ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

'ಜೇಡಿಮಣ್ಣಿನಿಂದ ಮಾಡಿದ ವಿದ್ಯುತೇತರ ಶೀತಲೀಕರಣ ಕ್ಯಾಬಿನೆಟ್' ಗಾಗಿ ಭಾರತೀಯ ಮಾನದಂಡವನ್ನು ಅಭಿವೃದ್ಧಿಪಡಿಸಿದ ಭಾರತೀಯ ಮಾನಕ ಸಂಸ್ಥೆ (ಬಿಐಎಸ್).


ಈ ಮಾನದಂಡವು  ವಿಶ್ವಸಂಸ್ಥೆಯ 6 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಈಡೇರಿಸಲು ಸಹಾಯ ಮಾಡುತ್ತದೆ.

ಗುಜರಾತ್ ನ ಶ್ರೀ ಮನ್ಸುಖ್ ಭಾಯಿ ಪ್ರಜಾಪತಿ ಅವರ ಕಲ್ಪನೆಯ ಕೈಗೂಸು ಮಿಟ್ಟಿಕೂಲ್ ರೆಫ್ರಿಜರೇಟರ್.

Posted On: 16 JUN 2022 4:42PM by PIB Bengaluru



ರಾಷ್ಟ್ರೀಯ ಗುಣಮಟ್ಟದ ಸಂಸ್ಥೆಯಾದ ಭಾರತೀಯ ಮಾನಕ ಸಂಸ್ಥೆ (ಬಿಐಎಸ್), 'ಜೇಡಿಮಣ್ಣಿನಿಂದ ತಯಾರಿಸಲಾದ ವಿದ್ಯುತ್ತೇತರ ಶೀತಲೀಕರಣ ಕ್ಯಾಬಿನೆಟ್' ಗಾಗಿ ಭಾರತೀಯ ಮಾನದಂಡ, ಐಎಸ್ 17693: 2022 ಅನ್ನು ಅಭಿವೃದ್ಧಿಪಡಿಸಿದೆ.
'ಮಿಟ್ಟಿಕೂಲ್ ರೆಫ್ರಿಜರೇಟರ್' ಎಂದು ಹೆಸರಿಸಲಾದ ರೆಫ್ರಿಜರೇಟರ್ ನ ಆವಿಷ್ಕಾರದ ಹಿಂದೆ  ಗುಜರಾತ್ ನ ಶ್ರೀ ಮನ್ಸುಖ್ ಭಾಯಿ ಪ್ರಜಾಪತಿ ಅವರ ಪರಿಶ್ರಮವಿದ್ದು, ಇದು ಪರಿಸರ ಸ್ನೇಹಿ ತಂತ್ರಜ್ಞಾನವನ್ನು  ಬಿಂಬಿಸುತ್ತದೆ. 
ಬಿಐಎಸ್ ಮಾನದಂಡವು ಜೇಡಿಮಣ್ಣಿನಿಂದ ಮಾಡಿದ ಶೀತಲೀಕರಣ ಪೆಟ್ಟಿಗೆ (ಕೂಲಿಂಗ್ ಕ್ಯಾಬಿನೆಟ್) ನಿರ್ಮಾಣ ಮತ್ತು ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ನಿರ್ದಿಷ್ಟಪಡಿಸುತ್ತದೆ, ಇದು ಆವಿಯಾಗುವಿಕೆಯಿಂದ ತಂಪಾಗಿಸುವ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ಪೆಟ್ಟಿಗೆಗಳನ್ನು ವಿದ್ಯುತ್ ಅಗತ್ಯವಿಲ್ಲದೆಯೇ ಹಾಳಾಗುವ ಆಹಾರ ಪದಾರ್ಥಗಳನ್ನು ಕೆಡದಂತೆ ಸಂಗ್ರಹಿಸಿಡಲು ಬಳಸಬಹುದಾಗಿದೆ.
ಬಡತನವಿಲ್ಲದಿರುವುದು, ಶೂನ್ಯ ಹಸಿವು, ಲಿಂಗ ಸಮಾನತೆ, ಅಗ್ಗದ ಮತ್ತು ಶುದ್ಧ ಇಂಧನ, ಕೈಗಾರಿಕೆ, ನಾವಿನ್ಯತೆ ಮತ್ತು ಮೂಲಸೌಕರ್ಯ ಹಾಗೂ ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆಯಂತಹ ವಿಶ್ವಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (ಎಸ್.ಡಿಜಿ) 6ನ್ನು ಪೂರೈಸಲು ಈ ಮಾನದಂಡವು ಬಿಐಎಸ್ ಗೆ ಸಹಾಯ ಮಾಡುತ್ತದೆ.
ಇದು ತರಕಾರಿಗಳು, ಹಣ್ಣುಗಳು, ಹಾಲು ಮತ್ತು ತಂಪಾದ ನೀರನ್ನು ಸಂಗ್ರಹಿಸಲು ಜೇಡಿಮಣ್ಣಿನಿಂದ ತಯಾರಿಸಲಾದ ನೈಸರ್ಗಿಕ ರೆಫ್ರಿಜರೇಟರ್ ಆಗಿದೆ. ಇದರ ಕಾರ್ಯಾಚರಣೆಗೆ ಯಾವುದೇ ವಿದ್ಯುತ್ ಅಗತ್ಯವಿರುವುದಿಲ್ಲ, ಅದು ಸಂಗ್ರಹಿಸಿಟ್ಟ ಆಹಾರ ಪದಾರ್ಥಗಳಿಗೆ ನೈಸರ್ಗಿಕ ತಂಪನ್ನು ಒದಗಿಸುತ್ತದೆ. ಇದರಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಹಾಲನ್ನು ಅದರ ಗುಣಮಟ್ಟ ಹಾಳಾಗದಂತೆ ಸಾಕಷ್ಟು ತಾಜಾತನದೊಂದಿಗೆ ಸಂಗ್ರಹಿಸಿಡಬಹುದು.
