ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಪ್ರಯೋಗ ಪೂರ್ಣವಾಗುವ ಮುನ್ನವೇ ನ್ಯಾನೊ ಯೂರಿಯಾಗೆ ತ್ವರಿತ ಅನುಮೋದನೆ ನೀಡಲಾಯಿತು ಎಂಬ ಸುದ್ದಿ ವರದಿಯು ದಾರಿತಪ್ಪಿಸುತ್ತದೆ ಮತ್ತು ಈ ವಿಷಯದ ಬಗ್ಗೆ ಲಭ್ಯವಿರುವ ಅಸ್ತಿತ್ವದಲ್ಲಿರುವ ಸಂಗತಿಗಳು ಮತ್ತು ದತ್ತಾಂಶದ ಭಾಗಶಃ ದೃಷ್ಟಿಕೋನವನ್ನು ಪ್ರಸ್ತುತಪಡಿಸಲಾಗುತ್ತಿದೆ.
ರಸಗೊಬ್ಬರ ನಿಯಂತ್ರಣ ಆದೇಶ (ಎಫ್‌ಸಿಒ), 1985 ರ ಪ್ರಕಾರ ರಸಗೊಬ್ಬರದ ನೋಂದಣಿಗಾಗಿ ಸ್ಥಾಪಿತ ಮತ್ತು ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಸಂಪೂರ್ಣವಾಗಿ ಅನುಸರಿಸಲಾಗಿದೆ.
ಐಸಿಎಆರ್ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಿಂದ ಪಡೆದ ಪ್ರೋತ್ಸಾಹದಾಯಕ ಫಲಿತಾಂಶಗಳು ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ನ್ಯಾನೊ ಯೂರಿಯಾವನ್ನು ಎಫ್‌ಸಿಒ ಅಡಿಯಲ್ಲಿ ತಾತ್ಕಾಲಿಕವಾಗಿ ಅಧಿಸೂಚಿಸಲಾಗಿದೆ
ಕೇಂದ್ರೀಯ ರಸಗೊಬ್ಬರ ಸಮಿತಿ (ಸಿಎಫ್‌ಸಿ) ದತ್ತಾಂಶಗಳ ಆಧಾರದ ಮೇಲೆ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯೊಂದಿಗೆ (ಡಿಬಿಟಿ) ಸೂಕ್ತ ಚರ್ಚೆಗಳ ನಂತರ ಶಿಫಾರಸು ಮಾಡಿದೆ.
Posted On:
04 SEP 2022 6:36PM by PIB Bengaluru
‘‘ಅಪೂರ್ಣ ಪ್ರಯೋಗಗಳ ಹೊರತಾಗಿಯೂ ನ್ಯಾನೋ ಯೂರಿಯಾಗೆ ತ್ವರಿತವಾಗಿ ಅನುಮೋದನೆ ನೀಡಲಾಗಿದೆ,’’ ಎಂದು ಆರೋಪಿಸಿ ಪ್ರಮುಖ ರಾಷ್ಟ್ರೀಯ ದೈನಿಕವೊಂದು ಇಂದು ದಾರಿತಪ್ಪಿಸುವ ಸುದ್ದಿ ವರದಿಯನ್ನು ಪ್ರಕಟಿಸಿದೆ. ಸುದ್ದಿ ವರದಿಯು ತಪ್ಪಾಗಿದೆ, ತಪ್ಪಾಗಿ ತಿಳಿಸಲಾಗಿದೆ ಮತ್ತು ಈ ವಿಷಯದ ಕುರಿತು ಲಭ್ಯವಿರುವ ಅಸ್ತಿತ್ವದಲ್ಲಿರುವ ಸಂಗತಿಗಳು ಮತ್ತು ದತ್ತಾಂಶದ ಭಾಗಶಃ ದೃಷ್ಟಿಕೋನವನ್ನು ಪ್ರಸ್ತುತಪಡಿಸಲಾಗಿದೆ.
