ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ದೂರದರ್ಶನ ನ್ಯೂಸ್ ಕಾನ್ಕ್ಲೇವ್ ಉದ್ಘಾಟಿಸಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್


ಕಳೆದ 60 ವರ್ಷಗಳಿಗಿಂತ 8 ವರ್ಷಗಳು ಉತ್ತಮವಾಗಿವೆ: ಶ್ರೀ ಅನುರಾಗ್ ಠಾಕೂರ್

"ಜಾಮ್‌ ಟ್ರಿನಿಟಿಯು ಭ್ರಷ್ಟ ಮಧ್ಯವರ್ತಿಗಳ ವ್ಯವಸ್ಥೆಯನ್ನು ಕೆಡವಿದೆ, 2 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಿದೆ"

ಕೋವಿಡ್ ಮರಣ ವರದಿ ದೃಢವಾದ ವ್ಯವಸ್ಥೆಯಾಗಿದೆ, ಸಾವುಗಳ ಕಡಿಮೆ ವರದಿ ಮಾಡಲು ಯಾವುದೇ ಅವಕಾಶವಿಲ್ಲ

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 50 ಯುನಿಕಾರ್ನ್‌ಗಳು ಹೊರಹೊಮ್ಮಿವೆ, ಭಾರತವು ಇಂದು ಅಗ್ರ 3 ಸ್ಟಾರ್ಟ್‌ಅಪ್ ರಾಷ್ಟ್ರಗಳಲ್ಲಿ ಒಂದಾಗಿದೆ

Posted On: 03 JUN 2022 7:00PM by PIB Bengaluru

ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ಸರ್ಕಾರದ 8 ವರ್ಷಗಳನ್ನು ಕುರಿತ ಡಿಡಿ ನ್ಯೂಸ್ ಕಾನ್ಕ್ಲೇವ್ (ದೂರದರ್ಶನ ಸುದ್ದಿ ಸಮ್ಮೇಳನ) ಅನ್ನು ಉದ್ಘಾಟಿಸಿದರು. ಉದ್ಘಾಟನಾ ಅಧಿವೇಶನದಲ್ಲಿ ಕಳೆದ 8 ವರ್ಷಗಳಲ್ಲಿ ಸರ್ಕಾರವು ಕೈಗೊಂಡ ಚಟುವಟಿಕೆಗಳನ್ನು ಒಳಗೊಂಡಿರುವ ಅಂಶಗಳ ಕುರಿತು ಸಚಿವರೊಂದಿಗೆ ವಿವರವಾದ ಚರ್ಚೆ ನಡೆಯಿತು. ವಿಮರ್ಶಾತ್ಮಕ ಚರ್ಚೆಯು ಪ್ರಸ್ತುತ ಆರ್ಥಿಕ ಸ್ಥಿತಿ ಮತ್ತು ದೇಶದ ಬಗ್ಗೆ ಪ್ರಶ್ನೆಗಳನ್ನು ಒಳಗೊಂಡಿತ್ತು.
ಭಾರತದ ಮೂಲೆ ಮೂಲೆಗಳಲ್ಲಿ ಅಭಿವೃದ್ಧಿಯ ಬೀಜಗಳನ್ನು ಬಿತ್ತಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ಸಚಿವರು ಹೇಳಿದರು. ಹೆಚ್ಚಿನ ಸಂಖ್ಯೆಯ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿರುವ ಐತಿಹಾಸಿಕ ದಾಖಲೆಯಲ್ಲಿ ಇದು ಸ್ಪಷ್ಟವಾಗಿದೆ, ಇದು ಕಳೆದ 8 ವರ್ಷಗಳಲ್ಲಿ ಇದೊಂದು ಸ್ವತಃ ಸಾಧನೆಯಾಗಿದೆ. ಕಳೆದ ಹಲವು ದಶಕಗಳಲ್ಲಿ ಮಾಡಲಾಗದ್ದನ್ನು ಕಳೆದ 8 ವರ್ಷಗಳಲ್ಲಿ ಸಾಧಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ಶ್ರೀ ಠಾಕೂರ್ ಹೇಳಿದರು.


