ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ 3 ದಿನಗಳ ಸೆಮಿಕಾನ್ ಇಂಡಿಯಾ 2022 ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ
ಸೆಮಿಕಾನ್ ಇಂಡಿಯಾ 2022 ವಿಶ್ವದಾದ್ಯಂತ ಸೆಮಿಕಂಡಕ್ಟರ್ ನಾಯಕರನ್ನು ಆಕರ್ಷಿಸುತ್ತದೆ: ರಾಜೀವ್ ಚಂದ್ರಶೇಖರ್
ಸೆಮಿಕಾನ್ ಇಂಡಿಯಾ 2022, ಭಾರತವನ್ನು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ನಾವೀನ್ಯತೆ ಕೇಂದ್ರವಾಗಿ ಪ್ರಧಾನಮಂತ್ರಿ ಅವರ ದೃಷ್ಟಿಯನ್ನು ಪೂರೈಸುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ: ರಾಜೀವ್ ಚಂದ್ರಶೇಖರ್
Posted On:
18 APR 2022 6:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲ ಸೆಮಿಕಾನ್ ಇಂಡಿಯಾ 2022 ಸಮ್ಮೇಳನವನ್ನು 2022ರ 29 ಏಪ್ರಿಲ್ 29ಕ್ಕೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ಉದ್ಘಾಟಿಸಲಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಘೋಷಿಸಿದರು.
ಸೆಮಿಕಾನ್ ಇಂಡಿಯಾ - 2022, 3 ದಿನಗಳ ಸಮಾವೇಶವನ್ನು ಆಯೋಜಿಸಲಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಯಲ್ಲಿ ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ ಮತ್ತು ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಲು ಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಇಂಡಿಯಾ ಸೆಮಿಕಾನ್ ಮಿಷನ್ ಕುರಿತು ಮಾತನಾಡಿದ ಶ್ರೀ. ರಾಜೀವ್ ಚಂದ್ರಶೇಖರ್, ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತವನ್ನು ಮಹತ್ವದ ಪಾತ್ರದಾರಿಯನ್ನಾಗಿ ಮಾಡುವುದು ಪ್ರಧಾನಿ ಅವರ ದೃಷ್ಟಿಯಾಗಿದೆ ಎಂದು ಹೇಳಿದರು. ಕಳೆದ 75 ವರ್ಷಗಳಲ್ಲಿ ಮೊದಲ ಬಾರಿಗೆ- ಈ ವಲಯದಲ್ಲಿ ಕ್ಷಿಪ್ರ ನಿರ್ಣಾಯಕ ಪ್ರಗತಿಯನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ಸೆಮಿಕಾನ್ ಇಂಡಿಯಾ 2022 ಸಮ್ಮೇಳನವು ಸೆಮಿಕಂಡಕ್ಟರ್ ಉದ್ಯಮ, ಸಂಶೋಧನೆ ಮತ್ತು ಶಿಕ್ಷಣದಿಂದ ಪ್ರಪಂಚದಾದ್ಯಂತದ ಅತ್ಯುತ್ತಮ ಮನಸ್ಸನ್ನು ಆಕರ್ಷಿಸುತ್ತದೆ ಮತ್ತು ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಸೆಮಿಕಂಡಕ್ಟರ್ ಉದ್ಯಮಕ್ಕೆ ಜಾಗತಿಕ ಕೇಂದ್ರವನ್ನಾಗಿ ಮಾಡುವ ಪ್ರಧಾನಮಂತ್ರಿ ಅವರ ದೃಷ್ಟಿಯನ್ನು ಪೂರೈಸುವಲ್ಲಿ ದೊಡ್ಡ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ.
