ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

2014 ರಿಂದ ಪ್ರಗತಿ ಮತ್ತು ನಾವೀನ್ಯತೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೂಪಿಸಿರುವ ನೀತಿಗಳ ಫಲವಾಗಿ ಸುಸ್ಥಿರ ಭಾರತ ಟೆಕೇಡ್ ನತ್ತ ಸಾಗುತ್ತಿದೆ: ಕೇಂದ್ರದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್


ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಭಾರತದ ಕಾರ್ಯತಂತ್ರ, ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಉತ್ತಮ ಯೋಜನೆಯೂ ಆಗಿದೆ

ಭಾರತವನ್ನು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕ ರಾಷ್ಟ್ರವಾಗಿ ರೂಪಿಸಲು ಪ್ರತಿ ಕ್ಷೇತ್ರದಲ್ಲೂ ಸುಧಾರಣೆ ನಡೆಯುತ್ತಿದೆ

Posted On: 26 MAR 2022 5:32PM by PIB Bengaluru

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿನ ಚೇತರಿಕೆ ಮತ್ತು ಪ್ರಗತಿಯ ಬಗ್ಗೆ ಮಾತನಾಡಿದರು. ಹೈದರಾಬಾದ್ ನ ಸಿಇಓ ಕ್ಲಬ್ ಗಳಲ್ಲಿಂದು ಮಾತನಾಡಿದ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭರ (ಸ್ವಾವಲಂಬಿ) ಭಾರತದ ದೃಷ್ಟಿಕೋನವು ತನ್ನ ರೋಮಾಂಚಕ ನವೋದ್ಯಮಗಳು, ಉದ್ಯಮಶೀಲತೆ ಮತ್ತು ಅತ್ಯಧಿಕ ಎಫ್.ಡಿಐಗಳ ಮೂಲಕ ಭಾರತದ ಗಾಥೆಯನ್ನು ಬರೆಯುತ್ತಿದೆ ಎಂದರು. ಇದರ ಪರಿಣಾಮವಾಗಿ, ಕೋವಿಡ್ ನಿಂದ ಉಂಟಾದ ಅಡೆತಡೆಗಳ ಹೊರತಾಗಿಯೂ, ಸರಕುಗಳು ಮತ್ತು ಸರಂಜಾಮುಗಳ ರಫ್ತಿನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವ ಭಾರತವು ಈಗ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿದೆ.  2014 ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀತಿಗಳು ಇದಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಆತ್ಮನಿರ್ಭರ ಭಾರತ ಚಿಂತನೆಯ ಮೂಲಕ ಭಾರತವು ತನ್ನ ದಕ್ಷ ಕೋವಿಡ್ ನಿರ್ವಹಣೆ ಮತ್ತು ಆರ್ಥಿಕತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಕ್ಕಾಗಿ ಜಾಗತಿಕ ಮನ್ನಣೆಯನ್ನೂ ಗಳಿಸಿದೆ ಎಂದರು.
