ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಬೆಂಗಳೂರಿನಲ್ಲಿ ʻಗ್ಯಾಲಿಯಮ್ ನಿಟ್ರೈಡ್ ತಂತ್ರಜ್ಞಾನ ಕೇಂದ್ರ – ಜಿಇಐಸಿಐ ಪರಿಶೀಲಿಸಿದ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್
"ಆಟೋಮೋಟಿವ್ ಮತ್ತು ಮೊಬಿಲಿಟಿಯ ಹೊಸತನದ ಶೋಧದಲ್ಲಿ ನೇತೃತ್ವ ವಹಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಈಡೇರಿಸುವಲ್ಲಿ ʻಗ್ಯಾಲಿಯಮ್ ನಿಟ್ರೈಡ್ʼ ಪ್ರಮುಖ ಪಾತ್ರ ವಹಿಸಲು ಮುಂಬರುವ 2 ರಿಂದ 3 ವರ್ಷಗಳ ಅವಧಿಯು ಅವಕಾಶದ ದ್ವಾರವನ್ನು ತೆರೆಯಲಿದೆ" - ರಾಜೀವ್ ಚಂದ್ರಶೇಖರ್
"ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತ ಜಾಗತಿಕ ನಾಯಕತ್ವ ವಹಿಸಿ ಬೆಳೆಯುವುದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಡಿಜಿಟಲ್ ಇಂಡಿಯಾ ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ" - ರಾಜೀವ್ ಚಂದ್ರಶೇಖರ್
Posted On:
13 MAR 2022 4:11PM by PIB Bengaluru
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ಸಹಾಯಕ ಸಚಿವ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನ ಪ್ರತಿಷ್ಠಿತ ʻಭಾರತೀಯ ವಿಜ್ಞಾನ ಕೇಂದ್ರʼದ (ಐಐಸಿ) `ಗ್ಯಾಲಿಯಮ್ ನೈಟ್ರೈಡ್ ಪರಿಸರ ವ್ಯವಸ್ಥೆ ಸಕ್ರಿಯಗೊಳಿಸುವ ಕೇಂದ್ರ ಮತ್ತು ಇನ್‌ಕ್ಯುಬೇಟರ್ʼ (ಜಿಇಐಸಿಐ) ಘಟಕಕ್ಕೆ ಭೇಟಿ ನೀಡಿದರು. ಈ ಘಟಕವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಐಐಸಿ ಬೆಂಗಳೂರು ಜಂಟಿಯಾಗಿ ಸ್ಥಾಪಿಸಿವೆ. ವಿಶೇಷವಾಗಿ ʻಆರ್‌ಎಫ್ʼ ಮತ್ತು ವಿದ್ಯುತ್ ಆನ್ವಯಿಕೆಗಳಿಗೆ ಹಾಗೂ ಕಾರ್ಯತಂತ್ರಾತ್ಮಕ ಆನ್ವಯಿಕೆಗಳಿಗಾಗಿ ʻಜಿಎಎನ್ʼ (GaN) ಆಧಾರಿತ ʻಡೆವೆಲಪ್‌ಮೆಂಟ್ ಲೈನ್ ಫೌಂಡ್ರಿ ಘಟಕʼವನ್ನು ಸ್ಥಾಪಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ನಂತರ ಮತ್ತು ಘಟಕವನ್ನು ಪರಿಶೀಲಿಸಿದ ನಂತರ ಮಾತನಾಡಿದ ಸಚಿವರು, "ಮುಂದಿನ 2 ರಿಂದ 3 ವರ್ಷಗಳು ಇ-ವಾಹನಗಳು ಮತ್ತು ನಿಸ್ತಂತು ಸಂವಹನವನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ʻಗ್ಯಾಲಿಯಮ್ ನಿಟ್ರೈಡ್ʼಗೆ (ಜಿಎಎನ್) ಅವಕಾಶದ ದ್ವಾರ ತೆರೆಯಲಿದೆ" ಎಂದು ