ಇಂಧನ ಸಚಿವಾಲಯ
azadi ka amrit mahotsav

ಆರ್.ಇ.ಸಿಗೆ ಮಹಾರತ್ನ ಸ್ಥಾನಮಾನ

Posted On: 22 SEP 2022 4:20PM by PIB Bengaluru

ಆರ್.ಇ.ಸಿಗೆ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮದ ಸ್ಥಾನಮಾನ ನೀಡಲಾಗಿದ್ದು, ಇದರಿಂದ ಆರ್.ಇ.ಸಿಗೆ ಹೆಚ್ಚಿನ ಕಾರ್ಯಾಚರಣೆ ಮತ್ತು ಆರ್ಥಿಕ ಸ್ವಾಯತ್ತತೆ ದೊರೆಯಲಿದೆ. ಹಣಕಾಸು ಸಚಿವಾಲಯದಡಿ ಬರುವ ಸಾರ್ವಜನಿಕ ಉದ್ದಿಮೆ ಇಲಾಖೆ ನಿನ್ನೆ ಈ ಕುರಿತು ಆದೇಶ ಹೊರಡಿಸಿದೆ. ಭಾರತದಾದ್ಯಂತ ವಿದ್ಯುತ್ ವಲಯದ ಹಣಕಾಸು ಮತ್ತು ಅಭಿವೃದ್ಧಿಯನ್ನು ಕೇಂದ್ರೀಕರಿಸುವ ನಿಟ್ಟಿನಲ್ಲಿ 1969 ರಲ್ಲಿ ಸಂಯೋಜನೆಗೊಂಡ ಆರ್.ಇ.ಸಿ ಒಂದು ರೀತಿಯಲ್ಲಿ ಎನ್.ಬಿ.ಎಫ್.ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.

‘ಮಹಾರತ್ನ’ ಸ್ಥಾನಮಾನ ದೊರೆತಿರುವುದರಿಂದ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆರ್.ಇ.ಸಿ ಕಂಪೆನಿಯ ಮಂಡಳಿಗೆ ಹೆಚ್ಚಿನ ಅಧಿಕಾರ ದೊರೆಯಲಿದೆ. ಮಹಾರತ್ನ ಸಿ.ಪಿ.ಎಸ್.ಇ ಮಂಡಳಿಯ ಜಂಟಿ ಉದ್ಯಮಗಳು ಮತ್ತು ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಗಳಲ್ಲಿ ಈಕ್ವಿಟಿ ಹೂಡಿಕೆ ಮಾಡಬಹುದು ಮತ್ತು ಭಾರತ ಹಾಗೂ ವಿದೇಶಗಳಲ್ಲಿ ಕಂಪೆನಿಗಳನ್ನು ವಿಲೀನ ಮತ್ತು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದು, ಸಿ.ಪಿ.ಎಸ್.ಇಯ ನಿವ್ವಳ ಮೌಲ್ಯದಲ್ಲಿ ಶೇ 15 ರಷ್ಟು ಮಿತಿಗೊಳಪಟ್ಟು ಒಂದು ಯೋಜನೆಯಡಿ 5000 ಕೋಟಿ ರೂಪಾಯಿಗೆ ಈ ಪ್ರಕ್ರಿಯೆಯನ್ನು ಸೀಮಿತಗೊಳಿಸಲಾಗಿದೆ. ಮಂಡಳಿ ಇದೀಗ ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಹಾಗೂ ತರಬೇತಿ ಕುರಿತ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದು. ಆರ್.ಇ.ಸಿ ಇತರರೊಂದಿಗೆ ತಂತ್ರಜ್ಞಾನದ ಜಂಟಿ ಉದ್ಯಮಗಳು ಅಥವಾ ಇತರೆ ಮೈತ್ರಿ ಕಾರ್ಯತಂತ್ರಗಳನ್ನು ಸಹ ಮಾಡಿಕೊಳ್ಳಬಹುದಾಗಿದೆ.