ಈ ಪ್ರಕ್ರಿಯೆಯನ್ನು ‘‘ತ್ವರಿತವಾಗಿ’’ ಮಾಡಲಾಗಿದೆ ಎಂದು ಸುದ್ದಿ ವರದಿಯಲ್ಲಿ ತಪ್ಪಾಗಿ ಉಲ್ಲೇಖಿಸಲಾಗಿದೆ. ರಸಗೊಬ್ಬರ ನಿಯಂತ್ರಣ ಆದೇಶ (ಎಫ್‌ಸಿಒ), 1985 ರ ಪ್ರಕಾರ ಅಧಿಸೂಚನೆಗಾಗಿ ಯಾವುದೇ ರಸಗೊಬ್ಬರದ ನೋಂದಣಿಗಾಗಿ ಸ್ಥಾಪಿತ ಮತ್ತು ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಲೆಕ್ಕಹಾಕಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. 1985ರ ಎಫ್‌ಸಿಒ ಅಡಿಯಲ್ಲಿರಸಗೊಬ್ಬರಗಳನ್ನು ಪರಿಚಯಿಸಲು ಅಸ್ತಿತ್ವದಲ್ಲಿರುವ ಕಾರ್ಯವಿಧಾನದ ಆಧಾರದ ಮೇಲೆ ನ್ಯಾನೋ ಯೂರಿಯಾವನ್ನು ತಾತ್ಕಾಲಿಕವಾಗಿ ಎಫ್‌ಸಿಒ ಅಡಿಯಲ್ಲಿ ಅಧಿಸೂಚಿಸಲಾಗಿದೆ, ಇದಕ್ಕೆ ಕೇವಲ ಎರಡು ಋುತುಗಳಿಂದ ದತ್ತಾಂಶದ ಅಗತ್ಯವಿದೆ. ಐಸಿಎಆರ್ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳಿಂದ ಪಡೆದ ಪ್ರೋತ್ಸಾಹದಾಯಕ ಫಲಿತಾಂಶಗಳು ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ನ್ಯಾನೊ ಯೂರಿಯಾವನ್ನು ಎಫ್‌ಸಿಒ ಅಡಿಯಲ್ಲಿತಾತ್ಕಾಲಿಕವಾಗಿ ಅಧಿಸೂಚಿಸಲಾಗಿದೆ. ಕೇಂದ್ರೀಯ ರಸಗೊಬ್ಬರ ಸಮಿತಿ (ಸಿಎಫ್‌ಸಿ), ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ (ಎಂಒಎ ಮತ್ತು ಎಫ್‌ಡಬ್ಲ್ಯೂ) ಸಹ ಈ ನಿಟ್ಟಿನಲ್ಲಿ ದತ್ತಾಂಶ ಮತ್ತು ಸೂಕ್ತ ಚರ್ಚೆಗಳ ಆಧಾರದ ಮೇಲೆ ಶಿಫಾರಸು ಮಾಡಿದೆ. ಇದಲ್ಲದೆ, ಜೈವಿಕ ತಂತ್ರಜ್ಞಾನ ಇಲಾಖೆಯನ್ನು (ಡಿಬಿಟಿ) ಸುರಕ್ಷ ತೆ ಮತ್ತು ಜೈವಿಕ ಸುರಕ್ಷತಾ ವಿಷಯಗಳಿಗಾಗಿ ಉಲ್ಲೇಖಿಸಲಾಗಿದೆ. ಪರಿಣಾಮಕಾರಿತ್ವ, ಜೈವಿಕ ಸುರಕ್ಷ ತೆ ಮತ್ತು ಜೈವಿಕ ವಿಷಕಾರಿತ್ವಕ್ಕೆ ಸಂಬಂಧಿಸಿದಂತೆ ತೃಪ್ತಿಯ ನಂತರವೇ ನ್ಯಾನೋ ಯೂರಿಯಾವನ್ನು ನ್ಯಾನೋ ಗೊಬ್ಬರದ ಪ್ರತ್ಯೇಕ ವರ್ಗವಾಗಿ ಎಫ್‌ಸಿಒ ಅಡಿಯಲ್ಲಿ ತರಲಾಗಿದೆ.
