ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ- 2013ರ (ಎನ್ಎಫ್ಎಸ್ಎ) ಅಡಿಯಲ್ಲಿ, ಫಲಾನುಭವಿಗಳ ಸೇರ್ಪಡೆ ಮತ್ತು ಅವರನ್ನು ಹೊರಗಿಡುವುದು ಆಯಾ ರಾಜ್ಯ ಸರಕಾರಗಳು/ ಕೇಂದ್ರಾಡಳಿತ ಪ್ರದೇಶ ಆಡಳಿತಗಳ ಜವಾಬ್ದಾರಿಯಾಗಿದೆ


ವಿವಿಧ ಅಕ್ರಮಗಳಿಂದಾಗಿ 2014ರಿಂದ 2021ರ ಅವಧಿಯಲ್ಲಿ ಸುಮಾರು 4.28 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿವೆ

ಪ್ರಸ್ತುತ, ಇಲಾಖೆಯು ಹಂಚಿಕೆ ಮಾಡುವ ಮಾಸಿಕ ಆಹಾರ ಧಾನ್ಯಗಳಲ್ಲಿ ಸುಮಾರು ಶೇ 90ರಷ್ಟನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ʻಇಪಿಒಎಸ್ʼ ವಹಿವಾಟುಗಳ ಮೂಲಕ ವಿತರಿಸುತ್ತಿವೆ

Posted On: 23 MAR 2022 3:38PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಹಾಯಕ ಸಚಿವೆ ಶ್ರೀಮತಿ ಸಾಧ್ವಿ ನಿರಂಜನ್ ಜ್ಯೋತಿ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ, ʻರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ʼರ (ಎನ್ಎಫ್ಎಸ್ಎ) ಅಡಿಯಲ್ಲಿ, ಫಲಾನುಭವಿಗಳನ್ನು ಸೇರಿಸುವುದು ಮತ್ತು ಹೊರಗಿಡುವುದು ಆಯಾ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ಜವಾಬ್ದಾರಿಯಾಗಿದೆ ಎಂದು ಮಾಹಿತಿ ನೀಡಿದರು. ಇದಲ್ಲದೆ, ʻಎನ್ಎಫ್ಎಸ್ಎʼ ಅಡಿಯಲ್ಲಿ ಫಲಾನುಭವಿಗಳನ್ನು ಸೇರಿಸುವುದು ಮತ್ತು ಹೊರಗಿಡುವುದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಅಭಿವೃದ್ಧಿಪಡಿಸಿದ ಅರ್ಹತಾ ಮಾನದಂಡಗಳ ಪ್ರಕಾರ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ. ಅದರಂತೆ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ʻಎನ್ಎಫ್ಎಸ್ಎʼ ಅಡಿಯಲ್ಲಿ ʻಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆʼ(ಟಿಪಿಡಿಎಸ್) ಸುಧಾರಣೆಗಳಿಗೆ ಮಾಹಿತಿ ತಂತ್ರಜ್ಞಾನದ ಅನುಷ್ಠಾನವನ್ನು ಬಳಸಿಕೊಳ್ಳುತ್ತಿವೆ. ಆ ಮೂಲಕ ಪಡಿತರ ಚೀಟಿಗಳು / ಫಲಾನುಭವಿಗಳ ಡೇಟಾವನ್ನು ಡಿಜಿಟಲೀಕರಣಗೊಳಿಸುವುದು, ನಕಲು ಮಾಡುವ ಪ್ರಕ್ರಿಯೆ ತಡೆ, ಶಾಶ್ವತ ವಲಸೆ, ಸಾವುಗಳು, ಅನರ್ಹ / ನಕಲಿ ಪಡಿತರ ಚೀಟಿಗಳ ಗುರುತಿಸುವಿಕೆ ಇತ್ಯಾದಿಗಳ ಕಾರಣಗಳಿಗಾಗಿ 2014ರಿಂದ 2021ರವರೆಗೆ ಸುಮಾರು 4.28 ಕೋಟಿ ಪಡಿತರ ಚೀಟಿಗಳನ್ನು ರದ್ದುಗೊಳಿಸಿರುವುದಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿವೆ. ಆದಾಗ್ಯೂ, ಪಡಿತರ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಅಥವಾ ಲಿಂಕ್ ಮಾಡದಿರುವುದು ʻಎನ್ಎಫ್ಎಸ್ಎʼ ಅಡಿಯಲ್ಲಿ ಪಡಿತರ ಚೀಟಿಗಳನ್ನು ತೆಗೆದುಹಾಕಲು / ರದ್ದುಗೊಳಿಸಲು ಮಾನದಂಡವಲ್ಲ. 2014ರಿಂದ 2021ರವರೆಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ರದ್ದುಗೊಳಿಸಿದ ಪಡಿತರ ಚೀಟಿಗಳ ಸಂಖ್ಯೆಯನ್ನು ರಾಜ್ಯ / ಕೇಂದ್ರಾಡಳಿತ ಪ್ರದೇಶವಾರು ಮತ್ತು ವರ್ಷವಾರು ಸೂಚಿಸುವ ಪಟ್ಟಿಯನ್ನು ಅನುಬಂಧದಲ್ಲಿ ನೀಡಲಾಗಿದೆ.

