ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ

ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ “ಐಕಾನಿಕ್ ವೀಕ್” ಕಾರ್ಯಕ್ರಮ ಉದ್ಘಾಟಿಸಿದ ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್


ಸುಗಮಗೊಳಿಸುವ ಮತ್ತು ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ ದ್ವಿಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ‍್ರೀಮತಿ ನಿರ್ಮಲಾ ಸೀತಾರಾಮನ್

75 ವರ್ಷ ಮೀರಿದ ಹಿರಿಯ ನಾಗರಿಕರಿಗಾಗಿ ವಿಶೇಷ ವಿಂಡೋ ಸೌಲಭ್ಯ ಉದ್ಘಾಟಿಸಿದ ಹಣಕಾಸು ಸಚಿವರು

Posted On: 07 JUN 2022 4:34PM by PIB Bengaluru

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ “ಐಕಾನಿಕ್ ವೀಕ್ “ ಕಾರ್ಯಕ್ರಮ ಉದ್ಘಾಟಿಸಿದರು.  

ಕೇಂದ್ರ ಸಾಂಸ್ಥಿಕ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀ ರಾವ್ ಇಂದ್ರಜಿತ್ ಸಿಂಗ್ ಅವರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು. ಜೊತೆಗೆ ಎಂ.ಸಿ.ಎ ಕಾರ್ಯದರ್ಶಿ ಶ್ರೀ ರಾಜೇಶ್ ವರ್ಮಾ, ಎಂ.ಸಿ.ಎ ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ವಿಭಾಗದ ಸಲಹೆಗಾರ ಶ್ರೀ ಸಂಜಯ್ ಕುಮಾರ್ ಮತ್ತು ಪೋಸ್ಟ್ ಮಾಸ್ಟರ್ ಜನರಲ್ [ಕಾರ್ಯಾಚರಣೆ] ಶ್ರೀ ಅಶೋಕ್ ಕುಮಾರ್, ಸಚಿವಾಲಯದಡಿ ಬರುವ ಇತರೆ ಅಧೀನ ಮತ್ತು ನಿಯಂತ್ರಣ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.  

ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮಾತನಾಡಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ಕಳೆದ ಎಂಟು ವರ್ಷಗಳಲ್ಲಿ ದಿವಾಳಿತನ ಮತ್ತು ದಿವಾಳಿತನ ಸಂಹಿತೆ, ಕಂಪೆನಿಗಳ ಅಪರಾಧೀಕರಣ ಕಾಯ್ದೆ 2013 ಮತ್ತು ಸೀಮಿತ ಪಾಲುದಾರಿಕೆ, ಹೊಣೆಗಾರಿಕೆ ಕಾಯ್ದೆ 2008 ಸೇರಿದಂತೆ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ತಾಂತ್ರಿಕ ಮತ್ತು ಕಾರ್ಯವಿಧಾನಗಳ ಉಲ್ಲಂಘನೆಗಳ ಅಪರಾಧೀಕರಣ ಕುರಿತಾದ ಕ್ರಮ ಇದರಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದ್ದು, ಪ್ರಧಾನಮಂತ್ರಿ ಅವರು “ನಿಮ್ಮ ವ್ಯವಹಾರಗಳನ್ನು ನಂಬಿರಿ, ಸರ್ಕಾರ ಅವುಗಳನ್ನು ಅನುಕೂಲಕರ ನೋಡುತ್ತಿದೆ ಎಂಬ ವಿಶ್ವಾಸ ಮೂಡಿಸಿ” ಎಂದು ಸಂದೇಶ ನೀಡಿರುವುದು ವಿಶೇಷವಾದದ್ದು ಎಂದರು.  

ಎಂ.ಸಿ.ಎ ಅನನ್ಯವಾಗಿದ್ದು, ಇದರ ನಿಯಂತ್ರಣಗಳಿಂದ ಜನರಿಗೆ ಅನುಕೂಲವಾಗುತ್ತಿದೆ. ಇದರಿಂದ ಸಾಮಾನ್ಯ ಭಾರತೀಯರ ಮೇಲೆ ಪರಿಣಾಮವಾಗುತ್ತಿದ್ದು, ಅದು ಸಣ್ಣ ವ್ಯಾಪಾರಸ್ಥರು ಅಥವಾ ದೊಡ್ಡ ಉದ್ದಿಮೆ ದಾರರಾಗಿರಬಹುದು, ಇಲ್ಲವೆ ಸಣ್ಣ ಹೂಡಿಕೆದಾರರೇ ಆಗಿರಬಹುದು ಎಂದರು.   

