ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಅಕ್ಟೋಬರ್ 2 ರಿಂದ ಪ್ರಾರಂಭವಾಗಲಿರುವ ʻವಿಶೇಷ ಅಭಿಯಾನ 2.0’ ಗಾಗಿ "ಸ್ವಚ್ಛತಾ" ಪೋರ್ಟಲ್ʼಗೆ ಚಾಲನೆ ನೀಡಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
2022ರ ಅಕ್ಟೋಬರ್ 2 ರಿಂದ 31 ರವರೆಗೆ ನಡೆಯಲಿರುವ ʻವಿಶೇಷ ಅಭಿಯಾನ 2.0ʼರ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, ಭಾರತ ಸರಕಾರದ ಎಲ್ಲಾ ಸಚಿವಾಲಯಗಳು / ಇಲಾಖೆಗಳು, ಅಧೀನ ಮತ್ತು ಸ್ವಾಯತ್ತ ಸಂಸ್ಥೆಗಳು ಹಾಗೂ ಪ್ರಾದೇಶಿಕ ಕಚೇರಿಗಳನ್ನು ಇದು ಒಳಗೊಂಡಿದೆ: ಡಾ. ಜಿತೇಂದ್ರ ಸಿಂಗ್
ʻಸ್ವಚ್ಚತಾ ಅಭಿಯಾನʼಗಳನ್ನು ನಡೆಸಲು ಭಾರತ ಸರಕಾರದ ಸಚಿವಾಲಯಗಳು / ಇಲಾಖೆಗಳು 67,000 ಸ್ಥಳಗಳನ್ನು ಗುರುತಿಸಿದ್ದು, ಸೆಪ್ಟೆಂಬರ್ 30ರ ವೇಳೆಗೆ ಇಂತಹ ಸ್ಥಳಗಳ ಸಂಖ್ಯೆ ಲಕ್ಷಕ್ಕೆ ತಲುಪುವ ಸಾಧ್ಯತೆಯಿದೆ. 2021ರ ಅಕ್ಟೋಬರ್‌ನಲ್ಲಿ ನಡೆಸಲಾದ ಮೊದಲ ʻವಿಶೇಷ ಅಭಿಯಾನʼದಲ್ಲಿ ಇಂತಹ ಸ್ಥಳಗಳ ಸಂಖ್ಯೆ 6,000 ಮಾತ್ರವಿತ್ತು ಎಂದು ಸಚಿವರು ಹೇಳಿದರು
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯದ (ಡಿಎಆರ್ಪಿಜಿ) ಮೂರು ವರದಿಗಳಾದ - ʻವಿಶೇಷ ಅಭಿಯಾನʼದ ಜುಲೈ ಮಾಸದ ಪ್ರಗತಿ ವರದಿ, ʻಸಿಪಿಜಿಆರ್ಎಎಂಎಸ್ʼ 7.0 ಬ್ರೋಷರ್ ಮತ್ತು 2022ರ ಆಗಸ್ಟ್ ತಿಂಗಳ ʻಸಿಪಿಜಿಆರ್ಎಎಂಎಸ್ ಮಾಸಿಕ ಪ್ರಗತಿ ವರದಿʼಯನ್ನುಇದೇ ಸಮಾರಂಭದಲ್ಲಿ ಸಚಿವರು ಬಿಡುಗಡೆ ಮಾಡಿದರು
Posted On:
14 SEP 2022 5:57PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ), ಭೂ ವಿಜ್ಞಾನ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರೂ ಆದ ಡಾ. ಜಿತೇಂದ್ರ ಸಿಂಗ್ ಅವರು ಅಕ್ಟೋಬರ್ 2ರಿಂದ ಪ್ರಾರಂಭವಾಗಲಿರುವ ʻವಿಶೇಷ ಅಭಿಯಾನ 2.0ʼಗಾಗಿ ವಿಶೇಷ "ಸ್ವಚ್ಛತಾ" ಪೋರ್ಟಲ್ಗೆ ಇಂದು ಚಾಲನೆ ನೀಡಿದರು.
