ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಬ್ರಿಕ್ಸ್ ಲಸಿಕೆ ಆರ್ ಮತ್ತು ಡಿ ಕೇಂದ್ರಕ್ಕೆ ಚಾಲನೆ ನೀಡಿದರು


ಲಸಿಕೆ ಸಂಪನ್ಮೂಲಗಳ ಸುಲಭಸಾಧ್ಯತೆ ಹಾಗು ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್‌-19 ಲಸಿಕೆಗಳ ಸಮಾನ ಪ್ರವೇಶಕ್ಕೆ ಈ ಕೇಂದ್ರ ಸಹಕಾರಿ

ಜಾಗತಿಕ ಸಾಂಕ್ರಾಮಿಕದೆಡೆಗೆ ಬ್ರಿಕ್ಸ್‌ ದೇಶಗಳ ಪ್ರತಿಕ್ರಿಯೆಯ ಪುರಾವೆಯಾಗಿದೆ

ಬ್ರಿಕ್ಸ್‌ ಮತ್ತು ಇತರ ದೇಶಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಭಾರತ ತನ್ನ ದೃಢವಾದ ಲಸಿಕೆ ಉತ್ಪಾದನಾ ಉದ್ಯಮದ ನೆರವು ಒದಗಿಸಲು ಸಿದ್ಧವಾಗಿದೆ: ಡಾ. ಮನ್ಸುಖ್‌ ಮಾಂಡವಿಯಾ

2022ರ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆಯ ಶೇಕಡ 70 ರಷ್ಟು ಕೋವಿಡ್‌-19 ಕ್ಕೆ ಪ್ರತಿರೋಧ ಲಸಿಕೆ ಹಾಕುವ ಡಬ್ಲ್ಯುಎಚ್‌ಒನ ಗುರಿಯನ್ನು ಸಾಧಿಸುವ ಪ್ರಯತ್ನಗಳನ್ನು ಬೆಂಬಲಿಸಲು ಬ್ರಿಕ್ಸ್‌ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು

Posted On: 22 MAR 2022 5:37PM by PIB Bengaluru

‘‘ಭಾರತ 150 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳನ್ನು ಪೂರೈಸುವ ಮತ್ತು ಡಬ್ಲ್ಯುಎಚ್‌ ಒನ ಶೇಕಡ 65-70 ರಷ್ಟು ಲಸಿಕೆ ಅಗತ್ಯಗಳನ್ನು ಪೂರೈಸುವ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಉದ್ಯಮಗಳಲ್ಲಿ ಒಂದನ್ನು ಹೊಂದಿದೆ. ಭಾರತವು ಬ್ರಿಕ್ಸ್‌ (ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ದೇಶಗಳಿಗೆ ಮತ್ತು ಪ್ರಪಂಚಕ್ಕೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ತನ್ನ ದೃಢವಾದ ಲಸಿಕೆ ಉತ್ಪಾದನಾ ಉದ್ಯಮದ ನೆರವು ನೀಡಲು ಸಿದ್ದವಾಗಿದೆ,’’ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ. ಮನ್ಸುಖ್‌ ಮಾಂಡವಿಯಾ ಅವರು ಇಂದು ಇಲ್ಲಿ ಬ್ರಿಕ್ಸ್‌ ಲಸಿಕೆ ಆರ್‌ ಮತ್ತು ಡಿ ಕೇಂದ್ರ ಮತ್ತು ಲಸಿಕೆ ಸಹಕಾರದ ಕಾರ್ಯಾಗಾರವನ್ನು ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಉದ್ಘಾಟಿಸಿ ಮಾತನಾಡಿದರು.

ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬ್ರಿಕ್ಸ್‌ ದೇಶಗಳ ಪೂರಕ ಪ್ರಯೋಜನೆಗಳನ್ನು ಒಟ್ಟುಗೂಡಿಸಲು ಈ ಕೇಂದ್ರವು ಸಹಕಾರಿಯಾಗಿದೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಹಾಗು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಮಯೋಚಿತ ನೆರವನ್ನು ಒದಗಿಸಲು, ಬ್ರಿಕ್ಸ್‌ ರಾಷ್ಟ್ರಗಳ ಸಾಮರ್ಥ್ಯ‌ವನ್ನು ಹೆಚ್ಚಿಸಲು ಪೂರಕವಾಗಿ  ಕಾರ್ಯ ನಿರ್ವಹಿಸುತ್ತದೆ ಎಂದು ಡಾ. ಮಾಂಡವಿಯಾ ಕೇಂದ್ರದ ಪ್ರಮುಖಾಂಶಗಳನ್ನು ಉಲ್ಲೇಖಿಸಿದರು. ಇದು ಮೂಲಭೂತ ಆರ್‌ ಮತ್ತು ಡಿ, ಪೂರ್ವಭಾವಿ ಮತ್ತು ಕ್ಲಿನಿಕಲ್‌(ಚಿಕಿತ್ಸಕ) ಅಧ್ಯಯನಗಳನ್ನು ಒಳಗೊಳ್ಳುತ್ತದೆ ಮತ್ತು ಲಸಿಕೆ ಅಭ್ಯರ್ಥಿಗಳನ್ನು ಪರೀಕ್ಷಿಸಲು ವಿಶ್ಲೇಷಣೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಮಾಣೀಕರಿಸಲು ಬ್ರಿಕ್ಸ್‌ ದೇಶಗಳ ಪ್ರಯೋಗಾಲಯ ಸಾಮರ್ಥ್ಯ‌ಗಳನ್ನು ಬಲಪಡಿಸುತ್ತದೆ. ಲಸಿಕೆ ಸಂಪನ್ಮೂಲಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಕೋವಿಡ್‌-19 ಲಸಿಕೆಗಳಿಗೆ ಸಮಾನ ಪ್ರವೇಶವನ್ನು ಸುಲಭಗೊಳಿಸಲು ಈ ಕೇಂದ್ರವು ಸಹಕಾರಿಯಾಗಿದೆ ಎಂದು ಅವರು ಹೇಳಿದರು.

 

ಬ್ರಿಕ್ಸ್‌ ಲಸಿಕೆ ಆರ್‌ ಮತ್ತು ಡಿ ಕೇಂದ್ರವು ದೇಶಗಳೊಂದಿಗಿನ ಸಹಭಾಗಿತ್ವಕ್ಕೆ, ಅನುಭವಗಳ ಹಂಚಿಕೆಗೆ, ಪರಸ್ಪರ ಪ್ರಯೋಜನಗಳಿಗಾಗಿ ಸಹಯೋಗವನ್ನು ನೀಡಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಾಮುಖ್ಯದ ಲಸಿಕೆ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಸ್ವಾಗತಾರ್ಹ ಉಪಕ್ರಮವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಇದು ಬ್ರಿಕ್ಸ್‌ ದೇಶಗಳು ಮತ್ತು ಪ್ರಪಂಚದ ನಾಗರಿಕರಿಗೆ ಆರ್ಥಿಕ ಚೇತರಿಕೆಯತ್ತ ನಮ್ಮನ್ನು ಮುನ್ನಡೆಸಲು ಜೀವಗಳನ್ನು ಮತ್ತು ಜೀವನೋಪಾಯವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.

