ಭೂವಿಜ್ಞಾನ ಸಚಿವಾಲಯ
2022ರ ಜೂನ್‌ನಲ್ಲಿ ಮುಂಗಾರು ಮಳೆಯು ಸಾಮಾನ್ಯವಾಗಿತ್ತು - ಕೇಂದ್ರ ಸರ್ಕಾರ;
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಐದು ರಾಜ್ಯಗಳು ಇತ್ತೀಚಿನ 30 ವರ್ಷಗಳ ಅವಧಿಯಲ್ಲಿ(1989-2018) ನೈಋುತ್ಯ ಮುಂಗಾರು ಮಳೆಯಲ್ಲಿಗಮನಾರ್ಹ ಇಳಿಕೆ ಪ್ರವೃತ್ತಿಯನ್ನು ತೋರಿಸಿವೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ
ಪ್ರಕಟಣಾ ದಿನಾಂಕ:
27 JUL 2022 1:28PM by PIB Bengaluru
2022ರ ಜೂನ್‌ನಲ್ಲಿಇಡೀ ದೇಶಕ್ಕೆ ಮುಂಗಾರು ಮಳೆಯು ಸಾಮಾನ್ಯವಾಗಿದೆ. (ಶೇ. 92 ರಷ್ಟು ದೀರ್ಘಾವಧಿಯ ಸರಾಸರಿ (ಎಲ್‌ಪಿಎ)) ಎಂದು ಸರ್ಕಾರ ಹೇಳುತ್ತದೆ. 1971-2020 ರ ಮಾಹಿತಿಯ ಆಧಾರದ ಮೇಲೆ ಜೂನ್ ತಿಂಗಳ ಮಳೆಯ ಎಲ್‌ಪಿಎ 165.4 ಮಿ ಮೀ. ಜೂನ್‌ನಲ್ಲಿ ಶೇ. 92 ರಿಂದ ಶೇ.108 ನಷ್ಟು ಎಲ್‌ಪಿಎ ಒಳಗಿದ್ದರೆ ಸಾಮಾನ್ಯ ಮಳೆ ಎಂದು ಹೇಳಲಾಗುತ್ತದೆ.
ಲೋಕಸಭೆಯಲ್ಲಿಇಂದು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಸಚಿವ (ಸ್ವತಂತ್ರ ನಿರ್ವಹಣೆ) ವಿಜ್ಞಾನ ಮತ್ತು ತಂತ್ರಜ್ಞಾನ; ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ) ಭೂ ವಿಜ್ಞಾನ; ಪ್ರಧಾನ ಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ಮಾನ್ಸೂನ್(ಮುಂಗಾರು) ನ ಪೂರ್ವಾರ್ಧದ ಪ್ರಾರಂಭದ ಬಗ್ಗೆ ಮಾಹಿತಿ ನೀಡಿದರು ಮತ್ತು ಇದು ಮಾನ್ಸೂನ್ ನಡವಳಿಕೆಯ ಅಂತರ-ವಾರ್ಷಿಕ ವ್ಯತ್ಯಾಸದಲ್ಲಿಕಂಡುಬರುವ ಅಂತರ್ಗತ ಆಸ್ತಿಯಾಗಿದೆ ಎಂದು ಹೇಳಿದರು. ಈ ವರ್ಷ ಕೇರಳದಲ್ಲಿಮಾನ್ಸೂನ್ ಆಗಮನವು ಜೂನ್ 01ನೇ ( ವಾಡಿಕೆ ದಿನಾಂಕಕ್ಕಿಂತ 3 ದಿನಗಳು ಮುಂಚಿತವಾಗಿ) ಸಾಮಾನ್ಯ ದಿನಾಂಕಕ್ಕೆ ವಿರುದ್ಧವಾಗಿ 2022 ರ ಮೇ 29 ರಂದು ಪ್ರಾರಂಭವಾಯಿತು ಮತ್ತು ಇದು 2022ರ ಜುಲೈ 2ರಂದು ಇಡೀ ದೇಶವನ್ನು ಆವರಿಸಿದೆ, ಇದು ಜುಲೈ 8 ರ ವಾಡಿಕೆ ದಿನಾಂಕಕ್ಕೆ ವಿರುದ್ಧವಾಗಿ ಅಂದರೆ ಇಡೀ ದೇಶಕ್ಕೆ ಮಾನ್ಸೂನ್ ವ್ಯಾಪ್ತಿಯ ಸಾಮಾನ್ಯ ದಿನಾಂಕಕ್ಕಿಂತ ಆರು ದಿನ ಮುಂಚಿತವಾಗಿದೆ.
