ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

22ನೇ ರಾಷ್ಟ್ರೀಯ ಮೀನು ಕೃಷಿಕರ ದಿನ ಆಚರಣೆ


ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಡಾ. ಸಂಜೀವ್‌ ಕುಮಾರ್‌ ಬಲ್ಯಾನ್‌ ಮತ್ತು ಡಾ. ಎಲ್‌. ಮುರುಗನ್‌ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ದೇಶೀಯ ಮೀನು ಬಳಕೆ ಮತ್ತು ಸುಸ್ಥಿರ ಉತ್ಪಾದನೆ ಕುರಿತ ಪೋಸ್ಟರ್‌ (ಭಿತ್ತಿಪತ್ರ) ಗಳನ್ನು ಬಿಡುಗಡೆ ಮಾಡಿದ ಸಚಿವರು

ಪಿಎಂಎಂಎಸ್‌ವೈ ಯೋಜನೆಯಡಿಯಲ್ಲಿ ಪ್ರಗತಿಪರ ಮೀನು ಕೃಷಿಕರೊಂದಿಗೆ ಸಂವಾದ ಆಯೋಜಿಸಲಾಗಿದ್ದು, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದೆವು

Posted On: 10 JUL 2022 7:40PM by PIB Bengaluru

ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯು ಇಂದು 22ನೇ ರಾಷ್ಟ್ರೀಯ ಮೀನು ಕೃಷಿಕರ ದಿನವನ್ನು ಹೈದರಾಬಾದ್‌ನ ಎನ್‌ಎಫ್‌ಡಿಬಿನಲ್ಲಿ ಹೈಬ್ರಿಡ್‌(ಭೌತಿಕ/ಆನ್‌ಲೈನ್‌ ಒಳಗೊಂಡ) ಮಾದರಿಯಲ್ಲಿಆಚರಿಸಿತು. ಕಾರ್ಯಕ್ರಮದಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಡಾ. ಸಂಜೀವ್‌ ಕುಮಾರ್‌ ಬಲ್ಯಾನ್‌ ಮತ್ತು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಡಾ. ಎಲ್‌. ಮುರುಗನ್‌ ಭಾಗವಹಿಸಿದ್ದರು.