ವರ್ಚುವಲ್‌ ಮೂಲಕ ಚಾಲನೆ ನೀಡಿದ ಡಾ. ಮನ್ಸುಖ್‌ ಮಾಂಡವಿಯಾ ಅವರು, ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಕಡೆಗೆ ಸಾಮೂಹಿಕವಾಗಿ ವೈಜ್ಞಾನಿಕ ಪ್ರಯತ್ನಗಳನ್ನು ಕೈಗೊಂಡಿದ್ದಕ್ಕಾಗಿ ಬ್ರಿಕ್ಸ್‌ ದೇಶಗಳಿಗೆ ತಮ್ಮ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ತಿಳಿಸಿದರು. ‘‘ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ, ಈ ಕೇಂದ್ರವನ್ನು ಪ್ರಾರಂಭಿಸಿದ್ದಕ್ಕೆ ತಾವು ಬ್ರಿಕ್ಸ್‌ ಅಧ್ಯಕ್ಷ ರನ್ನು ಪ್ರಶಂಸಿಸುವುದಾಗಿ ಹೇಳಿದರು. ಜಾಗತಿಕ ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ  ಬ್ರಿಕ್ಸ್‌ ದೇಶಗಳ ಬದ್ಧತೆಗೆ ಇದು ಸಾಕ್ಷಿಯಾಗಿದೆ,’’ ಎಂದು  ಹೇಳಿದ ಅವರು, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಶ್ರಮಿಸಿದ ಎಲ್ಲರನ್ನು  ಶ್ಲಾಘಿಸಿದರು. ಆರೋಗ್ಯ ವ್ಯವಸ್ಥೆ ಮತ್ತು ಲಸಿಕೆ ಅಭಿವೃದ್ಧಿಯ ಬೆನ್ನೆಲುಬಾಗಿ ಸೇವೆ ಸಲ್ಲಿಸಿದ ಸ್ಥಳೀಯ ಮತ್ತು ಜಾಗತಿಕವಾಗಿ ಆರೋಗ್ಯ ವೃತ್ತಿಪರರು, ವಿಜ್ಞಾನಿಗಳು, ಸಂಶೋಧಕರು, ಔಷಧ ನಿಯಂತ್ರಣ ಅಧಿಕಾರಿಗಳು ಮತ್ತು ನೀತಿ ನಿರೂಪಕರ ಅವಿರತ ಪ್ರಯತ್ನಗಳಿಗೆ ನನ್ನ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ತಿಳಿಸಲು ನಾನು ಬಯಸುತ್ತೇನೆ ಎಂದರು.
ಕೋವಿಡ್‌-19 ಸೋಂಕು ಹಾವಳಿ ನಂತರ ಒಂದು ವರ್ಷದೊಳಗೆ ಕೋವಿಡ್‌-19 ಸೋಂಕಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳ ಅಭಿವೃದ್ಧಿ ಮತ್ತು ಅನುಮೋದನೆಯು ನಂಬಲಾಗದ ವೈಜ್ಞಾನಿಕ ಸಾಧನೆಯಾಗಿದೆ ಹಾಗು ಭವಿಷ್ಯದಲ್ಲಿ ಲಸಿಕೆ ಅಭಿವೃದ್ಧಿ ಕ್ಷೇತ್ರದಲ್ಲಿನ ಸಾಧ್ಯತೆಗಳ ಬಗ್ಗೆ ಗಮನಿಸುವಂತೆ ಮಾಡಿದೆ  ಎಂದು ಅವರು ಹೇಳಿದರು.
ಡಬ್ಲ್ಯುಎಚ್‌ಒ ನ ಆರ್‌ ಮತ್ತು ಡಿ ನೀಲನಕ್ಷೆ  ಮತ್ತು ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳು ಈ ಕೇಂದ್ರಕ್ಕೆ ಮಾರ್ಗದರ್ಶಿ ಸೂತ್ರಗಳಾಗಿರಬೇಕು ಎಂದು ಡಾ. ಮಾಂಡವಿಯಾ  ತಿಳಿಸಿದರು. ಅಲ್ಲದೆ, ‘‘ಬ್ರಿಕ್ಸ್‌ ದೇಶಗಳು 2022 ರ ಮಧ್ಯಭಾಗದಲ್ಲಿ ಕೋವಿಡ್‌-19 ಲಸಿಕೆಗಳೊಂದಿಗೆ ವಿಶ್ವದ ಜನಸಂಖ್ಯೆಯ ಶೇಕಡ 70 ರಷ್ಟು ಲಸಿಕೆ ಹಾಕುವ ಡಬ್ಲ್ಯುಎಚ್‌ಒನ ಗುರಿ ಸಾಧಿಸಲು ಎಸಿಟಿ -ಎ, ಸಿಒವಿಎಎಕ್ಸ್‌, ಸಿಇಪಿಐ, ಇತ್ಯಾದಿ ಸಂಸ್ಥೆಗಳೊಂದಿಗೆ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು.  ‘‘ಸಾಂಕ್ರಾಮಿಕ ಮತ್ತು ಆರೋಗ್ಯ ತುರ್ತುಸ್ಥಿತಿಗಳ ಹೊರತಾಗಿ, ಹೆಚ್ಚಿನ ರೋಗ ಮತ್ತು ಮರಣದ ಜೊತೆಗೆ ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳ ಕ್ಷೇತ್ರದಲ್ಲಿ ಹಾಗು ಪ್ರಸ್ತುತ  ಲಸಿಕೆಗಳಿಲ್ಲದ ಏಡ್ಸ್‌, ಟಿಬಿ ಇತ್ಯಾದಿ ರೋಗಗಳಿಗೆ ಸಾಕಷ್ಟು ಸಹಯೋಗದ ಅಗತ್ಯವಿದೆ,’’ ಎಂದು ಅವರು ಪ್ರತಿಪಾದಿಸಿದರು.


