ಉಕ್ಕು ಸಚಿವಾಲಯ
ಲೋಹಶಾಸ್ತ್ರಜ್ಞರು, ಎಂಜಿನಿಯರ್‌ಗಳ ಅತ್ಯಮೂಲ್ಯ ಕೊಡುಗೆ ಗುರುತಿಸಲು ಉಕ್ಕು ಸಚಿವಾಲಯದಿಂದ "ರಾಷ್ಟ್ರೀಯ ಲೋಹಶಾಸ್ತ್ರಜ್ಞರ ಪ್ರಶಸ್ತಿ 2021" ಪ್ರದಾನ ಕಾರ್ಯಕ್ರಮ ಇಂದು
Posted On:
19 APR 2022 5:48PM by PIB Bengaluru
ಕೇಂದ್ರ ಉಕ್ಕು ಸಚಿವಾಲಯವು ದೆಹಲಿಯಲ್ಲಿಂದು "ರಾಷ್ಟ್ರೀಯ ಲೋಹಶಾಸ್ತ್ರಜ್ಞರ ಪ್ರಶಸ್ತಿ - 2021" ಪ್ರದಾನ ಸಮಾರಂಭ ಆಯೋಜಿಸಿದೆ. ಕೇಂದ್ರ ಉಕ್ಕು ಸಚಿವ ಶ್ರೀ ರಾಮಚಂದ್ರ ಪ್ರಸಾದ್ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮವು ಕಬ್ಬಿಣ ಮತ್ತು ಉಕ್ಕು ಕ್ಷೇತ್ರದ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ, ವಿನ್ಯಾಸ, ಶಿಕ್ಷಣ, ತ್ಯಾಜ್ಯ ನಿರ್ವಹಣೆ, ಇಂಧನ ಸಂರಕ್ಷಣೆ ವಿಭಾಗಗಳಲ್ಲಿ ಕೆಲಸ ಮಾಡುವ ಲೋಹಶಾಸ್ತ್ರಜ್ಞರು ಮತ್ತು ಎಂಜಿನಿಯರ್‌ಗಳ ಮಹೋನ್ನತ ಕೊಡುಗೆಯನ್ನು ಗುರುತಿಸುವ ಉದ್ದೇಶ ಹೊಂದಿದೆ. ಅವರ ನಿರ್ದಿಷ್ಟ ಕೊಡುಗೆಗಳನ್ನು ಬಳಸಿಕೊಂಡು ಆತ್ಮನಿರ್ಭರ್ ಭಾರತ ನಿರ್ಮಿಸುವ ಉದ್ದೇಶಗಳನ್ನು ಸಾಧಿಸುವ ಕನಸುಗಳನ್ನು ಹೊಂದಿದೆ.
ಗೌರವಾನ್ವಿತ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ ಉಕ್ಕು ಸಚಿವಾಲಯವು ಪ್ರಶಸ್ತಿಗಳನ್ನು ಕ್ರಮಬದ್ಧಗೊಳಿಸುವ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಜತೆ ವ್ಯಾಪಕ ಚರ್ಚೆ ನಡೆಸಿದ ನಂತರ ರಾಷ್ಟ್ರೀಯ ಲೋಹಶಾಸ್ತ್ರಜ್ಞರ ಪ್ರಶಸ್ತಿಯನ್ನು ಸ್ಥಾಪಿಸಿದೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಕೆಲವೊಂದು ಬದಲಾವಣೆಗಳನ್ನು ತರಲಾಗಿದೆ. ಪ್ರಶಸ್ತಿಯ ಹೆಸರನ್ನು ‘ರಾಷ್ಟ್ರೀಯ ಲೋಹಶಾಸ್ತ್ರಜ್ಞರ ದಿನ ಪ್ರಶಸ್ತಿ’ಯಿಂದ ‘ರಾಷ್ಟ್ರೀಯ ಮೆಟಲರ್ಜಿಸ್ಟ್ ಪ್ರಶಸ್ತಿ’ ಎಂದು ಬದಲಾಯಿಸಲಾಗಿದೆ. ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಇರುವ ಅರ್ಹಕೃತಾ ಮಾನದಂಡಗಳ ನಿರ್ಬಂಧಗಳನ್ನು ಕಡಿಮೆ ಮಾಡಿ, ಹೆಚ್ಚಿನ ನಾಮನಿರ್ದೇಶನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರಶಸ್ತಿಯ ಮಟ್ಟ ಹೆಚ್ಚಿಸಲು ಅಂದರೆ ಪ್ರತಿಷ್ಠಿತಗೊಳಿಸಲು ಪ್ರಶಸ್ತಿಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಪ್ರಶಸ್ತಿಗಳು ವ್ಯಕ್ತಿ, ಸಂಸ್ಥೆಯ ಸಾಧನೆಗಳನ್ನು ಗುರುತಿಸಿದಾಗ ಅವರ ನೈತಿಕತೆ ಹೆಚ್ಚಿಸುವ ಜತೆಗೆ, ನಾವೀನ್ಯತೆ ಮತ್ತು ಸೃಜನಶೀಲತೆ ಉತ್ತೇಜಿಸುತ್ತದೆ, ಪ್ರೇರಣೆ ಹೆಚ್ಚಿಸುತ್ತದೆ, ಸ್ನೇಹಪರ ಸ್ಪರ್ಧೆ ಉತ್ತೇಜಿಸುತ್ತದೆ, ಉತ್ಪಾದಕತೆಯನ್ನು ಸುಧಾರಿಸುತ್ತದೆ, ಸಕಾರಾತ್ಮಕ ಕೆಲಸದ ಸ್ಥಳವನ್ನು ಸೃಷ್ಟಿಸುತ್ತದೆ ಇತ್ಯಾದಿ.
ರಾಷ್ಟ್ರೀಯ ಲೋಹಶಾಸ್ತ್ರಜ್ಞರ ಪ್ರಶಸ್ತಿ – 2021ಕ್ಕೆ ಅರ್ಜಿಗಳು, ನಾಮನಿರ್ದೇಶನಗಳ ಸಲ್ಲಿಕೆ ಪ್ರಕ್ರಿಯೆಗೆ 2021 ಆಗಸ್ಟ್ ನಿಂದ 2021 ಸೆಪ್ಟೆಂಬರ್ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆಯ್ಕೆ ಸಮಿತಿಗಳು ಅರ್ಜಿಗಳು, ನಾಮನಿರ್ದೇಶನಗಳ ಪರಿಶೀಲನೆ ಮತ್ತು ಮೌಲ್ಯಮಾಪನ ನಡೆಸಿ, ಅರ್ಜಿದಾರರು ಪಡೆದ ಸರಾಸರಿ ಅಂಕಗಳ ಆಧಾರದ ಮೇಲೆ ನಾನಾ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಜೀವಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಲೋಹಶಾಸ್ತ್ರ ಪ್ರಶಸ್ತಿ, ಕಬ್ಬಿಣ ಮತ್ತು ಉಕ್ಕು ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಶಸ್ತಿ ಮತ್ತು ಯುವ ಲೋಹಶಾಸ್ತ್ರಜ್ಞ (ಲೋಹ ವಿಜ್ಞಾನ) ಪ್ರಶಸ್ತಿಗಳನ್ನು ಅಂತಿಮಗೊಳಿಸಲಾಗಿದೆ.
***
(Release ID: 1818332)
Visitor Counter : 148