ಆಯುಷ್
ಡಬ್ಲ್ಯೂ.ಎಚ್.ಒ ದಿಂದ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪನೆಗಾಗಿ ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ ನಡುವೆ ಒಪ್ಪಂದಕ್ಕೆ ಸಹಿ
ಔಷಧ ಕೇಂದ್ರ ಸ್ಥಾಪನೆಯನ್ನು ಭಾರತ ಸರ್ಕಾರ ತ್ವರಿತಗೊಳಿಸಿದೆ : 2022 ರ ಏಪ್ರಿಲ್ 21 ರಂದು ಗುಜರಾತ್ ನ ಜಾಮ್ ನಗರದಲ್ಲಿ ಭೂಮಿ ಪೂಜೆ ಸಮಾರಂಭ
Posted On:
26 MAR 2022 12:16PM by PIB Bengaluru
ಗುಜರಾತ್ ನ ಜಾಮ್ ನಗರದಲ್ಲಿ ಡಬ್ಲ್ಯೂ.ಎಚ್.ಒ ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಸ್ಥಾಪಿಸಲು ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ [ಡಬ್ಲ್ಯೂ.ಎಚ್.ಒ] ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಗುಜರಾತ್ ನ ಈ ಕೇಂದ್ರದಲ್ಲಿ ತರಬೇತಿ ಮತ್ತು ಆಯುರ್ವೇದ [ಐ.ಟಿ.ಆರ್.ಎ] ಸಂಶೋಧನೆ ಕುರಿತ ಮಧ್ಯಂತರ ಕಚೇರಿ ತೆರೆಯಲಾಗುತ್ತಿದೆ. ಭಾರತ ಸರ್ಕಾರ ಈ ಕೇಂದ್ರಕ್ಕೆ ಸುಮಾರು 250 ದಶಲಕ್ಷ ಡಾಲರ್ ಹೂಡಿಕೆ ಮಾಡಲಾಗುತ್ತಿದೆ. ಜಿ.ಸಿ.ಟಿ.ಎಂ ನ ಪ್ರಾಥಮಿಕ ಉದ್ದೇಶವೆಂದರೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಜಗತ್ತಿನಾದ್ಯಂತ ಲಭ್ಯವಿರುವ ಸಾಂಪ್ರದಾಯಿಕ ಔಷಧದ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಮತ್ತು ಪ್ರಪಂಚದ ಒಟ್ಟಾರೆ ಸಮುದಾಯದ ಆರೋಗ್ಯ ಸುಧಾರಿಸುವುದಾಗಿದೆ.
ಮಾರ್ಚ್ 25 ರಂದು ಜಿನೆವಾದಲ್ಲಿ ಆಯುಷ್ ಸಚಿವಾಲಯದ ಕಾರ್ಯದರ್ಶಿ ಶ್ರೀ ವೈದ್ಯ ರಾಜೇಶ್ ಕೊಟೆಚ ಮತ್ತು ಡಬ್ಲ್ಯೊ.ಎಚ್.ಒ ನ ಮಹಾ ನಿರ್ದೇಶಕ ಡಾ. ಟೆಡ್ರಾಸ್ ಅದಾನೊಮ್ ಗೆಬ್ರೆಯೆಸುಸ್ ಒಪ್ಪಂದಕ್ಕೆ ಸಹಿ ಹಾಕಿದರು. ಈ ಔಷಧ ಕೇಂದ್ರ ಸ್ಥಾಪನೆ ಮಾಡುವ ಕುರಿತ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ಅನುಮೋದನೆ ನೀಡಿತ್ತು.