ಕೇಂದ್ರ ಸಿಬ್ಬಂದಿ ಸಚಿವಾಲಯದ ಅಡಿಯ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ಅಭಿವೃದ್ಧಿಪಡಿಸಿರುವ www.pgportal.govlin/scdpm22 ಪೋರ್ಟಲ್ ಅನ್ನು ವಿಶೇಷವಾಗಿ ʻಸ್ವಚ್ಚತೆʼ ಮತ್ತು ಸರಕಾರಿ ಕಚೇರಿಗಳಲ್ಲಿ ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ಕಡಿಮೆ ಮಾಡಲು ಮೀಸಲಿರಿಸಲಾಗಿದೆ. ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಕೇಂದ್ರ ಕಾರ್ಯದರ್ಶಿ ವಿ. ಶ್ರೀನಿವಾಸ್ ಅವರ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರಕಾರದ 85 ಸಚಿವಾಲಯಗಳು/ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
2022ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ನಡೆಯಲಿರುವ ʻವಿಶೇಷ ಅಭಿಯಾನ 2.0ʼದ ವ್ಯಾಪ್ತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದಂತೆ ವಿಸ್ತರಿಸಲಾಗಿದೆ. ಎಲ್ಲಾ ಸಚಿವಾಲಯಗಳು / ಇಲಾಖೆಗಳು ಮತ್ತು ಭಾರತ ಸರಕಾರದ ಎಲ್ಲಾ ಅಧೀನ ಮತ್ತು ಸ್ವಾಯತ್ತ ಸಂಸ್ಥೆಗಳು, ಎಲ್ಲಾ ಪ್ರಾದೇಶಿಕ ಕಚೇರಿಗಳನ್ನು ಅಭಿಯಾನದಲ್ಲಿ ಸೇರಿಸಲಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಇದುವರೆಗೂ, ಭಾರತ ಸರಕಾರದ ಸಚಿವಾಲಯಗಳು / ಇಲಾಖೆಗಳು ʻಸ್ವಚ್ಛತಾ ಅಭಿಯಾನʼಗಳನ್ನು ನಡೆಸಲು 67,000ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿವೆ ಮತ್ತು ಸೆಪ್ಟೆಂಬರ್ 30ರೊಳಗೆ ಈ ಸಂಖ್ಯೆಯು ಒಂದು ಲಕ್ಷ ಮುಟ್ಟುವ ಸಾಧ್ಯತೆಯಿದೆ. 2021ರ ಅಕ್ಟೋಬರ್ ಕೈಗೊಂಡ ಮೊದಲ ʻವಿಶೇಷ ಅಭಿಯಾನʼದಲ್ಲಿ ಇಂತಹ ಸ್ಥಳಗಳ ಸಂಖ್ಯೆ 6,000 ಮಾತ್ರ ಇತ್ತು ಎಂದು ಸಚಿವರು ಹೇಳಿದರು.
2014 ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಚೊಚ್ಚಲ ಭಾಷಣ ಹಾಗೂ ಆ ಭಾಷಣದಲ್ಲಿನ ʻಸ್ವಚ್ಛ ಭಾರತʼ ಅಭಿಯಾನ ಆರಂಭ ಕುರಿತ ಘೋಷಣೆಯನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್ ಅವರು, 2014ರ ಅಕ್ಟೋಬರ್ 2ರಿಂದ, ನೈರ್ಮಲ್ಯ ಕುರಿತಾದ ಸ್ವಚ್ಚತಾಯ ಅಭಿಯಾನವು (ಸ್ವಚ್ಛ ಭಾರತ) ಜನಾಂದೋಲನವಾಗಿ ಮಾರ್ಪಟ್ಟಿತು. ಸಾಮಾಜಿಕ ಸುಧಾರಣಾ ಆಂದೋಲನವಾಗಿ ಜನರ ಜೀವನದಲ್ಲಿ ಅದು ಹಾಸುಹೊಕ್ಕಾಯಿತು. ಸಾಮಾನ್ಯ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಸಮರೋಪಾದಿಯಲ್ಲಿ ಪರಿಹರಿಸುವ ಸರಕಾರದ ಉದ್ದೇಶವನ್ನು ಸಹ ಇದು ಪ್ರದರ್ಶಿಸಿತು ಎಂದು ಅವರು ಹೇಳಿದರು.
