ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಗುಡ್ಡಗಾಡು ಪ್ರದೇಶಗಳಲ್ಲಿ ‍ಎಫ್‌ಪಿಐಎಸ್‌  ಮತ್ತು ಮೆಗಾ ಫುಡ್ ಪಾರ್ಕ್‌ಗಳ ಸ್ಥಾಪನೆಗೆ ರಿಯಾಯಿತಿಗಳು

Posted On: 15 MAR 2022 12:49PM by PIB Bengaluru

ಆಹಾರ ಸಂಸ್ಕರಣಾ ಉದ್ಯಮಗಳ ಸಚಿವಾಲಯ  2016-17 ರಿಂದ ಕೇಂದ್ರ ವಲಯದ ಅಂಬ್ರೆಲಾ (ಮಾತೃ) ಯೋಜನೆ - ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆಯನ್ನು (ಪಿಎಮ್‌ಕೆಎಸ್‌ವೈ) ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆ ಸೇರಿದಂತೆ ಆಹಾರ ಸಂಸ್ಕರಣಾ ಕ್ಷೇತ್ರದ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿದೆ. ಪಿಎಮ್‌ಕೆಎಸ್‌ವೈನ ಘಟಕ ಯೋಜನೆಗಳ ಅಡಿಯಲ್ಲಿ, ಈಶಾನ್ಯ ರಾಜ್ಯಗಳಲ್ಲಿ (ಸಿಕ್ಕಿಂ ಸೇರಿದಂತೆ) ಮತ್ತು ಹಿಮಾಲಯ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು, ರಾಜ್ಯ ಅಧಿಸೂಚಿತ  ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ಐಟಿಡಿಪಿ) ಪ್ರದೇಶಗಳು ಮತ್ತು ದ್ವೀಪಗಳಲ್ಲಿ ಅಂತಹ ಕೈಗಾರಿಕೆಗಳು ಮತ್ತು ಮೆಗಾ ಫುಡ್ ಪಾರ್ಕ್‌ಗಳನ್ನು ಸ್ಥಾಪಿಸಲು ವಿಶೇಷ ರಿಯಾಯಿತಿಗಳನ್ನು ಒದಗಿಸಲಾಗಿದೆ. . ಈ ರಿಯಾಯಿತಿಗಳು ಮೌಲ್ಯಮಾಪನದ ಸಮಯದಲ್ಲಿ ಕಡಿಮೆ ಅರ್ಹತೆಯ ಮಿತಿ ಮತ್ತು ಆಯ್ದ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಒಳಗೊಂಡಿರುತ್ತದೆ. ಮೆಗಾ ಫುಡ್ ಪಾರ್ಕ್‌ಗಳು ಸೇರಿದಂತೆ ಪಿಎಮ್‌ಕೆಎಸ್‌ವೈನ ಸಂಬಂಧಿತ ಘಟಕ ಯೋಜನೆಗಳ ಅಡಿಯಲ್ಲಿ ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ಅನುದಾನದ ವಿವರಗಳನ್ನು ಅನುಬಂಧದಲ್ಲಿ ತಿಳಿಸಲಾಗಿದೆ.

*****

ಅನುಬಂಧ

ಗುಡ್ಡಗಾಡು ಪ್ರದೇಶಗಳಲ್ಲಿ ಎಫ್‌ಪಿಐಎಸ್  ಮತ್ತು ಮೆಗಾ ಫುಡ್ ಪಾರ್ಕ್‌ಗಳ ಸ್ಥಾಪನೆಗೆ ರಿಯಾಯಿತಿಗಳ ಬಗ್ಗೆ ಮಾರ್ಚ್ 15, 2022ರ ಲೋಕಸಭೆಯ ಗುರುತು ಮಾಡಿರಲಾರದ ಪ್ರಶ್ನೆ ಸಂಖ್ಯೆ. 2283ರ ಭಾಗ (ಎ) ಗೆ (ಸಿ) ಗೆ ಉತ್ತರವಾಗಿ ಅನುಬಂಧವನ್ನು ಉಲ್ಲೇಖಿಸಲಾಗಿದೆ   

ಪಿಎಮ್‌ಕೆಎಸ್‌ವೈ ನ ಸಂಬಂಧಿತ ಘಟಕ ಯೋಜನೆಗಳ ಅಡಿಯಲ್ಲಿ ಅನುಮತಿಸುವ ಅನುದಾನಗಳು

ಕ್ರಮ

ಸಂಖ್ಯೆ

ಘಟಕ ಯೋಜನೆ

ಅನುಮತಿಸಲಾದ  ಅನುದಾನ

ಸಾಮಾನ್ಯ ಕ್ಷೇತ್ರ

ಈಶಾನ್ಯ / ಹಿಮಾಲಯ ಪ್ರದೇಶದ ರಾಜ್ಯಗಳು & ಕೇಂದ್ರಾಡಳಿತ   ಪ್ರದೇಶಗಳು / ಐಟಿಡಿಪಿ ಕ್ಷೇತ್ರಗಳು ಇತ್ಯಾದಿ.

