ಜವಳಿ ಸಚಿವಾಲಯ
ಭಾರತವನ್ನು ಜಾಗತಿಕ ಫ್ಯಾಷನ್ ರಾಜಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿ- ಕೇಂದ್ರ ಸಚಿವ ಪಿಯೋಷ್ ಗೋಯಲ್ ಎನ್ಐಎಫ್ ಟಿ ಪದವೀಧರರಿಗೆ ಕರೆ
Posted On:
16 APR 2022 9:14PM by PIB Bengaluru
ಭಾರತವನ್ನು ವಿಶ್ವದ ಫ್ಯಾಷನ್ ರಾಜಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಹಾಗೂ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಇಂದು ಯುವ ಎನ್ ಐಎಫ್ ಟಿ ಪದವೀಧರರಿಗೆ ಕರೆ ನೀಡಿದರು. ಮುಂಬೈನ ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ (ಎನ್ ಐಎಫ್ ಟಿ) ಯ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪಿಯೂಷ್ ಗೋಯಲ್, ಭಾರತೀಯ ವಿನ್ಯಾಸಕರು ಮತ್ತು ಕಲಾವಿದರು ಕೌಶಲ್ಯಗಳನ್ನು ಮತ್ತು ನವೀನ ಆಲೋಚನೆಗಳನ್ನು ಹೊಂದಿದ್ದಾರೆ. ಎನ್ ಐಎಫ್ ಟಿ ಪದವೀಧರರು ಸೇರಿದಂತೆ ಭಾರತೀಯ ವಿನ್ಯಾಸಕರು ಜಾಗತಿಕವಾಗಿ ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪದವೀಧರ ವಿದ್ಯಾರ್ಥಿಗಳನ್ನು ಶ್ಲಾಘಿಸಿದ ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್, “ನೀವು ಹೊಸ ಆಲೋಚನೆಗಳು, ಹೊಸ ವಿನ್ಯಾಸಗಳು ಮತ್ತು ಹೊಸ ಪರಿಕಲ್ಪನೆಗಳೊಂದಿಗೆ ಬರುತ್ತಿದ್ದೀರಿ, ನಿಮ್ಮಲ್ಲಿ ಪ್ರತಿಯೊಬ್ಬರೂ ಕನಸುಗಾರ’’ ಎಂದರು. ಸ್ಥಳೀಯ ಕೊಲ್ಹಾಪುರಿ ಚಪ್ಪಲಿಗಳು ಮತ್ತು ಪೈಥಾನಿ ಸೀರೆಗಳ ಉದಾಹರಣೆ ನೀಡಿದ ಕೇಂದ್ರ ಸಚಿವರು, “ಸಾಂಪ್ರದಾಯಿಕ ಭಾರತೀಯ ಕಲೆಗಳು ಮತ್ತು ಕರಕುಶಲ ವಸ್ತುಗಳು ಜಾಗತಿಕ ಫ್ಯಾಷನ್ ಟ್ರೆಂಡ್ ಗಳಾಗುವ ಸಾಮರ್ಥ್ಯವನ್ನು ಹೊಂದಿವೆ’’ ಎಂದು ಹೇಳಿದರು.
“ವಿನ್ಯಾಸದ ವಿದ್ಯಾರ್ಥಿಗಳಾದ ನೀವು ಪ್ರತಿಯೊಬ್ಬರೂ ಆಳವಾದ ಸೂಕ್ಷ್ಮತೆ ಪ್ರತಿನಿಧಿಸುತ್ತೀರಿ’’ ಎಂದು ಶ್ರೀ ಗೋಯಲ್ ಹೇಳಿದರು. ನಿಮ್ಮ ಕೆಲಸದ ಗುಣಮಟ್ಟ ಮತ್ತು ನಿಮ್ಮ ಕೆಲಸಗಾರರನ್ನು, ನೇಕಾರರನ್ನು ಹೇಗೆ ನಡೆಸಿಕೊಳ್ಳುತ್ತೀರಿ ಮತ್ತು ಅವರು ಅವರ ಕೆಲಸಕ್ಕೆ ನ್ಯಾಯಯುತ ಮೌಲ್ಯವನ್ನು ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದನ್ನು ಇದು ಪ್ರದರ್ಶಿಸುತ್ತದೆ. ಎನ್‌ಐಎಫ್‌ಟಿ ಪದವೀಧರರಿಂದ ಉನ್ನತ ಗುಣಮಟ್ಟ ಮತ್ತು ನೈತಿಕತೆಯ ಮಾನದಂಡವನ್ನು ಕಾಯ್ದುಕೊಳ್ಳಲಿದ್ದಾರೆಂದು ನಿರೀಕ್ಷಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಎನ್ ಐಎಫ್ ಟಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘಿಸಿದ ಜವಳಿ ಸಚಿವರು, ಎನ್ ಐಎಫ್ ಟಿ ಪದವೀಧರರಲ್ಲಿ ಅನೇಕರು ಶೀಘ್ರದಲ್ಲೇ ಬಾಲಿವುಡ್‌ಗಾಗಿ ವಿನ್ಯಾಸವನ್ನು ಆರಂಭಿಸಲಿದ್ದಾರೆ ಎಂದು ಹೇಳಿದರು.