1000 ಕ್ಕೂ ಹೆಚ್ಚು ಮೀನು ಕೃಷಿಕರು, ಅಕ್ವಾಪ್ರೆನಿಯರ್ ಗಳು ಮತ್ತು ಮೀನುಗಾರರು, ವೃತ್ತಿಪರರು, ಅಧಿಕಾರಿಗಳು ಮತ್ತು ದೇಶಾದ್ಯಂತದ ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ದೇಶೀಯ ಮೀನು ಸೇವನೆ ಮತ್ತು ಸುಸ್ಥಿರ ಉತ್ಪಾದನೆಯ ಬಗ್ಗೆ 4 ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ‘‘ತಾಯ್ತನಕ್ಕಾಗಿ ಮೀನು’’ ಮತ್ತು ‘‘ಮೀನು ಪೋಷಕಾಂಶಗಳು ಮತ್ತು ಅವುಗಳ ಸ್ವಾಸ್ಥ್ಯ ಪ್ರಯೋಜನಗಳು’’ ಕುರಿತ ಭಿತ್ತಿಪತ್ರಗಳನ್ನು ಡಾ. ಸಂಜೀವ್‌ ಕುಮಾರ್‌ ಬಲ್ಯಾನ್‌ ಅವರು ಬಿಡುಗಡೆ ಮಾಡಿದರು ಮತ್ತು ‘‘ ಸುಸ್ಥಿರ ಮೀನುಗಾರಿಕೆ ಅಭ್ಯಾಸಗಳು ಮತ್ತು ಭಾರತದ ರಾಜ್ಯ ಮೀನುಗಳು’’ ಕುರಿತ ಭಿತ್ತಿಪತ್ರಗಳನ್ನು ಡಾ. ಎಲ್‌. ಮುರುಗನ್‌ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಲ್‌. ಮುರುಗನ್‌, ಜಲಕೃಷಿ ಮೂಲಕ ಮೀನು ಉತ್ಪಾದನೆಯಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ. ವಿವಿಧ ಮೀನು ಪ್ರಭೇದಗಳಿಗೆ ಸಂತಾನೋತ್ಪತ್ತಿ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಸುಧಾರಿತ ಮೀನು ಪ್ರಭೇದಗಳ ಕೃಷಿಯ ಮೂಲಕ ವಿಜ್ಞಾನಿಗಳು ನೀಡಿದ ಕೊಡುಗೆಯೇ ಇದಕ್ಕೆ ಕಾರಣ. ಗೌರವಾನ್ವಿತ ಪ್ರಧಾನ ಮಂತ್ರಿ ಅವರು ಸ್ಥಳೀಯವಾಗಿ ಧ್ವನಿಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಅವರು ಹೇಳಿದರು. ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿಯೂ ಸಹ, ಸರ್ಕಾರವು ಕೈಗೊಂಡ ವಿವಿಧ ಕ್ರಮಗಳಿಂದಾಗಿ ದೇಶದ ಮೀನುಗಾರಿಕೆ ರಫ್ತುಗಳು ಪರಿಣಾಮ ಬೀರಲಿಲ್ಲ. ದೇಶವು ಅನ್ವೇಷಿಸದ ವಿಶಾಲವಾದ ಮೀನುಗಾರಿಕೆ ಸಾಮರ್ಥ್ಯ‌ವನ್ನು ಹೊಂದಿದೆ ಎಂದು ಅವರು ಹೇಳಿದರು. ಮೀನುಗಾರಿಕಾ ವಲಯದ ಸಾಮರ್ಥ್ಯ‌ವನ್ನು ಮನಗಂಡಿರುವ ಸರ್ಕಾರವು ದೇಶದ ಮೀನುಗಾರರು ಮತ್ತು ಮೀನು ಕೃಷಿಕರ ಅನುಕೂಲಕ್ಕಾಗಿ ಪಿಎಂಎಂಎಸ್‌ವೈ , ಎಫ್‌ಐಡಿಎಫ್‌ ಮತ್ತು ಕೆಸಿಸಿಯನ್ನು ಪ್ರಾರಂಭಿಸಿದೆ. ಸಮುದ್ರದ  ಕೃಷಿಯನ್ನು ಉತ್ತೇಜಿಸಲು ಭಾರತ ಸರ್ಕಾರವು ತಮಿಳುನಾಡಿನಲ್ಲಿ ಸೀವೀಡ್‌ ಪಾರ್ಕ್‌ ಅನ್ನು ಮಂಜೂರು ಮಾಡಿದೆ ಮತ್ತು ದೇಶಾದ್ಯಂತ ಮೀನುಗಾರಿಕಾ ಬಂದರುಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಎಂದು ಸಚಿವರು ಒತ್ತಿ ಹೇಳಿದರು.

ಡಾ. ಸಂಜೀವ್‌ ಕುಮಾರ್‌ ಬಲ್ಯಾನ್‌ ಅವರು, ತಮ್ಮ ಭಾಷಣದಲ್ಲಿ, ದೇಶದ ಮೀನುಗಾರರು ಮತ್ತು ಮೀನು ಕೃಷಿಕರ ಅನುಕೂಲಕ್ಕಾಗಿ ಸರ್ಕಾರವು ಪಿ.ಎಂ.ಎಂ.ಎಸ್‌.ವೈ.ಯ ಮಹತ್ವಾಕಾಂಕ್ಷೆಯ ಯೋಜನೆಯನ್ನು 20050 ಕೋಟಿ ರೂ.ಗಳ ಅತ್ಯಧಿಕ ವೆಚ್ಚದೊಂದಿಗೆ ಜಾರಿಗೆ ತರುತ್ತಿದೆ ಎಂದು ಹೇಳಿದರು. ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು, ಮೀನು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬೇಕು ಮತ್ತು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕು ಎಂದು ಅವರು ಹೇಳಿದರು. ಗ್ರಾಹಕರಲ್ಲಿ ಮೀನಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಅಗತ್ಯವಿದೆ ಮತ್ತು ಎನ್‌ಎಫ್‌ಡಿಬಿ ಈ ಅಂಶದ ಬಗ್ಗೆ ಉತ್ತಮ ಭಿತ್ತಿಪತ್ರಗಳನ್ನು ಅಭಿವೃದ್ಧಿಪಡಿಸಿದೆ ಎಂದರು.

ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಶ್ರೀ ಜತೀಂದ್ರ ನಾಥ್‌ ಸ್ಟೈನ್‌ ಅವರು ಮೀನು ಮತ್ತು ಅಕ್ವಾ ಫೀಡ್‌ಗಳಲ್ಲಿ ಪೋಷಕಾಂಶಗಳು ಮತ್ತು ಉಳಿಕೆ ಮಾಲಿನ್ಯಕಾರಕ ಪ್ರೊಫೈಲಿಂಗ್‌ನೊಂದಿಗೆ ರೋಗಕಾರಕ ಸೂಕ್ಷ್ಮಜೀವಿಗಳ ಮೌಲ್ಯಮಾಪನ ಕುರಿತ ಎನ್‌ಎಫ್‌ಡಿಬಿ ಲ್ಯಾಬ್‌ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿಎನ್‌ಎಫ್‌ಡಿಬಿ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಫ್‌ಐಡಿಎಫ್‌ ಮತ್ತು ಉದ್ಯಮಶೀಲತಾ ಮಾದರಿ ಯೋಜನೆಗೆ ಅನುಕೂಲವಾಗುವಂತೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು.

ದೇಶದ ಜಿಡಿಪಿಯಲ್ಲಿ ಮೀನುಗಾರಿಕೆಯ ಪಾಲನ್ನು ಸ್ಥಿರವಾಗಿ ಹೆಚ್ಚಿಸಲಾಗುತ್ತಿದೆ ಎಂದು ಜಂಟಿ ಕಾರ್ಯದರ್ಶಿ (ಒಳನಾಡು ಮೀನುಗಾರಿಕೆ) ಶ್ರೀ ಸಾಗರ್‌ ಮೆಹ್ರಾ ಅವರು ಒತ್ತಿ ಹೇಳಿದರು. ದೇಶದಲ್ಲಿ ಸುಮಾರು 2.8 ಕೋಟಿ ಜನರು ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಕಾರ್ಯಕ್ರಮದಲ್ಲಿ, ಗಣ್ಯರು ಪಿಎಂಎಂಎಸ್‌ವೈ ಯೋಜನೆಯಡಿ ಪ್ರಗತಿಪರ ಮೀನು ಕೃಷಿಕರೊಂದಿಗೆ ಸಂವಾದ ನಡೆಸಿದರು. ಎನ್‌.ಎಫ್‌.ಎಫ್‌.ಬಿ.ಬಿ.ಯಿಂದ ಗುಣಮಟ್ಟದ ಬೀಜವನ್ನು ಪಡೆಯುತ್ತಿರುವ ಮೀನು ಕೃಷಿಕರು ಸುಧಾರಿತ ಬೀಜ ತಳಿಗಳ ಬೆಳವಣಿಗೆಯ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ಈಶಾನ್ಯ ಮೀನು ಕೃಷಿಕರು ಮೀನುಗಾರಿಕೆ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಹಂಚಿಕೊಂಡರು.

ಸುಮಾರು 30 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು 500 ಕ್ಕೂ ಹೆಚ್ಚು ಸ್ಪರ್ಧಿಗಳೊಂದಿಗೆ ಗುಂಪುಗಳಲ್ಲಿ ವರ್ಚುವಲ್‌ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ರಾಷ್ಟ್ರೀಯ ಮೀನು ಕೃಷಿಕರ ದಿನವನ್ನು ಪ್ರತಿ ವರ್ಷ ಜುಲೈ 10 ರಂದು ದೇಶಾದ್ಯಂತ ಎಲ್ಲಾ ಮೀನುಗಾರರು, ಮೀನು ಕೃಷಿಕರು ಮತ್ತು ಸಂಬಂಧಪಟ್ಟ ಮಧ್ಯಸ್ಥಗಾರರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಆಚರಿಸಲಾಗುತ್ತದೆ. ಪ್ರತಿ ವರ್ಷ, ಪ್ರೊಫೆಸರ್‌ ಡಾ. ಹೀರಾಲಾಲ್‌ ಚೌಧರಿ ಮತ್ತು ಅವರ ಸಹೋದ್ಯೋಗಿ ಡಾ. ಅಲಿಕುಂಞಿ ಅವರನ್ನು ಸ್ಮರಿಸಲು ಈ ವಾರ್ಷಿಕ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. 1957 ರ ಜುಲೈ 10 ರಂದು ಒಡಿಶಾದ ಅಂಗುಲ್‌ನಲ್ಲಿ ಪ್ರಮುಖ ಕಾರ್ಪ್‌ ಗಳ ಯಶಸ್ವಿ ಪ್ರೇರಿತ ಸಂತಾನೋತ್ಪತ್ತಿಯನ್ನು ಉತ್ತೇಜಿಸಲು ಅವರು ನೀಡಿದ ಕೊಡುಗೆಗಾಗಿ, ಪ್ರಮುಖ ಕಾರ್ಪ್‌ಗಳ ಸಂತಾನೋತ್ಪತ್ತಿಯಲ್ಲಿ ಕಾರ್ಪ್‌ ಪಿಟ್ಯುಟರಿ ಹಾರ್ಮೋನ್‌ ಸಾರವನ್ನು ನೀಡುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ. ತಂತ್ರಜ್ಞಾನವನ್ನು ನಂತರ ದೇಶಾದ್ಯಂತ ಗುಣಮಟ್ಟದ ಬೀಜ ಉತ್ಪಾದನೆಗೆ ಸಂಶ್ಲೇಷಿತ ಹಾರ್ಮೋನ್‌ ಅನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರಮಾಣೀಕರಿಸಲಾಯಿತು ಮತ್ತು ಸೂಕ್ಷ್ಮವಾಗಿ ಅದನ್ನು ಇನ್ನಷ್ಟು ಉತ್ತಮಗೊಳಿಸಲಾಯಿತು. ವರ್ಷಗಳಲ್ಲಿ ಪ್ರಚೋದಿತ ಸಂತಾನೋತ್ಪತ್ತಿಯ ಈ ಪ್ರವರ್ತಕ ಕೆಲಸವು ಜಲಕೃಷಿ ವಲಯದ ಬೆಳವಣಿಗೆಯನ್ನು ಸಾಂಪ್ರದಾಯಿಕ ಜಲಕೃಷಿ ಪದ್ಧತಿಗಳಿಂದ ತೀವ್ರವಾದ ಜಲಕೃಷಿ ಪದ್ಧತಿಗಳಿಗೆ ಪರಿವರ್ತಿಸಿದೆ ಮತ್ತು ಆಧುನಿಕ ಜಲಕೃಷಿ ಉದ್ಯಮದ ಯಶಸ್ಸಿಗೆ ಕಾರಣವಾಗಿದೆ.

ಮೀನುಗಾರಿಕೆ ಕ್ಷೇತ್ರವನ್ನು ಪರಿವರ್ತಿಸುವಲ್ಲಿ ಮತ್ತು ದೇಶದಲ್ಲಿ ನೀಲಿ ಕ್ರಾಂತಿಯ ಮೂಲಕ ಆರ್ಥಿಕ ಕ್ರಾಂತಿಯನ್ನು ತರುವಲ್ಲಿ ಭಾರತ ಸರ್ಕಾರವು ಮುಂಚೂಣಿಯಲ್ಲಿದೆ. ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ, ಗುಣಮಟ್ಟವನ್ನು ಸುಧಾರಿಸುವುದರೊಂದಿಗೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಈ ವಲಯವು ಕನಸು ಕಂಡಿತು.