ಸಾಂಖ್ಯ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಸಿಇಒ ಶ್ರೀ ಪರಾಗ್ ನಾಯ್ಕ್, ದೆಹಲಿಯ ಐಐಟಿಯ ನಿರ್ದೇಶಕ ಪ್ರೊ. ಕಾಮಕೋಟಿ ಮತ್ತು ಇಂಟೆಲ್ ಇಂಡಿಯಾ ಕಂಟ್ರಿ ಹೆಡ್ ಶ್ರೀನಿವೃತಿ ರೈ ಈ ಸಂದರ್ಭದಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಜತೆಗೆ ಸೆಮಿಕಾನ್ ಇಂಡಿಯಾ ಸಮ್ಮೇಳನದ ಘೋಷಣೆಯನ್ನು ಸ್ವಾಗತಿಸಿದರು.
ಚಾಲನ ಸಮಿತಿಯು ನವೋದ್ಯಮಗಳು, ಅಕಾಡೆಮಿಯಾ ಮತ್ತು ಜಾಗತಿಕ ಉದ್ಯಮದ ನಾಯಕರ ಮಿಶ್ರಣವನ್ನು ಒಳಗೊಂಡಿದೆ. ಇದು ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಮಹತ್ವಾಕಾಂಕ್ಷೆಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರದ ಸಹಯೋಗದ ವಿಧಾನವನ್ನು ಪ್ರದರ್ಶಿಸುತ್ತದೆ.
ಸೆಮಿಕಾನ್ ಇಂಡಿಯಾ 2022 ಸಮ್ಮೇಳನವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 2022ರ ಏಪ್ರಿಲ್ 29 ರಿಂದ ಮೇ 1 ರವರೆಗೆ ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ಆಯೋಜಿಸಲಿದೆ - ಭಾರತದಲ್ಲಿ ವಿನ್ಯಾಸ ಮತ್ತು ಉತ್ಪಾದನೆ, ಪ್ರಪಂಚಕ್ಕಾಗಿ: ಭಾರತವನ್ನು “ಸೆಮಿಕಂಡಕ್ಟರ್ ರಾಷ್ಟ್ರ” ವನ್ನಾಗಿ ಮಾಡುವುದಾಗಿದೆ. ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿರುವ ಕೆಲವು ಹೆಸರುಗಳೆಂದರೆ ಮೈಕ್ರಾನ್ ಸಿಇಒ ಸಂಜಯ್ ಮೆಹ್ರೋತ್ರಾ, ಕ್ಯಾಡೆನ್ಸ್ ಸಿಇಒ ಅನಿರುದ್ಧ ದೇವಗನ್, ಇಂಡೋ-ಅಮೆರಿಕ ವೆಂಚರ್ ಪಾಲುದಾರ ಸಂಸ್ಥಾಪಕ ವಿನೋದ್ ಧಾಮ್, ಸೆಮಿ ಅಧ್ಯಕ್ಷ ಅಜಿತ್ ಮನೋಚಾ, ಎಮೆರಿಟಸ್ ಸ್ಟಾನ್‌ಫೋರ್ಡ್ ಪ್ರೊ. ಆರೋಗ್ಯಸ್ವಾಮಿ ಪಾಲ್‌ರಾಜ್ ಮತ್ತಿತರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸೆಮಿಕಂಡಕ್ಟರ್ ವಲಯದಲ್ಲಿ ಪಾಲುದಾರಿಕೆ ಮತ್ತು ಮೈತ್ರಿಗಳನ್ನು ರೂಪಿಸುವ ಮೂರು ದಿನಗಳ ಸಮ್ಮೇಳನದಲ್ಲಿ ಸಹಿ ಮಾಡಲಿರುವ ಒಡಂಬಡಿಕೆಗಳ ಸಂಖ್ಯೆಯನ್ನು ಸಚಿವಾಲಯವು ಎದುರು ನೋಡುತ್ತಿದೆ ಎಂದು ಶ್ರೀ ಚಂದ್ರಶೇಖರ್ ತಿಳಿಸಿದರು.