1

ಮೆಗಾ ಫುಡ್ ಪಾರ್ಕ್‌ಗಳು

ಅರ್ಹ ಯೋಜನಾ ವೆಚ್ಚ @ 50% ಅನುದಾನ  [ಪ್ರತಿ ಯೋಜನೆಗೆ ಗರಿಷ್ಠ ರೂ.50.00 ಕೋಟಿಗಳಿಗೆ ಒಳಪಟ್ಟಿರುತ್ತದೆ]

ಅರ್ಹ ಯೋಜನಾ ವೆಚ್ಚ @75% [ಪ್ರತಿ ಯೋಜನೆಗೆ ಗರಿಷ್ಠ ರೂ.50.00 ಕೋಟಿಗಳಿಗೆ ಒಳಪಟ್ಟಿರುತ್ತದೆ] 

2

ಕೋಲ್ಡ್ ಚೈನ್ (ಶೈತ್ಯಾಗಾರ ಜಾಲ) ಮತ್ತು

ಮೌಲ್ಯವರ್ಧನೆ

ಮೂಲಸೌಕರ್ಯ

ಶೇಖರಣಾ ಮೂಲಸೌಕರ್ಯಗಳಾದ ರೈಪನಿಂಗ್ ಚೇಂಬರ್, ಪ್ಯಾಕ್ ಹೌಸ್‌ಗಳು, ಪ್ರಿಕೂಲಿಂಗ್ ಘಟಕಗಳು @35%; ಶೈತ್ಯಾಗಾರ ಸೇರಿದಂತೆ @50%  ; ಮೌಲ್ಯ ಸೇರ್ಪಡೆ ಮತ್ತು ಸಂಸ್ಕರಣಾ ಮೂಲಸೌಕರ್ಯಕ್ಕಾಗಿ; @50%  ಪ್ರದೀಪನ ಸೌಲಭ್ಯಗಳಿಗಾಗಿ.

ಅರ್ಹ ಯೋಜನಾ ವೆಚ್ಚ [ಪ್ರತಿ ಯೋಜನೆಗೆ ಗರಿಷ್ಠ ರೂ.10.00 ಕೋಟಿಗಳಿಗೆ ಒಳಪಟ್ಟಿರುತ್ತದೆ]
 


 

ಶೇಖರಣಾ ಮೂಲಸೌಕರ್ಯಗಳಾದ ರೈಪನಿಂಗ್ ಚೇಂಬರ್, ಪ್ಯಾಕ್ ಹೌಸ್‌ಗಳು, ಪ್ರಿಕೂಲಿಂಗ್ ಘಟಕಗಳು ಶೈತ್ಯಾಗಾರ ಸೇರಿದಂತೆ @75%  ; ಮೌಲ್ಯ ಸೇರ್ಪಡೆ ಮತ್ತು ಸಂಸ್ಕರಣಾ ಮೂಲಸೌಕರ್ಯಕ್ಕಾಗಿ; 

ಪ್ರದೀಪನ ಸೌಲಭ್ಯಗಳಿಗಾಗಿ @75%  

ಅರ್ಹ ಯೋಜನಾ ವೆಚ್ಚದ 75% [ಪ್ರತಿ ಯೋಜನೆಗೆ ಗರಿಷ್ಠ ರೂ.10.00 ಕೋಟಿಗಳಿಗೆ ಒಳಪಟ್ಟಿರುತ್ತದೆ]

3

ರಚನೆ/

ಆಹಾರದ ವಿಸ್ತರಣೆ

ಸಂಸ್ಕರಣೆ ಮತ್ತು

ಸಂರಕ್ಷಣೆ

ಸಾಮರ್ಥ್ಯಗಳು

ಅರ್ಹ ಯೋಜನಾ ವೆಚ್ಚ ಅನುದಾನ : @35%
[ಪ್ರತಿ ಯೋಜನೆಗೆ ಗರಿಷ್ಠ ರೂ.5.00 ಕೋಟಿಗಳಿಗೆ ಒಳಪಟ್ಟಿರುತ್ತದೆ].


 

 

ಅರ್ಹ ಯೋಜನಾ ವೆಚ್ಚ ಅನುದಾನ : @35%
[ಪ್ರತಿ ಯೋಜನೆಗೆ ಗರಿಷ್ಠ ರೂ.5.00 ಕೋಟಿಗಳಿಗೆ ಒಳಪಟ್ಟಿರುತ್ತದೆ].

4

 

ಕೃಷಿ-ಸಂಸ್ಕರಣಾ ಕ್ಲಸ್ಟರ್‌ಗಳಿಗೆ ಮೂಲಸೌಕರ್ಯ

ಅರ್ಹ ಯೋಜನಾ ವೆಚ್ಚ ಅನುದಾನ : @35%
[ಪ್ರತಿ ಯೋಜನೆಗೆ ಗರಿಷ್ಠ ರೂ.10.00 ಕೋಟಿಗಳಿಗೆ ಒಳಪಟ್ಟಿರುತ್ತದೆ].


 

 

ಅರ್ಹ ಯೋಜನಾ ವೆಚ್ಚ ಅನುದಾನ : @35%
[ಪ್ರತಿ ಯೋಜನೆಗೆ ಗರಿಷ್ಠ ರೂ.10.00 ಕೋಟಿಗಳಿಗೆ ಒಳಪಟ್ಟಿರುತ್ತದೆ].

 

5

 

ಹಿಂದಿನ ಮತ್ತು ಮುಂದಿನ ಸಂಪರ್ಕದ ರಚನೆ 

ಅರ್ಹ ಯೋಜನಾ ವೆಚ್ಚ ಅನುದಾನ : @35%
[ಪ್ರತಿ ಯೋಜನೆಗೆ ಗರಿಷ್ಠ ರೂ.5.00 ಕೋಟಿಗಳಿಗೆ ಒಳಪಟ್ಟಿರುತ್ತದೆ].

 

ಅರ್ಹ ಯೋಜನಾ ವೆಚ್ಚ ಅನುದಾನ : @5೦%
[ಪ್ರತಿ ಯೋಜನೆಗೆ ಗರಿಷ್ಠ ರೂ.5.00 ಕೋಟಿಗಳಿಗೆ ಒಳಪಟ್ಟಿರುತ್ತದೆ].

 

 

ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಈ ಮಾಹಿತಿಯನ್ನು ನೀಡಿದರು.

*****


(Release ID: 1806333) Visitor Counter : 193