ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಒಟ್ಟು ಕಲ್ಲಿದ್ದಲು ಉತ್ಪಾದನೆಯು ಆಗಸ್ಟ್, 2022 ರಲ್ಲಿ 58.33 ದಶಲಕ್ಷ ಟನ್‌ಗಳಿಗೆ 8.27% ರಷ್ಟು ಹೆಚ್ಚಾಗಿದೆ


ಕಲ್ಲಿದ್ದಲ ರವಾನೆಯು  63.43 ದಶಲಕ್ಷ ಟನ್ ಮುಟ್ಟಿದೆ

ಇಪ್ಪತ್ತೈದು ಗಣಿಗಳ ಉತ್ಪಾದನೆಯು ಶೇಕಡಾ 100ಕ್ಕಿಂತ ಹೆಚ್ಚಾಗಿದೆ

Posted On: 05 SEP 2022 5:17PM by PIB Bengaluru

ಆಗಸ್ಟ್ 2021 ಕ್ಕೆ ಹೋಲಿಸಿದರೆ ಭಾರತದ ಒಟ್ಟು ಕಲ್ಲಿದ್ದಲು ಉತ್ಪಾದನೆಯು ಆಗಸ್ಟ್ 2022 ರಲ್ಲಿ 53.88 ಎಮ್‍ ಟಿಯಿಂದ 58.33 ಎಮ್‍ ಟಿ ಗೆ 8.27% ರಷ್ಟು ಹೆಚ್ಚಾಗಿದೆ.  ಕಲ್ಲಿದ್ದಲು ಸಚಿವಾಲಯದ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ, ಆಗಸ್ಟ್ 2022 ರಲ್ಲಿ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್)ನ ಗಣಿಗಳು/ಇತರವು ಕ್ರಮವಾಗಿ 46.22 ಎಮ್‍ ಟಿ ಮತ್ತು 8.02 ಎಮ್‍ ಟಿ ಉತ್ಪಾದಿಸುವ ಮೂಲಕ 8.49 ಮತ್ತು 27.06% ಬೆಳವಣಿಗೆಯನ್ನು ದಾಖಲಿಸಿವೆ. ಹಾಗೆಯೇ, ಎಸ್‍ ಸಿ ಸಿ ಎಲ್ ಈ ತಿಂಗಳಲ್ಲಿ 17.49% ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ದೇಶದ ಪ್ರಮುಖ 37 ಕಲ್ಲಿದ್ದಲು ಉತ್ಪಾದಿಸುವ ಗಣಿಗಳಲ್ಲಿ, 25 ಗಣಿಗಳು 100% ಕ್ಕಿಂತ ಹೆಚ್ಚು ಉತ್ಪಾದಿಸಿದರೆ ಐದು ಗಣಿಗಳ ಉತ್ಪಾದನಾ ಮಟ್ಟವು ಶೇಕಡ 80 ಮತ್ತು 100 ನಡುವೆ ಇತ್ತು.

ಅದೇ ಸಮಯದಲ್ಲಿ, ಕಲ್ಲಿದ್ದಲು ರವಾನೆಯು ಆಗಸ್ಟ್ 2021 ಕ್ಕೆ ಹೋಲಿಸಿದರೆ ಆಗಸ್ಟ್ 2022 ರಲ್ಲಿ 60.18 ಎಮ್‍ ಟಿಯಿಂದ 63.43 ಎಮ್‍ ಟಿಗೆ 5.41% ರಷ್ಟು ಹೆಚ್ಚಾಗಿದೆ. ಆಗಸ್ಟ್ 2022 ರಲ್ಲಿ, ಸಿಐಲ್ ನ ಗಣಿಗಳು ಮತ್ತು ಇತರ ಗಣಿಗಳು ಕ್ರಮವಾಗಿ 51.12ಎಮ್‍ ಟಿ ಮತ್ತು 8.28 12ಎಮ್‍ ಟಿ  ರವಾನಿಸುವ ಮೂಲಕ 5.11% ಮತ್ತು 26.29% ಬೆಳವಣಿಗೆಯನ್ನು ದಾಖಲಿಸಿವೆ.
ವಿದ್ಯುತ್ ಬೇಡಿಕೆಯ ಹೆಚ್ಚಳದಿಂದಾಗಿ ಆಗಸ್ಟ್ 2021 ರಲ್ಲಿ 48.80 ಎಮ್‍ ಟಿಗೆ  ಹೋಲಿಸಿದರೆ ವಿದ್ಯುತ್ ಉಪಯುಕ್ತತೆಗಳ ರವಾನೆಯು ಆಗಸ್ಟ್ 2022 ರಲ್ಲಿ 54.09 ಎಮ್‍ ಟಿಗೆ  10.84% ರಷ್ಟು ಬೆಳೆದಿದೆ.


ಆಗಸ್ಟ್ 2022 ರಲ್ಲಿನ ಒಟ್ಟಾರೆ ವಿದ್ಯುತ್ ಉತ್ಪಾದನೆಯು ಆಗಸ್ಟ್ 2021 ರಲ್ಲಿ ಉತ್ಪಾದಿಸಲಾದ ವಿದ್ಯುತ್ತಿಗಿಂತ 3.14% ಹೆಚ್ಚಾಗಿದೆ. ಹಾಗೆಯೇ, ಜುಲೈ 2022ರಲ್ಲಿ 86039 ದಶಲಕ್ಷ ಯುನಿಟ್‍ಗೆ  ಹೋಲಿಸಿದರೆ 2022 ರಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು 85785 ದಶಲಕ್ಷ ಯುನಿಟ್‍ ಆಗಿದೆ ಮತ್ತು 0.30% ರಷ್ಟು ಸಣ್ಣ ಋಣಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. 

*****


(Release ID: 1856954) Visitor Counter : 153