ಇದಲ್ಲದೆ, ಈ ದತ್ತಾಂಶವು ಸುದ್ದಿ ವರದಿಯ ಮೂಲಕ ತಪ್ಪಾಗಿ ತಿಳಿಸಲ್ಪಟ್ಟಂತೆ ಎರಡು ಋುತುಗಳಿಗೆ ಸೀಮಿತವಾಗಿಲ್ಲ, ಏಕೆಂದರೆ ಸಂಶೋಧನೆ ಮತ್ತು ರೈತ ಕ್ಷೇತ್ರ ಪ್ರಯೋಗಗಳನ್ನು ಕಳೆದ ನಾಲ್ಕು ಋುತುಗಳಿಗಿಂತ ಹೆಚ್ಚು ಕಾಲದಿಂದ ಮುಂದುವರಿಸಲಾಗಿದೆ.
ಮಣ್ಣಿನ ಆರೋಗ್ಯ/ ಫಲವತ್ತತೆಯ ಸ್ಥಿತಿಗೆ (ಕೋಷ್ಟಕ 1) ಯಾವುದೇ ಹಾನಿಯಾಗದಂತೆ ಸ್ಥಿರ ಫಲಿತಾಂಶಗಳನ್ನು ದಾಖಲಿಸಲಾಗಿದೆ.
ಕೋಷ್ಟಕ 1. ಋುತುಮಾನವಾರು / ಬೆಳೆವಾರು - ಪ್ರಯೋಗಾತ್ಮಕ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತದೆ
ಪ್ರಯೋಗಗಳು
|
ಋುತು
|
ಬೆಳೆಗಳು ಮತ್ತು ಪ್ರಯೋಗಗಳು (ಸಂಖ್ಯೆಗಳು)
|
ಆನ್ ಸ್ಟೇಷನ್ ಟ್ರಯಲ್ಸ್
|
ಹಿಂಗಾರು 2019-20
(24 ಸಂಖ್ಯೆಗಳು )
|
ಏಕದಳ ಧಾನ್ಯಗಳು: ಗೋಧಿ (11);
ಎಣ್ಣೆಕಾಳುಗಳು: ಸಾಸಿವೆ (1);
ತರಕಾರಿಗಳು: ಈರುಳ್ಳಿ (2); ಕ್ಯಾಪ್ಸಿಕಂ (1), ಎಲೆಕೋಸು (1), ಟೊಮ್ಯಾಟೊ (3); ಪಾಲಿಹೌಸ್ ಅಡಿಯಲ್ಲಿ ಪಾರ್ಥೆನೋಕಾರ್ಪಿಕ್ ಸೌತೆಕಾಯಿ (1) ಸಕ್ಕರೆ ಬೆಳೆಗಳು: ಸುರು ಕಬ್ಬು (1)
|
ಬೇಸಿಗೆ 2019-20 (3 ಸಂಖ್ಯೆಗಳು)
|
ಏಕದಳ ಧಾನ್ಯಗಳು: ಭತ್ತ (1); ಮೆಕ್ಕೆಜೋಳ (2)
|
2020ರ ಮುಂಗಾರು (16 ಸಂಖ್ಯೆಗಳು)
|
ಏಕದಳ ಧಾನ್ಯಗಳು: ಭತ್ತ (6); ಮೆಕ್ಕೆಜೋಳ (5); ಪಿಯರ್ ಮಿಲ್ಲೆಟ್ (3)
ನಾರುಗಳು: ಹತ್ತಿ (1)
ತರಕಾರಿಗಳು: ಬೆಂಡೆಕಾಯಿ (1)
|
ಹಿಂಗಾರು 2020-21 (8 ಸಂಖ್ಯೆಗಳು)
|
ಏಕದಳ ಧಾನ್ಯಗಳು: ಗೋಧಿ (6);
ಎಣ್ಣೆಕಾಳುಗಳು: ಸಾಸಿವೆ (1);
ತರಕಾರಿಗಳು: ಈರುಳ್ಳಿ (1)
|
ಬೇಸಿಗೆ 2020-21 (2 ಸಂಖ್ಯೆಗಳು)
|
ಏಕದಳ ಧಾನ್ಯಗಳು: ಭತ್ತ (1); ಮೆಕ್ಕೆಜೋಳ (1)
|
ಮುಂಗಾರು 2021 (21 ಸಂಖ್ಯೆಗಳು)
|
ಕೋಷ್ಟಕ 2ನ್ನು ನೋಡಿರಿ.
