ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಟ್ರ್ಯಾಕ್ಟರ್ ಚಾಲಕನ ಮಗಳು ಜಾರ್ಖಂಡ್‌ನ ಇದು ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕಬಡ್ಡಿಗೆ ಪ್ರವೇಶಿಸಿದ ಕಿರಿಯ ಆಟಗಾರ್ತಿ

Posted On: 06 JUN 2022 5:00PM by PIB Bengaluru

ಜಾರ್ಖಂಡ್‌ನ ಈತು ಮಂಡಲ್ ಶನಿವಾರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡುವ ಮೊದಲೇ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದು ಕೇವಲ 13 ವರ್ಷ ವಯಸ್ಸಿನಲ್ಲೇ ಯೂತ್ ಗೇಮ್ಸ್‌ನ ಈ ಆವೃತ್ತಿಯಲ್ಲಿ ಕಬಡ್ಡಿ ಆಟಗಾರರನ್ನು ಎದುರಿಸಿದ ಅತ್ಯಂತ ಕಿರಿಯ ಕಬಡ್ಡಿ ಸ್ಪರ್ಧಿಯಾಗಿದ್ದಾರೆ.

ಟ್ರ್ಯಾಕ್ಟರ್ ಚಾಲಕನ ಮಗಳಾದ ಈತು ಮಂಡಲ್ ಕೇವಲ ಎಂಟು ವರ್ಷದವಳಾಗಿದ್ದಾಗ ಕಬಡ್ಡಿಯ ಗೀಳನ್ನು ಹೊಂದಿದ್ದಳು. ತನ್ನ ಸುತ್ತಲಿರುವ ಎಲ್ಲಾ ಶಕ್ತಿಶಾಲಿ ಮಹಿಳೆಯರಿಂದ ಪ್ರಭಾವಿತಳಾದ ಅವರು 18 ವರ್ಷದೊಳಗಿನ ಯುವ ತಂಡದ ಭಾಗವಾಗಲು ವೇಗವಾಗಿ ಸಾಗಿದ್ದಾರೆ. 

ಟ್ರ್ಯಾಕ್ಟರ್ ಚಾಲಕನ ಮಗಳಾದ ಈತು ಮಂಡಲ್ ಕೇವಲ ಎಂಟನೇ ವಯಸ್ಸಿನಲ್ಲಿ ಕಬಡ್ಡಿಯನ್ನು ಪ್ರೀತಿಸುತ್ತಿದ್ದರು. ತನ್ನ ಸುತ್ತಲಿರುವ ಎಲ್ಲಾ ಶಕ್ತಿಶಾಲಿ ಮಹಿಳೆಯರಿಂದ ಪ್ರಭಾವಿತರಾದ ಅವರು 18 ವರ್ಷದೊಳಗಿನ ಯುವ ತಂಡದ ಭಾಗವಾಗಿ ವೇಗವಾಗಿ ಬೆಳೆದಿದ್ದಾರೆ.
 