12 ಕೋಟಿಗೂ ಹೆಚ್ಚು ಶೌಚಾಲಯಗಳು ಮತ್ತು 3 ಕೋಟಿಗೂ ಹೆಚ್ಚು ಮನೆಗಳ ನಿರ್ಮಾಣ, ಕಳೆದ 3 ವರ್ಷಗಳಲ್ಲಿ ಶೇ.45 ರಷ್ಟು ಮನೆಗಳಿಗೆ ಕೊಳವೆ ನೀರಿನ ಸಂಪರ್ಕ, 9 ಕೋಟಿಗೂ ಹೆಚ್ಚು ಅಡುಗೆಮನೆಗಳಿಗೆ ಅನಿಲ ಸಂಪರ್ಕ, ಎಲ್ಲಾ ಗ್ರಾಮಗಳು ಮತ್ತು ಮನೆಗಳಿಗೆ ವಿದ್ಯುತ್ ಮುಂತಾದ ಸರ್ಕಾರದ ಸಾಧನೆಗಳನ್ನು ಶ್ರೀ ಠಾಕೂರ್ ಅವರು ಒತ್ತಿ ಹೇಳಿದರು. ಇದು ಭಾರತದ ಬಡ ಜನರಿಗೆ 'ಅಚ್ಛೇ ದಿನ್' ತಂದಿದೆ ಮತ್ತು ಸರ್ಕಾರವು ಉತ್ತಮ ಆಡಳಿತದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ ಎಂದು ಸಚಿವರು ಹೇಳಿದರು. ಸರ್ಕಾರದ ಒಟ್ಟಾರೆ ಕಾರ್ಯನಿರ್ವಹಣೆಯ ಕುರಿತ ತಮ್ಮ ಹೇಳಿಕೆಯ ಸಾರಾಂಶವನ್ನು ಸಚಿವರು "ಸಾಠ್‌ ಸೆ ಬೆಹ್ತರ್ ಆಠ್‌ " (60 ವರ್ಷಗಳಿಗಿಂತ 8 ವರ್ಷಗಳು ಉತ್ತಮ) ಎಂದರು.
ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ಕಡಿಮೆಯಾಗಿದೆ ಎಂದು ಶ್ರೀ ಠಾಕೂರ್ ಹೇಳಿದರು. 2 ವರ್ಷಗಳಲ್ಲಿ 45 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ, ಇದರ ಪರಿಣಾಮವಾಗಿ ಇಂದು ಭಾರತವು ಭೀಮ್‌ ಯುಪಿಐನಲ್ಲಿ ತಿಂಗಳಿಗೆ 4 ಶತಕೋಟಿ ವಹಿವಾಟುಗಳನ್ನು ನಡೆಸುತ್ತಿದೆ, ಇದು ಪ್ರಪಂಚದಾದ್ಯಂತದ ದೊಡ್ಡ ಟೆಕ್ ಕಂಪನಿಗಳಿಗಿಂತ ಅದ್ಭುತವಾಗಿದೆ. ಇದು ಯಾವುದೇ ದೇಶ ಮಾಡಲಾಗದ ಸಾಧನೆಯನ್ನು ಭಾರತಕ್ಕೆ ಸಾಧ್ಯವಾಗಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ಗುಂಡಿಯನ್ನು ಒತ್ತುವ ಮೂಲಕ 12 ಕೋಟಿ ರೈತರ ಖಾತೆಗಳಿಗೆ 21 ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾಯಿಸಿದರು. “ಜೆಎಎಂ (ಜನಧನ್-ಆಧಾರ್-ಮೊಬೈಲ್) ಟ್ರಿನಿಟಿಯು ಲಾಭ ವರ್ಗಾವಣೆ ಯೋಜನೆಗಳಲ್ಲಿ ಮಧ್ಯವರ್ತಿಗಳಿಂದ ಭ್ರಷ್ಟಾಚಾರದ ವ್ಯವಸ್ಥೆಯನ್ನು ಕೆಡವಿದೆ. ಇದರಿಂದ ತೆರಿಗೆದಾರರ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣ ಉಳಿತಾಯವಾಗಿದೆ ಎಂದು ಶ್ರೀ ಠಾಕೂರ್ ತಿಳಿಸಿದರು. 

