ವಿಶೇಷ ಸೇವೆ ಮತ್ತು ನುಡಿಚಿತ್ರ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರದ ಸಹಾಯಕ ಸಚಿವ ಡಾ. ಎಲ್. ಮುರುಗನ್ ಅವರ ಜನ್ಮದಿನದಂದು ಶುಭಾಶಯ ಕೋರಿದ್ದಾರೆ.

Posted On: 29 MAY 2022 11:55AM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ, ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಖಾತೆ ಸಹಾಯಕ ಸಚಿವ ಡಾ. ಎಲ್. ಮುರುಗನ್ ಅವರು ತಮ್ಮ ಜನ್ಮದಿನದಂದು ಶುಭಾಶಯ ಕೋರಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. 

ಇಂದು ಬೆಳಗ್ಗೆ ಟ್ವೀಟ್ ಮಾಡಿದ ಡಾ. ಮುರುಗನ್, ಪ್ರಧಾನಮಂತ್ರಿಯವರ ಹಾರೈಕೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಮತ್ತು ಅವರ ಪ್ರೀತಿಯ ಮಾತುಗಳು ಸದಾ ದೇಶಕ್ಕಾಗಿ ಹೆಚ್ಚು ಕೆಲಸ ಮಾಡಲು ಹೆಚ್ಚಿನ ಪ್ರೇರಣೆಯನ್ನು ನೀಡುತ್ತವೆ ಎಂದು ಹೇಳಿದ್ದಾರೆ. 

"ನಿಮ್ಮ ಕ್ರಿಯಾತ್ಮಕ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ನಾನು ಸದಾ ನನ್ನ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸುತ್ತೇನೆ," ಎಂದು ಡಾ. ಮುರುಗನ್ ಹೇಳಿದ್ದಾರೆ. 

ಈ ಹಿಂದೆ, ಡಾ. ಮುರುಗನ್ ಅವರು ದಣಿವರಿಯದ ಪ್ರಯತ್ನ, ಅಪರಿಮಿತ ಶಕ್ತಿ ಮತ್ತು ದೃಢ ಸಂಕಲ್ಪದೊಂದಿಗೆ ನವ ಭಾರತವನ್ನು ನಿರ್ಮಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿಯವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. "ಜನ್ಮದಿನವು ಜೀವನದ ಪ್ರಸ್ತುತತೆಯನ್ನು ನೋಡಲು ಮತ್ತು ಮೌಲ್ಯಮಾಪನ ಮಾಡಲು ಒಂದು ವಿಶೇಷ ಸಂದರ್ಭವಾಗಿದೆ," ಎಂದು ಪ್ರಧಾನಿ ಹೇಳಿದ್ದರು. ಇದು ಕುಟುಂಬ, ಸಮಾಜ ಮತ್ತು ರಾಷ್ಟ್ರದ ಕಡೆಗೆ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಹೊಸ ಶಕ್ತಿಯೊಂದಿಗೆ ನಮ್ಮನ್ನು ನಾವು ಮರುಸೃಷ್ಟಿಸಿಕೊಳ್ಳಲು ನಮ್ಮನ್ನು ಪ್ರೇರೇಪಿಸುತ್ತದೆ. ರಾಷ್ಟ್ರದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ನೀವು ಮಾಡುತ್ತಿರುವ ಕೆಲಸ,  ಸಮರ್ಪಣಾ ಭಾವ ಮತ್ತು ಬದ್ಧತೆ ವಿಶೇಷವಾಗಿ ಯುವಕರಿಗೆ ಸ್ಫೂರ್ತಿದಾಯಕವಾಗಿದೆ," ಎಂದು ಹೇಳಿದ್ದರು. 
ಉತ್ತಮ ಆರೋಗ್ಯ ಮತ್ತು ಸಂತೋಷ ನಿಮ್ಮದಾಗಲಿ ಎಂದು ಪ್ರಧಾನಮಂತ್ರಿಯವರು ಸಚಿವರನ್ನು ಹಾರೈಸಿದರು ಮತ್ತು ಉಜ್ವಲ ಭವಿಷ್ಯಕ್ಕಾಗಿ ಮತ್ತು ಮುಂಬರುವ ದಿನಗಳಲ್ಲಿ ಅವರ ಪ್ರಯತ್ನಗಳಿಗೆ ಶುಭ ಹಾರೈಸಿದರು. 
ಕೇಂದ್ರ ಸಚಿವ ಡಾ.ಎಲ್.ಮುರುಗನ್ ಅವರ ಟ್ವೀಟ್ ಅನ್ನು ಈ ಕೆಳಗಿನ ಲಿಂಕ್ನಲ್ಲಿ ನೋಡಬಹುದು:http://%20https//t.co/uSJBQNP2OE
https://t.co/uSJBQNP2OE

***

 



(Release ID: 1829320) Visitor Counter : 101