ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ (ಒಎನ್‌ಒಆರ್‌ಸಿ) ಯಲ್ಲಿ77 ಕೋಟಿಗೂ ಹೆಚ್ಚು ಪೋರ್ಟಬಲ್‌ ವಹಿವಾಟುಗಳು ದಾಖಲಾಗಿವೆ.


ತಿಂಗಳಿಗೆ ಸುಮಾರು 3 ಕೋಟಿ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸುವ ಒಎನ್‌ಒಆರ್‌ಸಿ ಯ ಪ್ರಯೋಜನವನ್ನು 80 ಕೋಟಿ ಫಲಾನುಭವಿಗಳು ಪಡೆಯುತ್ತಾರೆ

ಮುಂದಿನ ವಾರ ಯಶಸ್ವಿ ಅನುಷ್ಠಾನದ 3 ವರ್ಷಗಳನ್ನು ಪೂರ್ಣಗೊಳಿಸುವ ಯೋಜನೆ

Posted On: 02 AUG 2022 3:42PM by PIB Bengaluru

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು 2019 ರ ಆಗಸ್ಟ್‌ 9 ರಂದು ನಾಲ್ಕು ರಾಜ್ಯಗಳಲ್ಲಿಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾದ ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಒಎನ್‌ಒಆರ್‌ಸಿ) ಯೋಜನೆಯನ್ನು ಆಚರಿಸಲು ಒಂದು ವಾರದ ಚಟುವಟಿಕೆಗಳನ್ನು ಆಚರಿಸುತ್ತಿದೆ.

 

ಪೋರ್ಟಬಿಲಿಟಿ ವಹಿವಾಟುಗಳ ಕಾರ್ಯನಿರ್ವಹಣೆ

 

2019ರಿಂದ ಆಗಸ್ಟ್‌ವರೆಗಿನ ವಹಿವಾಟುಗಳು ಎನ್‌ಎಫ್‌ಎಸ್‌ಎ ವಹಿವಾಟುಗಳು ಶೇ.60 ಸರಾಸರಿ ಮಾಸಿಕ ಪೋರ್ಟಬಲ್‌ ವಹಿವಾಟುಗಳು

 

2019ರಿಂದ ಆಗಸ್ಟ್‌ವರೆಗಿನ ವಹಿವಾಟುಗಳು ಎನ್‌ಎಫ್‌ಎಸ್‌ಎ ವಹಿವಾಟುಗಳು ಶೇ.60 ಸರಾಸರಿ ಮಾಸಿಕ ಪೋರ್ಟಬಲ್‌ ವಹಿವಾಟುಗಳು

 

77.5 ಕೋಟಿ ರೂ. ಪಿಎಂಜಿಕೆಎವೈ ವಹಿವಾಟುಗಳು ಶೇ. 40 3.5 ಕೋಟಿ ರೂ. (ಕಳೆದ 6 ತಿಂಗಳಲ್ಲಿ)

ಕೋವಿಡ್‌ ಅವಧಿ ವೇಳೆಯ ವಹಿವಾಟುಗಳು ಆಹಾರ ಧಾನ್ಯಗಳ ಒಟ್ಟು ವಿತರಣೆ ವೆಚ್ಚ ಮಾಡಲಾದ ಒಟ್ಟು ಸಬ್ಸಿಡಿ

70 ಕೋಟಿ ರೂ. 144 ಎಲ್‌ಎಂಟಿ 43,000 ಕೋಟಿ ರೂ.

 

