ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ನ್ಯಾಯಯುತವಲ್ಲದ ವ್ಯಾಪಾರ ಪದ್ದತಿ ಅನುಸರಿಸಿದ ಇ-ವಾಣಿಜ್ಯ ಕಂಪನಿಗಳ ವಿರುದ್ಧ 24 ನೋಟಿಸ್ ಜಾರಿಗೊಳಿಸಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)


ಭಾರತೀಯ ಮಾನಕ ಬ್ಯೂರೋ ಮಾನದಂಡಕ್ಕೆ ಅನುಗುಣವಾಗಿಲ್ಲದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವವರ ವಿರುದ್ಧ ಗ್ರಾಹಕರಿಗೆ ಎಚ್ಚರಿಕೆ ನೀಡಲು ಮತ್ತು ಸುರಕ್ಷತೆ ಕಾಯ್ದುಕೊಳ್ಳಲು ಎರಡು ಎಚ್ಚರಿಕೆ ನೋಟಿಸ್ ಜಾರಿಗೊಳಿಸಿದ ಸಿಸಿಪಿಎ

Posted On: 03 AUG 2022 3:58PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ನಿಯಮಗಳ ಅಡಿಯಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅನ್ನು24.07.2020 ರಿಂದ ಅನ್ವಯವಾಗುವಂತೆ ಸ್ಥಾಪಿಸಲಾಗಿದ್ದು, ಅದು ಸಾರ್ವಜನಿಕ ಮತ್ತು ಗ್ರಾಹಕರ ಹಿತಾಸಕ್ತಿಗಳಿಗೆ ಧಕ್ಕೆಯುಂಟುಮಾಡುವ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿಯಂತ್ರಿಸಲಿದೆ ಎಂದರು.

ತಪ್ಪುದಾರಿಗೆಳೆಯುವ ಜಾಹೀರಾತುಗಳ ನಿಯಂತ್ರಿಸುವುದು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಅನುಮೋದನೆ ನೀಡದಿರುವ ಕುರಿತ ಮಾರ್ಗಸೂಚಿಗಳ ಕುರಿತು ಸಿಸಿಪಿಎ ಅಧಿಸೂಚನೆ ಹೊರಡಿಸಿದೆ. ಆ ಮಾರ್ಗಸೂಚಿಗಳೆಂದರೆ (ಎ) ದಾರಿತಪ್ಪಿಸದ ಜಾಹೀರಾತು ಮತ್ತು ಅದನ್ನು ಪ್ರಮಾಣೀಕರಿಸಲು ಷರತ್ತುಗಳು; (ಬಿ) ಹಿಂಸಾಚಾರದ ಜಾಹೀರಾತುಗಳು ಮತ್ತು ಉಚಿತ ಕ್ಲೈಮ್ ಜಾಹೀರಾತುಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳು; ಮತ್ತು, (ಸಿ) ಬದಲಿ ಜಾಹೀರಾತುಗಳ ನಿಷೇಧ.

ಗ್ರಾಹಕ ವ್ಯವಹಾರಗಳ ಇಲಾಖೆಯು ಇ-ವಾಣಿಜ್ಯದಲ್ಲಿ ನಕಲಿ ಮತ್ತು ಮೋಸ ಮಾಡುವ ವಿಮರ್ಶೆಗಳನ್ನು ಪರಿಶೀಲಿಸುವ ನೀತಿಯನ್ನು ಅಭಿವೃದ್ಧಿಪಡಿಸಲು ಸಮಿತಿಯನ್ನೂ ಕೂಡ ರಚಿಸಿದೆ.

ಇ-ಕಾಮರ್ಸ್ ಕಂಪನಿಗಳ ವಿರುದ್ಧ ನ್ಯಾಯಯುತವಲ್ಲದ ವ್ಯಾಪಾರ ಪದ್ದತಿಗಳಿಗಾಗಿ ಸಿಸಿಪಿಎ 24 ನೋಟಿಸ್ ಗಳನ್ನು ನೀಡಿದೆ ಮತ್ತು ಭಾರತೀಯ ಮಾನಕ ಬ್ಯೂರೋದ ಮಾನದಂಡಗಳಿಗೆ ಅನುಗುಣವಾಗಿಲ್ಲದ ಪ್ರೆಶರ್ ಕುಕ್ಕರ್‌ಗಳು, ಹೆಲ್ಮೆಟ್‌ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವುದರ ವಿರುದ್ಧ ಗ್ರಾಹಕರನ್ನು ಎಚ್ಚರಿಸಲು ಮತ್ತು ಜಾಗೃತಿ ಮೂಡಿಸಲು ಎರಡು ಸುರಕ್ಷತಾ ನೋಟಿಸ್ ಗಳನ್ನು ನೀಡಿದೆ.

 

********



(Release ID: 1848016) Visitor Counter : 87


Read this release in: English , Urdu , Gujarati , Kannada