ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶಿಕ್ಷಕ್ ಪರ್ವ್ ಉದ್ಘಾಟಿಸಿದ ಶಿಕ್ಷಣ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ, ಡಾ. ಸುಭಾಷ್ ಸರ್ಕಾರ್ ಮತ್ತು ಡಾ. ರಾಜ್ ಕುಮಾರ್ ರಂಜನ್ ಸಿಂಗ್


ಈ ಸಂದರ್ಭದಲ್ಲಿ ಶಿಕ್ಷಕರಿಗೆ ಶ್ರೇಷ್ಠ ಪ್ರಶಸ್ತಿ ಪ್ರದಾನ

Posted On: 06 SEP 2022 6:27PM by PIB Bengaluru

ಶಿಕ್ಷಣ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ, ಡಾ. ಸುಭಾಷ್ ಸರ್ಕಾರ್ ಮತ್ತು ಡಾ. ರಾಜ್ ಕುಮಾರ್ ರಂಜನ್ ಸಿಂಗ್ ಅವರು ಜಂಟಿಯಾಗಿ 2022 ರ ಶಿಕ್ಷಕ್ ಪರ್ವ್ ಉದ್ಘಾಟಿಸಿದರು. ಶಿಕ್ಷಕ್ ಪರ್ವ್ ಶಿಕ್ಷಕರನ್ನು ಅಭಿನಂದಿಸುವ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಮುನ್ನಡೆಸುವ ಉದ್ದೇಶ ಹೊಂದಿದೆ. ನವದೆಹಲಿಯಲ್ಲಿಂದು ಶಿಕ್ಷಕ್ ಪರ್ವ್ ಕಾರ್ಯಕ್ರಮವನ್ನು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದೊಂದಿಗೆ ಪ್ರಾರಂಭಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಅನ್ನಪೂರ್ಣದೇವಿ, ಶಿಕ್ಷಕರನ್ನು ಮಾದರಿಯಾಗಿ ಪರಿಗಣಿಸಲಾಗುತ್ತದೆ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ರೂಪ ನೀಡುವ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿಹೊಂದಿದ ದೇಶವನ್ನಾಗಿ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪಂಚ ಪ್ರಾಣ್ ದೃಷ್ಟಿಕೋನವನ್ನು ಸಾಕಾರಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿ 2020 ಒಂದು ಪ್ರಮುಖ ಉಪಕ್ರಮವಾಗಿದೆ ಎಂದು ಹೇಳಿದರು.

ಭಾರತ ಸರ್ಕಾರ, ತನ್ನ ವಿವಿಧ ಯೋಜನೆಗಳ ಮೂಲಕ ಶಿಕ್ಷಕರಿಗೆ ಒತ್ತು ನೀಡುತ್ತಿದೆ. ಸಮಗ್ರ ಶಿಕ್ಷಣ ಮತ್ತು ಪಿಎಂ ಪೋಷಣ್ ನಂತಹ ಕೇಂದ್ರದ ಯೋಜನೆಗಳು ಎನ್ಇಪಿ 2020 ಜೊತೆ ಜೋಡಿಸಲ್ಪಟ್ಟಿವೆ. ಎನ್ಇಪಿ 2020 ಸಮಗ್ರ ಮತ್ತು ಬಹುಶಿಸ್ತೀಯ ವಿಧಾನದ ಪರಿಕಲ್ಪನೆಯಡಿ ಶಿಕ್ಷಕರು ಭವಿಷ್ಯದ ಕ್ರಿಯಾ ಯೋಜನೆಯಡಿ ಕೆಲಸ ಮಾಡಬೇಕಾಗುತ್ತದೆ. ಶಿಕ್ಷಕರು ಬಲಿಷ್ಠ ಸಹಕಾರ ಮತ್ತು ಸಮನ್ವಯತೆಯಿಂದ ವಿದ್ಯಾರ್ಥಿಗಳನ್ನು ಕೌಶಲ್ಯಶೀಲರನ್ನಾಗಿ ಹಾಗೂ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.  

ಡಾ. ರಾಜ್ ಕುಮಾರ್ ರಂಜನ್ ಸಿಂಗ್ ಅವರು ಶಿಕ್ಷಕ ಸಮುದಾಯದ ಪ್ರಯತ್ನವನ್ನು ಶ‍್ಲಾಘಿಸಿದರು ಮತ್ತು ಎನ್ಇಪಿ 2020 ಅನುಷ್ಠಾನಕ್ಕೆ ಒತ್ತು ನೀಡುವಂತೆ ಸೂಚಿಸಿದರು. ಶಿಕ್ಷಕರು ಶಾಲೆಗಳು ಇಲ್ಲವೆ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೇ ಆಗಿರಬಹುದು ಸಾಮಾನ್ಯ ಗುರಿ ಹೊಂದಿರುತ್ತಾರೆ ಮತ್ತು ಇಂತಹ ಗೌರವದ ಉದ್ದೇಶವು ಬೋಧನೆಯ ವ್ಯತ್ಯಾಸ, ಉತ್ತಮ ಅಭ್ಯಾಸಗಳು, ಶೈಕ್ಷಣಿಕ ನಾಯಕತ್ವ ಮತ್ತು ಸಂಸ್ಥೆಯ ನಿರ್ಮಾಣವನ್ನು ಗುರುತಿಸುವುದಾಗಿದೆ ಎಂದರು.   