ಇಡೀ ದೇಶಕ್ಕೆ 2022ರ ಜೂನ್ ತಿಂಗಳ ಮಳೆಯ ಅಂಕಿ ಅಂಶಗಳನ್ನು ಮತ್ತು ನಾಲ್ಕು ಏಕರೂಪದ ಪ್ರದೇಶಗಳನ್ನು ಕೆಳಗಿನ ಕೋಷ್ಟಕದಲ್ಲಿನೀಡಲಾಗಿದೆ:
|
ಪ್ರದೇಶ
|
2022ರ 1-30 ಜೂನ್ ಅವಧಿಯಲ್ಲಿಬಿದ್ದ ಮಳೆ
|
|
ಪ್ರಸ್ತುತ
|
ಸಾಮಾನ್ಯ
|
ಶೇ. ಕೊರತೆ
|
|
ಪೂರ್ವ ಮತ್ತು ಈಶಾನ್ಯ ಭಾರತ
|
400.9
|
328.4
|
ಶೇ. 22
|
|
ವಾಯುವ್ಯ ಭಾರತ
|
68.6
|
78.1
|
ಶೇ.-12
|
|
ಮಧ್ಯ ಭಾರತ
|
118.9
|
170.3
|
ಶೇ. -30
|
|
ದಕ್ಷಿಣ ಪರ್ಯಾಯ ದ್ವೀಪ ಭಾರತ
|
139
|
161
|
ಶೇ.-14%
|
|
ಇಡೀ ದೇಶ
|
152.3
|
165.3
|
ಶೇ.-8%
|
ಮೇಲಿನ ಕೋಷ್ಟಕದಿಂದ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಹೆಚ್ಚುವರಿ ಮಳೆ ಮತ್ತು ಮಧ್ಯ ಭಾರತದಲ್ಲಿ ಮಳೆಯ ಕೊರತೆ ಕಂಡುಬಂದಿದೆ.
ಮಧ್ಯ ಭಾರತದಾದ್ಯಂತ ಕಡಿಮೆ-ಒತ್ತಡದ ವ್ಯವಸ್ಥೆಗಳ ರಚನೆ ಮತ್ತು ಚಲನೆ ಹಾಗೂ ಮಾನ್ಸೂನ್ ತಗ್ಗು ಅದರ ಸಾಮಾನ್ಯ ಸ್ಥಿತಿಯ ದಕ್ಷಿಣಕ್ಕಿರುವ ಕಾರಣ ಮಾನ್ಸೂನ್ ಜುಲೈನಲ್ಲಿ ಸಕ್ರಿಯವಾಗಿತ್ತು. ಜುಲೈ 20 ರವರೆಗೆ ಇಡೀ ದೇಶಕ್ಕೆ ಮತ್ತು ನಾಲ್ಕು ಏಕರೂಪದ ಪ್ರದೇಶಗಳಿಗೆ ಋುತುಮಾನದ ಮಳೆಯ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:
|
ಪ್ರದೇಶ
|
2022 ರ ಜೂನ್ 1 ರಿಂದ ಜುಲೈ 20 ರವರೆಗೆ ಬಿದ್ದ ಮಳೆ
|
|
ಪ್ರಸ್ತುತ
|
ಸಾಮಾನ್ಯ
|
ಶೇ. ಕೊರತೆ
|
|
ಪೂರ್ವ ಮತ್ತು ಈಶಾನ್ಯ ಭಾರತ
|
525.7
|
610.7
|
ಶೇ.-14
|
|
ವಾಯುವ್ಯ ಭಾರತ
|
187.4
|
206.0
|
ಶೇ.-9
|
|
ಮಧ್ಯ ಭಾರತ
|
481.9
|
369.5
|
ಶೇ.+30
|
|
ದಕ್ಷಿಣ ಪರ್ಯಾಯ ದ್ವೀಪ ಭಾರತ
|
389.2
|
290.0
|
ಶೇ.+34
|
|
ಇಡೀ ದೇಶ
|
380.1
|
342.1
|
ಶೇ.+11
|
ಐಎಂಡಿ ಬಿಡುಗಡೆ ಮಾಡಿದ ವರದಿಯನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನ ಐದು ರಾಜ್ಯಗಳು ಇತ್ತೀಚಿನ 30 ವರ್ಷಗಳ ಅವಧಿಯಲ್ಲಿ(1989-2018) ನೈಋುತ್ಯ ಮಾನ್ಸೂನ್ ಮಳೆಯಲ್ಲಿಗಮನಾರ್ಹ ಇಳಿಕೆ ಪ್ರವೃತ್ತಿಯನ್ನು ತೋರಿಸಿವೆ ಎಂದು ಮಾಹಿತಿ ನೀಡಿದರು. ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳೊಂದಿಗೆ ಈ ಐದು ರಾಜ್ಯಗಳಲ್ಲಿನ ವಾರ್ಷಿಕ ಮಳೆಯು ಗಮನಾರ್ಹ ಇಳಿಕೆಯ ಪ್ರವೃತ್ತಿಗಳನ್ನು ತೋರಿಸುತ್ತದೆ. ಇತರ ರಾಜ್ಯಗಳು ಇದೇ ಅವಧಿಯಲ್ಲಿ ನೈಋುತ್ಯ ಮಾನ್ಸೂನ್ ಮಳೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ತೋರಿಸುವುದಿಲ್ಲ.
