ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ದೇಶದಲ್ಲಿ ಆಹಾರ ಧಾನ್ಯಗಳ ಶೇಖರಣಾ ಮೂಲಸೌಕರ್ಯವನ್ನು ಆಧುನೀಕರಿಸುವತ್ತ ಕೇಂದ್ರದ ಹೆಜ್ಜೆ
ಹಬ್ ಮತ್ತು ಸ್ಪೋಕ್ ಮಾಡೆಲ್ ಅಡಿಯಲ್ಲಿ ಡಿಬಿಎಫ್ಒಟಿ ಟೆಂಡರ್ ನ ತಾಂತ್ರಿಕ ಬಿಡ್ ಗಳಲ್ಲಿ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದ 14 ಸ್ಥಳಗಳನ್ನು ಒಳಗೊಂಡ 4 ಬಂಡಲ್ ಗಳಿಗೆ ಪ್ರತಿಯಾಗಿ 38 ಬಿಡ್ ಗಳನ್ನು ಸ್ವೀಕರಿಸಲಾಗಿದೆ
ಒಟ್ಟು 15 ಸಂಭಾವ್ಯ ಭಾಗಿದಾರರು ತಮ್ಮ ಆಸಕ್ತಿಯನ್ನು ತೋರಿಸಿದ್ದು, ತಮ್ಮ ಬಿಡ್ ಗಳನ್ನು ಸಲ್ಲಿಸಿದ್ದಾರೆ
ದೇಶಾದ್ಯಂತ 249 ಸ್ಥಳಗಳಲ್ಲಿ 111.125 ಲಕ್ಷ ಮೆಟ್ರಿಕ್ ಟನ್ ಹಬ್ ಮತ್ತು ಸ್ಪೋಕ್ ಮಾಡೆಲ್ ಕಣಜಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರದ ಪ್ರಸ್ತಾಪ
ಹಬ್ ಮತ್ತು ಸ್ಪೋಕ್ ಮಾಡೆಲ್ ಎಂಬುದು ಒಂದು ಸಾರಿಗೆ ವ್ಯವಸ್ಥೆಯಾಗಿದ್ದು, ಇದು "ಸ್ಪೋಕ್" ಎಂದು ಕರೆಯಲಾಗುವ ಸ್ವತಂತ್ರ ಸ್ಥಳಗಳಿಂದ ಸಾರಿಗೆ ಸ್ವತ್ತುಗಳನ್ನು ದೂರದ ಸ್ಥಳದ ಸಾಗಣೆಗಾಗಿ "ಹಬ್" ಎಂದು ಕರೆಯಲಾಗುವ ಕೇಂದ್ರ ಸ್ಥಳಕ್ಕೆ ಕ್ರೋಡೀಕರಿಸುತ್ತದೆ
Posted On:
16 AUG 2022 4:45PM by PIB Bengaluru
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (ಡಿಎಫ್.ಪಿಡಿ) ಹಬ್ ಮತ್ತು ಸ್ಪೋಕ್ ಮಾದರಿ ಅಡಿಯಲ್ಲಿ ವಿನ್ಯಾಸ, ನಿರ್ಮಾಣ, ನಿಧಿ, ಸ್ವಾಧೀನ ಮತ್ತು ಕಾರ್ಯಾಚರಣೆ (ಡಿಬಿಎಫ್ಒಟಿ) ಟೆಂಡರ್ ನ ತಾಂತ್ರಿಕ ಬಿಡ್ ಗಳಿಗೆ ಅಭೂತಪೂರ್ವ ಸ್ಪಂದನೆ ಪಡೆದಿದೆ. ದೇಶದಲ್ಲಿ ಆಹಾರ ಧಾನ್ಯಗಳ ಶೇಖರಣಾ ಮೂಲಸೌಕರ್ಯದ ಆಧುನೀಕರಣವನ್ನು ಗಣನೆಗೆ ತೆಗೆದುಕೊಂಡು, ದೇಶಾದ್ಯಂತ ಧಾನ್ಯ ಕಣಜಗಳ ಅಭಿವೃದ್ಧಿಗಾಗಿ ಹೊಸ ಮಾದರಿಯನ್ನು ಅಂದರೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಹಬ್ ಮತ್ತು ಸ್ಪೋಕ್ ಮಾದರಿಯನ್ನು ಪ್ರಸ್ತಾಪಿಸಲಾಗಿದೆ.
ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದ 14 ಸ್ಥಳಗಳನ್ನು ಒಳಗೊಂಡ 4 ಬಂಡಲ್ ಗಳಿಗೆ ಪ್ರತಿಯಾಗಿ ಒಟ್ಟು 38 ಬಿಡ್ ಗಳನ್ನು ಸ್ವೀಕರಿಸಲಾಗಿದೆ. ಒಟ್ಟು 15 ಸಂಭಾವ್ಯ ಭಾಗಿದಾರರು ತಮ್ಮ ಆಸಕ್ತಿಯನ್ನು ತೋರಿಸಿದ್ದು, ತಮ್ಮ ಬಿಡ್ ಗಳನ್ನು ಸಲ್ಲಿಸಿದ್ದಾರೆ. ತಾಂತ್ರಿಕ ಮೌಲ್ಯಮಾಪನವು 3-4 ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಹಬ್ ಮತ್ತು ಸ್ಪೋಕ್ ಮಾಡೆಲ್ ಎಂಬುದು ಒಂದು ಸಾಗಣೆ ವ್ಯವಸ್ಥೆಯಾಗಿದ್ದು, ಇದು "ಸ್ಪೋಕ್" ಎಂದು ಕರೆಯಲಾಗುವ ಸ್ವತಂತ್ರ ಸ್ಥಳಗಳಿಂದ ಸಾಗಣೆಯ ಸ್ವತ್ತುಗಳನ್ನು ದೂರದ ಸ್ಥಳದ ಸಾಗಣೆಗಾಗಿ "ಹಬ್" ಎಂದು ಹೆಸರಿಸಲಾದ ಕೇಂದ್ರ ಸ್ಥಳಕ್ಕೆ ಕ್ರೋಡೀಕರಿಸುತ್ತದೆ. ಹಬ್ ಗಳು ಮೀಸಲಾದ ರೈಲ್ವೆ ಸೈಡಿಂಗ್ ಮತ್ತು ಕಂಟೈನರ್ ಡಿಪೋ ಸೌಲಭ್ಯವನ್ನು ಹೊಂದಿದ್ದರೆ, ಸ್ಪೋಕ್ ನಿಂದ ಹಬ್ ಗೆ ಸಾರಿಗೆಯನ್ನು ರಸ್ತೆ ಮೂಲಕ ಮತ್ತು ಹಬ್ ನಿಂದ ಹಬ್ ವೈ ರೈಲ್ ಗೆ ಕೈಗೊಳ್ಳಲಾಗುತ್ತದೆ. ಈ ಮಾದರಿಯು ರೈಲ್ವೆ ಕಡೆಯ ದಕ್ಷತೆಯನ್ನು ಬಳಸಿಕೊಳ್ಳುವ ಮೂಲಕ, ಬೃಹತ್ ಸಂಗ್ರಹಣೆ ಮತ್ತು ಚಲನೆಯ ಮೂಲಕ ವೆಚ್ಚ ದಕ್ಷತೆಯನ್ನು ಉತ್ತೇಜಿಸುತ್ತದೆ, ನಿರ್ವಹಣೆ ಮತ್ತು ಸಾಗಣೆಯ ವೆಚ್ಚ ಮತ್ತು ಸಮಯವನ್ನು ತಗ್ಗಿಸುತ್ತದೆ ಮತ್ತು ದೇಶದಲ್ಲಿ ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯ ಜೊತೆಗೆ ಕಾರ್ಯಾಚರಣೆಯ ಸಂಕೀರ್ಣತೆಗಳನ್ನು ಸರಳೀಕರಿಸುತ್ತದೆ. ಇದಲ್ಲದೆ, ಕಣಜಗಳನ್ನು ಉಪ ಮಂಡಿ ಯಾರ್ಡ್ ಎಂದು ಘೋಷಿಸಲಾಗುತ್ತದೆ, ಇದು ರೈತರಿಗೆ ಖರೀದಿಯನ್ನು ಸುಗಮಗೊಳಿಸುತ್ತದೆ ಮತ್ತು ಸಾಗಣೆ ವೆಚ್ಚವನ್ನು ತಗ್ಗಿಸಲು ಕಾರಣವಾಗುತ್ತದೆ.
ಹಬ್ ಮತ್ತು ಸ್ಪೋಕ್ ಮಾಡೆಲ್ ಅಡಿಯಲ್ಲಿ, ಇಲಾಖೆಯು ದೇಶಾದ್ಯಂತ 111.125 ಲಕ್ಷ ಮೆಟ್ರಿಕ್ ಟನ್ ಹಬ್ ಮತ್ತು ಸ್ಪೋಕ್ ಮಾದರಿ ಕಣಜಗಳ ಸಾಮರ್ಥ್ಯವನ್ನು 249 ಸ್ಥಳಗಳಲ್ಲಿ ಅಭಿವೃದ್ಧಿಪಡಿಸಲು ವಿನ್ಯಾಸ, ನಿರ್ಮಾಣ, ನಿಧಿ, ಸ್ವಾಧೀನ ಮತ್ತು ವರ್ಗಾವಣೆ (ಡಿಬಿಎಫ್ಒಟಿ) (ಎಫ್.ಸಿ.ಐನ ಭೂಮಿ) ಮತ್ತು ವಿನ್ಯಾಸ, ನಿರ್ಮಾಣ, ನಿಧಿ, ಸ್ವಾಧೀನ ಮತ್ತು ಕಾರ್ಯಾಚರಣೆ (ಡಿಬಿಎಫ್ಒಓ) (ರಿಯಾಯಿತಿಯ / ಇತರ ಏಜೆನ್ಸಿಯ ಭೂಮಿ) ವಿಧಾನದ ಅಡಿಯಲ್ಲಿ, ಜಾರಿ ಸಂಸ್ಥೆ ಅಂದರೆ ಭಾರತೀಯ ಆಹಾರ ನಿಗಮ (ಎಫ್.ಸಿ.ಐ.) ಮೂಲಕ ಪ್ರಸ್ತಾಪಿಸಿದೆ.
26,04,2022 ರಂದು ಡಿಬಿಎಫ್ಒಟಿ ಮಾದರಿಯಲ್ಲಿ 14 ಸ್ಥಳಗಳಲ್ಲಿ (10.125) ಮತ್ತು 21,06,2022 ರಂದು ಡಿಬಿಎಫ್ಒ ಮಾದರಿಯಲ್ಲಿ 66 ಸ್ಥಳಗಳಿಗೆ (24.75 ಎಲ್ಎಂಟಿ) ಕಣಜಗಳನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ.
********
*********
(Release ID: 1852302)
Visitor Counter : 165