ಸಂಪುಟ
azadi ka amrit mahotsav

ಜೀವವೈವಿಧ್ಯ ಸಂರಕ್ಷಣೆ ಕ್ಷೇತ್ರದಲ್ಲಿ ಭಾರತ ಮತ್ತು ನೇಪಾಳ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಂಪುಟ ಅನುಮೋದನೆ

Posted On: 31 AUG 2022 12:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಜೈವಿಕ ವೈವಿಧ್ಯ ಸಂರಕ್ಷಣೆ ಕುರಿತು ಸಮನ್ವಯವನ್ನು ಬಲಪಡಿಸುವ ಮತ್ತು ವೃದ್ಧಿಸುವ ಉದ್ದೇಶದಿಂದ ನೇಪಾಳ ಸರ್ಕಾರದೊಂದಿಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿದೆ. ಅರಣ್ಯಗಳು, ವನ್ಯಜೀವಿಗಳು, ಪರಿಸರ, ಜೀವವೈವಿಧ್ಯ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ಸಹಕಾರ, ರಹದಾರಿ (ಕಾರಿಡಾರ್‌) ಗಳ ಮರುಸ್ಥಾಪನೆ ಮತ್ತು ಪ್ರದೇಶಗಳನ್ನು ಪರಸ್ಪರ ಸಂಪರ್ಕಿಸುವುದು ಮತ್ತು ಎರಡೂ ದೇಶಗಳ ನಡುವೆ ಜ್ಞಾನ ಮತ್ತು ಉತ್ತಮ ಅಭ್ಯಾಸಕ್ರಮಗಳನ್ನು ಪರಸ್ಪರ ಹಂಚಿಕೊಳ್ಳುವುದು ಈ ತಿಳಿವಳಿಕೆ ಒಪ್ಪಂದದಲ್ಲಿ ಸೇರಿದ ಅಂಶಗಳಾಗಿವೆ.

 

 

 

ರಹದಾರಿ (ಕಾರಿಡಾರ್‌)ಗಳ ಮರುಸ್ಥಾಪನೆ ಮತ್ತು ಪರಸ್ಪರ ಕೊಂಡಿಯಾಗಿದ್ದು ಸಂಪರ್ಕದಲ್ಲಿರುವ ಪ್ರದೇಶಗಳು ಮತ್ತು ಜ್ಞಾನ ಮತ್ತು ಉತ್ತಮ ಅಭ್ಯಾಸಕ್ರಮಗಳನ್ನು ಹಂಚಿಕೊಳ್ಳುವುದು ಸೇರಿದಂತೆ ಅರಣ್ಯಗಳು, ವನ್ಯಜೀವಿಗಳು, ಪರಿಸರ, ಜೀವವೈವಿಧ್ಯ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರದಲ್ಲಿ ಉಭಯ ಪಕ್ಷಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಈ ತಿಳಿವಳಿಕೆ ಒಪ್ಪಂದವು ಸಹಾಯ ಮಾಡುತ್ತದೆ.

 

******


(Release ID: 1855845)