ಈ ಸಮ್ಮೇಳನವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆಯೋಜಿಸಲಿರುವ ರೋಡ್‌ಶೋ ಸರಣಿಯ ಮೊದಲ ರೋಡ್‌ಶೋ ಆಗಿ ಕಾರ್ಯನಿರ್ವಹಿಸುತ್ತದೆ. ಸೆಮಿ ಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದ ಜಾಗತಿಕ ತಜ್ಞರು ಮತ್ತು ಸರ್ಕಾರದ ಪ್ರಮುಖ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಸ್ತಾಪಿಸಲಾಗಿದೆ.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್ ಎಂ) ಗೆ ಹೆಚ್ಚಿನ ಗೋಚರತೆ, ಶಕ್ತಿ ಮತ್ತು ಯಶಸ್ಸನ್ನು ನೀಡುವ ಸಲುವಾಗಿ, ಶ್ರೀ. ರಾಜೀವ್ ಚಂದ್ರಶೇಖರ್ ಅವರು ವಾಸ್ತವಿಕವಾಗಿ ಸೇರ್ಪಡೆಯಾದ ಚಾಲನ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮದಲ್ಲಿ ಅದರ ಲಾಂಛನವನ್ನು ಅನಾವರಣಗೊಳಿಸಿದರು. MyGov ಆಯೋಜಿಸಿದ ಕ್ರೌಡ್ ಸೋರ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಾರಾಣಸಿಯ ಶ್ರೀ ಪ್ರಶಾಂತ್ ಮಿಶ್ರಾ ಅವರು, ಲಾಂಛನವನ್ನು ರಚಿಸಿದ್ದಾರೆ. ಈ ಲಾಂಛನವು ಹಸ್ತಲಾಘವ (ಹ್ಯಾಂಡ್ ಶೇಕ್) ವನ್ನು ಸೂಚಿಸುತ್ತದೆ- ಸಹಯೋಗದ ವಿಧಾನವನ್ನು ಸೂಚಿಸುತ್ತದೆ ಮತ್ತು 'ಎಸ್' ಆಕಾರವನ್ನು ರೂಪಿಸುತ್ತದೆ. ಇದು ಸೆಮಿಕಂಡಕ್ಟರ್ ಅನ್ನು ಸೂಚಿಸುತ್ತದೆ. ಇದನ್ನು ವೇಫರ್ ಹಾಳೆಯಲ್ಲಿ ಇರಿಸಲಾಗುತ್ತದೆ.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್ ಎಂ) ಅನ್ನು ಡಿಜಿಟಲ್ ಇಂಡಿಯಾ ಕಾರ್ಪೊರೇಶನ್ ಒಳಗೆ ಸ್ವತಂತ್ರ ವ್ಯಾಪಾರ ವಿಭಾಗವಾಗಿ ಸ್ಥಾಪಿಸಲಾಗಿದೆ. ಇದು ಅರೆವಾಹಕಗಳನ್ನು ಅಭಿವೃದ್ಧಿಪಡಿಸಲು ಮತ್ತು ಉತ್ಪಾದನಾ ಸೌಲಭ್ಯಗಳು ಮತ್ತು ಸೆಮಿಕಂಡಕ್ಟರ್ ವಿನ್ಯಾಸ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತದ ದೀರ್ಘಾವಧಿಯ ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ಚಾಲನೆ ಮಾಡಲು ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ಹೊಂದಿದೆ. ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉದ್ಯಮದಲ್ಲಿ ಜಾಗತಿಕ ತಜ್ಞರು ನೇತೃತ್ವ ವಹಿಸಲು ಯೋಜಿಸಲಾಗಿದೆ.ಐಎಸ್ ಎಂ ಯೋಜನೆಗಳ ಸಮರ್ಥ, ಸುಸಂಬದ್ಧ ಮತ್ತು ಸುಗಮ ಅನುಷ್ಠಾನಕ್ಕಾಗಿ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ.
***
(Release ID: 1817896)
Visitor Counter : 298