|
|
ಹಿಂಗಾರು 2021-22 (19 ಸಂಖ್ಯೆ)
|
ಗೋಧಿ (8); ರೇಪ್ಸೀಡ್/ ಸಾಸಿವೆ (3); ಈರುಳ್ಳಿ (1); ನೆಲಗಡಲೆ (1); ಸೂರ್ಯಕಾಂತಿ (1); ಶುಂಠಿ (1), ಅರಿಶಿನ (1), ಕಬ್ಬು (1), ಭತ್ತ (1), ಮೆಕ್ಕೆಜೋಳ (1)
|
|
ಮುಂಗಾರು - 2022 (7 ಸಂಖ್ಯೆಗಳು)
|
ಭತ್ತ (3); ಆ್ಯಪಲ್ (1), ಬಾಜ್ರಾ (1); ಫಿಂಗರ್ ಮಿಲ್ಲೆಟ್ (2)
|
|
ಹಿಂಗಾರು -2022-23 (6 ಸಂಖ್ಯೆಗಳು)
|
ಮುಂದುವರಿದಿದೆ
|
‘‘ಆನ್ ಫಾರ್ಮ್’’ ಪ್ರಯೋಗಗಳು
|
2019-20ರ ಹಿಂಗಾರು
|
93 ಬೆಳೆಗಳು; 11224 ಪ್ರಯೋಗಗಳು (9037 ರೆಕಾರ್ಡ್ ಮಾಡಲಾಗಿದೆ)
|
2020ರ ಮುಂಗಾರು
|
44 ಬೆಳೆಗಳು; 1511 ಪ್ರಯೋಗಗಳು (1435 ರೆಕಾರ್ಡ್)
|
2020-21 ಹಿಂಗಾರು
|
34 ಬೆಳೆಗಳು; 1126 ಪ್ರಯೋಗಗಳು
|
ಒಟ್ಟು
|
11,598 ಪ್ರಯೋಗಗಳು
|
ನ್ಯಾನೋ ಯೂರಿಯಾದ ಮೌಲ್ಯಮಾಪನಕ್ಕಾಗಿ, ಪ್ರೀಮಿಯಂ ಐಸಿಎಆರ್ ಸಂಶೋಧನಾ ಸಂಸ್ಥೆಗಳು ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ನ್ಯಾನೋ ಯೂರಿಯಾ ಪ್ರಯೋಗಗಳಲ್ಲಿ ಮುಂಚೂಣಿಯಲ್ಲಿವೆ. ಬೆಳೆ ಉತ್ಪಾದಕತೆಗೆ ಸಂಬಂಧಿಸಿದ ವಿವಿಧ ಅಂಶಗಳು; ರಸಗೊಬ್ಬರಗಳ ಪ್ರಮಾಣವನ್ನು ಕಡಿಮೆ ಮಾಡುವುದು, ರೈತರ ಲಾಭದಾಯಕತೆಯನ್ನು ಈ ಪ್ರಯೋಗಗಳ ಮೂಲಕ ಪರಿಹರಿಸಲಾಗಿದೆ. ನ್ಯಾನೋ ಯೂರಿಯಾ ಪ್ರಯೋಗಗಳಲ್ಲಿ ತೊಡಗಿರುವ ಕೆಲವು ಪ್ರಮುಖ ಸಂಶೋಧನಾ ಸಂಸ್ಥೆಗಳು / ಎಸ್‌ಎಯುಗಳ ಪಟ್ಟಿ ಈ ಕೆಳಗಿನಂತಿದೆ (ಕೋಷ್ಟಕ 2).