 

 

 

ಸಮಾರಂಭದಲ್ಲಿ ರಾಜ್ಯ ಸಚಿವ ಡಾ. ಸುಭಾಷ್ ಸರ್ಕಾರ್ ಅವರು ರಾಷ್ಟ್ರೀಯ ಶಿಕ್ಷಕರ ದಿನದ ಪ್ರಶಸ್ತಿಗಳ ಕುರಿತು ಮಾತನಾಡಿದರು. ಪ್ರಶಸ್ತಿ ಪಡೆದ ಶಿಕ್ಷಕರು ಪ್ರಧಾನಮಂತ್ರಿ ಅವರೊಂದಿಗೆ ನಡೆಸಿದ ಸಂವಾದ ಅವರನ್ನು ಮತ್ತಷ್ಟು ಪ್ರೇರೇಪಿಸಿದೆ ಮತ್ತು “ಶಿಕ್ಷತ ಭಾರತ ಮತ್ತು ವಿಕಸಿತ ಭಾರತ” ದ  ನಿಜವಾದ ಸಂದೇಶವಾಹಕರು ಮತ್ತು ಮುಖ್ಯ ರಾಯಭಾರಿಗಳಾಗಿದ್ದಾರೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಪಿಎಂ ಎಸ್ಎಚ್ಆರ್ ಐ ಅನ್ನು ಘೋಷಿಸಿದ್ದು, ಈ ಕುರಿತು ಮಾತನಾಡಿದ ಸಚಿವರು, ಇದು ಶಿಕ್ಷಣ ವ್ಯವಸ್ಥೆಯಲ್ಲಿ ದೀರ್ಘಕಾಲೀನ ಪರಿಣಾಮ ಬೀರುವ ತೀರ್ಮಾನವಾಗಿದೆ ಎಂದರು. ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಶಿಕ್ಷಕರ ಸೂಚನೆಯನ್ನು ವಿದ್ಯಾರ್ಥಿಗಳು ಪಾಲಿಸುವುದಷ್ಟೇ ಅಲ್ಲದೇ, ಶಿಕ್ಷಕರು ಸಹ ಕಲಿಯುತ್ತಿರುವವರ ಅಗತ್ಯಗಳನ್ನು ಪರಿಶೀಲಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ 2020 ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವುದಷ್ಟೇ ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಸ್ವಾವಲಂಬಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುತ್ತದೆ ಎಂದರು.

 

ಸಚಿವರು ಇದೇ ಸಂದರ್ಭದಲ್ಲಿ “ ಬೋಧನೆಯಲ್ಲಿ ಸಿಬಿಎಸ್ಇ ಉತ್ಕೃಷ್ಟತಾ ಗೌರವ ಮತ್ತು 2021 – 22 ರ ಶಾಲಾ ನಾಯಕತ್ವ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಶೈಕ್ಷಣಿಕ ಸಾಧನೆಗಳು, ಸಮುದಾಯಕ್ಕೆ ನೀಡಿದ ಕೊಡುಗೆ, ನವೀನ ಬೋಧನಾ ಅಭ್ಯಾಸಗಳು, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಮತ್ತು ರಾಷ್ಟ್ರಮಟ್ಟದ ಪರಿಶೀಲನೆ ಹಾಗೂ ಆಯ್ಕೆ ಸಮಿತಿಯೊಂದಿಗಿನ ಸಂದರ್ಶನದ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಏಐಸಿಟಿಇ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2022 ಅನ್ನು 14 ಮಂದಿ ಬೋಧನಾ ಸಿಬ್ಬಂದಿಗೆ ನೀಡಲಾಗಿದ್ದು, ಇದರಲ್ಲಿ ಪಿಡಬ್ಲ್ಯೂಡಿ/ದಿವ್ಯಾಂಗ ವಲಯದಲ್ಲಿ ಸೂಪರ್ ನ್ಯೂಮರಿ ಪ್ರಶಸ್ತಿಗಳು ಕೂಡ ಒಳಗೊಂಡಿವೆ. ಕಠಿಣ ವಿಧಾನ, ಸಮಗ್ರ ಪರಿಶೀಲನೆ ಮತ್ತು ತಜ್ಞರ ತಂಡ ವಿಶಿಷ್ಟವಾಗಿ ಮೂರು ಹಂತಗಳಲ್ಲಿ ಪರಿಶೀಲನೆಗೊಳಪಡಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆ [ಎಐಸಿಟಿಇ] ಅಸಾಧಾರಣ ಶಿಕ್ಷಕರು, ಬೋಧನಾ ಶ್ರೇಷ್ಠತೆ, ಸಾಂಸ್ಥಿಕ ನಾಯಕತ್ವ, ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಗುರುತಿಸಲು ಮತ್ತು ಗೌರವಿಸಲು ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ಪ್ರಶಸ್ತಿ [ಎನ್.ಟಿ.ಟಿ.ಎ] ಯನ್ನು ಸ್ಥಾಪಿಸಿದೆ.

 

ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಈ ಕೆಳಕಂಡ ಉಪಕ್ರಮಗಳನ್ನು ಜಾರಿಗೊಳಿಸಿದೆ.