ವಿಶ್ವದ ಅತಿದೊಡ್ಡ ಕೋವಿಡ್‌-19 ಲಸಿಕೆ ಅಭಿಯಾನದಲ್ಲಿ ದೇಶದ ಸಾಮರ್ಥ್ಯ‌ ಮತ್ತು ಯಶಸ್ಸಿನ ಕುರಿತು ವಿವರಿಸಿದ ಡಾ. ಮಾಂಡವಿಯಾ, ಭಾರತವು ಇದುವರೆಗೆ 1.81 ಶತಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಿದೆ. ದೇಶದಲ್ಲಿ ಲಸಿಕೆ ತಯಾರಿಕೆಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿಗೆ ದೃಢವಾದ ಹಾಗು ಅನುಕೂಲಕರ ಪರಿಸರ ವ್ಯವಸ್ಥೆ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಒತ್ತಿ ಹೇಳಿದರು.
 ಭಾರತವು ಇಲ್ಲಿಯವರೆಗೆ ಕೋವಿಡ್‌-19 ತುರ್ತು ಬಳಕೆಗಾಗಿ 9 ಲಸಿಕೆಗಳನ್ನು ಅನುಮೋದಿಸಿದೆ. ಅವುಗಳಲ್ಲಿ5 ಸ್ಥಳೀಯವಾಗಿವೆ. ಇದು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ವಿಶ್ವದ ಮೊದಲ ಎಂ-ಆರ್‌ಎನ್‌ಎ ಲಸಿಕೆ ಜೆನೋವಾವನ್ನು ಒಳಗೊಂಡಿದೆ ಮತ್ತು ಡಬ್ಲ್ಯುಎಚ್‌ಒ ವರ್ಗಾವಣೆ ತಂತ್ರಜ್ಞಾನ ಕಾರ್ಯಕ್ರಮದ ಹೊರಗೆ ಉತ್ಪಾದಿಸಲಾಗಿದೆ. ಭಾರತದಲ್ಲಿ ಲಸಿಕೆ ಉದ್ಯಮವು ದ್ವಿ ಪಥದಲ್ಲಿ ಕಾರ್ಯನಿರ್ವಹಿಸುತ್ತದೆ-ಡಿ-ನೋವೊ ಉತ್ಪನ್ನ ಅಭಿವೃದ್ಧಿ. ಅಂದರೆ, ದೇಶದೊಳಗೆ ಮತ್ತು ಸ್ಥಳೀಯ-ಜಾಗತಿಕ ಪಾಲುದಾರಿಕೆಯ ಮೂಲಕ ತಂತ್ರಜ್ಞಾನ ವರ್ಗಾವಣೆ. ‘‘ಸ್ಥಳೀಯ ಮತ್ತು ಜಾಗತಿಕ ಪ್ರಸ್ತುತತೆಯ ರೋಗಗಳಿಗೆ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಬಲಪಡಿಸಲು ನಾವು ಆದ್ಯತೆ ನೀಡಿದ್ದೇವೆ,’’ ಎಂದು ಅವರು ಭಾರತದೊಂದಿಗೆ ಸಹಭಾಗಿತ್ವಕ್ಕೆ ಭಾಗದ ದಾನದ ದಮನ
 ಆಹ್ವಾನಿಸಿದರು.

