ಗೃಹ ವ್ಯವಹಾರಗಳ ಸಚಿವಾಲಯ
ಪದ್ಮ ಪ್ರಶಸ್ತಿಗಳು-2023ಗಳಿಗಾಗಿ ನಾಮನಿರ್ದೇಶನ ಅವಕಾಶ 15ನೇ ಸೆಪ್ಟೆಂಬರ್, 2022 ರವರೆಗೆ ತೆರೆದಿರುತ್ತವೆ
Posted On:
02 SEP 2022 6:22PM by PIB Bengaluru
2023ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿ 2023ಗಳಿಗಾಗಿ ಆನ್ಲೈನ್ ನಾಮನಿರ್ದೇಶನಗಳು/ ಶಿಫಾರಸುಗಳ ಅವಕಾಶ 1ನೇ ಮೇ 2022 ರಂದು ಮುಕ್ತವಾಗಿ ತೆರೆಯಲಾಗಿತ್ತು, ಹಾಗೂ ನಾಮನಿರ್ದೇಶನಕ್ಕೆ ಕೊನೆಯ ದಿನಾಂಕವು 15 ಸೆಪ್ಟೆಂಬರ್, 2022 ಆಗಿರುತ್ತದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ ಶಿಫಾರಸುಗಳು ರಾಷ್ಟ್ರೀಯ ಪುರಸ್ಕಾರದ ಜಾಲತಾಣ https://awards.gov.in ದಲ್ಲಿ ಕೇವಲ ಆನ್ಲೈನ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ.
ಪದ್ಮ ಪ್ರಶಸ್ತಿಗಳೆಂದರೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀಗಳು ಸೇರಿವೆ. 1954 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಪ್ರಶಸ್ತಿಯು 'ವಿಶಿಷ್ಟತೆಯ ಕೆಲಸವನ್ನು' ಗುರುತಿಸುತ್ತದೆ ಮತ್ತು ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಕಾರ್ಯ, ವಿಜ್ಞಾನ, ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿ ಎಲ್ಲಾ ಕ್ಷೇತ್ರಗಳು/ವಲಯಗಳಲ್ಲಿನ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು/ಸೇವೆಗಾಗಿ ನೀಡಲಾಗುತ್ತದೆ. ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು (ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ) ಪದ್ಮ ಪ್ರಶಸ್ತಿಗಳಿಗೆ ಅರ್ಹರಲ್ಲ.
ಪದ್ಮ ಪ್ರಶಸ್ತಿಗಳನ್ನು "ಜನರ ಪದ್ಮ" ವನ್ನಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಎಲ್ಲಾ ನಾಗರಿಕರು ಸ್ವಯಂ ನಾಮನಿರ್ದೇಶನ ಸೇರಿದಂತೆ ನಾಮನಿರ್ದೇಶನಗಳನ್ನು/ ಶಿಫಾರಸುಗಳನ್ನು ಮಾಡಲು ವಿನಂತಿಸಲಾಗಿದೆ. ಮಹಿಳೆಯರು, ಸಮಾಜದ ದುರ್ಬಲ ವರ್ಗಗಳು, ಎಸ್.ಸಿ. ಮತ್ತು ಎಸ್.ಟಿ.ಗಳು, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ ಅರ್ಹ ವ್ಯಕ್ತಿಗಳನ್ನು ಗುರುತಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬಹುದು.
ನಾಮನಿರ್ದೇಶನಗಳು/ ಶಿಫಾರಸುಗಳು ಮೇಲೆ ಹೇಳಿದ ಜಾಲತಾಣದಲ್ಲಿ ಲಭ್ಯವಿರುವ ಸ್ವರೂಪದಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸಂಬಂಧಿತ ವಿವರಗಳನ್ನು ಒಳಗೊಂಡಿರಬೇಕು, ನಿರೂಪಣೆಯ ರೂಪದಲ್ಲಿ (ಗರಿಷ್ಠ 800 ಪದಗಳು) ಉಲ್ಲೇಖವನ್ನು ಒಳಗೊಂಡಂತೆ, ಆಯಾ ಕ್ಷೇತ್ರ/ವಲಯಗಳಲ್ಲಿ ಅವರವರು ಶಿಫಾರಸು ಮಾಡಿದ ವ್ಯಕ್ತಿಯ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು/ಸೇವೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.
ಈ ಸಂಬಂಧದ ಸಂಪೂರ್ಣ ವಿವರಗಳು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ https://mha.gov.in ಜಾಲತಾಣದಲ್ಲಿ ಮತ್ತು ಪದ್ಮ ಪ್ರಶಸ್ತಿಗಳ ಜಾಲತಾಣ https://padmaawards.gov.in ದಲ್ಲಿ 'ಪ್ರಶಸ್ತಿಗಳು ಮತ್ತು ಪದಕಗಳು' ಶೀರ್ಷಿಕೆಯಡಿ ಲಭ್ಯವಿದೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳು https://padmaawards.gov.in/AboutAwards.aspx ಜಾಲತಾಣದ ಕೊಂಡಿಯಲ್ಲಿ ಲಭ್ಯವಿದೆ.
(Release ID: 1856562)
Visitor Counter : 243