ಜವಳಿ ಸಚಿವಾಲಯ

ತಿರುಪ್ಪೂರ್‌ನಂತಹ 75 ಜವಳಿ ಕೇಂದ್ರಗಳನ್ನು ರಚಿಸಲು ಭಾರತ ಸರ್ಕಾರ ಬಯಸಿದೆ: ಶ್ರೀ ಗೋಯಲ್.


ತಿರುಪ್ಪೂರ್‌ನಲ್ಲಿ ಜವಳಿ ಉದ್ಯಮವು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 10 ಲಕ್ಷ ಜನರಿಗೆ ಉದ್ಯೋಗ ನೀಡುತ್ತಿದೆ: ಶ್ರೀ ಗೋಯಲ್.

ಜವಳಿ ಕ್ಷೇತ್ರವು ಮುಂದಿನ 5 ವರ್ಷಗಳಲ್ಲಿ ₹ 10 ಲಕ್ಷ ಕೋಟಿ ರಫ್ತಿನ ಮೂಲಕ ₹ 20 ಲಕ್ಷ ಕೋಟಿಯಷ್ಟು ದೊಡ್ಡ ಉದ್ಯಮವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ: ಶ್ರೀ ಗೋಯಲ್.

ಸಂಯೋಜಿತ ವಾರ್ಷಿಕ ಬೆಳವಣಿಗೆಯ ಆಧಾರದ ಮೇಲೆ ಭಾರತವು ಪ್ರತಿ ವರ್ಷ 8% ರಷ್ಟು ಬೆಳವಣಿಗೆಯಾದರೆ, 30 ವರ್ಷಗಳ ನಂತರ, ಆರ್ಥಿಕತೆಯು $30 ಟ್ರಿಲಿಯನ್ ಆರ್ಥಿಕತೆಯಾಗಲಿದೆ: ಶ್ರೀ ಗೋಯಲ್.

Posted On: 26 JUN 2022 5:57PM by PIB Bengaluru

ಭಾರತ ಸರ್ಕಾರವು ತಿರುಪ್ಪೂರ್‌ನಂತಹ 75 ಜವಳಿ ಕೇಂದ್ರಗಳನ್ನು ರಚಿಸಲು ಬಯಸುತ್ತದೆ, ಇದು ಜವಳಿ ಉತ್ಪನ್ನ ರಫ್ತುಗಳನ್ನು ಬೆಂಬಲಿಸುತ್ತದೆ ಮತ್ತು ಸುಸ್ಥಿರ ತಂತ್ರಜ್ಞಾನವನ್ನು ಸೇರಿಸುವುದನ್ನು ಖಚಿತಪಡಿಸುತ್ತದೆ, ಅಲ್ಲದೆ ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಜವಳಿ, ವಾಣಿಜ್ಯ ಮತ್ತು ಕೈಗಾರಿಕೆ ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಸಾರ್ವಜನಿಕ ವಿತರಣೆ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಇಂದು ತಿರುಪ್ಪೂರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

ತಿರುಪ್ಪೂರ್ ದೇಶಕ್ಕೆ ಹೆಮ್ಮೆ ತಂದಿದೆ ಮತ್ತು ಪ್ರತಿ ವರ್ಷ 30,000 ಕೋಟಿ ಮೌಲ್ಯದ ಜವಳಿ ಉತ್ಪಾದನೆಯ ತವರೂರು ಎಂದು ಶ್ರೀ ಗೋಯಲ್ ಹೇಳಿದರು. ಈ ವಲಯವು 6 ಲಕ್ಷ ಮಂದಿಗೆ ನೇರ ಹಾಗೂ 4 ಲಕ್ಷ ಮಂದಿಗೆ ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದು, ಒಟ್ಟಾರೆಯಾಗಿ 10 ಲಕ್ಷ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದರು.

 

1985 ರಲ್ಲಿ ತಿರುಪ್ಪೂರ್ ₹ 15 ಕೋಟಿ ಮೌಲ್ಯದ ಜವಳಿ ಉತ್ಪನ್ನಗಳನ್ನು ರಫ್ತು ಮಾಡುತ್ತಿತ್ತು ಎಂದು ಅವರು ಹೇಳಿದರು. ಮಾರ್ಚ್ 2022 ಹಣಕಾಸಿನ ವರ್ಷದಲ್ಲಿ , ತಿರುಪ್ಪೂರ್‌ನಿಂದ ಅಂದಾಜು ₹30,000 ಕೋಟಿ ರಫ್ತು ಆಗಿದ್ದು, ಇದು ಸುಮಾರು ಎರಡು ಸಾವಿರ ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು. ಈ ಪ್ರದೇಶದಲ್ಲಿ ಜವಳಿ ವಲಯದ ಅಭೂತಪೂರ್ವ ಬೆಳವಣಿಗೆಯನ್ನು ಪರಿಗಣಿಸಿ, 37 ವರ್ಷಗಳಲ್ಲಿ, ತಿರುಪ್ಪೂರ್‌ನಲ್ಲಿ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು 22.87% ಆಗುವುದು.

