ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಫಿನ್ಲೆಂಡ್ ಆರ್ಥಿಕ ವ್ಯವಹಾರಗಳ ಸಚಿವರನ್ನು ಭೇಟಿಯಾದ ಇಂಧನ ಸಚಿವರು; ಆರ್ ಇ ವಲಯದಲ್ಲಿಭಾರತದ ಸಾಧನೆಗಳ ಮುಖ್ಯಾಂಶಗಳು
Posted On:
20 APR 2022 6:08PM by PIB Bengaluru
ಕೇಂದ್ರ ಇಂಧನ ಮತ್ತು ಎನ್ ಆರ್ ಇ ಸಚಿವರಾದ ಶ್ರೀ ಆರ್.ಕೆ. ಸಿಂಗ್ ಅವರು ನವದೆಹಲಿಯಲ್ಲಿಇಂದು ಆರ್ಥಿಕ ವ್ಯವಹಾರಗಳ ಸಚಿವ ಶ್ರೀ ಮಿಕಾ ಲಿಂಟಿಲಾ ಅವರನ್ನು ಭೇಟಿಯಾದರು .
ಶ್ರೀ ಆರ್.ಕೆ. ಸಿಂಗ್ ಅವರು, ಆರ್.ಇ. ವಲಯದಲ್ಲಿಭಾರತದ ಸಾಧನೆಗಳ ಪ್ರಮುಖಾಂಶಗಳ ಬಗ್ಗೆ ಬೆಳಕು ಚೆಲ್ಲಿದರು ಮತ್ತು ಪ್ಯಾರಿಸ್ ಒಪ್ಪಂದದ ಪ್ರಕಾರ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಗಳಿಗೆ (ಎನ್.ಡಿ.ಸಿ.ಗಳು) ಅನುಗುಣವಾಗಿ ತನ್ನ ಕ್ರಮಗಳನ್ನು ಹೊಂದಿರುವ ಏಕೈಕ ಜಿ 20 ದೇಶ ಮತ್ತು ಪ್ರಮುಖ ಆರ್ಥಿಕತೆ ಭಾರತವಾಗಿದೆ ಎಂದು ತಿಳಿಸಿದರು. ಫಿನ್ಲೆಂಡ್ ಉದ್ಯಮ ಭಾರತದಲ್ಲಿಆರ್ ಇ ವಲಯದಲ್ಲಿನ ಅವಕಾಶಗಳ ಬಗ್ಗೆ ಸಹಕರಿಸುವಂತೆ ಮತ್ತು ಕೆಲಸ ಮಾಡುವಂತೆ ಸಚಿವರು ಮನವಿ ಮಾಡಿದರು.
ಫಿನ್ಲೆಂಡ್ ಮತ್ತು ಭಾರತದ ನಡುವೆ ವಿಶೇಷವಾಗಿ ಇಂಧನ ಕ್ಷೇತ್ರದಲ್ಲಿಸಹಕಾರವನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಅಗತ್ಯವನ್ನು ಇಬ್ಬರೂ ಸಚಿವರು ಒತ್ತಿ ಹೇಳಿದರು.
ದಕ್ಷ ಹಸಿರು ಜಲಜನಕ/ ಹಸಿರು ಅಮೋನಿಯಾ ಉತ್ಪಾದನೆ, ಅದರ ಸಂಗ್ರಹಣೆ, ಸಾರಿಗೆ ಕ್ಷೇತ್ರದಲ್ಲಿಅವುಗಳ ಬಳಕೆ, ಬ್ಯಾಟರಿಗಳ ಮರು ಬಳಕೆ, ಸ್ಮಾರ್ಟ್ ಮೀಟರಿಂಗ್ ಸಾಫ್ಟ್‌ವೇರ್ ಇತ್ಯಾದಿ ಕ್ಷೇತ್ರಗಳಲ್ಲಿಭಾರತದ ಸಹಯೋಗದೊಂದಿಗೆ ಸಹಕರಿಸಲು ಫಿನ್ಲೆಂಡ್ ಕಡೆಯವರು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿದರು.
***
(Release ID: 1818526)
Visitor Counter : 174