“ಕೋವಿಡ್ – 19 ಕಾರಣದಿಂದಾಗಿ ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿ ಎಂ.ಸಿ.ಎ ತನ್ನ ಕಾಲಮೇಲೆ ಗಟ್ಟಿಯಾಗಿ ನೆಲೆಯೂರಿತ್ತು ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಜನತೆ ಕೂಡ ಚಿಂತೆ ಮಾಡದೇ ಸಾಮಾನ್ಯ ವ್ಯವಹಾರಗಳನ್ನು ನಡೆಸಿಕೊಂಡು ಹೋಗಬಹುದು ಎಂಬ ವಿಭಿನ್ನ ಕ್ರಮಗಳು ಮತ್ತು ತ್ವರಿತ ಹೆಜ್ಜೆಗಳನ್ನು ಇಟ್ಟಿತ್ತು” ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.  

ಭಾರತದಲ್ಲಿನ ದೇಶೀಯ ಹೂಡಿಕೆದಾರರ ಕುರಿತು ಮಾತನಾಡಿದ ಹಣಕಾಸು ಸಚಿವರು, “ಭಾರತದಲ್ಲಿ ಚಿಲ್ಲರೆ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಮುಂದೆ ಬಂದಿದ್ದು, ಅವರು ವಾಹನಗಳ ಶಾಕ್ ಅಬ್ಸಾರ್ಬ್ಸ್ ಗಳ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಂತೆ ಭಾಸವಾಗುತ್ತಿದೆ. ಇಪಿಐಗಳು ಮತ್ತು ಎಫ್ಐಐ ಗಳು ದೂರ ಹೋದರೂ, ತಮ್ಮ ಮಾರುಕಟ್ಟೆಗಳು ವಿಶೇಷವಾಗಿ ಏರಿಳಿತ ಕಾಣಲಿಲ್ಲ. ಏಕೆಂದರೆ ಸಣ‍್ಣ ಹೂಡಿಕೆದಾರರು ದೇಶದಲ್ಲಿ ದೊಡ್ಡ ರೀತಿಯಲ್ಲಿ ಬಂದಿದ್ದಾರೆ ಎಂದರು.

ಅಭಿವೃದ್ಧಿ ಹೊಂದಿದ ಭಾರತ@100 ಅಭಿಯಾನದಲ್ಲಿ ಪಾಲುದಾರರಾಗಿರುವ ವೃತ್ತಿಪರ ಸಂಸ್ಥೆಗಳು ಮತ್ತು ಸಚಿವಾಲಯದಡಿ ಬರುವ ಇತರೆ ಸಂಸ್ಥೆಗಳ  ಪ್ರಾಮುಖ್ಯವನ್ನು ಹಣಕಾಸು ಸಚಿವರು ಪ್ರಸ್ತಾಪಿಸಿದರು.

ಕೇಂದ್ರ ಸಾಂಸ್ಥಿಕ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀ ರಾವ್ ಇಂದ್ರಜಿತ್ ಸಿಂಗ್ ಮಾತನಾಡಿ, ನಿರಂತರ ಆರ್ಥಿಕ ಬೆಳವಣಿಗೆಯಿಂದ ವಿಕಸನಗೊಳ್ಳುತ್ತಿರುವ ಸಾಂಸ್ಥಿಕ ವಿಭಾಗದಲ್ಲಿ ಜವಾಬ್ದಾರಿಯುತ ಆಡಳಿತ ಹೇಗಿರಬೇಕು ಎಂಬ ಮಹತ್ವದ ವಿಷಯದ ಬಗ್ಗೆ ಒತ್ತಿ ಹೇಳಿದರು. ಕಳೆದ 75 ವರ್ಷಗಳಲ್ಲಿ ದೇಶ ಕಂಡಿರುವ ಪ್ರಗತಿಪರ ಬದಲಾವಣೆ ಮುಂದಿನ ಹಾದಿಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವ್ ಆಚರಣೆ ಸ್ಮರಣಾರ್ಥ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಾಂಸ್ಥಿಕ ಆಡಳಿತ ವ್ಯವಸ್ಥೆ ಕುರಿತು ಕಿರು ಚಿತ್ರ ಬಿಡುಗಡೆ ಮಾಡಿದರು. ಹಣಕಾಸು ಸಾಕ್ಷರತೆ ಮತ್ತು ಹೂಡಿಕೆದಾರರ ಜಾಗೃತಿಯ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು ಮತ್ತು “ದಿವಾಳಿತನ– ಈಗ ಮತ್ತು ನಂತರ” ಕುರಿತು ಐಬಿಸಿಯಿಂದ ಹೊರತರಲಾದ ಪ್ರಕಟಣೆಯನ್ನು ಹೊರತಂದರು. ಐಇಪಿಎಫ‍್ ಪ್ರಾಧಿಕಾರದಿಂದ ರೀಫಂಡ್ ಸೌಲಭ್ಯ ಪಡೆಯುವ ಕುರಿತಂತೆ ಹಣಕಾಸು ಸಚಿವರು 75 ವರ್ಷ ಮೀರಿದ ಹಿರಿಯ ನಾಗರಿಕರಿಗಾಗಿ ವಿಶೇಷ ವಿಂಡೋ ಸೌಲಭ್ಯವನ್ನು ಲೋಕಾರ್ಪಣೆ ಮಾಡಿದರು.