ತಿರುಪ್ಪೂರ್‌ನಲ್ಲಿ ಅಪಾರ ಉದ್ಯೋಗಾವಕಾಶಗಳಿವೆ ಮತ್ತು ಯುವಕರು ಅವಕಾಶವನ್ನು ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು. ಜತೆಗೆ ಯುವಕರಿಗೂ ತರಬೇತಿ ನೀಡಲಾಗುವುದು ಎಂದರು. ಪ್ರಸ್ತುತ, ತಿರುಪ್ಪೂರ್‌ನಲ್ಲಿ ಜವಳಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರಲ್ಲಿ ಸುಮಾರು 70% ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ವರ್ಗದವರಾಗಿದ್ದಾರೆ ಎಂದು ಅವರು ಉಲ್ಲೇಖಿಸಿದರು.

 

ಭಾರತದಾದ್ಯಂತ, ಸರಿಸುಮಾರು 3.5-4 ಕೋಟಿ ಜನರು ಜವಳಿ ಕ್ಷೇತ್ರದ ಒಟ್ಟು ಮೌಲ್ಯ ಸರಪಳಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ರೀ ಗೋಯಲ್ ಹೇಳಿದರು. ಕೃಷಿಯ ನಂತರ ಜವಳಿಯು ಎರಡನೇ ಅತಿ ದೊಡ್ಡ ಉದ್ಯೋಗ ಪೂರೈಕೆದಾರವಾಗಿದ್ದು. ಉದ್ಯಮದ ಗಾತ್ರ ಸುಮಾರು ₹10 ಲಕ್ಷ ಕೋಟಿ ಇದೆ. ರಫ್ತು ಸುಮಾರು ₹ 3.5 ಲಕ್ಷ ಕೋಟಿ ಇದೆ. ಜವಳಿ ಕ್ಷೇತ್ರವು ಮುಂದಿನ 5 ವರ್ಷಗಳಲ್ಲಿ ₹ 10 ಲಕ್ಷ ಕೋಟಿ ರಫ್ತು ಮಾಡುವ ಮೂಲಕ ₹ 20 ಲಕ್ಷ ಕೋಟಿ ಉದ್ಯಮಕ್ಕೆ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಪುನರುಚ್ಚರಿಸಿದರು. ಆದರೂ, 7.5-8 ಲಕ್ಷ ಕೋಟಿಯ ಸಾಧಾರಣ ರಫ್ತು ಗುರಿ ಮತ್ತು ಮುಂದಿನ 5 ವರ್ಷಗಳಲ್ಲಿ ಮಾಡಬಹುದಾದ ಸುಮಾರು 20 ಲಕ್ಷ ಕೋಟಿ ಉತ್ಪಾದನಾ ಗುರಿಯನ್ನು ನಿಗದಿಪಡಿಸಲಾಗಿದೆ.

ಕೋವಿಡ್ ಮತ್ತು ಇತರ ದೇಶಗಳ ನಡುವಿನ ಯುದ್ಧದ ವಿಷಯದಲ್ಲಿ ಭಾರತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅವರು ಮಾತನಾಡಿದರು. ಸವಾಲುಗಳ ಹೊರತಾಗಿಯೂ, ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎನ್ನುವುದನ್ನು ಅವರು ಒತ್ತಿ ಹೇಳಿದರು.