ಶಾಲೆಗೆ ತೆರಳುವ ಮಕ್ಕಳ ಮಾನಸಿಕ ಆರೋಗ್ಯವನ್ನು ಮುಂಚಿತವಾಗಿಯೇ ಪತ್ತೆ ಮಾಡುವ ಕೈಪಿಡಿ – ಇದು ಶಿಕ್ಷಕರು, ಸಲಹೆಗಾರರ ತರಬೇತಿಗಾಗಿ  ಸಮಗ್ರ ಕೈಪಿಡಿಯಾಗಿದೆ. ಹಿರಿಯ ಮಾನಸಿಕ ಆರೋಗ್ಯ ಮತ್ತು ಜೀವನ ಕೌಶಲ್ಯ ತಜ್ಞ ಡಾ. ಜಿತೇಂದ್ರ ನಾಗ್ಪಾಲ್ ಅವರ ಅಧ್ಯಕ್ಷತೆಯ ಸಮಿತಿ ಹಲವಾರು ಚರ್ಚೆಗಳ ನಂತರ ಈ ಮಾದರಿ ಕೈಪಿಡಿ ಸಿದ್ಧಪಡಿಸಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷಾ ವರದಿ – ಶಾಲಾ ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯ – ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 2022 ರ ಜನವರಿ – ಮಾರ್ಚ್ ಅವಧಿಯಲ್ಲಿ 3,79,842  ವಿದ್ಯಾರ್ಥಿಗಳ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ.   6 ರಿಂದ 12 ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಪರಿಶೋಧನೆಯನ್ನು ಈ ಸಮೀಕ್ಷೆ ಒಳಗೊಂಡಿದೆ. ಬಹುಪಾಲು ವಿದ್ಯಾರ್ಥಿಗಳು ಸಾಮಾನ್ಯವಾಗಿ ಸಮೀಕ್ಷೆ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಶಾಲಾ ಜೀವನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವುದಾಗಿ ಸಮೀಕ್ಷೆ ಹೇಳಿದೆ. ವಿದ್ಯಾರ್ಥಿಗಳು ಮಾಧ್ಯಮಿಕ ಹಂತಕ್ಕೆ ತೆರಳಿದಂತೆ ಈ ಅಭಿಪ್ರಾಯದಲ್ಲಿ ಕುಸಿತಕಂಡಿದೆ. ಅಧ್ಯಯನ, ಪರೀಕ್ಷೆ ಮತ್ತು ಫಲಿತಾಂಶಗಳು ಆತಂಕ ಉಂಟು ಮಾಡುತ್ತವೆ ಎಂದು ವಿದ್ಯಾರ್ಥಿಗಳು ಸಮೀಕ್ಷೆ ಸಂದರ್ಭದಲ್ಲಿ ಹೇಳಿದ್ದಾರೆ. ಯೋಗ ಮತ್ತು ಧ್ಯಾನ ಆಲೋಚನಾ ವಿಧಾನವನ್ನು ಬದಲಾಯಿಸುವ ಪ್ರಯತ್ನವಾಗಿದೆ ಮತ್ತು ನಿಯತಕಾಲಿಕೆಗಳಿಗೆ ಬರೆಯುವುದನ್ನು ರೂಢಿಸಿಕೊಳ್ಳುವ ಮೂಲಕ ಒತ್ತಡವನ್ನು ನಿಭಾಯಿಸುವ ವಿಧಾನಗಳನ್ನು ಅಳವಡಿಸಿಕೊಂಡಿರುವ ತಂತ್ರಗಳ ಬಗ್ಗೆಯೂ ಸಮೀಕ್ಷಾ ವರದಿ ಬೆಳಕು ಚೆಲ್ಲಿದೆ.  

ರಾಷ್ಟ್ರೀಯ ಸಾಕ್ಷರತಾ ಪ್ರತಿಷ್ಠಾನ ಮತ್ತು ಸಂಖ್ಯಾಶಾಸ್ತ್ರ ಅಧ್ಯಯನ ವರದಿ – ರಾಷ್ಟ್ರೀಯ ಶಿಕ್ಷಣ ನೀತಿ [2020] ಓದುವ ಮತ್ತು ಬರೆಯುವುದಕ್ಕೆ ಪರಮೋಚ್ಛ ಮಹತ್ವ ನೀಡಿದೆ ಮತ್ತು ಎಲ್ಲಾ ಭವಿಷ್ಯದ ಶಾಲಾ ಶಿಕ್ಷಣ ಮತ್ತು ಜೀವಮಾನದ ಕಲಿಕೆಗೆ ಇದು ಅನಿವಾರ್ಯವಾಗಿರುವುದರಿಂದ ಆರಂಭಿಕ ಹಂತದಲ್ಲಿ ಸಂಖ್ಯೆಗಳ ಕಲಿಕೆಯಂತಹ ಮೂಲಭೂತ ಅಂಶಗಳು ಅಗತ್ಯವಾಗಿವೆ. ಎನ್.ಯು.ಪಿ.ಯು.ಎನ್ [ತಿಳಿವಳಿಕೆ ಮತ್ತು ಸಂಖ್ಯಾಶಾಸ್ತ್ರದೊಂದಿಗಿನ ಅಧ್ಯಯನದಲ್ಲಿ ಪ್ರಾವೀಣ‍್ಯತೆಗಾಗಿ ರಾಷ್ಟ್ರೀಯ ಉಪಕ್ರಮ] ಭಾರತ್ ಅಡಿಯಲ್ಲಿ ಎಲ್ಲಾ ಮಕ್ಕಳಿಗೆ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಸಾಧಿಸುವುದು ರಾಷ್ಟ್ರೀಯ ಧ‍್ಯೇಯವಾಗಿದೆ. ಎಫ್.ಎಲ್.ಎನ್ ಅಭಿಯಾನದಡಿ ಎಲ್ಲಾ ಮಕ್ಕಳು 3 ನೇ ತರಗತಿ ವೇಳೆಗೆ ಮೂಲಭೂತ ಕಲಿಕೆ ಗುಣಮಟ್ಟವನ್ನು 2026-27 ರ ವೇಳೆಗೆ ಸಾಧಿಸುವ ಗುರಿ ಹೊಂದಲಾಗಿದೆ.  

