ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಎನ್ಎಫ್.ಡಿಬಿಯ 9ನೇ ಮಹಾ ಸಭೆಯಲ್ಲಿ "ಮತ್ಸ್ಯ ಸೇತು" ಆಪ್ ನಲ್ಲಿ ಆನ್ ಲೈನ್ ಮಾರ್ಕೆಟ್ ಪ್ಲೇಸ್ ವೈಶಿಷ್ಟ್ಯ "ಆಕ್ವಾ ಬಜಾರ್" ಅನ್ನು ಬಿಡುಗಡೆ ಮಾಡಿದ ಶ್ರೀ ಪುರುಷೋತ್ತಮ್ ರುಪಾಲ
Posted On:
19 AUG 2022 3:06PM by PIB Bengaluru
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪುರುಷೋತ್ತಮ್ ರುಪಾಲ ಅವರು ನಿನ್ನೆ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ 9ನೇ ಮಹಾ ಸಭೆಯಲ್ಲಿ "ಮತ್ಸ್ಯ ಸೇತು" ಮೊಬೈಲ್ ಅಪ್ಲಿಕೇಶನ್ ನಲ್ಲಿ "ಆಕ್ವಾ ಬಜಾರ್" ಎಂಬ ಆನ್ ಲೈನ್ ಮಾರ್ಕೆಟ್ ಪ್ಲೇಸ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್.ವೈ) ಮೂಲಕ ಹೈದರಾಬಾದ್ ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್ಎಫ್.ಡಿ.ಬಿ) ಧನಸಹಾಯ ಬೆಂಬಲದೊಂದಿಗೆ ಭುವನೇಶ್ವರದ ಐಸಿಎಆರ್- ಶುದ್ಧಜಲದಲ್ಲಿ ಮೀನುಗಾರಿಕೆ ಕುರಿತ ಕೇಂದ್ರೀಯ ಸಂಸ್ಥೆ (ಇನ್ಸ್ಟಿಟ್ಯೂಟ್ ಆಫ್ ಫ್ರೆಶ್ ವಾಟರ್ ಆಕ್ವಾಕಲ್ಚರ್ (ಐಸಿಎಆರ್-ಸಿಐಎಫ್ಎ) ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ. ಮೀನು ಮೊಟ್ಟೆಗಳು, ಮೇವು, ಔಷಧಿಗಳು, ಇತ್ಯಾದಿಗಳನ್ನು ಪಡೆಯಲು ಮೀನು ಕೃಷಿಕರು ಮತ್ತು ಬಾಧ್ಯಸ್ಥರಿಗೆ ಆನ್ ಲೈನ್ ಮಾರುಕಟ್ಟೆ ಸಹಾಯ ಮಾಡುತ್ತದೆ ಮತ್ತು ಮೀನು ಸಾಕಣೆಗೆ ಅಗತ್ಯವಿರುವ ಸೇವೆಗಳು ಮತ್ತು ರೈತರು ತಮ್ಮ ದೊಡ್ಡಗಾತ್ರದ ಮೀನುಗಳನ್ನು ಮಾರಾಟಕ್ಕಾಗಿ ಪಟ್ಟಿ ಮಾಡಬಹುದು. ಅಕ್ವಾಕಲ್ಚರ್ ವಲಯದ ಎಲ್ಲರನ್ನು ಸಂಪರ್ಕಿಸುವ ಗುರಿಯನ್ನು ಮಾರುಕಟ್ಟೆ ಹೊಂದಿದೆ.
ಸಭಿಕರನ್ನುದ್ದೇಶಿಸಿ ಮಾತನಾಡಿದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪುರುಷೋತ್ತಮ ರುಪಾಲ, ಮೀನು ಕೃಷಿಕರ ಸಾಮರ್ಥ್ಯ ವರ್ಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ರೈತರಿಗೆ ವ್ಯಾಪಕವಾದ ತರಬೇತಿ ಕೋರ್ಸ್ ಗಳನ್ನು ಆಯೋಜಿಸಬೇಕು ಮತ್ತು ಅವರಿಗೆ ಅದಕ್ಕೆ ತೆರೆದುಕೊಳ್ಳುವಂತಹ ಭೇಟಿಗಳನ್ನು ಆಯೋಜಿಸಬೇಕು ಎಂದರು.