ಹಣದುಬ್ಬರ ಕುರಿತು ಮಾತನಾಡಿದ ಸಚಿವರು, ಕಳೆದ ಎರಡು ವರ್ಷಗಳಲ್ಲಿ ಜಗತ್ತು ಅನೇಕ ಬಿಕ್ಕಟ್ಟುಗಳನ್ನು ಕಂಡಿದೆ. ರಷ್ಯಾ-ಉಕ್ರೇನ್ ಸಂಘರ್ಷದಿಂದಾಗಿ ಪೂರೈಕೆ ಸರಪಳಿಯಲ್ಲಿ ಉಂಟಾದ ಅಡಚಣೆಯು ಕಚ್ಚಾ ತೈಲ ಬೆಲೆಗಳಲ್ಲಾದ ನಾಟಕೀಯ ಏರಿಕೆಯು ಬಿಕ್ಕಟ್ಟನ್ನು ಹೆಚ್ಚಿಸಿದೆ. ಈ ಸಂಕಷ್ಟದ ಸಮಯದಲ್ಲಿ ಮತ್ತು ಬಾಹ್ಯ ಅಂಶಗಳ ಮೇಲಿನ ಅವಲಂಬನೆಗಳನ್ನು ತೊಡೆದುಹಾಕಲು ಮೋದಿ ಸರ್ಕಾರವು ಭಾರತವನ್ನು ಆತ್ಮನಿರ್ಭರ ಮಾಡಲು ನಿರ್ಧರಿಸಿದೆ ಎಂದು ಅವರು ಹೇಳಿದರು. ಸಂಕಲ್ಪವನ್ನು ತ್ವರಿತವಾಗಿ ಕೃತಿಗಿಳಿಸಲಾಯಿತು ಮತ್ತು ಕೋವಿಡ್ ಸಾಂಕ್ರಾಮಿಕದ ಆರಂಭದಲ್ಲಿ ಶೂನ್ಯವಾಗಿದ್ದ ಪಿಪಿಇ ಕಿಟ್‌ ಉತ್ಪಾದನೆಯನ್ನು ಭಾರತವು 10 ಲಕ್ಷ ಪಿಪಿಇ ಕಿಟ್‌ಗಳ ತಯಾರಿಕೆಗೆ ಏರಿಸಿತು ಎಂದು ಅವರು ಹೇಳಿದರು. ಭಾರತವು ನಂತರ ದೇಶೀಯವಾಗಿ ತಯಾರಿಸಿದ ಔಷಧಿಗಳನ್ನು ಮತ್ತು ಲಸಿಕೆಗಳನ್ನು ವಿತರಿಸುವಲ್ಲಿ ಜಗತ್ತನ್ನು ಮುನ್ನಡೆಸಿತು. ಇಂದು ಸಾಂಕ್ರಾಮಿಕ ರೋಗದ ಹಿನ್ನಡೆಯ ಹೊರತಾಗಿಯೂ, ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಸಚಿವರು ಹೇಳಿದರು. 
ಕೋವಿಡ್ ಸಾವಿನ ಅಂಕಿಅಂಶಗಳನ್ನು ಕಡಿಮೆ ವರದಿ ಮಾಡುವ ಆರೋಪಗಳನ್ನು ತಳ್ಳಿಹಾಕಿದ ಸಚಿವರು, ಸಾವಿನ ಅಂಕಿಅಂಶಗಳನ್ನು ರಾಜ್ಯಗಳು ವರದಿ ಮಾಡುತ್ತವೆ, ಎಲ್ಲಾ ಸಾವುಗಳ ನೋಂದಣಿಯನ್ನು ನಿರ್ವಹಿಸಲಾಗುತ್ತದೆ ಮತ್ತು ಮರಣ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಸಾವಿನ ವರದಿಯ ದೃಢವಾದ ವ್ಯವಸ್ಥೆಯು ಯಾವುದೇ ಕಡಿಮೆ ವರದಿ ಮಾಡಲು ಅವಕಾಶ ನೀಡುವುದಿಲ್ಲ. ವಿದೇಶೀ ಸಂಸ್ಥೆಯು ಹೇಳಿರುವ ಹೆಚ್ಚಿನ ಸಾವಿನ ಅಂಕಿಅಂಶಗಳು ಆಧಾರರಹಿತವಾದದ್ದು ಮತ್ತು ಭಾರತದ ಪ್ರತಿಷ್ಠೆಯನ್ನು ಹಾಳುಮಾಡುವ ಉದ್ದೇಶದ್ದು ಎಂದು ತಳ್ಳಿಹಾಕುವ ರಾಜ್ಯ ಆರೋಗ್ಯ ಸಚಿವರ ಸಭೆಯು ಅಂಗೀಕರಿಸಿದ ನಿರ್ಣಯವನ್ನು ಸಚಿವರು ವಿವರಿಸಿದರು.