2021ರ ಅಕ್ಟೋಬರ್‌ನಲ್ಲಿ ಹಮ್ಮಿಕೊಳ್ಳಲಾದ ಮೊದಲ ಹಂತದ ʻವಿಶೇಷ ಅಭಿಯಾನʼದಲ್ಲಿ, ಉತ್ಪಾದಕ ಬಳಕೆಗಾಗಿ ಕಚೇರಿಗಳಲ್ಲಿ ಸುಮಾರು 12 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ ಮತ್ತು ಗುಜರಿ ವಿಲೇವಾರಿಯಿಂದ 62 ಕೋಟಿ ರೂ.ಗಳನ್ನು ಗಳಿಸಲಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದರು. ಒಳಾಂಗಣ ಮತ್ತು ಹೊರಾಂಗಣ ಸ್ವಚ್ಛತಾ ಅಭಿಯಾನ, ಗುಜರಿ ವಿಲೇವಾರಿ, ಅಪ್ರಸ್ತುತವಾದ ದಾಖಲೆ ಪತ್ರಗಳ ತೆರವು ಕಾರ್ಯಗಳು ಈ ಅಭಿಯಾನದ ಭಾಗವಾಗಿದ್ದವು. ಜತೆಗೆ ಬಾಕಿ ಉಳಿದಿರುವ ಸಂಸತ್ ಸದಸ್ಯರು, ರಾಜ್ಯ ಸರಕಾರಗಳು, ಸಚಿವಾಲಯಗಳ ಉಲ್ಲೇಖಗಳ ವಿಲೇವಾರಿ; ಸಾರ್ವಜನಿಕ ಕುಂದುಕೊರತೆಗಳು ಮತ್ತು ಸಂಸತ್ತಿನ ಭರವಸೆಗಳ ಇತ್ಯರ್ಥ ಸೇರಿದಂತೆ ಹಲವು ಚಟುವಟಿಕೆಗಳೂ ಇದರಲ್ಲಿ ಸೇರಿವೆ ಎಂದು ಸಚಿವರು ಹೇಳಿದರು.
ಸಚಿವಾಲಯಗಳು / ಇಲಾಖೆಗಳು ಮತ್ತು ಅವುಗಳ ಅಧೀನ ಕಚೇರಿಗಳ ಜೊತೆಗೆ ಕ್ಷೇತ್ರ / ಹೊರಠಾಣೆ ಕಚೇರಿಗಳ ಮೇಲೆ ʻವಿಶೇಷ ಅಭಿಯಾನ 2.0ʼ ಹೆಚ್ಚು ಗಮನ ಹರಿಸಲಿದೆ. ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯು (ಡಿಎಆರ್‌ಪಿಜಿ) ಈ ʻವಿಶೇಷ ಅಭಿಯಾನ-2.0ʼರ ಅನುಷ್ಠಾನದ ಮೇಲ್ವಿಚಾರಣೆ ಮಾಡಲಿದೆ ಎಂದು ಡಾ. ಜಿತೇಂದ್ರ ಸಿಂಗ್ ಒತ್ತಿ ಹೇಳಿದರು. 2022ರ ಆಗಸ್ಟ್ 23ರಂದು ಸಂಪುಟ ಕಾರ್ಯದರ್ಶಿಗಳು ಭಾರತ ಸರಕಾರದ ಎಲ್ಲಾ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ ಮತ್ತು ಈ ಸಂಬಂಧ 2022ರ ಆಗಸ್ಟ್ 25ರಂದು ಮಾರ್ಗಸೂಚಿಗಳ ಟಿಪ್ಪಣಿಯನ್ನು ʻಡಿಎಆರ್‌ಪಿಜಿʼ ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
2022ನೇ ಸಾಲಿನ ʻವಿಶೇಷ ಅಭಿಯಾನʼವು ಉಲ್ಲೇಖಗಳ ಸಮಯೋಚಿತ ವಿಲೇವಾರಿ ಮತ್ತು ಸ್ವಚ್ಛ ಕೆಲಸದ ಸ್ಥಳದ ಪ್ರಾಮುಖ್ಯತೆಯನ್ನು ಬಲಪಡಿಸುತ್ತದೆ. ಜೊತೆಗೆ ಈ ಒಂದು ತಿಂಗಳ ಅಭಿಯಾನದ ಸಮಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳು, ಸಾಗರೋತ್ತರ ಕಚೇರಿ/ ಪೋಸ್ಟ್‌ಗಳು, ರೈಲ್ವೆ ನಿಲ್ದಾಣಗಳು ಮತ್ತು ಇತರ ಸಾರ್ವಜನಿಕ ಕಚೇರಿಗಳನ್ನು ಸಮರೋಪಾದಿಯಲ್ಲಿ ಈ ಅಭಿಯಾನವು ವ್ಯಾಪಿಸುವ ನಿರೀಕ್ಷೆಯಿದೆ. ವಿಶೇಷ ಅಭಿಯಾನದ ಪೋರ್ಟಲ್‌ಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳ ತರಬೇತಿಯನ್ನು ಈಗಾಗಲೇ ಡಿಎಆರ್‌ಪಿಜಿʼ ನಡೆಸಿದೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು.