ಎಲ್ಲಾ ʻಎನ್ಎಫ್ಎಸ್ಎʼ ಫಲಾನುಭವಿಗಳು ತಮ್ಮ ʻಅಂತ್ಯೋದಯ ಅನ್ನ ಯೋಜನೆʼ (ಎಎವೈ) ಮತ್ತು ʻಆದ್ಯತಾ ಕುಟುಂಬʼ (ಪಿಎಚ್ಎಚ್) ಪಡಿತರ ಚೀಟಿಗಳ ಅರ್ಹತೆಗಳಿಗೆ ಅನುಗುಣವಾಗಿ ತಮ್ಮ ಮಾಸಿಕ ಆಹಾರ ಧಾನ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಸ್ವೀಕರಿಸುತ್ತಿದ್ದಾರೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಕಾಲಕಾಲಕ್ಕೆ ಪತ್ರಗಳು, ಸಭೆಗಳು ಮತ್ತು ವೀಡಿಯೊ ಕಾನ್ಫರೆನ್ಸ್‌ಗಳ ಮುಖಾಂತರ ʻಪಾರದರ್ಶಕ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ʼ(ಇಪಿಒಎಸ್) ಸಾಧನ ವಹಿವಾಟುಗಳ ಮೂಲಕ ʻಎಫ್‌ಪಿಎಸ್‌ʼಗಳಲ್ಲಿ ಆಹಾರ ಧಾನ್ಯಗಳ ವಿತರಣೆಯಾಗುವುದನ್ನು ಖಾತರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಎಲ್ಲಾ ಫಲಾನುಭವಿಗಳಿಗೆ ಬಯೋಮೆಟ್ರಿಕ್ ದೃಢೀಕರಣದೊಂದಿಗೆ ಮತ್ತು ಸ್ಥಳೀಯ/ದ್ವಿಭಾಷೆಯಲ್ಲಿ ಫಲಾನುಭವಿಗಳಿಗೆ ಇಪಿಒಎಸ್ ಮುದ್ರಿತ ವಹಿವಾಟು ರಸೀದಿಗಳನ್ನು ಒದಗಿಸುವುದು.

 