ಪಶುಸಂಗೋಪನೆ, ಮೀನುಗಾರಿಕೆ ಖಾತೆ ರಾಜ್ಯ ಸಚಿವ ಶ್ರೀ ಎಲ್. ಮುರುಗನ್ ತಮ್ಮ ಭಾಷಣದಲ್ಲಿ, ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಸರ್ಕಾರವು ಮೊದಲ ಬಾರಿಗೆ ಉದ್ದೇಶಿತ ಮೀನು ಉತ್ಪಾದನೆಯ ಗುರಿಯನ್ನು ಸಾಧಿಸಲು ಉದ್ಯಮಿಗಳಿಂದ ನವೋದ್ಯಮವನ್ನು ಉತ್ತೇಜಿಸುವ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಪಶುಸಂಗೋಪನಾ ಖಾತೆ ರಾಜ್ಯ ಸಚಿವರಾದ ಶ್ರೀ ಸಂಜೀವ್ ಬಲ್ಯಾನ್, ದೇಶದಲ್ಲಿ ಹೆಚ್ಚುತ್ತಿರುವ ಮೀನಿನ ಬೇಡಿಕೆಯನ್ನು ಪೂರೈಸಲು ಹೊಸ ತಲೆಮಾರಿನ ಉದ್ಯಮಿಗಳು ಮುಂದೆ ಬರಬೇಕು ಎಂದು ಒತ್ತಿ ಹೇಳಿದರು.
ದೇಶದಲ್ಲಿ ಶುದ್ಧ ಜಲದ ಜಲಚರ ಸಾಕಣೆಯ ಯಶಸ್ಸು ಮತ್ತು ಅಭಿವೃದ್ಧಿಗೆ ಸೂಕ್ತವಾದ ಸ್ಥಳದಲ್ಲಿ ಗುಣಮಟ್ಟದ ಒಳಹರಿವುಗಳ ಸಕಾಲಿಕ ಲಭ್ಯತೆಯ ಬಗ್ಗೆ ವಿಶ್ವಾಸಾರ್ಹ ಮಾಹಿತಿಯು ಬಹಳ ನಿರ್ಣಾಯಕವಾಗಿದೆ. ಕೆಲವೊಮ್ಮೆ, ಮೀನು ಕೃಷಿಕರು ಕೃಷಿ ಋತುವಿನಲ್ಲಿ ಮೀನು ಮರಿಗಳು, ಮೇವು, ಆಹಾರ ಪದಾರ್ಥಗಳು, ರಸಗೊಬ್ಬರಗಳು, ನ್ಯೂಟ್ರಾಸ್ಯೂಟಿಕಲ್ಸ್, ಸೇರ್ಪಡೆಗಳು, ಔಷಧಿಗಳು, ಇತ್ಯಾದಿಗಳಂತಹ ನಿರ್ಣಾಯಕ, ಗುಣಮಟ್ಟದ ವಸ್ತುಗಳನ್ನು ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಆಧಾನಗಳನ್ನು ಪಡೆಯುವಲ್ಲಿ ಯಾವುದೇ ವಿಳಂಬ ಅವರ ಮೀನು ಸಾಕಣೆ ಕಾರ್ಯಾಚರಣೆಯ ಉತ್ಪಾದಕತೆಯಲ್ಲಿ ಗಮನಾರ್ಹ ಪರಿಣಾಮಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ, ರೈತರು ಕೃಷಿ ನಿರ್ಮಾಣ, ಬಾಡಿಗೆ ಸೇವೆಗಳು, ಕಟಾವು ಮಾಡಲು ಮಾನವಶಕ್ತಿ ಮುಂತಾದ ಸೇವೆಗಳ ಬಗ್ಗೆ ನೋಡಬೇಕಾಗುತ್ತದೆ. ಅಂತೆಯೇ, ಕೆಲವು ಸಮಯಗಳಲ್ಲಿ, ಮೀನು ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತೊಂದರೆಗಳನ್ನು ಅನುಭವಿಸುತ್ತಾರೆ ಅಥವಾ ಅವರು ತಾವು ಉತ್ಪಾದಿಸಿದ ಮೀನುಗಳನ್ನು ಖರೀದಿಸಲು ಸೀಮಿತ ಸಂಖ್ಯೆಯ ಖರೀದಿದಾರರು / ಏಜೆಂಟರನ್ನು ಮಾತ್ರ ಅವಲಂಬಿಸುತ್ತಾರೆ.