ವಿವಿಧ ಕ್ಷೇತ್ರಗಳಲ್ಲಿತಮ್ಮ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿಬ್ರಿಕ್ಸ್‌ ರಾಷ್ಟ್ರಗಳ ಬದ್ಧತೆಯೊಂದಿಗೆ, ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಯಿತು. ಈ ನಿಟ್ಟಿನಲ್ಲಿ, 2018 ರ ಜೋಹಾನ್ಸ್‌ಬರ್ಗ್‌ ಘೋಷಣೆಯಲ್ಲಿಬ್ರಿಕ್ಸ್‌ ಲಸಿಕೆ ಆರ್‌ ಮತ್ತು ಡಿ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.  ಹಲವು ವರ್ಷಗಳಲ್ಲಿಮತ್ತು ವಿಶೇಷವಾಗಿ ಸಾಂಕ್ರಾಮಿಕದ ಉದ್ದಕ್ಕೂ, ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಯಿತು ಮತ್ತು ಅಂತಿಮವಾಗಿ  13ನೇ ಬ್ರಿಕ್ಸ್‌ ಶೃಂಗಸಭೆಯ ನವದೆಹಲಿ ಘೋಷಣೆಯಲ್ಲಿ, ವರ್ಚುವಲ್‌ ಸ್ವರೂಪದಲ್ಲಿಬ್ರಿಕ್ಸ್‌ ಲಸಿಕೆ ಆರ್‌ ಮತ್ತು ಡಿ ಕೇಂದ್ರದ ಆರಂಭಿಕ ಚಾಲನೆಗೆ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಬ್ರಿಕ್ಸ್‌ ಸರ್ಕಾರಗಳ ಬೆಂಬಲದೊಂದಿಗೆ, ಪ್ರತಿ ಬ್ರಿಕ್ಸ್‌ ದೇಶವು ತಮ್ಮ ರಾಷ್ಟ್ರೀಯ ಕೇಂದ್ರಗಳನ್ನು ಗುರುತಿಸಿದೆ. ಅವುಗಳೆಂದರೆ ಓಸ್ವಾಲ್ಡೋ ಕ್ರೂಜ್‌ ಫೌಂಡೇಶನ್‌(ಫಿಯೋಕ್ರಜ್‌) ನ ಇಮ್ಯುನೊಬಯಾಲಾಜಿಕಲ್‌ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ (ಬಯೋಮ್ಯಾಂಗ್ವಿನ್ಹೋಸ್‌), ಸ್ಮೊರೊಡಿಂಟ್ಸೆವ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್‌ಫ್ಲುಯೆಜಾ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌), ಸಿನೋವಾಕ್‌ನ ಲೈಫ್‌ ಸೈನ್ಸಸ್‌ ಕಂ. ಲಿಮಿಟೆಡ್‌, ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಶೋಧನಾ ಮಂಡಳಿಯಾಗಿವೆ.

 ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದ  ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಶ್ರೀ ವಾಂಗ್‌ ಝಿಗಾಂಗ್‌ ಅವರು, ಲಸಿಕೆಗಳ ನ್ಯಾಯೋಚಿತ ಮತ್ತು ಸಮಾನ ವಿತರಣೆಯನ್ನು ಉತ್ತೇಜಿಸಲು ಮತ್ತು ಈ ಕೇಂದ್ರ ಮತ್ತು ಅಂತಹ ಇತರ ಉಪಕ್ರಮಗಳ ಮೂಲಕ ಬ್ರಿಕ್ಸ್‌ ದೇಶಗಳ ನಡುವೆ ಒಡಂಬಡಿಕೆಯನ್ನು ಉತ್ತೇಜಿಸಲು ದೇಶಗಳನ್ನು ಒತ್ತಾಯಿಸಿದರು. ಲಸಿಕೆ ಆರ್‌ ಮತ್ತು ಡಿಯಲ್ಲಿನ ಸಹಕಾರ ಮತ್ತು ಕೋವಿಡ್‌-19 ನಿರ್ವಹಣೆಯಲ್ಲಿನ ಅವರ ಅನುಭವಗಳ ಹೊರತಾಗಿ, ಸಮಿತಿಯು ಬ್ರಿಕ್ಸ್‌ ದೇಶಗಳ ನಡುವೆ ಸಹಕಾರದಿಂದ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಕಾರ್ಯತಂತ್ರಗಳನ್ನು ಚರ್ಚಿಸಲಾಯಿತು.

ಸಭೆಯಲ್ಲಿಶ್ರೀ ಮಾರ್ಸೆಲೊ ಕ್ವಿರೋಗಾ ( ಬ್ರೆಜಿಲ್‌ನ ಆರೋಗ್ಯ ಸಚಿವರು), ಶ್ರೀ ಮಿಖಾಯಿಲ್‌ ಮುರಾಶ್ಕೊ (ರಷ್ಯಾದ ಆರೋಗ್ಯ ಮಂತ್ರಿ), ಡಾ ಬ್ಲೇಡ್‌ ಎನ್ಜಿಮಾಂಡೆ (ದಕ್ಷಿಣ ಆಫ್ರಿಕಾದ ಉನ್ನತ ಶಿಕ್ಷ ಣ, ವಿಜ್ಞಾನ ಮತ್ತು ನಾವೀನ್ಯತೆ  ಖಾತೆ 
 ಸಚಿವರು), ಪ್ರತಿನಿಧಿಗಳು, ಹಿರಿಯ ಪ್ರತಿನಿಧಿಗಳು ಮತ್ತು ಬ್ರಿಕ್ಸ್‌ ದೇಶಗಳ ಸಂಶೋಧನಾ ತಜ್ಞರು ಭಾಗವಹಿಸಿದ್ದರು

*** (Release ID: 1808484) Visitor Counter : 240