸಾರವರ್ಧಿತ ಅಕ್ಕಿಯ ಉತ್ಪಾದನೆಗಾಗಿ ಮಿಶ್ರಣ ಮೂಲಸೌಕರ್ಯಗಳನ್ನು ಸ್ಥಾಪಿಸಿವೆ ಮತ್ತು ಅವುಗಳ ಸಂಚಿತ ಮಾಸಿಕ ಉತ್ಪಾದನಾ ಸಾಮರ್ಥ್ಯವು ಸುಮಾರು 60 ಲಕ್ಷ ಮೆಟ್ರಿಕ್ ಟನ್ ಆಗಿದ್ದು, ಇದು ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚಾಗಿದೆ.
ಅಕ್ಕಿಯ ಸಾರವರ್ಧನೆಯು ಕಡಿಮೆ ಕಾರ್ಯಗತಗೊಳಿಸುವ ಸಮಯದಲ್ಲಿ (ಟಿಎಟಿ) ಆಹಾರದಲ್ಲಿ ಪೋಷಕಾಂಶ ಮತ್ತು ಖನಿಜಾಂಶವನ್ನು ಹೆಚ್ಚಿಸಲು ವೆಚ್ಚ-ದಕ್ಷ ಮತ್ತು ಪೂರಕ ಕಾರ್ಯತಂತ್ರವಾಗಿದೆ ಮತ್ತು ಪೌಷ್ಟಿಕಾಂಶದ ಸುರಕ್ಷತೆಯ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಮತ್ತು ದೇಶದಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಇದು ನೆರವಾಗುತ್ತದೆ. ಈ ಕಾರ್ಯತಂತ್ರವನ್ನು ವಿಶ್ವದ ಅನೇಕ ಭಾಗಗಳಲ್ಲಿ ಜಾರಿಗೆ ತರಲಾಗಿದೆ.
*******
(ಪ್ರಕಟಣೆ ಐ.ಡಿ.: 1862713)
ವಿಸಿಟರ್ ಕೌಂಟರ್ : 159