ಕ್ರ.ಸಂ.
|
ಬೆಳೆಗಳು
|
ಸ್ಥಳ
|
ಋುತುಮಾನ/ ವರ್ಷ ನಂತರ
|
1
|
ಮೆಕ್ಕೆಜೋಳ ಐಸಿಎಆರ್- ಸಿಆರ್ಐಡಿಎ,
|
ಹೈದರಾಬಾದ್, ತೆಲಂಗಾಣ
|
2021ರ ಮುಂಗಾರು
|
2
|
ಫಿಂಗರ್ ಮಿಲ್ಲೆಟ್
|
ಎಐಸಿಆರ್‌ಪಿಡಿಎ ಕೇಂದ್ರ, ಬೆಂಗಳೂರು
|
2021ರ ಮುಂಗಾರು
|
3
|
ಮಲೆನಾಡಿನ ಅಕ್ಕಿ
|
ಎಐಸಿಆರ್ ಪಿಡಿಎ ಕೇಂದ್ರ, ಜಗದಲ್ಪುರ, ಛತ್ತೀಸ್ಗಢ
|
2021-22ಹಿಂಗಾರು
|
4
|
ನೀರಾವರಿ ಮಾಡಿದ ಭತ್ತ
|
ಐಆರ್‌ಆರ್‌ಐ-ಐಎಸ್‌ಎಆರ್‌ಸಿ, ವಾರಣಾಸಿ
|
ಮುಂಗಾರು 2021
|
5
|
ಮಳೆಯಾಶ್ರೀತ ಅಕ್ಕಿ
|
ಐಆರ್‌ಆರ್‌ಐ-ಐಎಸ್‌ಎಆರ್‌ಸಿ, ವಾರಣಾಸಿ
|
ಮುಂಗಾರು 2021
|
6
|
ಮಳೆಯಾಶ್ರೀತ ಅಕ್ಕಿ
|
ಐಆರ್‌ಆರ್‌ಐ-ಐಎಸ್‌ಎರ್‌ಸಿ, ಅಸ್ಸಾಂ
|
ಮುಂಗಾರು 2021
|
7
|
ಗೋಧಿ
|
ಸಿಎಸ್‌ಎಸ್‌ಆರ್‌ಐ ಕರ್ನಾಲ್, ಹರಿಯಾಣ
|
ಹಿಂಗಾರು 2020-21
|
8
|
ಭತ್ತ
|
ಸಿಎಸ್‌ಎಸ್‌ಆರ್‌ಐ ಕರ್ನಾಲ್, ಹರಿಯಾಣ
|
ಮುಂಗಾರು 2021
|
9
|
ಗೋಧಿ
|
ಎಎಯು, ಆನಂದ್, ಗುಜರಾತ್
|
ಹಿಂಗಾರು 2019-20
|
10
|
ಮೆಕ್ಕೆಜೋಳ
|
ಎಎಯು, ಆನಂದ್, ಗುಜರಾತ್
|
ಮುಂಗಾರು 2021
|
11
|
ಗೋಧಿ
|
ಎಎನ್ಡಿಯುಎಟಿ, ಅಯೋಧ್ಯೆ, ಉತ್ತರ ಪ್ರದೇಶ
|
ಹಿಂಗಾರು 2019-20
|
12
|
ಗೋಧಿ
|
ಎಂಪಿಯುಎಟಿ, ಉದಯಪುರ, ರಾಜಸ್ಥಾನ
|
ಹಿಂಗಾರು 2019-20
|
13
|
ಗೋಧಿ
|
ಎಸ್ಕೆಎನ್ಎಯು, ಜಾಬ್ನರ್, ರಾಜಸ್ಥಾನ
|
ಹಿಂಗಾರು 2019-20
|
14
|
ಗೋಧಿ
|
ಐಎಆರ್‌ಐ, ನವದೆಹಲಿ
