ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 2022 ರ ಜೂನ್ 27 ರಿಂದ ಜುಲೈ 3 ರವರೆಗೆ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಐಕಾನಿಕ್ ಸಪ್ತಾಹ ಆಚರಣೆಗಳನ್ನು ಆಯೋಜಿಸಲಿದೆ.
Posted On:
24 JUN 2022 2:20PM by PIB Bengaluru
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 2022 ರ ಜೂನ್ 27 ರಿಂದ ಜುಲೈ 3 ರವರೆಗೆ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಐಕಾನಿಕ್ ಸಪ್ತಾಹ ಆಚರಣೆಗಳನ್ನು ಆಯೋಜಿಸುತ್ತಿದೆ . ಒಂದು ವಾರದ ಆಚರಣೆಯ ಭಾಗವಾಗಿ, ಕ್ಷೇತ್ರ ಕಾರ್ಯಾಚರಣೆ ವಿಭಾಗವು 2022 ರ ಜೂನ್ 27 ರಂದು ರಾಜ್ಯ ರಾಜಧಾನಿ ಪ್ರಾದೇಶಿಕ ಕಚೇರಿಗಳಲ್ಲಿ ಕಾಲೇಜು / ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಗಾಗಿ ಅಧಿಕೃತ ಅಂಕಿಅಂಶಗಳ ರಾಷ್ಟ್ರವ್ಯಾಪಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ.
ಆಜಾದಿ ಕಾ ಅಮೃತ ಮಹೋತ್ಸವದ ಆಚರಣೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಉತ್ಸಾಹದೊಂದಿಗೆ, ಅಧಿಕೃತ ಅಂಕಿಅಂಶಗಳ ಬಗ್ಗೆ ಜಾಗೃತಿಯನ್ನು ಉತ್ತೇಜಿಸಲು ಮತ್ತು ಭಾರತೀಯ ಅಧಿಕೃತ ಅಂಕಿಅಂಶ ವ್ಯವಸ್ಥೆಯ ವಿವಿಧ ಮುಖಗಳ ಬಗ್ಗೆ ಯುವ ಮನಸ್ಸುಗಳಿಗೆ ತಿಳಿವಳಿಕೆ ನೀಡಲು ಈ ಕಾರ್ಯಕ್ರಮವು ಉದ್ದೇಶಿಸಿದೆ.
ದೆಹಲಿಯ ಸರ್ದಾರ್ ವಲ್ಲಭಭಾಯ್ ಪಟೇಲ್ ಆಡಿಟೋರಿಯಂ, ಮಹಾರಾಜ ಅಗ್ರಸೇನ್ ಕಾಲೇಜು, ವಸುಂಧರಾ ಎನ್‌ಕ್ಲೇವ್, ದೆಹಲಿ-110096ಯಲ್ಲಿ ಕ್ಷೇತ್ರ ಕಾರ್ಯಾಚರಣೆ ವಿಭಾಗದ ದೆಹಲಿ ರಾಜ್ಯ ರಾಜಧಾನಿ ಪ್ರಾದೇಶಿಕ ಕಚೇರಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೆಹಲಿಯ ವಿವಿಧ ಕಾಲೇಜುಗಳು / ವಿಶ್ವವಿದ್ಯಾಲಯಗಳಿಂದ ಸುಮಾರು ನೂರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು ಮತ್ತು ವಿಜೇತ ತಂಡಗಳಿಗೆ ರೋಮಾಂಚಕಾರಿ ಬಹುಮಾನಗಳನ್ನು ನೀಡಲಾಗುವುದು.
******
(Release ID: 1837014)
Visitor Counter : 125