ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು ಇಂದು ನವದೆಹಲಿಯ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ‘ಪ್ರಧಾನ ಮಂತ್ರಿ ಸಂಗ್ರಹಾಲಯ’ವನ್ನು ಸ್ಥಾಪಿಸಿದರು, ಇದು ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಗೌರವಿಸುತ್ತದೆ, ಈ ವಸ್ತುಸಂಗ್ರಹಾಲಯದ ಮೂಲಕ ನಾಗರಿಕರು ದೇಶದ ಭದ್ರತೆ, ಏಕತೆ ಮತ್ತು ಅಭಿವೃದ್ಧಿಗೆ ನಮ್ಮ ಎಲ್ಲಾ ಪ್ರಧಾನ ಮಂತ್ರಿಗಳು ನೀಡಿದ ಕೊಡುಗೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಈ ವಸ್ತುಸಂಗ್ರಹಾಲಯವು ರಾಜಕೀಯ ಸಿದ್ಧಾಂತವನ್ನು ಲೆಕ್ಕಿಸದೆ ಎಲ್ಲಾ ಪ್ರಧಾನ ಮಂತ್ರಿಗಳ ಸಾಧನೆಗಳು ಮತ್ತು ಕೊಡುಗೆಗಳನ್ನು ದಾಖಲಿಸುವ ಪ್ರಶಂಸನೀಯ ಪ್ರಯತ್ನವಾಗಿದೆ

ಈ ಮೂಲಕ, ಮೋದಿ ಜೀ ಅವರು ‘ಪ್ರಧಾನ ಮಂತ್ರಿ ಹುದ್ದೆ’ಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ, ಇದು ಒಂದು ಸಂಸ್ಥೆಯಾಗಿದೆ, ಇದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯವು ಸ್ವತಂತ್ರ ಭಾರತದ ಇತಿಹಾಸವನ್ನು ಅವಿಸ್ಮರಣೀಯ ರೀತಿಯಲ್ಲಿ ದಾಖಲಿಸುವ ಅದ್ಭುತ ಪ್ರಯತ್ನವಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಮೂಲಕ, ಒಬ್ಬರು ಇತಿಹಾಸದ ಅನೇಕ ಅದ್ಭುತ ಕ್ಷಣಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ಅವುಗಳನ್ನು ಹೆಚ್ಚು ನಿಕಟವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಈ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡುವಂತೆ ನಾನು ಎಲ್ಲಾ ನಾಗರಿಕರನ್ನು, ವಿಶೇಷವಾಗಿ ಯುವಕರನ್ನು ವಿನಂತ

Posted On: 23 MAY 2022 7:38PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್‌ ಶಾ ಅವರು ಇಂದು ನವದೆಹಲಿಯ ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ನಂತರ ಸರಣಿ ಟ್ವೀಟ್‌ ಮಾಡಿರುವ ಶ್ರೀ ಅಮಿತ್‌ ಶಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ‘ಪ್ರಧಾನ ಮಂತ್ರಿ ಸಂಗ್ರಹಾಲಯ’ವನ್ನು ಸ್ಥಾಪಿಸಿದರು. ಇದು ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಗೌರವಿಸುತ್ತದೆ. ಈ ಮ್ಯೂಸಿಯಂ ಮೂಲಕ ದೇಶದ ಭದ್ರತೆ, ಏಕತೆ ಮತ್ತು ಅಭಿವೃದ್ಧಿಗೆ ನಮ್ಮ ಎಲ್ಲಾ ಪ್ರಧಾನ ಮಂತ್ರಿಗಳು ನೀಡಿದ ಕೊಡುಗೆಯನ್ನು ನಾಗರಿಕರು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಂದು ಈ ಅದ್ಭುತ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವ ಅವಕಾಶ ತಮಗೆ ಸಿಕ್ಕಿತು ಎಂದಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿ, ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವು ಸ್ವತಂತ್ರ ಭಾರತದ ಇತಿಹಾಸವನ್ನು ಸ್ಮರಣೀಯ ರೀತಿಯಲ್ಲಿದಾಖಲಿಸುವ ಅದ್ಭುತ ಪ್ರಯತ್ನವಾಗಿದೆ. ಇಲ್ಲಿಗೆ ಬರುವ ಮೂಲಕ, ನೀವು ಇತಿಹಾಸದ ಅನೇಕ ಅದ್ಭುತ ಕ್ಷಣಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ಅವುಗಳನ್ನು ಹೆಚ್ಚು ನಿಕಟವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡುವಂತೆ ನಾನು ಎಲ್ಲಾ ನಾಗರಿಕರನ್ನು, ವಿಶೇಷವಾಗಿ ಯುವಕರನ್ನು ವಿನಂತಿಸುತ್ತೇನೆ.

ಈ ವಸ್ತುಸಂಗ್ರಹಾಲಯವು ರಾಜಕೀಯ ಸಿದ್ಧಾಂತವನ್ನು ಲೆಕ್ಕಿಸದೆ ಎಲ್ಲಾ ಪ್ರಧಾನ ಮಂತ್ರಿಗಳ ಸಾಧನೆಗಳು ಮತ್ತು ಕೊಡುಗೆಗಳನ್ನು ದಾಖಲಿಸುವ ಪ್ರಶಂಸನೀಯ ಪ್ರಯತ್ನವಾಗಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಈ ಮೂಲಕ, ಮೋದಿ ಜೀ ಅವರು ‘ಪ್ರಧಾನ ಮಂತ್ರಿ ಹುದ್ದೆ’ಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ, ಅದು ಒಂದು ಸಂಸ್ಥೆಯಾಗಿದೆ. ಇದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

*****



(Release ID: 1827845) Visitor Counter : 331