ಈ ಐತಿಹಾಸಿಕ ಕಾರ್ಯಕ್ರಮ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಂದೇಶದಲ್ಲಿ “ಗ್ಲೋಬೆಲ್ ಸೆಂಟರ್ ಫಾರ್ ಟ್ರಡಿಷನಲ್ ಮೆಡಿಸನ್ ಸ್ಥಾಪನೆಗೆ ಸಹಿ ಹಾಕುವ ಒಪ್ಪಂದದ ಬಗ್ಗೆ ತಿಳಿದುಕೊಳ್ಳಲು ಹರ್ಷವಾಗುತ್ತಿದೆ. ಹಲವಾರು ಕ್ರಮಗಳ ಮೂಲಕ ನಮ್ಮ ಸರ್ಕಾರ ತಡೆಗಟ್ಟುವ ಮತ್ತು ಗುಣಪಡಿಸುವ ಆರೋಗ್ಯ ಸೇವೆಯನ್ನು ಕೈಗೆಟುವ ಮತ್ತು ಎಲ್ಲರಿಗೂ ದೊರೆಯುವಂತೆ ಮಾಡಲು ದಣಿವರಿಯದ ಪ್ರಯತ್ನದಲ್ಲಿ ನಿರತವಾಗಿದೆ. ಜಾಮ್ ನಗರದ ಜಾಗತಿಕ ಕೇಂದ್ರ ಜಗತ್ತಿಗೆ ಉತ್ತಮ ಆರೋಗ್ಯ ಪರಿಹಾರಗಳನ್ನು ಒದಗಿಸಲು ಸಹಾಯ ಮಾಡುತ್ತದೆ.” ಎಂದು ಹೇಳಿದ್ದಾರೆ.
ಈ ಸಮಾರಂಭದಲ್ಲಿ ಮಾತನಾಡಿದ ಆಯುಷ್ ಸಚಿವ ಶ್ರೀ ಸರ್ಬಾನಂದ್ ಸೋನೆವಾಲ್, ನಮ್ಮ ಜನಪ್ರಿಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮ ಮತ್ತು ಪ್ರಯತ್ನದಿಂದಾಗಿ ನಮ್ಮ ಸಚಿವಾಲಯ ಈ ಮಹತ್ವದ ಕ್ರಮ ಕೈಗೊಂಡಿರುವುದರೀಂದ ನಮಗೆ ಹೆಮ್ಮೆಯಾಗುತ್ತಿದೆ. ಈ ಕೇಂದ್ರ ದೂರಗಾಮಿ ಲಾಭಗಳನ್ನು ದೊರೆಕಿಸುತ್ತದೆ ಮತ್ತು ಸಾಂಪ್ರದಾಯಕ ಔಷಧ ವ್ಯವಸ್ಥೆಗೆ ಖ್ಯಾತಿ ತಂದುಕೊಡುತ್ತದೆ. ಈ ಉಪಕ್ರಮದಿಂದ ಮಾನವೀಯತೆಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಆರೋಗ್ಯ ಸೇವೆಗಳನ್ನು ಪಡೆಯುವಲ್ಲಿ ದೂರದೃಷ್ಟಿಯಿಂದ ಸಾಗುತ್ತದೆ. ಇತ್ತೀಚಿನ ವೈಜ್ಞಾನಿಕ ವಿಧಾನಗಳೊಂದಿಗೆ ಸಂಪರ್ಕ ಸಾಧಿಸಲು ಈ ಕೇಂದ್ರ ಉತ್ತಮ ವ್ಯವಸ್ಥೆಯನ್ನು ದೊರಕಿಸಿಕೊಡಲಿದೆ ಎಂದು ಅವರು ಹೇಳಿದರು.
ಭಾರತ ಸರ್ಕಾರ ಕೈಗೊಂಡಿರುವ ಪ್ರಮುಖ ಉಪಕ್ರಮದ ಬಗ್ಗೆ ಬೆಳಕು ಚೆಲ್ಲಿದ ಡಬ್ಲ್ಯೂ.ಎಚ್.ಒ ನ ಮಹಾ ನಿರ್ದೇಶಕ ಡಾ. ಟೆಡ್ರಾಸ್ ಅಧಾನೋಮ್ ಗೆಬ್ರೆಯೆಸುಸ್, ಆಧುನಿಕ ವಿಜ್ಞಾನ, ಸುಸ್ಥಿರತೆಯ ತತ್ವಗಳ ಮೇಲೆ ಸಾಂಪ್ರದಾಯಿಕ ಔಷಧದ ಸಾಮರ್ಥ್ಯವನ್ನು ಬಳಸಿಕೊಳ್ಳುವುದು 21 ನೇ ಶತಮಾನದಲ್ಲಿ ಆರೋಗ್ಯ ವಲಯದ ಪ್ರಮುಖ ಬದಲಾವಣೆಯಾಗಿದೆ ಎಂದರು.