ಐಎಂಡಿ ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿಇತ್ತೀಚಿನ 30 ವರ್ಷಗಳಲ್ಲಿ ಮಳೆಯ ಮಾದರಿಗಳ ಮತ್ತು ಅದರ ತೀವ್ರತೆಗಳ ಗಮನಿಸಲಾದ ಬದಲಾವಣೆಗಳನ್ನು ಅಧ್ಯಯನ ಮಾಡಿದೆ ಮತ್ತು ತನಿಖೆ ನಡೆಸಿದೆ ಮತ್ತು ಗಮನಿಸಿದ ಮಳೆ ವ್ಯತ್ಯಾಸ ಮತ್ತು ಬದಲಾವಣೆಗಳು ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 29 ವರದಿಗಳನ್ನು ಐಎಂಡಿ 2020 ರ ಜನವರಿಯಲ್ಲಿಪ್ರಕಟಿಸಿದೆ. ಈ ವರದಿಗಳು ಐಎಂಡಿ ಪುಣೆ ವೆಬ್‌ಸೈಟ್‌ನಲ್ಲಿ https://imdpune.gov.in/hydrology/rainfall%20variability%20page/rainfall%20trend.html)) ನಲ್ಲಿಸಾರ್ವಜನಿಕರಿಗೆ ಲಭ್ಯವಿದೆ.
ಜಿಲ್ಲಾವಾರು ಮಳೆಯನ್ನು ಪರಿಗಣಿಸಿ, ದೇಶದಲ್ಲಿಅನೇಕ ಜಿಲ್ಲೆಗಳಿವೆ, ಇವು ನೈಋುತ್ಯ ಮಾನ್ಸೂನ್ ಮತ್ತು ಇತ್ತೀಚಿನ 30 ವರ್ಷಗಳ ಅವಧಿಯಲ್ಲಿ(1989-2018) ವಾರ್ಷಿಕ ಮಳೆಯಲ್ಲಿಗಮನಾರ್ಹ ಬದಲಾವಣೆಗಳನ್ನು ತೋರಿಸುತ್ತವೆ. ಭಾರಿ ಮಳೆಯ ದಿನಗಳ ಆವರ್ತನಕ್ಕೆ ಸಂಬಂಧಿಸಿದಂತೆ, ಸೌರಾಷ್ಟ್ರ ಮತ್ತು ಕಛ್, ರಾಜಸ್ಥಾನದ ಆಗ್ನೇಯ ಭಾಗಗಳು, ತಮಿಳುನಾಡಿನ ಉತ್ತರ ಭಾಗಗಳು, ಆಂಧ್ರಪ್ರದೇಶದ ಉತ್ತರ ಭಾಗಗಳು ಮತ್ತು ನೈರುತ್ಯ ಒಡಿಶಾದ ನೆರೆಹೊರೆಯ ಪ್ರದೇಶಗಳು, ಛತ್ತೀಸ್‌ಗಢ, ನೈರುತ್ಯ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಮಣಿಪುರ ಮತ್ತು ಮಿಜೋರಾಂ, ಕೊಂಕಣ ಮತ್ತು ಗೋವಾ ಮತ್ತು ಉತ್ತರಾಖಂಡದ ಅನೇಕ ಭಾಗಗಳಲ್ಲಿಗಮನಾರ್ಹ ಏರಿಕೆಯ ಪ್ರವೃತ್ತಿಯನ್ನು ಗಮನಿಸಲಾಗಿದೆ.
***********
(ಪ್ರಕಟಣೆ ಐ.ಡಿ.: 1845379)
ವಿಸಿಟರ್ ಕೌಂಟರ್ : 192