ಜಾಗತಿಕ ವೇದಿಕೆಗಳಲ್ಲಿ ಭಾರತದ ಗಾಥೆಯನ್ನು ಬಿಂಬಿಸುವ ಅಗತ್ಯವನ್ನು ಒತ್ತಿ ಹೇಳಿದ ಸಚಿವರು, ಇದು ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಯ ಕೇಂದ್ರವಾಗಿರುವುದರಿಂದ ಮತ್ತು ಹೆಚ್ಚು ಹೆಚ್ಚು ಜಾಗತಿಕ ಹೂಡಿಕೆದಾರರು ನವ ಭಾರತದ ಪ್ರಗತಿಯ ಗಾಥೆಯ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದರಿಂದ ಜಾಗತಿಕ ರಂಗದಲ್ಲಿ ಭಾರತದ ಗಾಥೆಯನ್ನು ಪ್ರಸ್ತಾಪಿಸುವ ಅಗತ್ಯವಿದೆ ಎಂದು ಹೇಳಿದರು. ‘ಪುಟಿದೇಳುವ’  ಭಾರತ ಎಂದು  ಜಗತ್ತು  ಈಗ ಹೇಳುತ್ತಿರುವುದಕ್ಕೆ  2005 ರಲ್ಲಿಯೇ ಡಿಜಿಟಲ್ ಇಂಡಿಯಾವನ್ನು ಪ್ರಾರಂಭಿಸುವ ಮೂಲಕ ಮಾನ್ಯ ಪ್ರಧಾನಮಂತ್ರಿಯವರು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಆರಂಭಿಕ ಹೂಡಿಕೆಗಳೇ ಕಾರಣವಾಗಿದೆ.
ಆತ್ಮನಿರ್ಭರ ಭಾರತ ಆರ್ಥಿಕ ಚಿಂತನೆಯು ಭಾರತವು ದೃಢ ಸಂಕಲ್ಪದ, ಚೇತರಿಕೆಯ ಮತ್ತು ಪುನರುತ್ಥಾನ ರಾಷ್ಟ್ರವಾಗಿ ಹೊರಹೊಮ್ಮಲು ಎಡೆ ಮಾಡಿಕೊಟ್ಟಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ, ಭಾರತವು ಚೇತರಿಕೆಯ ಆರ್ಥಿಕತೆ, ಚೇತರಿಕೆಯ  ಸರ್ಕಾರ ಮತ್ತು ಚೇತರಿಕೆಯ ನಾಗರಿಕರನ್ನು  ರೂಪಿಸಲು ತಂತ್ರಜ್ಞಾನವನ್ನು  ಬಳಸಿಕೊಂಡಿತು, ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಧನ್ಯವಾದಗಳು ಎಂದ ಅವರು, ಭಾರತವು ಸಂಶೋಧನೆ ಮತ್ತು ಅಭಿವೃದ್ಧಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ನಾವೀನ್ಯತೆಯ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ, ನಾಗರಿಕರ ಜೀವನವನ್ನು ಸಶಕ್ತಗೊಳಿಸಲು ಮತ್ತು ಪರಿವರ್ತಿಸಲು ತಂತ್ರಜ್ಞಾನದ ಬಳಕೆಯಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿದೆ.
ವಿಶ್ವವು ಭಾರತವನ್ನು ತಂತ್ರಜ್ಞಾನದಲ್ಲಿ ಪ್ರಮುಖ ರಾಷ್ಟ್ರವಾಗಿ ನೋಡುತ್ತದೆ ಎಂದು ಸಚಿವರು ಒತ್ತಿ ಹೇಳಿದರು. ವೆಬ್ 3.0, ಇಂಡಸ್ಟ್ರಿ 4.0 ಮತ್ತು ಸಾಕಷ್ಟು ಅಡೆತಡೆಗಳೊಂದಿಗೆ ಹೊಸ ಸಾಮಾನ್ಯ ಸ್ಥಿತಿ ಡಿಜಿಟಲೀಕರಣವನ್ನು ಹೆಚ್ಚಿಸುತ್ತಿರುವುದರಿಂದ, ಇಡೀ ಮಾದರಿಗೆ ಮುಂದಿನ ಸಂಭಾವ್ಯ ಉತ್ತೇಜನವನ್ನು ನೀಡಲು ಜಗತ್ತು ಹೆಚ್ಚೆಚ್ಚು ಭಾರತದತ್ತ ನೋಡುತ್ತಿದೆ. "ಸಾರ್ವಜನಿಕ ಸೇವೆಯ ವಿತರಣೆಯನ್ನು ಹೊಸ ಹಂತಕ್ಕೆ ತೆಗೆದುಕೊಂಡು ಹೋಗಲು ನಾವು ಶೀಘ್ರದಲ್ಲೇ ಆಡಳಿತದಲ್ಲಿ ಡಿಜಿಟಲೀಕರಣದ ಮುಂದಿನ ಅಲೆಯನ್ನು  ಜಾರಿ ಮಾಡಲಿದ್ದೇವೆ" ಎಂದು ಅವರು ಹೇಳಿದರು.
