ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಭಾರತೀಯ ಕ್ರೀಡಾಳುಗಳು ಮತ್ತು ಹಾಯಿ ದೋಣಿ ಸ್ಪರ್ಧೆಯ ತಂಡಗಳ ಅಂತಾರಾಷ್ಟ್ರೀಯ ಅನುಭವ ಪ್ರವಾಸಗಳಿಗೆ ಸರಕಾರದಿಂದ 3.65 ಕೋ.ರೂ. ನೆರವು ಮಂಜೂರು

Posted On: 04 APR 2022 4:32PM by PIB Bengaluru

ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್, ಕಾಮನ್ವೆಲ್ತ್ ಕ್ರೀಡಾ ಕೂಟ ಮತ್ತು ಏಶ್ಯನ್ ಗೇಮ್ಸ್ 2022 ಕ್ರೀಡಾಕೂಟಗಳು ಈ ವರ್ಷ ನಡೆಯಲಿದ್ದು, ಈ ವಿರಾಮ ರಹಿತ ವೇಳಾಪಟ್ಟಿಯ ನಡುವೆ ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಳುಗಳು ಅಂತಾರಾಷ್ಟ್ರೀಯ ಅನುಭವ ಪ್ರವಾಸಗಳಿಗೆ ತಯಾರಾಗುತ್ತಿದ್ದಾರೆ. ಭಾರತ ಸರಕಾರದ ವೆಚ್ಚದಲ್ಲಿ ಇಂತಹ ಎರಡು ಅನುಭವ ಪ್ರವಾಸಗಳನ್ನು ಏಪ್ರಿಲ್ ತಿಂಗಳಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ. 
12 ಮಂದಿ ಅಥ್ಲೀಟ್ ಗಳು, ಇಬ್ಬರು ಕೋಚ್ ಮತ್ತು ಓರ್ವ ಬೆಂಬಲ ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಮಧ್ಯಮ ಮತ್ತು ದೀರ್ಘ ದೂರ ತಂಡಗಳು ಏಪ್ರಿಲ್ 15 ರಿಂದ ಜೂನ್ 6ರವರೆಗೆ ಯು.ಎಸ್.ಎ.ಯ ಕೊಲರಾಡೋ ಸ್ಪ್ರಿಂಗ್ ಎಂಬಲ್ಲಿ ತರಬೇತಿ ಮತ್ತು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿವೆ. ಟೋಕಿಯೋ 2020 ಒಲಿಂಪಿಕ್ಸ್ ನಲ್ಲಿ 3000 ಮೀಟರ್ ಅಡೆತಡೆ ಹಳ್ಳಿಗಾಡು ಓಟದಲ್ಲಿ ದಲ್ಲಿ  ಸ್ಪರ್ಧಿಸಿದ್ದ ಅವಿನಾಶ್ ಸಾಬ್ಲೆ ಈ ತಂಡದಲ್ಲಿದ್ದಾರೆ. ಈ ಪ್ರವಾಸಕ್ಕೆ ಸರಕಾರದಿಂದ 1.19 ಕೋ.ರೂ. ಮಂಜೂರಾಗಿದೆ. 
ಅದೇ ರೀತಿ, 31 ಅಥ್ಲೀಟ್ , 4 ಮಂದಿ ಕೋಚ್, ಮತ್ತು 5 ಮಂದಿ ಪೂರಕ ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ಅಥ್ಲೆಟಿಕ್ಸ್ 400 ಮೀ ಮತ್ತು 4×100 ಮೀ  ತಂಡಗಳು ಏಪ್ರಿಲ್ 10 ರಿಂದ ಜೂನ್ 6ರವರೆಗೆ ಟರ್ಕಿಯ ಅಂಟಾಲ್ಯದಲ್ಲಿ ತರಬೇತಿ ಮತ್ತು ಸ್ಪರ್ಧಾ ಕೂಟಗಳಲ್ಲಿ ಭಾಗವಹಿಸಲಿವೆ. ಟೋಕಿಯೋ 2020 ಒಲಿಂಪಿಕ್ಸ್ ಸ್ಪರ್ಧಾಳುಗಳಾದ ಅಮೋಜ್ ಜಾಕೋಬ್, ಅರೋಕಿಯಾ ರಾಜೀವ್, ನೋಹಾ ನಿರ್ಮಲ್ ಟೋಮ್, ಮುಹಮ್ಮದ್ ಅನಾಸ್ ಯಾಹಿಯಾ, ಶುಭಾ ವೆಂಕಟೇಸನ್, 100 ಮೀ ಮತ್ತು 200 ಮೀ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ದ್ಯುತಿ ಚಂದ್ ಈ ತಂಡದಲ್ಲಿದ್ದಾರೆ. ಈ ಪ್ರವಾಸಕ್ಕೆ ಸರಕಾರ ಒಟ್ಟು 1.57 ಕೋ.ರೂ.ಗಳನ್ನು ಮಂಜೂರು ಮಾಡಿದೆ. 
ಈ ನಡುವೆ, 11 ಪುರುಷರು ಮತ್ತು 7 ಮಹಿಳೆಯರು ಸೇರಿದಂತೆ 18 ನಾವಿಕರು ಮತ್ತು , 6 ಮಂದಿ ಕೋಚ್ ಹಾಗು ಓರ್ವ ಪೂರಕ ಸಿಬ್ಬಂದಿಯನ್ನು  ಒಳಗೊಂಡ ಭಾರತೀಯ ಹಾಯಿ ದೋಣಿ ತಂಡಕ್ಕೂ ಭಾರತ ಸರಕಾರದ ವೆಚ್ಚದಲ್ಲಿ ಈ ಏಪ್ರಿಲ್ ತಿಂಗಳಲ್ಲಿ ತರಬೇತಿ ಪಡೆಯಲು ಮತ್ತು ಸ್ಪೈನ್ ಹಾಗು ಫ್ರಾನ್ಸ್ ನಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಮಂಜೂರಾತಿ ನೀಡಲಾಗಿದೆ. ಏಪ್ರಿಲ್ 1 ರಂದು ಈ ಅಂತಾರಾಷ್ಟ್ರೀಯ ಪ್ರವಾಸ ಆರಂಭವಾಗಿದ್ದು ಮೇ 1 ರವರೆಗೆ ಪ್ರವಾಸದ ವೇಳಾಪಟ್ಟಿ ನಿಗದಿಯಾಗಿದೆ. ಪಾಲ್ಮಾ, ಸ್ಪೈನ್ ಮತ್ತು ಹೈರೆಸ್ ಗಳಲ್ಲಿ ಕ್ರೀಡಾಕೂಟಗಳು ನಡೆಯಲಿವೆ. ಈ ತಂಡ ಟೋಕಿಯೋ 2020 ಒಲಿಂಪಿಕ್ಸ್ ತಂಡದ ವಿಷ್ಣು ಸರವಣನ್, ಕೆ.ಸಿ.ಗಣಪತಿ, ವರುಣ್ ಥಕ್ಕರ್ ಮತ್ತು ನೇತ್ರಾ ಕುಮಾರನ್ ಅವರನ್ನು ಒಳಗೊಂಡಿದ್ದು, ಒಟ್ಟು 89.27 ಲಕ್ಷ ರೂಪಾಯಿ ಮಂಜೂರಾಗಿದೆ.

***


(Release ID: 1813644)