ಸ್ಟಾರ್ಟ್‌ಅಪ್‌ ಕ್ಷೇತ್ರದಲ್ಲಿನ ಸಾಧನೆಯನ್ನು ಮೆಲುಕು ಹಾಕಿದ ಸಚಿವರು, ಹಿಂದಿನ ದಿನಗಳಲ್ಲಿ ಸ್ಟಾರ್ಟ್‌ಅಪ್‌ಗಳ ಸಂಪೂರ್ಣ ಉದ್ದೇಶವನ್ನು ಬದಿಗೊತ್ತಲಾಗಿತ್ತು, ಪ್ರಸ್ತುತ ಸರ್ಕಾರವು ಸ್ಟಾರ್ಟ್‌ಅಪ್‌ಗಳ ಮೇಲೆ ಸಂಪೂರ್ಣ ಒತ್ತು ನೀಡಿದೆ ಮತ್ತು ಸರ್ಕಾರದ ನೀತಿಗಳಿಂದಾಗಿ ಭಾರತವು ಅಗ್ರ 3 ಸ್ಟಾರ್ಟ್‌ಅಪ್‌ ರಾಷ್ಟ್ರಗಳಲ್ಲಿ ಸೇರಿದೆ ಎಂದು ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ 50 ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್‌ಗಳಾಗಿ ಹೊರಹೊಮ್ಮಿದ್ದು ಭಾರತದಲ್ಲಿ ಮಾತ್ರ ಮತ್ತು ಇದು ನವ ಭಾರತದ ಸಂಕೇತವಾಗಿದೆ ಎಂದು ಸಚಿವರು ಹೇಳಿದರು.
ವಿಶ್ವದಲ್ಲಿ ಭಾರತದ ಪ್ರಸ್ತುತ ಚಿತ್ರಣ ಕುರಿತು ಮಾತನಾಡಿದ ಸಚಿವರು, ಕಳೆದ 8 ವರ್ಷಗಳಲ್ಲಿ ಸರ್ಕಾರವು ಕಳಂಕರಹಿತವಾಗಿದೆ, ಭಾರತೀಯ ಪಾಸ್‌ಪೋರ್ಟ್‌ಗೆ ಮೊದಲಿಗಿಂತ ಹೆಚ್ಚು ಗೌರವವಿದೆ, ಆರ್ಥಿಕತೆಯು ಬಲವಾಗಿದೆ, ಕೋವಿಡ್‌ - 19 ರಂತಹ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯೆಯು ತ್ವರಿತವಾಗಿದೆ ಎಂದು ಇಂದು ಭಾರತೀಯರು ಹೆಮ್ಮೆಯಿಂದ ಹೇಳಬಹುದು ಎಂದರು.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರವು ದೃಢವಾಗಿ ಪ್ರತಿಕ್ರಿಯಿಸಿದೆ. ಇದು ಗಡಿಯಾಚೆಗಿನ ಸಾಮಾಜಿಕ ಮಾಧ್ಯಮ ಚಾನೆಲ್‌ಗಳ ಅಪಪ್ರಚಾರದ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನೂ ಒಳಗೊಂಡಿದೆ ಎಂದು ಸಚಿವರು ಹೇಳಿದರು.

*****


(Release ID: 1831011) Visitor Counter : 169