 

ಸಂಯೋಜಿತ ವಾರ್ಷಿಕ ಬೆಳವಣಿಗೆಯ ಆಧಾರದ ಮೇಲೆ ಭಾರತವು ಪ್ರತಿ ವರ್ಷ 8% ರಷ್ಟು ಬೆಳವಣಿಗೆಯನ್ನು ಸಾಧಿಸಿದರೆ, ಸುಮಾರು 9 ವರ್ಷಗಳಲ್ಲಿ ದ್ವಿಗುಣಗೊಂಡು ಆರ್ಥಿಕತೆಯು $ 6.5 ಟ್ರಿಲಿಯನ್ ಆರ್ಥಿಕತೆಯಾಗುವುದು ಎಂದು ಶ್ರೀ ಗೋಯಲ್ ಹೇಳಿದರು. ಅಂತೆಯೇ, ಇಂದಿನಿಂದ 18 ವರ್ಷಗಳಲ್ಲಿ, ಭಾರತದ ಆರ್ಥಿಕತೆಯು $13 ಟ್ರಿಲಿಯನ್ ಆರ್ಥಿಕತೆಯಾಗಬಹುದೆಂದು ಊಹಿಸಬಹುದು. ಇಂದಿನಿಂದ 27 ವರ್ಷಗಳಲ್ಲಿ, ಆರ್ಥಿಕ ಬೆಳವಣಿಗೆಯನ್ನು $ 26 ಟ್ರಿಲಿಯನ್ ಎಂದು ಲೆಕ್ಕಹಾಕಬಹುದು ಮತ್ತು ಆದ್ದರಿಂದ 30 ವರ್ಷಗಳ ನಂತರ, ಭಾರತವು $ 30 ಟ್ರಿಲಿಯನ್ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸದಿಂದ ಹೇಳಬಹುದು.

ತಿರುಪ್ಪೂರ್ ಹೊಸೈರಿ, ನಿಟೆಡ್ ಗಾರ್ಮೆಂಟ್ಸ್, ಕ್ಯಾಶುಯಲ್ ವೇರ್, ಕ್ರೀಡಾ ಉಡುಪುಗಳ ಪ್ರಮುಖ ಮೂಲವಾಗಿದೆ ಮತ್ತು ಹತ್ತಿ ಜಿನ್ನಿಂಗ್ಗೆ ಸಾಂಪ್ರದಾಯಿಕ ಕೇಂದ್ರವಾಗಿದೆ ಎಂದು ಅವರು ಹೇಳಿದರು.

 