 “ನನ್ನ ಹೆತ್ತವರು ನನಗಾಗಿ ಚಿಂತಿತರಾಗಿದ್ದರು. ಆದರೆ ನಾನು ಎಂದಿಗೂ ಹೆದರಲಿಲ್ಲ,” ಎಂದು ಅವರು ಮಹಾರಾಷ್ಟ್ರ ವಿರುದ್ಧದ ತನ್ನ ತಂಡದ ಮೊದಲ ಪಂದ್ಯದ ಸ್ವಲ್ಪ ಸಮಯದ ನಂತರ ಹೇಳಿದರು.
ಈತು ಮಂಡಲ್ ಅವರ 'ದಾಖಲೆ' ಹೆಚ್ಚು ಕಾಲ ಉಳಿಯದಿರಬಹುದು, ಏಕೆಂದರೆ ಅವಳಿಗಿಂತ ಐದು ವರ್ಷ ಚಿಕ್ಕವಳಾದ ಅವರ ಸಹೋದರಿ ಕೂಡ ಕಬಡ್ಡಿಯನ್ನು ಇಷ್ಟಪಡುತ್ತಾಳೆ ಮತ್ತು ಈಗಾಗಲೇ ಉತ್ತಮ ಆಟಗಾರ್ತಿಯಾಗಿ ಬದಲಾಗುತ್ತಿದ್ದಾಳೆ.
ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಮಧುಬನ್ ಗ್ರಾಮದ ನಿವಾಸಿ ಈತು, "ನಾನು ನನ್ನ ಕುಟುಂಬದಲ್ಲಿ ಹಿರಿಯಳಾಗಿದ್ದೇನೆ ಮತ್ತು ನನ್ನ ತಂದೆ ತಾಯಿ ನನಗೆ ಮುಂದುವರಿಯಲು ಬೆಂಬಲ ನೀಡುತ್ತಾರೆ" ಎಂದು ಹೇಳಿದರು. ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಲು ಅವರು ನನ್ನ ಮೇಲೆ ಯಾವುದೇ ಒತ್ತಡ ಹೇರಿಲ್ಲ,'' ಎಂದು ಅವರು ಹೇಳಿದರು. 

ಈ ಆಟದಲ್ಲಿ ಈತು ಇನ್ನೂ ಬಹಳ ದೂರ ಸಾಗಬೇಕಾಗಿದೆ, ಆದರೆ ಅವರು ನಿರ್ಧಾರ ತೆಗೆದುಕೊಂಡ ನಂತರ ಮುಂದೆ ಏನು ಮಾಡಬೇಕೆಂದು ಅವರಿಗೆ ಈಗಾಗಲೇ ತಿಳಿದಿದೆ .
 
“ಕೋಚ್ ಆಗುವ ಆಸೆ ಇದೆ” ಎಂದು ಹೇಳಿದರು. ‘ಆಟದ ಬಗ್ಗೆ ಅಗತ್ಯ ತರಬೇತಿಶಿಕ್ಷಣ ಪಡೆದ ತಕ್ಷಣ ತರಬೇತಿ ನೀಡಲು ಆರಂಭಿಸುತ್ತೇನೆ’ ಎಂದರು. ನಾನು ಯುವಜನರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ, ಕಬಡ್ಡಿ ಆಟದಲ್ಲಿ ಮುನ್ನಡೆಯಲು ಅವರಿಗೆ ಸಹಾಯ ಮಾಡುತ್ತೇನೆ.

ಇತ್ತೀಚಿನ ವರ್ಷಗಳಲ್ಲಿ ಕಬಡ್ಡಿ ದೇಶದ ಪ್ರಮುಖ ಕ್ರೀಡೆಯಾಗಿ ಹೊರಹೊಮ್ಮಿದೆ. ಇದು ಗ್ರಾಮೀಣ ಭಾರತದ ಯುವಕರಿಗೆ ದೊಡ್ಡ ವೇದಿಕೆಯನ್ನು ನೀಡಿದ್ದು ಮಾತ್ರವಲ್ಲದೆ ಅನೇಕ ಜನರನ್ನು ಮೆಗಾ ಸ್ಟಾರ್‌ಗಳನ್ನಾಗಿ ಮಾಡಿದೆ. ಅವರಲ್ಲಿ ಕೆಲವರು ರಾತ್ರೋರಾತ್ರಿ ಅತಿ ಶ್ರೀಮಂತರೂ ಆಗಿದ್ದಾರೆ.

2016 ರಲ್ಲಿ, ಮಹಿಳೆಯರಿಗಾಗಿ ವೃತ್ತಿಪರ ಕಬಡ್ಡಿ ಲೀಗ್ ಅನ್ನು ಸಹ ಪ್ರಾರಂಭಿಸಲಾಯಿತು, ಇದು ಯುವತಿಯರನ್ನು ಕ್ರೀಡೆಯತ್ತ ಆಕರ್ಷಿಸುತ್ತದೆ.

*****


(Release ID: 1831779) Visitor Counter : 174


Read this release in: English , Urdu , Hindi , Punjabi