ಜಗತ್ತಿನಲ್ಲಿ ಸಾಂಪ್ರದಾಯಿಕ ಔಷಧ ವಲಯದಲ್ಲಿ ಜಿ.ಸಿ.ಟಿ.ಎಂ ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರ[ಕಚೇರಿ]ವಾಗಿದೆ. ಇದು ಸಾಂಪ್ರದಾಯಿಕ ಔಷಧ ಪದ್ಧತಿಗಳು ಮತ್ತು ಉತ್ಪನ್ನಗಳ ಮೇಲಿನ ನೀತಿಗಳು ಹಾಗೂ ದೃಢವಾದ ಪುರಾವೆಗಳ ಆಧಾರದ ಮೇಲೆ ಮಾನದಂಡಗಳನ್ನು ನಿಗದಿಪಡಿಸುವ, ತಮ್ಮ ಆರೋಗ್ಯ ವ್ಯವಸ್ಥೆಗಳಿಗೆ ಸೂಕ್ತವಾಗುವ ರೀತಿಯಲ್ಲಿ ಇದನ್ನು ಸಂಯೋಜಿಸಲು ಸಹಾಯ ಮಾಡುತ್ತದೆ. ಅತ್ಯುತ್ತಮ ಮತ್ತು ಸಮರ್ಥ ಪರಿಣಾಮ ಉಂಟು ಮಾಡಲು ಅದರ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಈ ಕೇಂದ್ರ ನಿರ್ವಹಣೆ ಮಾಡಲಿದೆ.
ಆರೋಗ್ಯ ಆರೈಕೆಯ ಸೇವಾ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಔಷಧ ಪ್ರಮುಖ ಆಧಾರ ಸ್ತಂಭವಾಗಿದೆ ಮತ್ತು ಭಾರತವಷ್ಟೇ ಅಲ್ಲದೇ ಜಗತ್ತಿನಾದ್ಯಂತ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ಪಡೆಯಲು ನಿರ್ಣಾಯಕ ಪಾತ್ರ ವಹಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಾಂಪ್ರದಾಯಿಕ ಔಷಧ ಥೆರಪಿಯಲ್ಲಿ ಕೃತಕ ಬುದ್ದಿಮತ್ತೆ, ತಾಂತ್ರಿಕ ನಾವಿನ್ಯತೆಗಳನ್ನು ಸಹ ಬಳಕೆ ಮಾಡುತ್ತಿದ್ದು, ಇದರಿಂದ ಪ್ರಮುಖ ಪರಿವರ್ತೆಯನ್ನು ಕಾಣುತ್ತಿದ್ದೇವೆ. ಸಾಂಪ್ರದಾಯಿಕ ಔಷಧ ವಲಯದ ಸಮೂಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇದು ತಲುಪುತ್ತಿದೆ.
ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ಕೃತಕ ಬುದ್ದಿಮತ್ತೆ [ಎಐ] ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಸಾಕ್ಷ್ಯ ಮತ್ತು ಪ್ರವೃತ್ತಿಗಳನ್ನು ರಚಿಸಲು, ಫಾರ್ಮಾಕೊಕಿನೆಟ್ ಗುಣಲಕ್ಷಣಗಳಿಗಾಗಿ ನೈಸರ್ಗಿಕ ಉತ್ಪನ್ನಗಳನ್ನು ಪರೀಕ್ಷಿಸಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ಡಬ್ಲ್ಯೂ.ಎಚ್.ಒ – ಜಿ.ಸಿ.ಟಿ.ಎಂ ನಿಂದ ಪ್ರಪಂಚದ ಎಲ್ಲಾ ಪ್ರದೇಶಗಳನ್ನು ತೊಡಗಿಸಿಕೊಳ್ಳಲು ಮತ್ತು ಇದರ ಪ್ರಯೋಜನ ಪಡೆಯಲು ಸೂಕ್ತ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. 2022 ರ ಏಪ್ರಿಲ್ 21 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಸಮಾರಂಭ ನಡೆಯಲಿದೆ.
*****
(Release ID: 1810044)
Visitor Counter : 299