|
ಹಿಂಗಾರು 2019-20
|
15
|
ಸಾಸಿವೆ
|
ಐಎಆರ್‌ಐ, ನವದೆಹಲಿ
|
ಹಿಂಗಾರು 2019-20
|
16
|
ಪಲ್ರ್ಮಿಲೆಟ್ (ಮುತ್ತು ರಾಗಿ)
|
ಐಎಆರ್‌ಐ, ನವದೆಹಲಿ
|
ಮುಂಗಾರು 2019-20
|
17
|
ಗೋಧಿ
|
ಬಿಎಯು, ರಾಂಚಿ
|
ಹಿಂಗಾರು 2019-20
|
18
|
ಭತ್ತ
|
ಯುಎಎಚ್ಎಸ್, ಶಿವಮೊಗ್ಗ, ಕರ್ನಾಟಕ
|
ಹಿಂಗಾರು 2019-20
|
19
|
ಭತ್ತ
|
ಟಿಎನ್‌ಎಯು (ಭವಾನಿಸಾಗರ್ ಸ್ಟೇಷನ್) ಡ್ರೋನ್ ಪ್ರಯೋಗ
|
ಮುಂಗಾರು 2021
|
20
|
ಮೆಕ್ಕೆಜೋಳ
|
ಯುಎಎಸ್ ಜಿಕೆವಿಕೆ, ಕರ್ನಾಟಕ
|
ಬೇಸಿಗೆ 2019-20
|
21
|
ಮೆಕ್ಕೆಜೋಳ
|
ಪಿಜೆಟಿಎಸ್ಎಯು, ತೆಲಂಗಾಣ
|
ಬೇಸಿಗೆ 2019-20
|
22
|
ಈರುಳ್ಳಿ
|
ಎಂಪಿಕೆವಿವಿ, ರಾಹುರಿ, ಮಹಾರಾಷ್ಟ್ರ
|
ಹಿಂಗಾರು 2019-20
|
23
|
ಎಲೆಕೋಸು
|
ಐಐಎಚ್ಆರ್, ಬೆಂಗಳೂರು, ಕರ್ನಾಟಕ
|
ಹಿಂಗಾರು 2019-20
|
24
|
ಸೌತೆಕಾಯಿ
|
ಐಐಎಚ್ಆರ್, ಬೆಂಗಳೂರು, ಕರ್ನಾಟಕ
|
ಹಿಂಗಾರು 2019-20
|
ವಿವಿಧ ಸ್ಥಳಗಳು ಮತ್ತು ಕೃಷಿ-ಹವಾಮಾನ ಪ್ರದೇಶಗಳಲ್ಲಿ ನ್ಯಾನೊ ಯೂರಿಯಾ - ದ್ರವ (ನ್ಯಾನೊ ಎನ್) ಅನ್ನು ಅನ್ವಯಿಸುವ ಫಲಿತಾಂಶಗಳ ಸಾರಾಂಶವು, ಅಕ್ಕಿ, ಗೋಧಿ, ಮೆಕ್ಕೆಜೋಳ, ಟೊಮ್ಯಾಟೊ, ಸೌತೆಕಾಯಿ ಮತ್ತು ಕ್ಯಾಪ್ಸಿಕಂ ಮುಂತಾದ ಬೆಳೆಗಳ ನಿರ್ಣಾಯಕ ಬೆಳವಣಿಗೆಯ ಹಂತಗಳಲ್ಲಿನ್ಯಾನೋ ಯೂರಿಯಾದ ಎಲೆಯ ಲೇಪನವು ಸಾರಜನಕಯುಕ್ತ ರಸಗೊಬ್ಬರಗಳ ಬಳಕೆಯಲ್ಲಿಇಳಿಕೆಗೆ ಕಾರಣವಾಗುತ್ತದೆ ಮತ್ತು ಗೋಧಿಯಲ್ಲಿಶೇ. 