ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾ ಅವರು 21 ಜೂನ್ 2022 ರಂದು ಕರ್ನಾಟಕದ ವಿಜಯಪುರದಲ್ಲಿರುವ ಗೋಳ ಗುಮ್ಮಟ (ಗೋಲ್ ಗುಂಬಜ್) ದಿಂದ ಅಂತರಾಷ್ಟ್ರೀಯ ಯೋಗ ದಿನದ ಆಚರಣೆಯನ್ನು ಮುನ್ನಡೆಸಲಿದ್ದಾರೆ.


ಅಂತರಾಷ್ಟ್ರೀಯ ಯೋಗ ದಿನದ 8ನೇ ಆವೃತ್ತಿಯ ರಾಷ್ಟ್ರವ್ಯಾಪಿ ಆಚರಣೆಗಾಗಿ ಗೋಳ ಗುಮ್ಮಟವನ್ನು 75 ಪ್ರತಿಷ್ಠಿತ ಸ್ಥಳಗಳಲ್ಲಿ ಒಂದಾಗಿ ಆಯ್ಕೆಯಾಗಿದೆ

Posted On: 18 JUN 2022 6:10PM by PIB Bengaluru

8ನೇ ಅಂತರಾಷ್ಟ್ರೀಯ ಯೋಗ ದಿನದ  ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕರ್ನಾಟಕದ ಮೈಸೂರಿನ ಮೈಸೂರು ಅರಮನೆಯಿಂದ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ.
ದೇಶವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಚೈತನ್ಯದಲ್ಲಿ, ದೇಶಾದ್ಯಂತ 75 ಪ್ರಮುಖ ಪಾರಂಪರಿಕ ತಾಣಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಲಾಗುವುದು. ಅದರಲ್ಲಿ ಕರ್ನಾಟಕದ ವಿಜಯಪುರದ ಗೋಳ ಗುಮ್ಮಟ ಕೂಡ ಒಂದು. 2022 ರ ಜೂನ್ 21 ರಂದು ಕರ್ನಾಟಕದ ವಿಜಯಪುರದ ಗೋಳ ಗುಮ್ಮಟದಿಂದ ಯೋಗ ಆಚರಣೆಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾ ಚಾಲನೆ ನೀಡಲಿದ್ದಾರೆ. ಮೈಸೂರಿನ ಜೊತೆಗೆ ಕರ್ನಾಟಕದ ಇತರ ಕೆಲವು ತಾಣಗಳಾದ ಹಳೇಬೀಡು, ಹಂಪಿ, ಪಟ್ಟದಕಲ್ ಮತ್ತು ವಿಜಯಪುರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. 

ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಘೋಷಿಸಿದ 'ಮಾನವೀಯತೆಗಾಗಿ ಯೋಗ' ಎನ್ನುವ ವಿಷಯದ ಮೇಲೆ ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನದ 8ನೇ ಆವೃತ್ತಿಯನ್ನು ಆಯೋಜಿಸಲಾಗುವುದು. ಸನ್ಮಾನ್ಯ ಪ್ರಧಾನಮಂತ್ರಿಯವರ ಭಾಷಣವು ಡಿಡಿ ನ್ಯಾಷನಲ್ ಮತ್ತು ಇತರ ಡಿಡಿ ವಾಹಿನಿಗಳಲ್ಲಿ ಬೆಳಗ್ಗೆ 6:40 ರಿಂದ 7:00 ರವರೆಗೆ ನೇರಪ್ರಸಾರವಾಗಲಿದೆ. ಅಂತಾರಾಷ್ಟ್ರೀಯ ಯೋಗ ದಿನದ ಹಿಂದಿನ ಎಲ್ಲಾ ಆವೃತ್ತಿಗಳ ಮುಖ್ಯಾಂಶಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸಲು ಮೈಸೂರಿನಲ್ಲಿ ಡಿಜಿಟಲ್ ಯೋಗ ಪ್ರದರ್ಶನವನ್ನು ಆಯೋಜಿಸಲಾಗಿದೆ.

'ಮಾನವೀಯತೆಗಾಗಿ ಯೋಗ' ಎನ್ನುವ ವಿಷಯವು ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ಸಾಂಕ್ರಾಮಿಕ ಸಮಯದಲ್ಲಿ ಯೋಗವು ನಿರ್ವಹಿಸಿದ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುತ್ತದೆ.  ಅಂತಾರಾಷ್ಟ್ರೀಯ ಯೋಗ ದಿನದ ಯೋಜನೆಗಳಾದ  'ಬ್ರ್ಯಾಂಡ್ ಇಂಡಿಯಾ ಅಟ್ ಗ್ಲೋಬಲ್ ಸ್ಟೇಜ್'ನ ಆಚರಿಸುವಾಗ ಸ್ಥಳೀಯ ಸಾಂಪ್ರದಾಯಿಕ ಸ್ಥಳಗಳ  ಪ್ರದರ್ಶನ ಕೂಡ ಇರುವುದು. ಸಾಮಾನ್ಯ ಯೋಗ ಪ್ರೋಟೋಕಾಲ್ (ಸಿವೈಪಿ ) ಎನ್ನುವ 45 ನಿಮಿಷಗಳ ಮಾರ್ಗದರ್ಶನವನ್ನು  ಸಿದ್ಧಪಡಿಸಲಾಗಿದೆ ಮತ್ತು ಸಾಮೂಹಿಕ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ.

ಈ ವರ್ಷ, ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆಯ ಪ್ರಮುಖ ಮುಖ್ಯಾಂಶಗಳಲ್ಲಿ ಒಂದು 'ಗಾರ್ಡಿಯನ್ ರಿಂಗ್'  ಆಗಿದ್ದು, ಪ್ರಪಂಚದಾದ್ಯಂತ ನಡೆಯುತ್ತಿರುವ ಯೋಗ ಆಚರಣೆಗಳನ್ನು ಯೋಗ ದಿನದಾದ್ಯಂತ ಪ್ರಸಾರ ಮಾಡಲಾಗುತ್ತದೆ. "ದಿ ಗಾರ್ಡಿಯನ್ ರಿಂಗ್" "ಒಂದು ಸೂರ್ಯ, ಒಂದು ಭೂಮಿ" ಪರಿಕಲ್ಪನೆಯನ್ನು ಒತ್ತಿಹೇಳುತ್ತದೆ ಮತ್ತು ಯೋಗದ ಏಕೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ.

ಯೋಗದ ಮೊದಲ ಅಂತರರಾಷ್ಟ್ರೀಯ ದಿನವನ್ನು 21 ಜೂನ್ 2015 ರಂದು ಆಚರಿಸಲಾಯಿತು. ಡಿಸೆಂಬರ್ 2014 ರಲ್ಲಿ  ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯು ಎನ್‍ ಜಿ ಎ)ಯು ಅಂತಾರಾಷ್ಟ್ರೀಯ ಯೋಗ ದಿನದ ಘೋಷಣೆಯ  ನಿರ್ಣಯವು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಕ್ರಮದಿಂದ ಬಂದಿತು ಮತ್ತು ಸರ್ವಾನುಮತದ ಒಪ್ಪಿಗೆಯಿಂದ ಅಂಗೀಕರಿಸಲಾಯಿತು.

 

******


(Release ID: 1835177) Visitor Counter : 155


Read this release in: English , Urdu , Hindi , Tamil