ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿನಲ್ಲಿ ಸೆಮಿಕಾನ್ ಇಂಡಿಯಾ ಸಮ್ಮೇಳನ -2022 ಅನ್ನು ಉದ್ಘಾಟಿಸಲಿದ್ದಾರೆ


ಭಾರತವನ್ನು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ನಾವೀನ್ಯತೆ ಕೇಂದ್ರವಾಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಈಡೇರಿಸುವಲ್ಲಿ ಸೆಮಿಕಾನ್ ಇಂಡಿಯಾ ಸಮ್ಮೇಳನ - 2022 ಒಂದು ದೊಡ್ಡ ಹೆಜ್ಜೆಯಾಗಿದೆ: ಶ್ರೀ ರಾಜೀವ್ ಚಂದ್ರಶೇಖರ್

ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ವೇಗಗೊಳಿಸುವುದು ಮೂರು ದಿನಗಳ ಸಮ್ಮೇಳನದ ವಿಷಯವಾಗಿದೆ; ಭಾರತ ಮತ್ತು ವಿದೇಶಗಳ ಸೆಮಿಕಂಡಕ್ಟರ್ ಉದ್ಯಮದ ಅತ್ಯುತ್ತಮ ಪ್ರತಿಭೆಗಳನ್ನು ಒಟ್ಟುಗೂಡಿಸುತ್ತದೆ

ಸಮ್ಮೇಳನವು ಜಾಗತಿಕ ಉದ್ಯಮದ ನಾಯಕರು, ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧನಾ ಸಂಸ್ಥೆಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ

ಸಮ್ಮೇಳನವು ಮುನ್ನೋಟ ಮತ್ತು ಸೆಮಿಕಂಡಕ್ಟರ್ ಕಾರ್ಯತಂತ್ರವನ್ನು ನಿರ್ಮಿಸಲು ಕಾರ್ಯನಿರ್ವಹಿಸುತ್ತದೆ; ಭಾರತದಲ್ಲಿ ಅದರ ಬೆಳವಣಿಗೆಯನ್ನು ಸಕ್ರಿಯಗೊಳಿಸಲು, ವೇಗಗೊಳಿಸಲು ಮತ್ತು ಸಶಕ್ತಗೊಳಿಸಲು  ಭಾಗೀದಾರರೊಂದಿಗೆ ಸಂವಾದವನ್ನು ಆರಂಭಿಸುತ್ತದೆ

Posted On: 28 APR 2022 5:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿನಲ್ಲಿ ಸೆಮಿಕಾನ್‌ ಇಂಡಿಯಾ ಸಮ್ಮೇಳನ - 2022 ಅನ್ನು ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಸಮ್ಮೇಳನವು ಏಪ್ರಿಲ್ 29 ರಿಂದ ಮೇ 1, 2022 ರವರೆಗೆ ನಡೆಯುತ್ತದೆ. ಜಾಗತಿಕ ಸೆಮಿಕಂಡಕ್ಟರ್ ಕೇಂದ್ರವಾಗುವ ಮತ್ತು ಚಿಪ್ ವಿನ್ಯಾಸ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಭಾರತದ ಮಹತ್ವಾಕಾಂಕ್ಷೆಗೆ ಸಮ್ಮೇಳನವು ಚಿಮ್ಮುಹಲಗೆಯಾಗಲಿದೆ. ಉದ್ಯಮ ಸಂಘಗಳು, ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ಪ್ರಮುಖ ಹೆಸರುಗಳು ಭಾರತದಲ್ಲಿ ಸೆಮಿಕಂಡಕ್ಟರ್‌ ಪರಿಸರ ವ್ಯವಸ್ಥೆಯ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುವ ಅವಕಾಶಗಳು, ಸವಾಲುಗಳು ಮತ್ತು ನವೀನ ಪರಿಹಾರಗಳನ್ನು ವ್ಯಕ್ತಪಡಿಸಲು ಇದು ವೇದಿಕೆಯಾಗಲಿದೆ.

ಸೆಮಿಕಾನ್ ಇಂಡಿಯಾ ಸಮ್ಮೇಳನ - 2022 ರ ಕಾರ್ಯಸೂಚಿ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ಸಂಪರ್ಕ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಮೂರು ದಿನಗಳ ಸಮ್ಮೇಳನದಲ್ಲಿ ನೀತಿ, ಪ್ರತಿಭೆ ಮತ್ತು ಸರ್ಕಾರದ ಪಾತ್ರ ಮತ್ತು ಅನುಕೂಲಕರ ಬೆಳವಣಿಗೆಯ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನಗಳನ್ನು ಕೇಂದ್ರೀಕರಿಸಿ ಸಂವಾದಗಳು ನಡೆಯಲಿವೆ. 