3-23ರ ವ್ಯಾಪ್ತಿಯಲ್ಲಿಇಳುವರಿಯನ್ನು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸಿದೆ; ಟೊಮ್ಯಾಟೋದಲ್ಲಿ ಶೇ. 5-11ರಷ್ಟು ಭತ್ತ/ಭತ್ತದಲ್ಲಿ ಶೇ.3-24 ರಷ್ಟು; ಮೆಕ್ಕೆಜೋಳದಲ್ಲಿ ಶೇ. 2-15 ರಷ್ಟು, ಸೌತೆಕಾಯಿಯಲ್ಲಿ ಶೇ. 5 ರಷ್ಟು, ಕ್ಯಾಪ್ಸಿಕಂನಲ್ಲಿ ಶೇ. 18ರಷ್ಟು ಹೆಚ್ಚಿಸಿದೆ.
ವಿಜ್ಞಾನ ಮತ್ತು ವೈಜ್ಞಾನಿಕ ಪ್ರಯತ್ನಗಳು ನಿರಂತರ ಪ್ರಕ್ರಿಯೆಯಾಗಿದ್ದು, ಗಮನಾರ್ಹ ಪ್ರಯತ್ನಗಳು ಪರಿಕಲ್ಪನೆಯಿಂದ ಅನುವಾದ ಹಂತಕ್ಕೆ ಹೋಗುತ್ತವೆ. ನ್ಯಾನೋ ರಸಗೊಬ್ಬರಗಳು ಪ್ರಸ್ತುತ ನಡೆಯುತ್ತಿರುವ ತೀವ್ರ ಕೃಷಿ ಪದ್ಧತಿಗಳು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವ ವಿಷಯದಲ್ಲಿಅಪಾರ ಅವಕಾಶವನ್ನು ಒದಗಿಸುವ ರೀತಿಯಲ್ಲಿನವೀನವಾಗಿವೆ, ಇದು ಅಂತಿಮವಾಗಿ ದೀರ್ಘಾವಧಿಯಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಹಾನಿಗೊಳಿಸುತ್ತಿದೆ. ಆದ್ದರಿಂದ ನ್ಯಾನೋ ಯೂರಿಯಾದಂತಹ ನ್ಯಾನೋ ರಸಗೊಬ್ಬರಗಳನ್ನು ರಾಸಾಯನಿಕ ರಸಗೊಬ್ಬರಗಳ ಪೋಷಕಾಂಶಗಳ ಬಳಕೆಯ ದಕ್ಷತೆ (ಎನ್‌ಯುಇ) ಕ್ಷೀಣಿಸುತ್ತಿರುವ ದೃಷ್ಟಿಕೋನದಲ್ಲಿ ಮತ್ತು ರೈತರಿಗೆ ಲಭ್ಯವಾಗಬೇಕಾದ ಪರ್ಯಾಯ ಪರಿಹಾರಗಳ ದೃಷ್ಟಿಕೋನದಲ್ಲಿ ಸಮಗ್ರವಾಗಿ ನೋಡಲಾಗುತ್ತದೆ ಎಂಬುದು ವಿವೇಕಯುತವಾಗಿದೆ.
*****
(Release ID: 1856953)
Visitor Counter : 274