ಆರ್.ಇ.ಸಿ – ಸಿಎಂಡಿ ಶ್ರೀ ವಿವೇಕ್ ಕುಮಾರ್ ದೇವಾಂಗನ್ ಮಾತನಾಡಿ, ಆರ್.ಇ.ಸಿ ಜಾಗತಿಕ ಕೋವಿಡ್ ಸಂಕ್ರಾಮಿಕ ಸಂದರ್ಭದಲ್ಲಿ ತನ್ನ ಹೊಂದಾಣಿಕೆಯ ಕಾರ್ಯನಿರ್ವಹಣೆ ಜೊತೆಗೆ ಸಂಕಷ್ಟದಿಂದ ತ್ವರಿತವಾಗಿ ಚೇತರಿಸಿಕೊಂಡಿದೆ ಹಾಗೂ ಸ್ಥಿರ ಕಾರ್ಯಕ್ಷಮತೆಯಿಂದ ಈ ಸಾಧನೆ ಮಾಡಿದೆ. “ಆರ್.ಇ.ಸಿ 22 ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ₹10,046 ಕೋಟಿ ಲಾಭಗಳಿಸಿದೆ ಮತ್ತು ವೆಚ್ಚ ಪರಿಣಾಮಕಾರಿ ಸಂಪನ್ಮೂಲ ನಿರ್ವಹಣೆ ಮತ್ತು ಬಲವಾದ ಹಣಕಾಸು ನೀತಿಗಳಿಂದಾಗಿ ₹50,986 ಕೋಟಿ ನಿವ್ವಳ ಮೌಲ್ಯ ಹೊಂದಿದ ಕಂಪೆನಿಯಾಗಿದೆ. ಆರ್.ಇ.ಸಿ ಭಾರತ ಸರ್ಕಾರದ ಡಿಡಿಯುಜಿಜೆವೈ ಹಾಗೂ ಸೌಭಾಗ್ಯದಂತಹ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದು, ದೇಶದ ಗ್ರಾಮಗಳು ಮತ್ತು ಮನೆಗಳನ್ನು ವಿದ್ಯುದೀಕರಣ ಮಾಡುವ ಗುರಿ ಸಾಧಿಸುವ ನಿಟ್ಟಿನಲ್ಲಿ ಕೊಡುಗೆ ನೀಡಿದೆ. ಆರ್.ಇ.ಸಿ ಇದೀಗ ನವೀಕರಿಸಿದ ಪೂರೈಕೆ ವಲಯ ಯೋಜನೆ [ಆರ್.ಡಿ.ಎಸ್.ಎಸ್.]ಯಲ್ಲಿ ತನ್ನ ಕೊಡುಗೆ ನೀಡುತ್ತಿದ್ದು, ಹಣಕಾಸು ಮತ್ತು ಕಾರ್ಯಾಚರಣೆ ಸಮಸ್ಯೆಗಳನ್ನು ನಿವಾರಿಸಿ ವಿತರಣಾ ವಲಯವನ್ನು ಪುನರುಜ್ಜೀವನಗೊಳಿಸುತ್ತಿದೆ. ಕಂಪೆನಿಯ ಬಗ್ಗೆ ಎಲ್ಲಾ ಪಾಲುದಾರರು ವಿಶ್ವಾಸ ಹೊಂದಿರುವ ಹಿನ್ನೆಲೆಯಲ್ಲಿ ನಾವು ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ ಮತ್ತು ವಿಶೇಷವಾಗಿ ಐದು ದಶಕಗಳ ಕಾಲ ಕಾರ್ಯಾಚರಣೆ ನಡೆಸಲು ನಮ್ಮ ಉದ್ಯೋಗಿಗಳು ಅಚಲವಾದ ಬೆಂಬಲ ನೀಡಿದ್ದಾರೆ. ಇಂಧನ ಸಚಿವಾಲಯ ನಮಗೆ ಮಾರ್ಗದರ್ಶನ ಮಾಡಿದ್ದು, ನಾವು ಸಚಿವಾಲಯಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತಿದ್ದೇವೆ ಮತ್ತು ಈ ಸಾಧನೆಯನ್ನು ಸಾಧ್ಯವಾಗಿಸುವಲ್ಲಿ ನಮ್ಮ ಬೆಂಬಲ ಪ್ರಮುಖವಾಗಿದೆ” ಎಂದು ಶ್ರೀ ದೇವಾಂಗನ್ ಹೇಳಿದರು.

*********


(Release ID: 1861626) Visitor Counter : 245