ಈ ಸಮಸ್ಯೆಯನ್ನು ಪರಿಹರಿಸಲು, ಐಸಿಎಆರ್-ಸಿಐಎಫ್ಎ ಮತ್ತು ಎನ್ಎಫ್.ಡಿಬಿ ಎಲ್ಲಾ ಬಾಧ್ಯಸ್ಥರನ್ನು ಒಂದೇ ವೇದಿಕೆಗೆ ತರಲು ಈ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಿವೆ. ಈ ವೇದಿಕೆ ಮೂಲಕ, ಯಾವುದೇ ನೋಂದಾಯಿತ ಮಾರಾಟಗಾರನು ತಮ್ಮ ಆಧಾನ ಸಾಮಗ್ರಿಗಳನ್ನು ಪಟ್ಟಿ ಮಾಡಬಹುದು. ಆ್ಯಪ್ ಬಳಕೆದಾರರಿಗೆ ಭೌಗೋಳಿಕ ಸಾಮೀಪ್ಯದ ಆಧಾರದ ಮೇಲೆ ಪಟ್ಟಿ ಮಾಡಲಾದ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಪ್ರದರ್ಶಿಸಲಾಗುತ್ತದೆ. ಪಟ್ಟಿಗಳನ್ನು ಈ ಕೆಳಗಿನ ಪ್ರಮುಖ ವರ್ಗಗಳಾಗಿ; ಮೀನಿನ ಮರಿಗಳು, ಆಧಾನ ಸಾಮಗ್ರಿಗಳು, ಸೇವೆಗಳು, ಉದ್ಯೋಗಗಳು ಮತ್ತು ಟೇಬಲ್ ಮೀನು ಎಂದು ವರ್ಗೀಕರಿಸಲಾಗುತ್ತದೆ. ಪ್ರತಿ ಪಟ್ಟಿಯು ಉತ್ಪನ್ನ, ಬೆಲೆ, ಲಭ್ಯವಿರುವ ಪ್ರಮಾಣ, ಪೂರೈಕೆ ಪ್ರದೇಶ, ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಮಾರಾಟಗಾರರ ಸಂಪರ್ಕ ವಿವರಗಳ ಸಹಿತ ಒಳಗೊಂಡಿರುತ್ತದೆ. ಅಗತ್ಯವಿರುವ ರೈತರು / ಬಾಧ್ಯಸ್ಥರು ಮಾರಾಟಗಾರರನ್ನು ಸಂಪರ್ಕಿಸಬಹುದು ಮತ್ತು ಅವರ ದಾಸ್ತಾನುಗಳನ್ನು ಪೂರೈಸಬಹುದು.
ಈ ವೈಶಿಷ್ಟ್ಯವು ಮೀನು ಕೃಷಿಕರಿಗೆ ತಾವು ಬೆಳೆದ ಟೇಬಲ್-ಗಾತ್ರದ ಮೀನು / ಮೀನು ಮರಿಗಳನ್ನು ಮಾರಾಟಕ್ಕೆ ಪಟ್ಟಿ ಮಾಡಲು ಅನುವು ಮಾಡಿಕೊಡುತ್ತದೆ, ಬೆಲೆ ಕೊಡುಗೆಯೊಂದಿಗೆ ಲಭ್ಯತೆಯ ದಿನಾಂಕವನ್ನು ಸೂಚಿಸುವ ಆಯ್ಕೆಯೊಂದಿಗೆ. ಆಸಕ್ತ ಮೀನು ಖರೀದಿದಾರರು ರೈತರನ್ನು ಸಂಪರ್ಕಿಸಿ ಅವರ ಬೆಲೆಗಳನ್ನು ನೀಡುತ್ತಾರೆ. ಮೀನುಗಳನ್ನು ಸಂಗ್ರಹಿಸುವ ಖರೀದಿದಾರರು ಅಥವಾ ಖರೀದಿದಾರರ ಏಜೆಂಟರಿಂದ ಹೆಚ್ಚಿನ ವ್ಯಾಪಾರ ವಿಚಾರಣೆಗಳನ್ನು ಪಡೆಯಲು ಇದು ಖಂಡಿತವಾಗಿಯೂ ರೈತರಿಗೆ ನೆರವಾಗುತ್ತದೆ, ಇದು ಮಾರುಕಟ್ಟೆ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ರೈತರ ಉತ್ಪನ್ನಗಳ ಉತ್ತಮ ಬೆಲೆ ಸಾಕ್ಷಾತ್ಕಾರಕ್ಕೂ ದಾರಿ ಮಾಡಿಕೊಡುತ್ತದೆ.
ನೀತಿಯೋಗದ ಸದಸ್ಯ ಡಾ. ರಮೇಶ್ ಚಂದ್, ವಿವಿಧ ರಾಜ್ಯ ಸರ್ಕಾರಗಳ ಮೀನುಗಾರಿಕಾ ಸಚಿವರುಗಳು, ಕೇಂದ್ರ ಸಚಿವಾಲಯಗಳ ಅನೇಕ ಕಾರ್ಯದರ್ಶಿಗಳು, ಐಸಿಎಆರ್ ನ ಉಪ ಮಹಾನಿರ್ದೇಶಕ (ಮೀನುಗಾರಿಕೆ) ಡಾ.ಜೆ.ಕೆ.ಜೆನಾ, ಭಾರತ ಸರ್ಕಾರದ ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಜೆ.ಎನ್.ಸ್ವೈನ್, ಮಹಾಸಭೆಯ ಸದಸ್ಯರು ಮತ್ತು ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
**********
(Release ID: 1853171)
Visitor Counter : 217