ಹೂಡಿಕೆದಾರರ ಪ್ರತಿಜ್ಞೆ ಕುರಿತ ಮತ್ತೊಂದು ಕಿರು ಚಿತ್ರವನ್ನು ಬಿಡುಗಡೆ ಮಾಡಿದ ಹಣಕಾಸು ಸಚಿವರು, ರಾಷ್ಟ್ರೀಯ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ [ಸಿ.ಎಸ್.ಆರ್] ವಿನಿಯಮ ಪೋರ್ಟಲ್ ಅನ್ನು ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮವನ್ನು 75 ಸ್ಥಳಗಳಲ್ಲಿ ಏಕಕಾಲಕ್ಕೆ ಆಯೋಜಿಸಲಾಗಿತ್ತು.

 

ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೊಳಪಡುವ ವಿವಿಧ ಸಂಸ್ಥೆಗಳಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು, ಇವುಗಳ ಸಾಧನೆಗಳನ್ನು ಪ್ರತಿಬಿಂಬಿಸಲಾಯಿತು.

ಈ ಕಾರ್ಯಕ್ರಮ ವಿವಿಧ ಕೈಗಾರಿಕಾ ವಲಯದ ತಜ್ಞರು, ಗ್ರಾಹಕ ಸಮುದಾಯ ಮತ್ತು ಹೂಡಿಕೆದಾರರು, ನಿಯಂತ್ರಣ ವಲಯದ ಪರಿಣಿತರು, ವೃತ್ತಿಪರರು, ಕಾರ್ಪೋರೇಟ್ ವಲಯ, ಹೂಡಿಕೆದಾರರು ಮತ್ತು ಇತರೆ ಪಾಲುದಾರರ ಮಿಶ್ರಣದೊಂದಿಗೆ ವಿಶೇಷತೆಯಿಂದ ಕೂಡಿತ್ತು.

ಭಾರತೀಯ ಸ್ಪರ್ಧಾತ್ಮಕ ಆಯೋಗ, ದಿವಾಳಿತನ ಮತ್ತು ಭಾರತೀಯ ದಿವಾಳಿತನ ಮಂಡಳಿ, ಭಾರತೀಯ ಸಾಂಸ್ಥಿಕ ವ್ಯವಹಾರಗಳ ಸಂಸ್ಥೆ ಹಾಗೂ ಐ.ಸಿ.ಎಸ್.ಐ, ಐ.ಸಿ.ಎ.ಐ, ಐ,ಸಿ,ಒ,ಎ,ಐ ಸಂಸ್ಥೆಗಳ ಸಹಯೋಗದಲ್ಲಿ ಐಇಪಿಎಫ್ ಪ್ರಾಧಿಕಾರ ವಿವಿಧ ತಾಂತ್ರಿಕ ಅಧಿವೇಶನಗಳನ್ನು ಆಯೋಜಿಸಲಾಗಿತ್ತು.

ಐಡಿಯಾಸ್@75, ರಿಸಾಲ್ವ್@75, ಆಕ್ಷನ್@75, ಅಚೀವ್ಮೆಂಟ್@75 ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದ ಸ್ಮರಣಾರ್ಥ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಕಳೆದ ಒಂದು ವರ್ಷದಿಂದ 360 ಸ್ಥಳಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳನ್ನು ಎಲ್ಲಾ ಪಾಲುದಾರರು ಒಳಗೊಳ್ಳುವ ಮತ್ತು ಜನತೆ ಪಾಲ್ಗೊಳ್ಳುವ ಸ್ಫೂರ್ತಿಯನ್ನು ಉತ್ತೇಜಿಸುವ ಅಂಗವಾಗಿ ಏರ್ಪಡಿಸಲಾಗಿತ್ತು.

*****



(Release ID: 1831936) Visitor Counter : 289