2016 ರಲ್ಲಿ ಪ್ರಾರಂಭಿಸಲಾದ ಕೇಂದ್ರ ಪ್ರಾಯೋಜಿತ ಯೋಜನೆ ನೀಲಿ ಕ್ರಾಂತಿ - ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಗಣನೆಗೆ ತೆಗೆದುಕೊಂಡು, ಈ ವಲಯದ ಅಭಿವೃದ್ಧಿಗೆ ಪ್ರಮುಖ ಕೊಡುಗೆಗಳನ್ನು ನೀಡಿದೆ ಮತ್ತು 2020 ರಲ್ಲಿ, ಗೌರವಾನ್ವಿತ ಪ್ರಧಾನಮಂತ್ರಿಯ ಅವರು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿ.ಎಂ.ಎಂ.ಎಸ್‌.ವೈ) ಯನ್ನು ಐದು ವರ್ಷಗಳ ಅವಧಿಗೆ 20,050 ಕೋಟಿ ರೂ.ಗಳಿಗೂ ಹೆಚ್ಚು ಬಜೆಟ್‌ನೊಂದಿಗೆ ಪ್ರಾರಂಭಿಸಿದರು. ಪಿಎಂಎಂಎಸ್‌ವೈ 2024-25 ರ ವೇಳೆಗೆ ಪ್ರಸ್ತುತ 13.76 ಎಂಎಂಟಿಯಿಂದ 22 ಎಂಎಂಟಿ ಮೀನು ಉತ್ಪಾದನೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಮತ್ತು ಈ ವಲಯದ ಮೂಲಕ ಸುಮಾರು 55 ಲಕ್ಷ  ಜನರಿಗೆ ಹೆಚ್ಚುವರಿ ಉದ್ಯೋಗಾವಕಾಶವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಖಾಸಗಿ ವಲಯದ ಭಾಗವಹಿಸುವಿಕೆ, ಉದ್ಯಮಶೀಲತೆಯ ಅಭಿವೃದ್ಧಿ, ವ್ಯಾಪಾರ ಮಾದರಿಗಳು, ಸುಗಮ ವ್ಯಾಪಾರೋದ್ಯಮದ ಉತ್ತೇಜನ, ನವೋದ್ಯಮಗಳು, ಇನ್ಕ್ಯುಬೇಟರ್‌ಗಳು  ಸೇರಿದಂತೆ ನವೀನ ಯೋಜನಾ ಚಟುವಟಿಕೆಗಳನ್ನು ಉತ್ತೇಜಿಸುವಾಗ ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಲು ಈ ಯೋಜನೆ ಒತ್ತು ನೀಡುತ್ತದೆ.

ಏತನ್ಮಧ್ಯೆ, ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್‌ಐಡಿಎಫ್‌) ಯೋಜನೆಯು 2018-19 ರಲ್ಲಿ7,522.48 ಕೋಟಿ ರೂ.ಗಳ ಬಜೆಟ್‌ನೊಂದಿಗೆ ಪ್ರಾರಂಭವಾಯಿತು, ಇದು ಪ್ರಸ್ತುತವೂ ಮುಂದುವರಿದಿದೆ. ಗುರಿಯನ್ನು ಸಾಧಿಸಲು ಮೀನು ಉತ್ಪಾದನೆಯನ್ನು ಹೆಚ್ಚಿಸಲು ಸಮುದ್ರ ಮತ್ತು ಒಳನಾಡು ಮೀನುಗಾರಿಕೆ ವಲಯಗಳೆರಡರಲ್ಲೂ ಮೀನುಗಾರಿಕೆ ಮೂಲಸೌಕರ್ಯ ಸೌಲಭ್ಯಗಳನ್ನು ಸೃಷ್ಟಿಸಲು ಎಫ್‌ಐಡಿಎಫ್‌ ನಿರ್ದಿಷ್ಟವಾಗಿ ಪೂರೈಸುತ್ತದೆ. ಎಫ್‌ಐಡಿಎಫ್‌ ಅಡಿಯಲ್ಲಿನ ಯೋಜನೆಗಳು ಅಂದಾಜು / ವಾಸ್ತವಿಕ ಯೋಜನಾ ವೆಚ್ಚದ ಶೇಕಡ 80ರ ವರೆಗೆ ಸಾಲ ಪಡೆಯಲು ಅರ್ಹವಾಗಿವೆ.

***********

 



(Release ID: 1840662) Visitor Counter : 162