10,000 ಶಾಲೆಗಳಲ್ಲಿ 3 ನೇ ತರಗತಿಯ ಅಂದಾಜು 86,000 ವಿದ್ಯಾರ್ಥಿಗಳನ್ನು ಮೂಲಭೂತ ಕಲಿಕೆಗೆ ಒಳಪಡಿಸಲಾಗಿತ್ತು. ರಾಜ್ಯ ಸರ್ಕಾರದ ಶಾಲೆಗಳು, ಸರ್ಕಾರಿ ಅನುದಾನಿತ ಶಾಲೆಗಳು, ಖಾಸಗಿ ಮಾನ್ಯತೆ ಪಡೆದ ಹಾಗೂ ಕೇಂದ್ರ ಸರ್ಕಾರದ ಶಾಲೆಗಳಲ್ಲಿ ಮಾದರಿ ಅಧ್ಯಯನ ನಡೆಸಲಾಗಿತ್ತು. ಸಂಶೋಧನೆಯಲ್ಲಿ 18,000 ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು. ಎಫ್.ಎಲ್.ಎಸ್ ಅನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಧ್ಯಮವಾಗಿ ಬಳಕೆಯಲ್ಲಿರುವ 20 ಭಾಷೆಗಳಲ್ಲಿ ಕೈಗೊಳ್ಳಲಾಗಿತ್ತು. ಮಕ್ಕಳು ಮೂಲಭೂತ ಹಂತದಲ್ಲಿ ಕಲಿಕೆಯ ಸ್ಪರ್ಧಾತ್ಮಕತೆಯ ಕುರಿತು ಅಧ್ಯಯನ ನಡೆಸಲಾಗಿತ್ತು ಮತ್ತು ಈ ಸಂಶೋಧನೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ. ಜಾಗತಿಕ ಪ್ರಾವೀಣ್ಯತೆಯ ಚೌಕಟ್ಟಿನ ಆಧಾರದ ಮೇಲೆ ಗ್ರಹಿಕೆ ಮತ್ತು ಸಂಖ್ಯಾಶಾಸ್ತ್ರದ ಮಾನದಂಡಗಳೊಂದಿಗೆ ಮೌಖಿಕವಾಗಿ ನಿರರ್ಗಳವಾಗಿ ಓದುವ ಕುರಿತು 20 ಭಾಷೆಗಳಲ್ಲಿ ನಡೆಸಿರುವ ಅಧ್ಯಯನ ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾದ ಅಧ್ಯಯನವಾಗಿದೆ.  

ನಿರ್ದಿಷ್ಟ ಕಲಿಕೆಯಲ್ಲಿ ಅಸಮರ್ಥತೆಯನ್ನು ಪರಿಶೀಲಿಸಲು ಮೊಬೈಲ್ ಅಪ್ಲಿಕೇಶನ್ ಟೂಲ್ಸ್ ಗಳು ಮತ್ತು ಪದಕೋಶ – ನ್ಯೂನತೆಯನ್ನು ಪತ್ತೆ ಮಾಡಲು ಶಾಲೆಗಳಲ್ಲಿ ಮೊಬೈಲ್ ಅಪ್ಲಿಕೇಶನ್ ಮತ್ತು ಕಿರುಪುಸ್ತಕ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಆರ್.ಪಿ.ಡಬ್ಲ್ಯೂಡಿ ಕಾಯ್ದೆ ಪ್ರಕಾರ 21 ನ್ಯೂನತೆಗಳನ್ನು ಪಟ್ಟಿ ಮಾಡಲಾಗಿದೆ. ಈ ಉಪ ಕ್ರಮದಿಂದ ಮುಂದಾಗಿಯೇ ಮಕ್ಕಳ ಅಸಮರ್ಥತೆಯನ್ನು ಪತ್ತೆ ಮಾಡಿ ಪ್ರಮಾಣ ಪತ್ರ ನೀಡಲು ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಿದ್ದು, ಆಂಡ್ರಾಯ್ಡ್ ಪ್ಲೇಸ್ಟೋರ್ ನಿಂದ ಪ್ರಶಾಸ್ತ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.  ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದ ರಾಜಸ್ಥಾನದ [ಶ್ರೀ ಇಮ್ರಾನ್ ಖಾನ್] ಅಲ್ವಾರ್ ನ ಶಾಲಾ ಶಿಕ್ಷಕನ ಸಹಯೋಗದಲ್ಲಿ ಈ ಮೊಬೈಲ್ ಆಪ್ ಅನ್ನು ಎನ್.ಸಿ.ಇ.ಆರ್.ಟಿ ಸಿದ್ಧಪಡಿಸಿದೆ.

ಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರದ ಆರಂಭ - ಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರದ ಕೈಪಿಡಿಯನ್ನು ಶಾಲಾ ಶಿಕ್ಷಣ, ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿ ಸ್ಥಳೀಯ ಆಟಿಕೆಗಳು ಮತ್ತು ಅದರ ಶಿಕ್ಷಣ ಶಾಸ್ತ್ರದ ಏಕೀಕರಣವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಮೂಲಭೂತ ಪೂರ್ವ ಸಿದ್ಧತೆ, ಮಧ್ಯಮ ಮತ್ತು ಮಾಧ್ಯಮಿಕ ಹಂತಗಳಲ್ಲಿ ವಿವಿಧ ಅಟಿಕೆಗಳು ಮತ್ತು ಆಟಗಳೊಂದಿಗೆ ಕೌಶಲ್ಯಗಳು, ಸಾಮರ್ಥ್ಯ ಮತ್ತು ಕಲಿಕೆಯ ಫಲಿತಾಂಶಗಳನ್ನು ರೂಪಿಸಲು ಶಿಕ್ಷಕರಿಗೆ ವಿವಿಧ ಪರಿಕಲ್ಪನೆಗಳನ್ನು ಸಂಯೋಜಿತ ರೀತಿಯಲ್ಲಿ ಅಳವಡಿಸಲು, ವಯಸ್ಸಿಗೆ ಸೂಕ್ತವಾದ ಆಟಿಕೆಗಳನ್ನು ಆಯ್ಕೆ ಮಾಡಲು ಮತ್ತು ರಚಿಸಲು ಸಹಾಯ ಈ ವ್ಯವಸ್ಥೆ ಸಹಾಯ ಮಾಡುತ್ತದೆ.

ಶಿಕ್ಷಣ ಶಬ್ದಕೋಶ – ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಶಬ್ದಕೋಶ ಎಂಬ ಶೀರ್ಷಿಕೆಯಡಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಪರಿಭಾಷೆಗಳ ಸಮಗ್ರ ಪದಕೋಶವನ್ನು ಅಭಿವೃದ್ಧಿಪಡಿಸಲಾಗಿದೆ. ಶಿಕ್ಷಣ ತಜ್ಞರು, ಶಿಕ್ಷಣ ಆಡಳಿತಗಾರರು, ಶಿಕ್ಷಕರು, ಪರೀಕ್ಷಕರು ಇತರರು ಬಳಸುವ ನಿಯಮಗಳು ಮತ್ತು ಉಲ್ಲೇಖಗಳನ್ನು ಪದಕೋಶ ಅಥವಾ ಶಬ್ದಕೋಶ ಹೊಂದಿದೆ.

ನಿರ್ದಿಷ್ಟ ಕಲಿಕೆಯ ನ್ಯೂನತೆಗಳು ಮತ್ತು ಪದಕೋಶಕ್ಕಾಗಿ ಪರಿಶೀಲನೆ ಮಾಡಲು ಮೊಬೈಲ್ ಅಪ್ಲಿಕೇಶನ್ – ಅಸಮರ್ಥತೆಯನ್ನು ಪರಿಶೀಲಿಸಿ ಪಟ್ಟಿ ಮಾಡಲು ಶಾಲೆಗಳ ಮೊಬೈಲ್ ಅಪ್ಲಿಕೇಶನ್ ಮತ್ತು ಕಿರು ಪುಸ್ತಕ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಪ್ರಶಾಸ್ತ್ ಅಪ್ಲೀಕೇಶನ್ 21 ನ್ಯೂನತೆಯನ್ನು ಪಟ್ಟಿ ಮಾಡಿದೆ.  ಆರ್.ಪಿ.ಡಬ್ಲ್ಯೂ.ಡಿ ಕಾಯ್ದೆ ಪ್ರಕಾರ 21 ಅಸಮರ್ಥತೆಗಳನ್ನು ಪಟ್ಟಿ ಮಾಡಲಾಗಿದೆ. ಈ ಉಪ ಕ್ರಮದಿಂದ ಮುಂದಾಗಿಯೇ ಮಕ್ಕಳ ನ್ಯೂನ್ಯತೆಗಳನ್ನು ಪತ್ತೆ ಮಾಡಿ ಪ್ರಮಾಣ ಪತ್ರ ನೀಡಲು ಸಮಗ್ರ ಶಿಕ್ಷಣ ವ್ಯವಸ್ಥೆಯಡಿ ಅವಕಾಶ ಕಲ್ಪಿಸಿದ್ದು, ಆಂಡ್ರಾಯ್ಡ್ ಪ್ಲೇಸ್ಟೋರ್ ನಿಂದ ಪ್ರಶಾಸ್ತ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.  ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದ ರಾಜಸ್ಥಾನದ [ಶ್ರೀ ಇಮ್ರಾನ್ ಖಾನ್] ಅಲ್ವಾರ್ ನ ಶಾಲಾ ಶಿಕ್ಷಕನ ಸಹಯೋಗದಲ್ಲಿ ಈ ಮೊಬೈಲ್ ಆಪ್ ಅನ್ನು ಎನ್.ಸಿ.ಇ.ಆರ್.ಟಿ ಸಿದ್ಧಪಡಿಸಿದೆ.

ಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರದ ಆರಂಭ - ಆಟಿಕೆ ಆಧಾರಿತ ಶಿಕ್ಷಣ ಶಾಸ್ತ್ರದ ಕೈಪಿಡಿಯನ್ನು ಶಾಲಾ ಶಿಕ್ಷಣ, ಬಾಲ್ಯದ ಆರಂಭಿಕ ಆರೈಕೆ ಮತ್ತು ಶಿಕ್ಷಕರ ತರಬೇತಿ ಪಠ್ಯಕ್ರಮದಲ್ಲಿ ಸ್ಥಳೀಯ ಆಟಿಕೆಗಳು ಮತ್ತು ಅದರ ಶಿಕ್ಷಣ ಶಾಸ್ತ್ರದ ಏಕೀಕರಣವನ್ನು ಉತ್ತೇಜಿಸುವಂತೆ ವಿನ್ಯಾಸಗೊಳಿಸಲಾಗಿದೆ. ಮೂಲಭೂತ ಪೂರ್ವ ಸಿದ್ಧತೆ, ಮಧ್ಯಮ ಮತ್ತು ಮಾಧ್ಯಮಿಕ ಹಂತಗಳಲ್ಲಿ ವಿವಿಧ ಅಟಿಕೆಗಳು ಮತ್ತು ಆಟಗಳೊಂದಿಗೆ ಕೌಶಲ್ಯಗಳು, ಸಾಮರ್ಥ್ಯ ಮತ್ತು ಕಲಿಕೆಯ ಫಲಿತಾಂಶಗಳನ್ನು ರೂಪಿಸಲು ಶಿಕ್ಷಕರಿಗೆ ವಿವಿಧ ಪರಿಕಲ್ಪನೆಗಳನ್ನು ಸಂಯೋಜಿತ ರೀತಿಯಲ್ಲಿ ಅಳವಡಿಸಲು, ವಯಸ್ಸಿಗೆ ಸೂಕ್ತವಾದ ಆಟಿಕೆಗಳನ್ನು ಆಯ್ಕೆ ಮಾಡಲು ಮತ್ತು ರಚಿಸಲು ಸಹಾಯ ಮಾಡುತ್ತದೆ,.  

ಶಿಕ್ಷಣ ಶಬ್ದಕೋಶ – ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣ ಶಬ್ದಕೋಶ ಎಂಬ ಶೀರ್ಷಿಕೆಯ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಪರಿಭಾಷೆಗಳ ಸಮಗ್ರ ಪದಕೋಶವನ್ನು ಅಭಿವೃದ್ಧಿಪಡಿಸಿದೆ. ಶಿಕ್ಷಣ ತಜ್ಞರು, ಶಿಕ್ಷಣ ಆಡಳಿತಗಾರರು, ಶಿಕ್ಷಕರು, ಪರೀಕ್ಷಕರು ಇತರರು ಬಳಸುವ ನಿಯಮಗಳು ಮತ್ತು ಉಲ್ಲೇಖಗಳನ್ನು ಪದಕೋಶ ಅಥವಾ ಶಬ್ದಕೋಶ ಹೊಂದಿದೆ.

ಮೇಲಿನ ಉಪಕ್ರಮಗಳ ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಎರಡು ಪ್ರಕಟಣೆಗಳನ್ನು ಸಿದ್ಧಪಡಿಸಿದ್ದು, ಇದೇ ಸಂದರ್ಭದಲ್ಲಿ ಇವುಗಳನ್ನು ಬಿಡುಗಡೆಗೊಳಿಸಲಾಯಿತು.  

ಉದ್ಯೋಗ ಕೌಶಲ್ಯಗಳ ಪಠ್ಯ ಕ್ರಮ – ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ [ಎಂ.ಎಸ್.ಡಿ.ಇ] ಸಚಿವಾಲಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ [ಎನ್.ಎಸ್.ಡಿ.ಸಿ] ಮತ್ತು ಎಂ.ಎಸ್.ಡಿ.ಇ ವ್ಯಾಪ್ತಿಗೆ ಒಳಪಡುವ ಇತರೆ ಪಠ್ಯ ಸಂಸ್ಥೆಗಳ ಸಹಯೋಗದ ಅನ್ವೇಷಣೆಯೊಂದಿಗೆ ಪರಿಷ್ಕೃತ ಪಠ್ಯ ಕ್ರಮವನ್ನು ಸಿದ್ಧಪಡಿಸಿದ್ದು, ಇದರಿಂದ 15,600 ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ [ಐಟಿಐ] 2.5 ದಶಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಿಂದ ಅನುಕೂಲವಾಗಲಿದೆ. ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಪಠ್ಯ ಕ್ರಮವನ್ನು ಪರಿಷ್ಕರಿಸಲಾಗಿದೆ ಮತ್ತು 120 ಗಂಟೆಗಳ ಬೋಧನೆಯನ್ನು ವಿಸ್ತರಣೆ ಮಾಡಲಾಗಿದೆ.  ಉದ್ಯೋಗ ಕೌಶಲ್ಯಗಳು, ಡಿಜಿಟಲ್ ಕೌಶಲ್ಯಗಳು, ಪೌರತ್ವ, ವೈವಿಧ್ಯತೆ ಮತ್ತು ಒಳಗೊಳ್ಳುವ, ವೃತ್ತಿ ಅಭಿವೃದ್ಧಿ ಹಾಗೂ ಗುರಿ ನಿಗದಿ, ಕೆಲಸಕ್ಕೆ ಸನ್ನದ್ಧಗೊಳ್ಳುವ ಹಾಗೂ ಉದ್ಯಮಶೀಲತೆಯ ಕೆಲವು ಮಾದರಿಗಳನ್ನು ಅಳವಡಿಸಲಾಗಿದೆ. ಅಲ್ಪಾವಧಿ ಮತ್ತು ದೀರ್ಘಾವಧಿಯ 30, 60 ಮತ್ತು 90 ಗಂಟೆಗಳ ಅವಧಿಯ ವಿವಿಧ ಪಠ್ಯ ಕ್ರಮವನ್ನು ಜಾರಿಗೊಳಿಸಲಾಗಿದೆ.

