ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav g20-india-2023

ಜುಲೈ 05 ರಂದು ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಕುರಿತ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ


ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಉತ್ತಮ ರೂಢಿಗಳ ಪ್ರಸಾರ ಮತ್ತು ಪೌಷ್ಟಿಕಾಂಶದ ಭದ್ರತೆ ಬಲಪಡಿಸುವತ್ತ ಗಮನ ಹರಿಸಲಿರುವ ಸಮಾವೇಶ

ಆಹಾರ ಬಲವರ್ಧನೆ, ಆಹಾರ ಕಣಜದ ವೈವಿಧ್ಯೀಕರಣ, ಬೆಳೆ ವೈವಿಧ್ಯೀಕರಣ, ಸಮಗ್ರ ಅನ್ನವಿತರಣೆ ಪೋರ್ಟಲ್ 2.0, ಪಿಡಿಎಸ್ ಮತ್ತು ದಾಸ್ತಾನು ವಲಯದಲ್ಲಿನ ಸುಧಾರಣೆಗಳ ಕುರಿತಂತೆ ಚರ್ಚೆ

ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಲಿರುವ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್

Posted On: 03 JUL 2022 11:07AM by PIB Bengaluru

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು 2022ರ ಜುಲೈ 5ರ ಮಂಗಳವಾರ ನವದೆಹಲಿಯಲ್ಲಿ ಭಾರತದಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ. ಈ ಸಮಾವೇಶವು ಪರಸ್ಪರ ಕಲಿಕೆಗೆ ಅನುಕೂಲ ಮಾಡಿಕೊಡಲಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿನ ಯೋಜನೆಗಳಿಗೆ ಉತ್ತಮ ರೂಢಿಗಳನ್ನು ಪಸರಿಸುವ ಮತ್ತು ಪೌಷ್ಟಿಕಾಂಶ ಭದ್ರತೆಯ ಮೇಲೆ ಗಮನ ಹರಿಸುವುದನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ರಾಜ್ಯ ಸಚಿವರುಗಳಾದ ಶ್ರೀಮತಿ ಸಾಧ್ವಿ ನಿರಂಜನ್ ಜ್ಯೋತಿ ಮತ್ತು ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರ ಉಪಸ್ಥಿತಿಯಲ್ಲಿ ಸಮ್ಮೇಳನವನ್ನುದ್ದೇಶಿಸಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರೀಕ ಪೂರೈಕೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್, ಭಾಷಣ ಮಾಡಲಿದ್ದಾರೆ. ಈ ಸಮ್ಮೇಳನದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಭಾಗವಹಿಸಲಿದ್ದಾರೆ.

ಆಹಾರ ಬಲವರ್ಧನೆ, ಆಹಾರ ಕಣಜದ ವೈವಿಧ್ಯೀಕರಣ, ಬೆಳೆ ವೈವಿಧ್ಯೀಕರಣ, ಸಮಗ್ರ ಅನ್ನವಿತರಣೆ ಪೋರ್ಟಲ್ 2.0, ಪಿಡಿಎಸ್ ಮತ್ತು ಶೇಖರಣಾ ವಲಯದಲ್ಲಿನ ಸುಧಾರಣೆಗಳ ಕುರಿತ ಚರ್ಚೆ ಸಮ್ಮೇಳನದ ಪ್ರಮುಖ ಮುಖ್ಯಾಂಶಗಳಾಗಿವೆ. ವ್ಯಾಪಕ ಪುನರಾವರ್ತನೆಗಾಗಿ ಕೆಲವು ರಾಜ್ಯಗಳಲ್ಲಿ ಅನುಸರಿಸಲಾಗುತ್ತಿರುವ ಉತ್ತಮ ರೂಢಿಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು.

ಈ ಸಮ್ಮೇಳನವು ದೇಶದಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ಭದ್ರತಾ ಪರಿಸರ ವ್ಯವಸ್ಥೆಯ ಪರಿವರ್ತನೆಯನ್ನು ಸಾಧಿಸಲು ಸಹಕಾರಿ ಒಕ್ಕೂಟ ವ್ಯವಸ್ಥೆಯ ನೈಜ ಮನೋಭಾವದಲ್ಲಿ ಸವಾಲುಗಳು ಮತ್ತು ಅವಕಾಶಗಳನ್ನು ಪ್ರತಿಬಿಂಬಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 (ಎನ್.ಎಫ್.ಎಸ್.ಎ) ಅಡಿಯಲ್ಲಿ ಭಾರತದ ನಿರ್ದಿಷ್ಟ ಗುರಿಯ ಸಾರ್ವಜನಿಕ ವಿತರಣಾ ವ್ಯವಸ್ಥೆ ವಿಶ್ವದ ಅತಿದೊಡ್ಡ ಸಾರ್ವಜನಿಕ ಆಹಾರ-ಭದ್ರತಾ ಕಾರ್ಯಕ್ರಮವಾಗಿದೆ. ಈ ವ್ಯವಸ್ಥೆಯು ದೇಶಾದ್ಯಂತ 5.33 ಲಕ್ಷಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ಜಾಲದ ಮೂಲಕ ಭಾರತದಾದ್ಯಂತ ಸುಮಾರು 80 ಕೋಟಿ ಫಲಾನುಭವಿಗಳ ಆಹಾರ ಭದ್ರತಾ ಅಗತ್ಯಗಳನ್ನು ನಿರ್ವಹಿಸುತ್ತದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಮೂಲಕ ಸರ್ಕಾರದ ಆಹಾರ ಭದ್ರತಾ ಪ್ರತಿಕ್ರಿಯೆಯು ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಓ.ಎನ್.ಓ.ಆರ್.ಸಿ.) ಯೊಂದಿಗೆ ಸಂಯೋಜಿತವಾಗಿ ಜನರಿಗೆ ಜೀವನಾಡಿಯಾಗಿ ಕಾರ್ಯನಿರ್ವಹಿಸಿತು ಮತ್ತು ಸಮಾಜದ ಬಡ ಮತ್ತು ದುರ್ಬಲ ವರ್ಗಗಳ ಬಗ್ಗೆ ಅದರ ದಕ್ಷತೆ ಮತ್ತು ಸಂವೇದನಾಶೀಲತೆಗೆ ಜಾಗತಿಕವಾಗಿ ಜ್ವಲಂತ ಉದಾಹರಣೆ ಎಂದು ಶ್ಲಾಘಿಸಲಾಗುತ್ತಿದೆ.

*******



(Release ID: 1838966) Visitor Counter : 231