ಉತ್ಪನ್ನದ ಪರಿಣಾಮಕಾರಿತ್ವವು ಅಪರಿಮಿತವಾಗಿದೆ.  ಕೆಲವನ್ನು ಉದಾಹರಿಸುವುದಾದರೆ, ಇದು ಕುಂಬಾರಿಕೆ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಪುನಶ್ಚೇತನಗೊಳಿಸುವಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸುತ್ತಿದೆ; ಉತ್ತಮ ಆರೋಗ್ಯಕರ ವಿಧಾನಗಳಲ್ಲಿ ಜನರನ್ನು ಬೇರುಗಳಿಗೆ ಮರಳಿ ಸಂಪರ್ಕಿಸುವುದು; ಸುಸ್ಥಿರ ಬಳಕೆಯನ್ನು ಉತ್ತೇಜಿಸುವುದು; ಆರ್ಥಿಕವಾಗಿ ಹಿಂದುಳಿದ ಸಮುದಾಯವನ್ನು ಸಬಲೀಕರಣಗೊಳಿಸುವುದು; ಹಸಿರು ಮತ್ತು ತಂಪಾದ ಭೂಮಿ, ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಕೆಲಸ ಮಾಡುವುದು; ಮತ್ತು ಅಂತಿಮವಾಗಿ ಗ್ರಾಮೀಣ ಮಹಿಳೆಯರ ಸಬಲೀಕರಣ ಮತ್ತು ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡಲೂ ಕೊಡುಗೆ ನೀಡುತ್ತದೆ.
ರಾಷ್ಟ್ರೀಯ ನಾವೀನ್ಯತೆ ಪ್ರತಿಷ್ಠಾನ (ಎನ್ಐಎಫ್) ಸಹಭಾಗಿತ್ವದಲ್ಲಿ ರಾಷ್ಟ್ರಪತಿ ಭವನದಲ್ಲಿ (2017) ನಡೆದ ದೇಶೀಯ ನಾವೀನ್ಯತೆಯ ಪಾರಂಗತರ (ಇನ್ನೋವೇಶನ್ಸ್ ಸ್ಕಾಲರ್ಸ್ ಇನ್-ರೆಸಿಡೆನ್ಸ್) ಕಾರ್ಯಕ್ರಮದ 4ನೇ ಬ್ಯಾಚ್ ನಲ್ಲಿ 'ಮಿಟ್ಟಿಕೂಲ್ ರೆಫ್ರಿಜರೇಟರ್' ಅನ್ನು ಪ್ರದರ್ಶಿಸಲಾಗಿತ್ತು, ಇದು ಯಾವುದೇ ತಾಂತ್ರಿಕ ಕ್ಷೇತ್ರದಲ್ಲಿ ವ್ಯಕ್ತಿಗಳು ಮತ್ತು ಸ್ಥಳೀಯ ಸಮುದಾಯಗಳು ಅಭಿವೃದ್ಧಿಪಡಿಸಿದ ತಳಮಟ್ಟದ ನಾವೀನ್ಯತೆಯನ್ನು ಅನ್ವೇಷಿಸುತ್ತದೆ, ಬೆಂಬಲಿಸುತ್ತದೆ ಮತ್ತು ಉತ್ಪಾದಿಸುತ್ತದೆ, ಔಪಚಾರಿಕ ವಲಯದ ಯಾವುದೇ ಸಹಾಯವಿಲ್ಲದೆ ಉತ್ಪನ್ನ ಮತ್ತು ವೃತ್ತಿಪರ ಅಭಿವೃದ್ಧಿಗೆ ನೆರವಾಗುತ್ತದೆ.
ಶೀತಲೀಕರಣವು ಒಂದು ಆಹಾರ ಶೇಖರಣಾ ತಂತ್ರವಾಗಿದ್ದು, ಇದು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ, ಇದರಿಂದ ಅದರ ಕಾಪಿಡುವ ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಬಳಕೆಗೆ ಯೋಗ್ಯವಾಗಿಸುತ್ತದೆ.
ತಂತ್ರಜ್ಞಾನ ಮತ್ತು ಪ್ರಗತಿಯಿಂದ ಜಗತ್ತು ಪ್ರಾಬಲ್ಯ ಹೊಂದಿರುವ ಈ ಯುಗದಲ್ಲಿ, ನಮ್ಮ ದೇಶದಲ್ಲಿ ಇನ್ನೂ ಸಾಂಪ್ರದಾಯಿಕ ತಂಪಾಗಿಸುವಿಕೆಯ ಮೇಲೆ ಅವಲಂಬಿತರಾಗಿರುವ ಜನರೂ ಇದ್ದಾರೆ. ಕಾರ್ಖಾನೆಗಳಲ್ಲಿ ತಯಾರಿಸಿದ ವಿವಿಧ ವಸ್ತುಗಳು, ಉತ್ಪನ್ನಗಳು, ಸಲಕರಣೆಗಳು ಮಾರುಕಟ್ಟೆಗೆ ಲಗ್ಗೆಯಿಡುವವರೆಗೂ ಮಣ್ಣಿನ ಮಡಕೆಗಳು ಭಾರತೀಯರ ಅಡುಗೆ ಮನೆಗಳ ಅವಿಭಾಜ್ಯ ಅಂಗವಾಗಿದ್ದವು.

 

****



(Release ID: 1834570) Visitor Counter : 183