ಪ್ರಧಾನ ಮಂತ್ರಿಯವರ ಕಛೇರಿ

ಐಸ್‌ಲ್ಯಾಂಡ್‌ನ ಪ್ರಧಾನ ಮಂತ್ರಿಯೊಂದಿಗೆ ಪ್ರಧಾನಿ‌ಮೋದಿ ಸಭೆ

Posted On: 04 MAY 2022 3:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2ನೇ ಭಾರತ-ನಾರ್ಡಿಕ್ ಶೃಂಗಸಭೆಯ ಹಿನ್ನೆಲೆಯಲ್ಲಿ ಕೋಪನ್ ಹ್ಯಾಗನ್ ನಲ್ಲಿ ಐಸ್ ಲ್ಯಾಂಡ್ ನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಮತಿ ಕತ್ರಿನಾ ಜಾಕೋಬ್ಸ್‌ಡೋಟ್ಟಿರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಏಪ್ರಿಲ್ 2018 ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದ 1 ನೇ ಭಾರತ-ನಾರ್ಡಿಕ್ ಶೃಂಗಸಭೆಯ ಸಂದರ್ಭದಲ್ಲಿ  ತಮ್ಮ ಮೊದಲ ಭೇಟಿಯನ್ನು  ಇಬ್ಬರೂ ಪ್ರಧಾನ ಮಂತ್ರಿಗಳು ಆತ್ಮೀಯವಾಗಿ ನೆನಪಿಸಿಕೊಂಡರು. ಈ ವರ್ಷ ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ ಎಂದು ಅವರು ಹೇಳಿದರು.

ಉಭಯ ನಾಯಕರು ವಿಶೇಷವಾಗಿ ಭೂಶಾಖದ ಶಕ್ತಿ, ನೀಲಿ ಆರ್ಥಿಕತೆ, ಆರ್ಕ್ಟಿಕ್, ನವೀಕರಿಸಬಹುದಾದ ಇಂಧನ, ಮೀನುಗಾರಿಕೆ, ಆಹಾರ ಸಂಸ್ಕರಣೆ, ಡಿಜಿಟಲ್ ವಿಶ್ವವಿದ್ಯಾನಿಲಯಗಳು ಸೇರಿದಂತೆ ಶಿಕ್ಷಣ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು.ನಿರ್ದಿಷ್ಟವಾಗಿ, ಭೂಶಾಖದ ಶಕ್ತಿ ವಿಚಾರದಲ್ಲಿ ಐಸ್ಲ್ಯಾಂಡ್ ವಿಶೇಷ ಪರಿಣತಿಯನ್ನು ಹೊಂದಿದ್ದು, ಈ ವಲಯದಲ್ಲಿ ಎರಡೂ ದೇಶಗಳ ವಿಶ್ವವಿದ್ಯಾನಿಲಯಗಳ ನಡುವಿನ ಸಹಯೋಗದ ಬಗ್ಗೆ ಉಭಯ‌ ನಾಯಕರೂ ಒತ್ತಿ ಹೇಳಿದರು. 

ಲಿಂಗ ಸಮಾನತೆಯನ್ನು ಉತ್ತೇಜಿಸುವಲ್ಲಿ ಪ್ರಧಾನ ಮಂತ್ರಿ ಜಾಕೋಬ್ಸ್‌ಡೋಟ್ಟಿರ್ ಅವರ ವೈಯಕ್ತಿಕ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಈ ನಿಟ್ಟಿನಲ್ಲಿ ಭಾರತದ ಪ್ರಗತಿಗಳ ಕುರಿತು ಅವರಿಗೆ ವಿವರಿಸಿದರು.

ಭಾರತ - ಇಎಫ್‌ಟಿಎ ವ್ಯಾಪಾರ ಮಾತುಕತೆಗಳನ್ನು ತ್ವರಿತಗೊಳಿಸುವ ಬಗ್ಗೆಯೂ ಚರ್ಚೆಗಳು ನಡೆದವು.

ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಚರ್ಚೆ ನಡೆದವು.

***



(Release ID: 1822870) Visitor Counter : 125