ಒಎನ್‌ಒಆರ್‌ಸಿ ತಂತ್ರಜ್ಞಾನ ಚಾಲಿತ ಯೋಜನೆಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿರಾಷ್ಟ್ರವ್ಯಾಪಿ ಪಡಿತರ ಚೀಟಿಗಳ ಪೋರ್ಟಬಿಲಿಟಿಗಾಗಿ ಕೇಂದ್ರ ಸರ್ಕಾರವು ಇದನ್ನು ಜಾರಿಗೆ ತರುತ್ತಿದೆ. ಈ ವ್ಯವಸ್ಥೆಯು ಎಲ್ಲಾ ಎನ್‌ಎಫ್‌ಎಸ್‌ಎ ಫಲಾನುಭವಿಗಳಿಗೆ, ವಿಶೇಷವಾಗಿ ವಲಸೆ ಫಲಾನುಭವಿಗಳು, ಬಯೋಮೆಟ್ರಿಕ್‌ / ಆಧಾರ್‌ ದೃಢೀಕರಣದೊಂದಿಗೆ ಅಸ್ತಿತ್ವದಲ್ಲಿರುವ ಪಡಿತರ ಚೀಟಿಯ ಮೂಲಕ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ (ಎಫ್‌ಪಿಎಸ್‌) ತಮ್ಮ ಅರ್ಹ ಆಹಾರ ಧಾನ್ಯಗಳ ಪೂರ್ಣ ಅಥವಾ ಭಾಗವನ್ನು ತಡೆರಹಿತ ರೀತಿಯಲ್ಲಿಪಡೆಯಲು ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯು ಅವರ ಕುಟುಂಬ ಸದಸ್ಯರಿಗೆ, ಯಾವುದಾದರೂ ಇದ್ದರೆ, ಅದೇ ಪಡಿತರ ಚೀಟಿಯಲ್ಲಿಉಳಿದ ಆಹಾರ ಧಾನ್ಯಗಳನ್ನು ಪಡೆಯಲು ಅನುಮತಿಸುತ್ತದೆ.

​​​​​​

2019 ರ ಆಗಸ್ಟ್‌ 9 ರಂದು ಪ್ರಾರಂಭವಾದಾಗಿನಿಂದ, ಅತ್ಯಂತ ಕಡಿಮೆ ಅವಧಿಯಲ್ಲಿ, ಇದು ಈಗ ದೇಶಾದ್ಯಂತ ಎಲ್ಲಾ 36 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿಜಾರಿಗೆ ಬಂದಿದೆ. ಜಾರಿಗೆ ಬಂದ ಕೊನೆಯ ರಾಜ್ಯವಾದ ಅಸ್ಸಾಂ, 2022ರ ಜೂನ್‌ನಲ್ಲಿಈ ಯೋಜನೆಯನ್ನು ಸೇರಿಕೊಂಡಿತು ಮತ್ತು ಆ ಮೂಲಕ ಯೋಜನೆಯನ್ನು ಪ್ಯಾನ್‌-ಇಂಡಿಯಾ ಅನುಷ್ಠಾನವನ್ನು ಪೂರ್ಣಗೊಳಿಸಿತು. ಆಹಾರ ಭದ್ರತೆಯನ್ನು ಈಗ ದೇಶಾದ್ಯಂತ ಪೋರ್ಟಬಲ್‌ ಮಾಡಲಾಗಿದೆ. ಈ ಯೋಜನೆಯು ದೇಶದಲ್ಲಿನಾಗರಿಕ ಕೇಂದ್ರಿತ ಉಪಕ್ರಮವಾಗಿದೆ. ಪ್ರಸ್ತುತ, ಈ ವ್ಯವಸ್ಥೆಯು ಬಹುತೇಕ ಎಲ್ಲಾ (80 ಕೋಟಿ) ಎನ್‌ಎಫ್‌ಎಸ್‌ಎ ಫಲಾನುಭವಿಗಳನ್ನು (ಬಹುತೇಕ ಸಂಪೂರ್ಣ ಎನ್‌ಎಫ್‌ಎಸ್‌ಎ ಜನಸಂಖ್ಯೆ) ಒಳಗೊಂಡಿದೆ. ಇದಲ್ಲದೆ, ಈ ಯೋಜನೆಯಡಿ ತಿಂಗಳಿಗೆ ಸರಾಸರಿ 3 ಕೋಟಿ ಪೋರ್ಟಬಿಲಿಟಿ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ.

