ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಸಚಿವಾಲಯವು ಯೋಗೋತ್ಸವದ ಕೌಂಟ್‌ಡೌನ್ ಕಾರ್ಯಕ್ರಮವನ್ನು (#67DaysToGo) ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು 15ನೇ ಏಪ್ರಿಲ್, 2022 ರಂದು ಆಚರಿಸಲಿದೆ
Posted On:
14 APR 2022 11:32AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮುಂದಾಳತ್ವದಿಂದಾಗಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2014 ರಲ್ಲಿ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನ (ಐಡಿವೈ) ಎಂದು ಘೋಷಿಸಲು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿತು. ಯೋಗವು ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವುದರಿಂದ ಯೋಗವನ್ನು ವಿಶ್ವಾದ್ಯಂತ ಸ್ವೀಕರಿಸಿರುವುದು ನಮ್ಮ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಪ್ರತಿ ವರ್ಷ, ಐಡಿವೈ ಆಚರಣೆಯು ಬೆಳಗ್ಗೆ ಸಾಮೂಹಿಕ ಯೋಗ ಪ್ರದರ್ಶನದೊಂದಿಗೆ ಪ್ರಾರಂಭವಾಗುತ್ತದೆ, ಇದಕ್ಕೆ ಸ್ವತಃ ಪ್ರಧಾನ ಮಂತ್ರಿಯವರು ನೇತೃತ್ವ ವಹಿಸುತ್ತಾರೆ, ನಂತರ ಯೋಗಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳು ನಡೆಯುತ್ತವೆ.
2022 ರ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಕೇವಲ #67 ದಿನಗಳು ಇದ್ದು, ಕಲ್ಲಿದ್ದಲು ಸಚಿವಾಲಯವು ಏಪ್ರಿಲ್ 15, 2022 ರಂದು ವಿಶೇಷ ಸಮಾರಂಭಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವನ್ನು ಕಲ್ಲಿದ್ದಲು, ಗಣಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ ಉದ್ಘಾಟಿಸಲಿದ್ದಾರೆ. ಇದರಲ್ಲಿ ಕಲ್ಲಿದ್ದಲು ಸಚಿವಾಲಯದ ಎಲ್ಲಾ ಅಧಿಕಾರಿಗಳು ಹಾಗೂ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಅಧೀನದಲ್ಲಿರುವ/ ಸಂಬಂಧಪಟ್ಟ ಕಛೇರಿಗಳು ಮತ್ತು ಸಾರ್ವಜನಿಕ ಉದ್ದಿಮೆಗಳು ಭಾಗವಹಿಸುತ್ತವೆ. ಸಾಮಾನ್ಯ ಯೋಗ ಶಿಷ್ಟಾಚಾರದ ವ್ಯಾಯಾಮಗಳು, ಯೋಗ ವಿರಾಮ (ವೈ-ಬ್ರೇಕ್) ಅಭ್ಯಾಸ, ತಜ್ಞರಿಂದ ಯೋಗದ ಕುರಿತು ಉಪನ್ಯಾಸ, ಯೋಗ ಪ್ರದರ್ಶನ ಕಾರ್ಯಕ್ರಮದ ಕೆಲವು ಮುಖ್ಯಾಂಶಗಳಾಗಿವೆ .
***
(Release ID: 1816981)
Visitor Counter : 160