ಈ ಸಮ್ಮೇಳನವು ಭಾರತ ಸೆಮಿಕಂಡಕ್ಟರ್ ಮಿಷನ್ ಅನ್ನು ವಾಸ್ತವೀಕರಿಸುವ ಮತ್ತು ಅದರ ಆಶಯಗಳನ್ನು ಜಾಗತಿಕವಾಗಿ ತಿಳಿಸುವ ಮೊದಲ ಹೆಜ್ಜೆಯಾಗಿದೆ. ಸಮ್ಮೇಳನವು ಪ್ರಸ್ತುತ ಸಾಮರ್ಥ್ಯಗಳು, ತಂತ್ರಜ್ಞಾನದ ಪ್ರವೃತ್ತಿಗಳು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ, ಭಾರತದಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಮಾರುಕಟ್ಟೆಯ ಅವಕಾಶಗಳು ಮತ್ತು ಜಾಗತಿಕವಾಗಿ ಸೃಷ್ಟಿಸಬಹುದಾದ ಅಪಾರ ಸಾಮರ್ಥ್ಯ ಮತ್ತು ಪ್ರಭಾವವನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸೆಮಿಕಾನ್‌ ಇಂಡಿಯಾ ಸಮ್ಮೇಳನ - 2022 ರ ಸಂಚಾಲನಾ ಸಮಿತಿಯು ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಜಾಗತಿಕ ಉದ್ಯಮ ನಾಯಕರನ್ನು ಒಳಗೊಂಡಿದೆ, ಇದು ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಮಹತ್ವಾಕಾಂಕ್ಷೆಗಳನ್ನು ಶಕ್ತಿಯುತಗೊಳಿಸಲು ಸರ್ಕಾರದ ಸಹಯೋಗದ ವಿಧಾನವನ್ನು ಪ್ರದರ್ಶಿಸುತ್ತದೆ. ಸಮ್ಮೇಳನವು ಭಾರತದ ಸೆಮಿಕಂಡಕ್ಟರ್ ಕಾರ್ಯತಂತ್ರ ಮತ್ತು ನೀತಿಯಲ್ಲಿ ಒಂದು ಮೈಲಿಗಲ್ಲು ಆಗಿರುತ್ತದೆ, ಇದು ಭಾರತವನ್ನು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡುತ್ತದೆ. ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ವೇಗಗೊಳಿಸುವ ವಿಷಯದೊಂದಿಗೆ, ಸೆಮಿಕಾನ್‌ ಇಂಡಿಯಾ ಸಮ್ಮೇಳನ-2022 ಭಾರತವನ್ನು ವಿಶ್ವದ ಸೆಮಿಕಂಡಕ್ಟರ್ ನಕ್ಷೆಯಲ್ಲಿ ಇರಿಸಲು ಮತ್ತು  ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಮಹತ್ವದ ಉತ್ಪಾದನಾ ಪರಿಸರ ವ್ಯವಸ್ಥೆಗೆ ಮುನ್ನೋಟವನ್ನು ರೂಪಿಸಲು ಯೋಜಿಸಿದೆ.

ಈ ಅದ್ವಿತೀಯ ಜಾಗತಿಕ ಸೆಮಿಕಂಡಕ್ಟರ್ ಸಮ್ಮೇಳನವು ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಕೈಗೊಂಡ ಪ್ರಮುಖ ಯೋಜನೆಗಳು, ಸರ್ಕಾರವು ಕೈಗೊಂಡಿರುವ ಮೈಕ್ರೊಪ್ರೊಸೆಸರ್ ಕಾರ್ಯಕ್ರಮಗಳು ಹಾಗೂ ಈ ವಲಯದಲ್ಲಿ ಉದ್ಯಮ ಮತ್ತು ಸರ್ಕಾರದಿಂದ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿಯ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸುತ್ತದೆ.

ಸಮ್ಮೇಳನದಲ್ಲಿ ಪ್ರಮುಖ ಸರ್ಕಾರಿ ಪ್ರತಿನಿಧಿಗಳು ಮಾತ್ರವಲ್ಲದೆ ಇಂಡೋ-ಯುಸ್ ವೆಂಚರ್ ಪಾರ್ಟನರ್‌ ಸ್ಥಾಪಕ - ವಿನೋದ್ ಧಾಮ್; ಮೈಕ್ರಾನ್ ಟೆಕ್ನಾಲಜಿಯ ಅಧ್ಯಕ್ಷ ಮತ್ತು ಸಿಇಒ ಸಂಜಯ್ ಮೆಹ್ರೋತ್ರಾ, ಇಂಟೆಲ್ ಫೌಂಡ್ರಿ ಸರ್ವೀಸಸ್‌ ಅಧ್ಯಕ್ಷ ರಣಧೀರ್ ಠಾಕೂರ್ ಮತ್ತು ಇಂಟೆಲ್ ಇಂಡಿಯಾ ರಾಷ್ಟ್ರ ಮುಖ್ಯಸ್ಥೆ ನಿವೃತಿ ರೈ ಅವರಂತಹ ಪ್ರಮುಖ ಉದ್ಯಮ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಜಾಗತಿಕ ತಜ್ಞರು ಭಾಗವಹಿಸಲಿದ್ದಾರೆ.

 

Hashtags: #SemiconIndia #SemiconIndia2022

Twitter Account: @SemiconIndia

 

For Media Contact:

Munmun Bardhan | 96201 30737 | munmun.bardhan@perfectrelations.com

 

Meghna Neogy | 62994 04815 | meghna.neogy@perfectrelations.com

 

****


(Release ID: 1821073) Visitor Counter : 171


Read this release in: English , Urdu , Hindi , Manipuri