ಪಠ್ಯಕ್ರಮ ಕಲಿಯುವವರಿಗೆ ಮೂರು ಪ್ರಮುಖ ಲಾಭಗಳನ್ನು ನೀಡುತ್ತದೆ: ಸ್ವಯಂ ಕಲಿಕೆಯ ಮನೋಧೋರಣೆಯನ್ನು ನಿರ್ಮಿಸುತ್ತದೆ, ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ವೃತ್ತಿನಿರತರಾಗಲು ಸನ್ನದ್ಧಗೊಳಿಸುತ್ತದೆ ಹಾಗೂ ಹೊಸ ವೃತ್ತಿಗಳನ್ನು ಅಭಿವೃದ್ಧಿಪಡಿಸಲು ಹಾಗೂ 21 ನೇ ಶತಮಾನದ ಕೌಶಲ್ಯಗಳಿಗೆ ಸರ್ವಸನ್ನದ್ಧರಾಗಲು ಅವಕಾಶ ಕಲ್ಪಿಸುತ್ತದೆ.  ಹೊಸ ತಲೆಮಾರಿನ ಶಾಲಾ ಕೊಠಡಿಗಳಲ್ಲಿ ಕಲಿಯುವವರಿಗೆ ತಮ್ಮ ಕೌಶಲ್ಯವನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಮತ್ತು ಸಂಯೋಜಿತ ಕಲಿಕೆಯ ಮಾದರಿಗಳೊಂದಿಗೆ ತಮ್ಮನ್ನು ತಾವು ಪರಿಚಿತರಾಗುವಂತೆ ಮಾಡುತ್ತದೆ. ಪರಿಷ್ಕೃತ ಪಠ್ಯ ಕ್ರಮದಲ್ಲಿ ಭೌತಿಕ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಡಿಜಿಟಲ್ ಪ್ರತಿಗಳು ಶೀಘ್ರದಲ್ಲೇ ಲಭ್ಯವಾಗಲಿವೆ.  

ತರಬೇತುದಾರರಿಗೆ ಅನುಕೂಲಕರವಾದ ಮಾರ್ಗದರ್ಶಿಯನ್ನು ನೀಡಲಾಗುತ್ತಿದ್ದು, ಇದರಿಂದ ಅವರು ಸಂಯೋಜಿತ ಕಲಿಕೆಯ ಮಾದರಿಯನ್ನು ಬಳಸಿಕೊಂಡು ಪರಿಷ್ಕೃತ ಪಠ್ಯಕ್ರಮದಂತೆ ಕಲಿಸಬಹುದಾಗಿದೆ. ಭಾರತ್ ಸ್ಕಿಲ್ ಪೋರ್ಟಲ್ ಮತ್ತು ಎಂಪ್ಲಾಯಬಿಲಿಟಿ ಸ್ಕಿಲ್ ಪೋರ್ಟಲ್ ನಲ್ಲಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾದರಿಯ ಕಲಿಕೆಯ ಪುಸ್ತಕ ಲಭ್ಯವಿದೆ. ರಾಜ್ಯ ಇಲಾಖೆಗಳಲ್ಲಿ ಈ ಪುಸ್ತಕಗಳನ್ನು ಬಳಸಿಕೊಳ್ಳಲು ಎಂ.ಎಸ್.ಡಿ.ಇ ಮತ್ತು ರಾಷ್ಟ್ರೀಯ ಶಿಕ್ಷಣ ಮಾಧ್ಯಮ ಸಂಸ್ಥೆ [ಎನ್.ಐ.ಎಂ.ಐ] ಇವುಗಳ ಪ್ರಕಟಣೆಗಳನ್ನು ಹೊರತರಲು ಯೋಜಿಸಿದೆ.

ಐಟಿಐ ಅಭ್ಯರ್ಥಿಗಳಿಗೆ ಇಗ್ನೋ ಮತ್ತು ಎನ್ಐಒಎಸ್ ಕೋರ್ಸ್ ಗಳ ನೋಂದಣಿಗೆ ಒಂದೇ ಕ್ಲಿಕ್ ನಲ್ಲಿ ನೋಂದಣಿ – ಎಂ.ಎಸ್.ಡಿ.ಇ ಸಂಸ್ಥೆ, ನ್ಯಾಷನಲ್ ಸ್ಕೂಲ್ ಆಫ್ ಓಪನ್ ಸ್ಕೂಲ್ [ಎನ್ಐಒಎಸ್] ಮತ್ತು ಇಂದಿರಾಗಾಂಧಿ ನ್ಯಾಷನಲ್ ಓಪನ್ ಯುನಿರ್ವಸಿಟಿ [ಇಗ್ನೋ] ಐಟಿಐ ತರಬೇತಿ ಪಡೆಯುತ್ತಿರುವವರಿಗೆ 10ನೇ/12ನೇ ತರಗತಿಗಳ ಪ್ರಮಾಣ ಪತ್ರ ಪಡೆಯಲು ಅಥವಾ ಪದವಿ ಕಾರ್ಯಕ್ರಮ ಮುಂದುವರೆಸಲು ಅನುವು ಮಾಡಿಕೊಡುವ ತಿಳಿವಳಿಕೆ ಒಪ್ಪಂದಕ್ಕೆ ಸಹಿಹಾಕಿದೆ. ತರಬೇತಿ ಪಡೆಯುತ್ತಿರುವವರು ಎನ್ಐಎಸ್ಒ ನಲ್ಲಿ ಹೆಚ್ಚುವರಿಯಾಗಿ ಭಾಷಾ ಕೋರ್ಸ್ ಅನ್ನು ಆಯ್ಕೆಮಾಡಿಕೊಳ್ಳಬಹುದು. ಎನ್ಐಒಎಸ್ ನಿಂದ ಕೋರ್ಸ್ ಮುಗಿದ ತರುವಾಯ ಪ್ರಶಿಕ್ಷಣಾರ್ಥಿಗೆ 10ನೇ ಅಥವಾ 12 ನೇ ತರಗತಿಗೆ ಸಮನಾದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಅದೇ ರೀತಿ 12 ತರಗತಿ ತೇರ್ಗಡೆಯಾದ ಐಟಿಐ ತರಬೇತುದಾರರು ಇಗ್ನೋದಿಂದ ಪದವಿ ಹಂತದ ಕಾರ್ಯಕ್ರಮಕ್ಕೆ ಆಯ್ಕೆಯಾಗಬಹುದು. ಇಗ್ನೋ ತನ್ನ ಪದವಿಪೂರ್ವ ಕಾರ್ಯಕ್ರಮಗಳಿಗೆ ನೇರ ಪ್ರವೇಶದ ಉದ್ದೇಶಕ್ಕಾಗಿ 10+2 ಹಂತಕ್ಕೆ ಸಮನಾಗಿ ನಾಲ್ಕು ವಿಷಯಗಳನ್ನು ಒಳಗೊಂಡಿರುವ ಎರಡು ವರ್ಷಗಳ ಎನ್.ಟಿ.ಸಿ [10ನೇ ತರಗತಿ ನಂತರ] ಕೋರ್ಸ್ ಅನ್ನು ಗುರುತಿಸಿದೆ.     