ಅವರು ನಿನ್ನೆ ಸಿತ್ರಾಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅವರು ಅನೇಕ ವಿನೂತನ ಯೋಜನೆಗಳನ್ನು ನೋಡಿದರು. ಪ್ರಧಾನ ಮಂತ್ರಿ ಜನೌಷಧಿ ಯೋಜನೆ ಅಡಿಯಲ್ಲಿ ಕಡಿಮೆ ಬೆಲೆಯ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸಲು ಸಿತ್ರಾದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಮೆಷಿನರಿಯಲ್ಲಿ ಕೇಂದ್ರವು ಆರೋಗ್ಯ ಸಚಿವಾಲಯದೊಂದಿಗೆ ಕೆಲಸ ಮಾಡುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಶ್ರೀ ಗೋಯಲ್ ಅವರು ತಿರುಪ್ಪೂರ್‌ನಲ್ಲಿ ನಡೆದ ಎಕ್ಸ್‌ಪೋರ್ಟರ್ಸ್ ಮೀಟ್ ಕಮ್ ಫೆಲಿಸಿಟೇಶನ್ ಫಂಕ್ಷನ್‌ನಲ್ಲಿ ಭಾಗವಹಿಸಿದ್ದರು. ಅವರು ಭಾರತೀಯ ರಫ್ತು ಸಂಸ್ಥೆಗಳ ಫೆಡರೇಶನ್ (ಎಫ್‍ಐಇಒ) ಮತ್ತು ಉಡುಪು ರಫ್ತು ಪ್ರಮೋಷನ್ ಕೌನ್ಸಿಲ್ (ಎಇಪಿಸಿ) ಪ್ರತಿನಿಧಿಗಳೊಂದಿಗೆ ಸಂವಾದಾತ್ಮಕ ಸಭೆ ನಡೆಸಿದರು. ಡಾ. ಎಲ್ ಮುರುಗನ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ, ಡಾ. ಎ ಶಕ್ತಿವೇಲ್, ಅಧ್ಯಕ್ಷ, ಎಫ್ಐಇಒ, ಶ್ರೀ ಸುಧೀರ್ ಸೇಖ್ರಿ, ಉಪಾಧ್ಯಕ್ಷ, ಎಇಪಿಸಿ, ಶ್ರೀ ಟಿವಿ ಚಂದ್ರಶೇಖರನ್, ಎಚ್ಇಪಿಸಿ ಹಿಂದಿನ ಅಧ್ಯಕ್ಷ, ಶ್ರೀ ರಾಜಾ ಎಂ ಷಣ್ಮುಗಂ, ಅಧ್ಯಕ್ಷ, ಟಿಇಎ, ಶ್ರೀ ಗೀತಾಂಜಲಿ ಎಸ್ ಗೋವಿಂದಪ್ಪನ್, ಉಪಾಧ್ಯಕ್ಷರು, ಎಸ್‍ಐಎಚ್‍ಎಮ್‍ಎ, ಶ್ರೀ ಅಖಿಲ್ ಎಸ್ ರತ್ನಸಾಮಿ, ಅಧ್ಯಕ್ಷರು, ಕೆಎನ್‍ಐಟಿಸಿಎಮ್‍ಎ ಮತ್ತು ಶ್ರೀ ವಿ ಇಳಂಗೋವನ್, ಎಮ್‍ಸಿ ಸದಸ್ಯ, ಎಫ್‍ಐಇಒ. ಆರ್‍ಎಮ್‍ಜಿ ವಲಯವಲ್ಲದೆ 350 ಕ್ಕೂ ಹೆಚ್ಚು ರಫ್ತುದಾರರು ತಿರುಪುರ್, ಎಂಜಿನಿಯರಿಂಗ್, ಕೃಷಿ ಮತ್ತು ಪ್ರಕ್ರಿಯೆ ಆಹಾರ, ಜವಳಿ, ನೂಲು ವಲಯಗಳಿಂದ ಕೊಯಮತ್ತೂರು, ಕರೂರ್, ಮಧುರೈ ಈರೋಡ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಎಲ್ ಮುರುಗನ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರು ತಮ್ಮ ಭಾಷಣದಲ್ಲಿ ಹೊಸದಾಗಿ ಸಹಿ ಮಾಡಿದ ಎಫ್‌ಟಿಎಎಸ್‌ನ ಪ್ರಯೋಜನಗಳನ್ನು ಎತ್ತಿ ತೋರಿಸಿದರು, ಇದು ದೇಶವು ಹಲವು ಪಟ್ಟು ಬೆಳೆಯಲು ಸಹಾಯ ಮಾಡುತ್ತದೆ. ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ಪಿಎಂ ಗತಿ ಶಕ್ತಿ, ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನಂತಹ ಕ್ರಾಂತಿಕಾರಿ ಕ್ರಮಗಳು ಮೂಲಸೌಕರ್ಯ ಯೋಜನೆಯನ್ನು ಸುಧಾರಿಸಲು ಮತ್ತು ಸಮಯ ಮತ್ತು ಬಜೆಟ್‌ನಲ್ಲಿ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಲವು ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳನ್ನು ಸ್ಥಾಪಿಸುವುದು, ಕಂಟೈನರ್ ತಯಾರಿಕೆಯ ಮೇಲೆ ಕೇಂದ್ರೀಕರಿಸುವುದು, ಪೂರ್ವ ಪಶ್ಚಿಮ ಮತ್ತು ಉತ್ತರ ದಕ್ಷಿಣ ಸರಕು ಸಾಗಣೆ ಕಾರಿಡಾರ್‌ಗಳು ಒಂದೇ ದಿಕ್ಕಿನಲ್ಲಿ ಸಾಗುವ ಹೆಜ್ಜೆಗಳಾಗಿವೆ.