ಈ ಫಲಾನುಭವಿ ಕೇಂದ್ರಿತ ಹೈ-ಇಂಪ್ಯಾಕ್ಟ್ ಕಾರ್ಯಕ್ರಮದ ಉದ್ದೇಶವೆಂದರೆ ಎಲ್ಲಾ ಎನ್‌ಎಫ್‌ಎಸ್‌ಎ ಫಲಾನುಭವಿಗಳನ್ನು ದೇಶದ ಯಾವುದೇ ಭಾಗದಲ್ಲಿಅವರ ಆಹಾರ ಭದ್ರತೆಗಾಗಿ ಆತ್ಮ ನಿರ್ಭರ್‌ ಆಗಲು ಸಶಕ್ತಗೊಳಿಸುವುದಾಗಿದೆ. ಈ ಯೋಜನೆಯು ಕೋವಿಡ್‌ -19 ಸಾಂಕ್ರಾಮಿಕ ರೋಗದ ಸಮಯದಲ್ಲಿಪ್ರತಿಯೊಬ್ಬ ಎನ್‌ಎಫ್‌ಎಸ್‌ಎ ಫಲಾನುಭವಿಗೆ, ವಿಶೇಷವಾಗಿ ವಲಸೆ ಫಲಾನುಭವಿಗೆ ಅದ್ಭುತ ಮೌಲ್ಯವರ್ಧಿತ ಸೇವೆ ಎಂದು ಸಾಬೀತಾಗಿದೆ. ಇದು ಲಾಕ್‌ಡೌನ್‌ / ಬಿಕ್ಕಟ್ಟಿನ ಅವಧಿಯಲ್ಲಿಯಾವುದೇ ಸ್ಥಳದಿಂದ ನಮ್ಯತೆಯೊಂದಿಗೆ ಸಬ್ಸಿಡಿ ಆಹಾರ ಧಾನ್ಯಗಳ ಪ್ರಯೋಜನವನ್ನು ಪಡೆಯಲು ಅವರಿಗೆ ಅನುಕೂಲ ಮಾಡಿಕೊಟ್ಟಿತು. ಪ್ರಾರಂಭವಾದಾಗಿನಿಂದ (2019ರ ಆಗಸ್ಟ್‌ ನಲ್ಲಿ), ಒಎನ್‌ಒಆರ್‌ಸಿ ಅಡಿಯಲ್ಲಿಸುಮಾರು 77.88 ಕೋಟಿ ಪೋರ್ಟಬಲ್‌ ವಹಿವಾಟುಗಳು ನಡೆದಿವೆ.

 

ಒ.ಎನ್‌.ಒ.ಆರ್‌.ಸಿ.ಯ ಪ್ರಯೋಜನಗಳ ಬಗ್ಗೆ ಫಲಾನುಭವಿಗೆ ಅರಿವು ಮೂಡಿಸಲು, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿತೀವ್ರವಾದ ಜಾಗೃತಿ ಮೂಡಿಸುವ ಅಭಿಯಾನವನ್ನು ಸಹ ನಡೆಸಲಾಯಿತು.

 

ಎಲ್ಲಾ ಎನ್‌ಎಫ್‌ಎಸ್‌ ಎ ಫಲಾನುಭವಿಗಳ ಅನುಕೂಲಕ್ಕಾಗಿ ಒಎನ್‌ಒಆರ್‌ಸಿ ನಮ್ಮ ಪಡಿತರದಲ್ಲಿವಿಶೇಷವಾಗಿ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಿದ ಆಂಡ್ರಾಯ್ಡ… ಮೊಬೈಲ್‌ ಅಪ್ಲಿಕೇಶನ್‌ಅನ್ನು ಸಹ ಪ್ರಾರಂಭಿಸಲಾಗಿದೆ. ಈ ಅಪ್ಲಿಕೇಶನ್‌ ಬಹು ಕ್ರಿಯಾತ್ಮಕತೆಯನ್ನು ಒದಗಿಸುತ್ತದೆ ಮತ್ತು ನಿರ್ದಿಷ್ಟವಾಗಿ ವಲಸಿಗ ಎನ್‌ಎಫ್‌ಎಸ್‌ಎ ಫಲಾನುಭವಿಗಳಿಗೆ ಪಡಿತರದ ಪೋರ್ಟಬಿಲಿಟಿಯನ್ನು ಸುಲಭಗೊಳಿಸುತ್ತದೆ. ಇದಲ್ಲದೆ, ಅಪ್ಲಿಕೇಶನ್‌ ಈಗ 13 ಭಾಷೆಗಳಲ್ಲಿಲಭ್ಯವಿದೆ.

ಇದಲ್ಲದೆ, ಒಎನ್‌ಒಆರ್‌ಸಿ ಅಡಿಯಲ್ಲಿಹೆಚ್ಚಿನ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ5 ಅಂಕಿಗಳ ‘14445’ ಟೋಲ್‌-ಫ್ರೀ ಸಂಖ್ಯೆಯೂ ಲಭ್ಯವಿದೆ. 

 

********



(Release ID: 1847613) Visitor Counter : 113