ಫ್ಯಾಷನ್ ತಂತ್ರಜ್ಞಾನ ಪದವಿ, ಫ್ಯಾಷನ್ ಟೆಕ್ನಾಲಜಿ ಸ್ನಾತಕೋತ್ತರ ಪದವಿ ಮತ್ತು ಮಾಸ್ಟರ್ಸ್ ಆಫ್ ಫ್ಯಾಷನ್ ಮ್ಯಾನೇಜ್‌ಮೆಂಟ್ ಕೋರ್ಸ್ ಗಳು ಯುಜಿಸಿಯಿಂದ ಮಾನ್ಯತೆ ಪಡೆದಿವೆ ಎಂದು ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಉಲ್ಲೇಖಿಸಿದರು. “ಯುಜಿಸಿ ಮಾನ್ಯತೆ ಪಡೆದ ತಾಂತ್ರಿಕ ಪದವಿಗಳು ಪ್ರಪಂಚದಾದ್ಯಂತ ಉನ್ನತ ಅಧ್ಯಯನಕ್ಕೆ ಉತ್ತಮ ಅವಕಾಶ ಪಡೆಯಲು ನಿಮಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು. ಎಲ್ಲಾ ಕೋರ್ಸ್‌ಗಳ ಏಕರೂಪದ ಪ್ರಮಾಣೀಕರಣವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೌಲ್ಯವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.
ತಮ್ಮ ತಾಯಿ ಮತ್ತು ರಾಷ್ಟ್ರಕ್ಕೆ ಮರಳಿ ಕೊಡುಗೆ ನೀಡುವಂತೆ ಶ್ರೀ ಗೋಯಲ್ ಮನವಿ ವಿದ್ಯಾರ್ಥಿಗಳಿಗೆ ಮಾಡಿದರು. ಕೈಮಗ್ಗ ನೇಕಾರರು, ಕರಕುಶಲ ಕುಶಲಕರ್ಮಿಗಳು ಮತ್ತು ಇತರರಿಗೆ ಎನ್ ಐಎಫ್ ಟಿ ಪ್ರಮಾಣಪತ್ರ ಕೋರ್ಸ್‌ಗಳನ್ನು ಪ್ರಾರಂಭಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲು ಮತ್ತು ಕಲಾವಿದರಿಗೆ ಮಾರ್ಗದರ್ಶನ ನೀಡಲು ಸಂಸ್ಥೆಗೆ ಸಹಕರಿಸುವಂತೆ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. “ಉನ್ನತ ಗುಣಮಟ್ಟದ ಶಿಕ್ಷಣದ ಅವಕಾಶವನ್ನು ಪಡೆಯದವರಿಗೆ ನೀವು ಕಲಿತಿರುವುದನ್ನು ಹಿಂತಿರುಗಿಸುವುದರ ಬಗ್ಗೆ ಪರಿಗಣಿಸಿ’’ ಎಂದು ಅವರು ಹೇಳಿದರು. “ಬಹುಶಃ ನೇಕಾರರ ಸಮೂಹದಲ್ಲಿ ಇವುಗಳನ್ನು ಅಳವಡಿಸಿಕೊಳ್ಳಬಹುದು, ನಿಮ್ಮ ಕೆಲಸಗಾರರನ್ನು ಕೌಶಲ್ಯದಿಂದ ಪರಿಗಣಿಸಿ, ಉತ್ತಮ ಕೆಲಸ ಮಾಡಲು ಅವರಿಗೆ ಶಿಕ್ಷಣ ನೀಡಿ, ಉತ್ತಮ ವಿನ್ಯಾಸಗಳು, ಪ್ಯಾಕೇಜಿಂಗ್, ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮೂಲಕ ಅವರ ಆದಾಯವನ್ನು ಸುಧಾರಿಸಲು ಸಹಾಯ ಮಾಡಿ" ಎಂದು ಅವರು ಹೇಳಿದರು.
2020 ಮತ್ತು 2021 ರಲ್ಲಿ ಕೋರ್ಸ್ ಪೂರ್ಣಗೊಳಿಸಿದ 627 ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡಲಾಯಿತು. ವಿವಿಧ ಕೋರ್ಸ್‌ಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದಕ, ಪ್ರಮಾಣಪತ್ರ ಮತ್ತು ಬಹುಮಾನ ನೀಡಿ ಗೌರವಿಸಲಾಯಿತು.
***
(Release ID: 1817602)
Visitor Counter : 140