ʻಆಧಾರ್ ಕಾಯ್ದೆ-2016ರ ʻಸೆಕ್ಷನ್-7ರ ಅನುಸಾರ ದಿನಾಂಕ 08/02/2017ರಂದು ಇಲಾಖೆ ಹೊರಡಿಸಿದ ಅಧಿಸೂಚನೆಯ (ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ) ಅಡಿಯಲ್ಲಿ, ಫಲಾನುಭವಿಗಳ ಆಧಾರ್ ಸಂಖ್ಯೆಗಳನ್ನು ಅವರ ಪಡಿತರ ಚೀಟಿಗಳೊಂದಿಗೆ ಲಿಂಕ್ ಮಾಡಲು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾದ ಕಾಲಮಿತಿಯನ್ನು 31/03/2022ರವರೆಗೆ ವಿಸ್ತರಿಸಲಾಗಿದೆ. ಅಲ್ಲಿಯವರೆಗೆ, ಅಸ್ತಿತ್ವದಲ್ಲಿರುವ ಇಲಾಖೆಯ ಸೂಚನೆಗಳ ಪ್ರಕಾರ, ಯಾವುದೇ ನೈಜ ʻಎನ್ಎಫ್ಎಸ್ಎʼ ಫಲಾನುಭವಿ / ಕುಟುಂಬಕ್ಕೆ ಆಧಾರ್ ಕೊರತೆಯ ಒಂದೇ ಕಾರಣಕ್ಕಾಗಿ ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳ ಕೋಟಾವನ್ನು ನಿರಾಕರಿಸಬಾರದು ಎಂದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ದಿನಾಂಕ 24/10/2017 ಮತ್ತು 08/11/2018ರ ಪತ್ರಗಳ ಮೂಲಕ ಸೂಚಿಸಲಾಗಿದೆ. ಜೊತೆಗೆ ನೆಟ್‌ವರ್ಕ್‌/ ಸಂಪರ್ಕ/ ಲಿಂಕ್ ಸಂಬಂಧಿತ ಸಮಸ್ಯೆಗಳು, ಫಲಾನುಭವಿಯ ಬಯೋಮೆಟ್ರಿಕ್‌ ದೃಢೀಕರಣ ವೈಫಲ್ಯ ಅಥವಾ ಇತರ ಯಾವುದೇ ತಾಂತ್ರಿಕ ಕಾರಣಗಳಿಂದಾಗಿ ಪಡಿತರ ಸೌಲಭ್ಯ ತಡೆ ಹಿಡಿಯುವಂತಿಲ್ಲ ಎಂದೂ ಸೂಚಿಸಲಾಗಿದೆ.

 

ಆಹಾರ ಧಾನ್ಯಗಳ ವಿತರಣೆಯ ಸಮಯದಲ್ಲಿ ʻಎಫ್‌ಪಿಎಸ್‌ʼ ವಿತರಕರು ಸರಿಯಾದ ಮತ್ತು ಪಾರದರ್ಶಕ ತೂಕವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ʻಎಫ್‌ಪಿಎಸ್‌ʼಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರಗಳು / ಮಾಪಕಗಳನ್ನು ʻಇಪಿಒಎಸ್ʼ ಸಾಧನಗಳೊಂದಿಗೆ ಸಂಯೋಜಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಲಾಗಿದೆ. ಪ್ರಸ್ತುತ, ಇಲಾಖೆಯು ಹಂಚಿಕೆ ಮಾಡುವ ಮಾಸಿಕ ಆಹಾರ ಧಾನ್ಯಗಳಲ್ಲಿ ಸುಮಾರು 90% ಅನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ʻಇಪಿಒಎಸ್ʼ ವಹಿವಾಟುಗಳ ಮೂಲಕ ವಿತರಿಸುತ್ತಿವೆ.

 

2014 ರಿಂದ 2021ರವರೆಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ರದ್ದುಪಡಿಸಿದ ರಾಜ್ಯವಾರು ಮತ್ತು ವರ್ಷವಾರು ಪಡಿತರ ಚೀಟಿಗಳ ಸಂಖ್ಯೆಯನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ:

 