ಉದ್ಯಮಿಗಳು ಮತ್ತು ಸರ್ಕಾರದ ನಡುವಿನ ಒಡನಾಟವು, ವಿಶೇಷವಾಗಿ ಇತ್ತೀಚೆಗೆ ಯುನಿಕಾರ್ನ್ ಕ್ಲಬ್ ಗೆ ಸೇರಿದ ನವೋದ್ಯಮಗಳ ಸಂಖ್ಯೆಯನ್ನು ನೋಡಿದರೆ, ಭಾರತದಲ್ಲಿ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಮುನ್ನಡೆಸುವ ಸೂತ್ರವಾಗಿದೆ ಎಂದು ಸಚಿವರು  ಸಿಇಒ ಕ್ಲಬ್ ಗಳಲ್ಲಿ ಮಾತನಾಡುವಾಗ ತಿಳಿಸಿದರು.
2022 ರ ಫೆಬ್ರವರಿ 09, ಹೊತ್ತಿಗೆ, ಭಾರತವು 88 ಯುನಿಕಾರ್ನ್ ಗಳಿಗೆ ತಾಣವಾಗಿದೆ, ಇವುಗಳ ಒಟ್ಟು ಮೌಲ್ಯ  295.99 ಶತಕೋಟಿ ಡಾಲರ್ ಆಗಿದೆ, ಇದು ನವೋದ್ಯಮಗಳು ಆರ್ಥಿಕತೆಯಲ್ಲಿ ಚೇತರಿಕೆ ಮತ್ತು ಬಲವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಪೂರ್ವಭಾವಿ ಕ್ರಮಗಳ ಫಲಶ್ರುತಿಯಾಗಿದೆ.
ಕೈಗಾರಿಕೆ, ದೂರಸಂಪರ್ಕ, ಎಂಎಸ್.ಎಂಇಗಳು, ಕಾರ್ಮಿಕ, ಹಣಕಾಸು ಮುಂತಾದ ಎಲ್ಲಾ ವಲಯಗಳಲ್ಲಿ ಸರ್ಕಾರದ ದಕ್ಷ ರಚನಾತ್ಮಕ ಮತ್ತು ವ್ಯೂಹಾತ್ಮಕ ಸುಧಾರಣೆಗಳ ಬಗ್ಗೆ ಮತ್ತು ಇದು ಭಾರತದ ಪ್ರಚಂಡ ಬೆಳವಣಿಗೆ ಮತ್ತು ಚೇತರಿಕೆಗೆ ಹೇಗೆ ಕಾರಣವಾಗಿದೆ ಎಂಬುದರ ಬಗ್ಗೆಯೂ ಅವರು ಮಾತನಾಡಿದರು.
ಭಾರತವು ತನ್ನ ನಾಗರಿಕರಿಗೆ ಸಮೃದ್ಧಿಯನ್ನು ನೀಡುವ ಸಂಕಲ್ಪದೊಂದಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಹೇಗೆ ಹೊರಹೊಮ್ಮಿದೆ ಮತ್ತು ಜಾಗತಿಕ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ನಮ್ಮ ಆರ್ಥಿಕತೆ, ಡಿಜಿಟಲ್ ಆರ್ಥಿಕತೆ ಮತ್ತು ಒಟ್ಟಾರೆ ಪರಿಸರ ವ್ಯವಸ್ಥೆ ಹೇಗೆ ಬೆಳೆಯುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ತಿಳಿಸುವ ಮೂಲಕ ಅವರು ತಮ್ಮ ಭಾಷಣಕ್ಕೆ ಅಂತ್ಯ ಹಾಡಿದರು.
ಸಿಇಓ ಕ್ಲಬ್ಸ್ ಬಗ್ಗೆ
ಸಿಇಒ ಕ್ಲಬ್ಸ್ ಎಂಬುದು ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ಉನ್ನತ ಕಾರ್ಯನಿರ್ವಾಹಕ ಅಧಿಕಾರಿಗಳ ಆಹ್ವಾನಿತ ಸಂಸ್ಥೆ, ಲಾಭರಹಿತ ಸಂಸ್ಥೆಯಾಗಿದೆ. ಇದು 3 ಪ್ರಮುಖ ಆಧಾರ ಸ್ತಂಭಗಳ ಮೇಲೆ ಕೇಂದ್ರೀಕರಿಸುತ್ತದೆ: ಸಾಂಸ್ಥಿಕ ಯೋಗಕ್ಷೇಮ, ವೈಯಕ್ತಿಕ ಯೋಗಕ್ಷೇಮ ಮತ್ತು ಸಾಮಾಜಿಕ ಯೋಗಕ್ಷೇಮ. ಅದು ನೆಟ್ ವರ್ಕಿಂಗ್ ಅನ್ನು ಮೀರಿದ ಸಮಾನ ಮನಸ್ಕ ಗುಂಪು - ಅಲ್ಲಿ ಕಾಳಜಿ ವಹಿಸುವುದು ಮತ್ತು ಹಂಚಿಕೆಯ ಸಹ-ಅಸ್ತಿತ್ವವಿದೆ.

***



(Release ID: 1810114) Visitor Counter : 181


Read this release in: English , Urdu , Hindi , Tamil