 ಐಟಿಐ ಪ್ರಶಿಕ್ಷಣಾರ್ಥಿಗಳಿಗೆ ಎನ್ಐಒಎಸ್, ಇಗ್ನೋ ಮತ್ತು ಒನ್ ಕ್ಲಿಕ್ ಮೂಲಕ ಶಿಶಿಕ್ಷು ತರಬೇತಿ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿರುವ ಮತ್ತು ತಡೆರಹಿತ ನೋಂದಣಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಶಿಕ್ಷಣಾರ್ಥಿಗಳು                           ಡಿಜಿಟಿಎಂಐಎಸ್ ನ ಪ್ರೋಫೈಲ್ ಪೇಜ್ ನ (https://ncvtmis.gov.in) ಪೋರ್ಟಲ್ ನಲ್ಲಿ ಡಿಜಿಟಿ, ಡಿಜಿಟಿಎಂಐಎಸ್ ಪೋರ್ಟಲ್ ಗಳನ್ನು ಸಂಯೋಜಿಸಲಾಗಿದೆ ಮತ್ತು ಎಪಿಐ ಪ್ರಶಿಕ್ಷಣಾರ್ಥಿಗಳಿಗೆ ದ್ವಿಮಾರ್ಗದ ಪೋರ್ಟಲ್ ಕೂಡ ಲಭ್ಯವಿದೆ. 

ಪ್ರಶಿಕ್ಷಣಾರ್ಥಿ ಎನ್.ಸಿ.ವಿ.ಟಿ.ಎಂ.ಐ.ಎಸ್ ಪೋರ್ಟಲ್ ಅಥವಾ ವೈಯಕ್ತಿಕ ಎನ್ಐಒಎಸ್, ಇಗ್ನೋ ಅಥವಾ ಶಿಶಿಕ್ಷು ಪೋರ್ಟಲ್ ಗಳಲ್ಲಿ ನೋಂದಣಿ ಆಯ್ಕೆ ಹೊಂದಿದ್ದಾನೆ.  ಪ್ರಶಿಕ್ಷಣಾರ್ಥಿ ಪ್ರೊಫೈಲ್ ಪೇಜ್ ನಲ್ಲಿ ತನ್ನ ಐಟಿಐ ಕ್ರಮ ಸಂಖ್ಯೆ,                  ತಂದೆಯ ಹೆಸರು, ಹುಟ್ಟಿದ ದಿನಾಂಕವನ್ನು ನಮೂದಿಸಬೇಕಾಗುತ್ತದೆ. ಎನ್ಐಒಎಸ್/ಇಗ್ನೋ/ಪ್ರಶಿಕ್ಷಣ ಆಧಾರಿತ ಶೈಕ್ಷಣಿಕ ಅರ್ಹತೆಯನ್ನು ನೋಂದಣಿ ಮಾಡಬೇಕಾಗುತ್ತದೆ. ತಮ್ಮ ಆಯ್ಕೆಯನ್ನು ಆರಿಸಿಕೊಂಡು ಒಂದೇ ಕ್ಲಿಕ್ ನಲ್ಲಿ          ಕಾರ್ಯಕ್ರಮಕ್ಕೆ ನೋಂದಣಿಯಾಗಬಹುದಾಗಿದೆ.  

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಕಾರ್ಯದರ್ಶಿ ಶ್ರೀಮತಿ ಅನಿತಾ ಕರ್ವಾಲ್; ಉನ್ನತ ಶಿಕ್ಷಣ ಕಾರ್ಯದರ್ಶಿ ಶ್ರೀ ಸಂಜಯ್ ಮೂರ್ತಿ, ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಣ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್; ಸಿಬಿಎಸ್ಸಿ ಅಧ್ಯಕ್ಷರು, ಎಐಸಿಟಿಇ ಅಧ್ಯಕ್ಷರು, ಸಂಬಂಧಪಟ್ಟ ಸಚಿವಾಲಯಗಳು, ಇಲಾಖೆಗಳ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.   
 

*****(Release ID: 1857752) Visitor Counter : 251


Read this release in: English , Urdu , Hindi , Manipuri