ಕ್ರ.ಸಂಖ್ಯೆ

ರಾಜ್ಯ/ಕೇಂದ್ರಾಡಳಿತ ಪ್ರದೇಶ

2014

2015

2016

2017

2018

2019

2020

2021

ಒಟ್ಟು

1

ಆಂಧ್ರ ಪ್ರದೇಶ

5,45,987

1,29,202

4,75,023

5,449

15,209

12,762

24,523

13,128

12,21,283

2

ಅಂಡಮಾನ್ ಮತ್ತು ನಿಕೋಬಾರ್

-

37

7

6

47

421

431

-

949

3

ಅರುಣಾಚಲ ಪ್ರದೇಶ

1,059

115

4,396

56

-

-

-

-

5,626

4

ಅಸ್ಸಾಂ

-

-

1,08,681

42,077

1,35,250

22,412

21,291

11,120

3,40,831

5

ಬಿಹಾರ

21,712

16,401

6,291

-

2,18,051

3,92,713

99,404

-

7,54,572

6

ಚಂಡೀಗಢ

-

-

-

88

-

-

-

-

88

7

ಛತ್ತೀಸ್ ಗಢ

7,10,000

1,43,000

1,50,000

1,50,000

56,834

1,38,967

4,508

4,368

13,57,677

8

ಡಿಎನ್‌ಹೆಚ್‌ ಮತ್ತು ಡಿಯು-ಡಮನ್‌

-

262

650

272

4,898

577

5,840

1,410

13,909

9

ದೆಹಲಿ

-

38,496

22,696

3,969

2,56,987

381

518

-

3,23,047

10

ಗೋವಾ

93

1,45,471

10,115

6,146

1,130

888

148

59

1,64,050

11

ಗುಜರಾತ್

64,079

45,833

22,119

18,965

95,659

23,038

47,936

11,958

3,29,587

12

ಹರಿಯಾಣ

22,903

43,515

19,648

29,686

2,91,926

-

-

-

4,07,678

13

ಹಿಮಾಚಲ ಪ್ರದೇಶ

235

-

1,148

172

56,858

367

4,376

2,538

65,694

14

ಜಮ್ಮು ಮತ್ತು ಕಾಶ್ಮೀರ

640

3,325

50,709

664

3,428

13,869

13,224

NIL

85,859

15

ಜಾರ್ಖಂಡ್

19

7,914

4,46,025

3,59,793

82,394

60,333

65,234

-

10,21,712

16

ಕರ್ನಾಟಕ

6,64,755

7,61,326

1,44,432

3,26,382

73,675

1,09,312

31,753

42,558

21,54,193

17

ಕೇರಳ

57

-

-

-

3,314

2,543

52,475

1,04,511

1,62,900

18

ಲಡಾಖ್

ಆನ್

ಆನ್

ಆನ್

ಆನ್

ಆನ್

NIL

NIL

614

614

19

ಲಕ್ಷದ್ವೀಪ

76

872

442

-

5

6

7

33

1,441

20

ಮಧ್ಯ ಪ್ರದೇಶ

1,313

-

3,89,124

1,84,673

1,27,441

61,265

1,65,829

14,24,115

23,53,760

21

ಮಹಾರಾಷ್ಟ್ರ

85,160

8,20,780

11,55,908

-

12,81,922

6,53,677

1,31,986

36,119

41,65,552

22

ಮಣಿಪುರ

-

-

-

336

-

-

45,321

15,541

61,198

23

ಮೇಘಾಲಯ

-

-

-

-

2,568

10,525

16

-

13,109

24

ಮಿಜೋರಾಂ

47

53

101

559

107

156

1,443

1,637

4,103

25

ನಾಗಾಲ್ಯಾಂಡ್

3,247

-

-

8,521

7,723

18,552

7,304

-

45,347

26

ಒಡಿಶಾ

-

-

6,50,471

35,740

-

-

-

-

6,86,211

27

ಪುದುಚೇರಿ

10,629

56,121

9,886

3,290

3,533

2,093

1,881

1,731

89,164

28

ಪಂಜಾಬ್

93,267

-

-

69,945

34,972

94,031

1,79,837

3,305

4,75,357

29

ರಾಜಸ್ಥಾನ

-

26,329

13,71,230

73,110

8,016

72,276

5,80,241

1,35,283

22,66,485

30

ಸಿಕ್ಕಿಂ

-

-

11,714

1,126

3,377

5,622

6,981

-

28,820

31

ತಮಿಳುನಾಡು

96,406

1,14,175

84,470

9,089

-

-

-

-

3,04,140

32

ತೆಲಂಗಾಣ

11,71,354

83,048

5,21,790

41,194

3,101

40,684

12,154

NIL

18,73,325

33

ತ್ರಿಪುರಾ

11,814

66,236

92,728

-

18,874

552

1,099

490

1,91,793

34

ಉತ್ತರ ಪ್ರದೇಶ

19,117

2,33,847

25,86,541

44,41,748

43,72,491

41,52,273

8,54,025

4,15,259

1,70,75,301

35

ಉತ್ತರಾಖಂಡ್

-

1,11,367

89,984

3,18,718

1,26,268

-

-

-

6,46,337

36

ಪಶ್ಚಿಮ ಬಂಗಾಳ

16,77,311

21,84,152

-

-

88,593

1,00,151

59,666

-

41,09,873

 

ಒಟ್ಟು

52,01,280

50,31,877

84,26,329

61,31,774

73,74,651

59,90,446

24,19,451

22,25,777

4,28,01,585

 

***

****


(Release ID: 1809024) Visitor Counter : 999


Read this release in: English , Hindi , Bengali