ಎಫ್‌ಐಇಒ ಅಧ್ಯಕ್ಷ ಡಾ ಎ ಶಕ್ತಿವೇಲ್ ತಮ್ಮ ಸ್ವಾಗತ ಭಾಷಣದಲ್ಲಿ ರಫ್ತುದಾರರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಲ್ಲಿ ಮತ್ತು ಮಾರುಕಟ್ಟೆ ಅವಕಾಶಗಳನ್ನು ತೆರೆಯುವಲ್ಲಿ ಭಾರತ ಸರ್ಕಾರದ ಪ್ರಯತ್ನಗಳನ್ನು ಶ್ಲಾಘಿಸಿದರು, ಇದು ಕಳೆದ ಆರ್ಥಿಕ ವರ್ಷದಲ್ಲಿ ದೇಶವು 422 ಬಿಲಿಯನ್ ಡಾಲರ್ ರಫ್ತು ದಾಟಲು ಸಹಾಯ ಮಾಡಿದೆ. ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ಎಫ್‌ಟಿಎಗಳನ್ನು ಮುಕ್ತಾಯಗೊಳಿಸುವಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ಅವಿರತ ಪ್ರಯತ್ನಗಳನ್ನು ಡಾ.ಶಕ್ತಿವೇಲ್ ಶ್ಲಾಘಿಸಿದರು ಮತ್ತು ಯುಕೆ, ಇಯು, ಜಿಸಿಸಿ ಇತ್ಯಾದಿಗಳೊಂದಿಗೆ ನಡೆಯುತ್ತಿರುವ ಮಾತುಕತೆಯು ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಎಫ್‌ಐಇಒ ಅಧ್ಯಕ್ಷರು ಗೌರವಾನ್ವಿತ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರ ಇವುಗಳ ಬಗ್ಗೆ ಗಮನವನ್ನು ಹರಿಸುವಂತೆ ವಿನಂತಿಸಿದರು - ಆರ್‍ಒಎಸ್‍ಸಿಟಿಎಲ್‍ ಮತ್ತು ಆರ್‍ಒಡಿಟಿಇಪಿ ವಿತರಣೆಯನ್ನು ಉತ್ತಮ ಮೌಲ್ಯಕ್ಕಾಗಿ ರಫ್ತಿನೊಂದಿಗೆ ಜೋಡಿಸುವುದು ಸೇರಿದಂತೆ, ಆರ್‍ಒಡಿಟಿಇಪಿ ಯಲ್ಲಿ ಉಳಿದಿರುವ ಕಬ್ಬಿಣ ಮತ್ತು ಉಕ್ಕು, ಔಷಧಿ, ಕೆಮಿಕಲ್ಸ್ ಇತ್ಯಾದಿ, ಲಾಭಗಳನ್ನು ರಫ್ತು ಆಧಾರಿತ ಘಟಕಕ್ಕೆ / ವಿಶೇಷ ವಲಯಕ್ಕೆ ವಿಸ್ತರಿಸುವುದು. ಎಎಎ/ಡಿಎಫ್‍ಎ ಬಳಕೆದಾರರು, ಕೃಷಿ ವಲಯಕ್ಕೆ ಪರಿಷ್ಕೃತ ಟಿಎಮ್‍ಎಘೋಷಿಸುವುದು, ಶ್ರೀಲಂಕಾಕ್ಕೆ ಮಾಡಿದ ರಫ್ತಿಗೆ ಹಣದ ಪರಿಹಾರ, ರಷ್ಯಾಕ್ಕೆ ರಫ್ತು ಮಾಡಲು ರೂಪಾಯಿ ಪಾವತಿ ವ್ಯವಸ್ಥೆ ಅನುಷ್ಠಾನ, ಎಮ್‍ಎಸ್‍ಎಮ್‍ಇ ಮಾರುಕಟ್ಟೆ ಪ್ರಚಾರ ನಿಧಿಯ ರಚನೆ, ಸೇವೆಗಳಲ್ಲಿ ಉದಯೋನ್ಮುಖ ವಲಯಗಳಿಗೆ ಮಾರುಕಟ್ಟೆ ಪ್ರವೇಶ , ಇತ್ಯಾದಿ.

 

 

ಶ್ರೀ ಸುಧೀರ್ ಸೇಖ್ರಿ, ಎಇಪಿಸಿ ಉಪಾಧ್ಯಕ್ಷರು ತಮ್ಮ ಭಾಷಣದಲ್ಲಿ ಹೊಸ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆ (ಟಿಯುಎಫ್‍ಎಸ್‍) ಯೋಜನೆಯನ್ನು ಘೋಷಿಸಲು, ಉಡುಪು ವಲಯಕ್ಕೆ ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ (ಪಿಎಲ್‍ಐ-2) ಘೋಷಿಣೆ ಮತ್ತು ಹತ್ತಿ ಮತ್ತು ಹತ್ತಿ ನೂಲು ರಫ್ತು ಮಾಡಲು ವಿನಂತಿಸಿದರು. ಹತ್ತಿ ಮತ್ತು ಹತ್ತಿ ನೂಲು ಸ್ಪರ್ಧಾತ್ಮಕ ಬೆಲೆಯಲ್ಲಿ ರಫ್ತು ಮಾಡುವ ಘಟಕಗಳಿಗೆ ಲಭ್ಯವಾಗುವಂತೆ ಸೂಕ್ತವಾಗಿ ಮಾಪನಾಂಕ ನಿರ್ಣಯಿಸಲು ವಿನಂತಿಸಿದರು.

******

 

 

 

 

 

 

 

 

 

 

 

 

 

 



(Release ID: 1837285) Visitor Counter : 157