ಡಾ. ಜಿತೇಂದ್ರ ಸಿಂಗ್ ಅವರು ಡಿಎಆರ್ ಪಿಜಿಯ ಮೂರು ವರದಿಗಳನ್ನು ಬಿಡುಗಡೆ ಮಾಡಿದರು, ವಿಶೇಷ ಅಭಿಯಾನ ಜುಲೈ ಪ್ರಗತಿ ವರದಿ, ಸಿಪಿಜಿಎಂಎಎಸ್ 7. 0. ಕರಪತ್ರ ಮತ್ತು 2022 ರ ಆಗಸ್ಟ್ ತಿಂಗಳಿನ ಸಿ.ಪಿ.ಜಿ.ಆರ್.ಎಂ.ಎಸ್ ಮಾಸಿಕ ಪ್ರಗತಿ ವರದಿಯನ್ನು ಸಹ ಇದೇ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಸಚಿವಾಲಯದ (ಡಿಎಆರ್ಪಿಜಿ) ಮೂರು ವರದಿಗಳಾದ - ʻವಿಶೇಷ ಅಭಿಯಾನʼದ ಜುಲೈ ಮಾಸದ ಪ್ರಗತಿ ವರದಿ, ʻಸಿಪಿಜಿಆರ್ಎಎಂಎಸ್ʼ 7.0 ಬ್ರೋಷರ್ ಮತ್ತು 2022ರ ಆಗಸ್ಟ್ ತಿಂಗಳ ʻಸಿಪಿಜಿಆರ್ಎಎಂಎಸ್ ಮಾಸಿಕ ಪ್ರಗತಿ ವರದಿʼಯನ್ನುಇದೇ ಸಮಾರಂಭದಲ್ಲಿ ಡಾ. ಜಿತೇಂದ್ರ ಸಿಂಗ್ ಅವರು ಬಿಡುಗಡೆ ಮಾಡಿದರು.
ʻವಿಶೇಷ ಅಭಿಯಾನ 2.0ʼ ಪೋರ್ಟಲ್‌ಗೆ ಚಾಲನೆ ನೀಡುವುದರೊಂದಿಗೆ ʻವಿಶೇಷ ಅಭಿಯಾನ 2.0ʼದ ಪೂರ್ವಸಿದ್ಧತಾ ಹಂತವು ಪ್ರಾರಂಭವಾಗಲಿದೆ ಮತ್ತು ಇದು ಸೆಪ್ಟೆಂಬರ್ 30, 2022 ರವರೆಗೆ ಮುಂದುವರಿಯುತ್ತದೆ ಎಂದು ʻಡಿಎಆರ್‌ಪಿಜಿʼಯ ಕೇಂದ್ರ ಕಾರ್ಯದರ್ಶಿ ವಿ.ಶ್ರೀನಿವಾಸ್ ಹೇಳಿದರು. ಪ್ರತಿ ಸಚಿವಾಲಯ/ ಇಲಾಖೆಗಳು ತಮ್ಮ ಸ್ವಚ್ಛತಾ ಅಭಿಯಾನದ ತಾಣಗಳು, ವಿಲೇವಾರಿ ಮಾಡಬೇಕಾದ ಕಡತಗಳು ಮತ್ತು ಸಂಸದರ ಉಲ್ಲೇಖಗಳು, ರಾಜ್ಯ ಸರಕಾರದ ಉಲ್ಲೇಖಗಳು ಮುಂತಾದ ಬಾಕಿ ಉಳಿದಿರುವ ವಿವಿಧ ಅಂಕಿ-ಅಂಶಗಳನ್ನು ನಮೂದಿಸಲು ಪೂರ್ವಸಿದ್ಧತಾ ಹಂತದಲ್ಲಿ ಪೋರ್ಟಲ್ ಅನ್ನು ಬಳಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಭಾರತೀಯ ರಾಷ್ಟ್ರೀಯ ಪತ್ರಾಗಾರದ ಮಹಾನಿರ್ದೇಶಕ ಚಂದನ್ ಸಿನ್ಹಾ, ಅಂಚೆ ಇಲಾಖೆಯ ಕಾರ್ಯದರ್ಶಿ ವಿನೀತ್ ಪಾಂಡೆ ಮತ್ತು ರೈಲ್ವೆ ಮಂಡಳಿಯ ಕಾರ್ಯದರ್ಶಿ ಆರ್.ಎನ್. ಸಿಂಗ್ ಅವರು ಈ ಸಂದರ್ಭದಲ್ಲಿ ಪ್ರಸ್ತುತಿಗಳನ್ನು ನೀಡಿದರು.
*****
(Release ID: 1859384)
Visitor Counter : 159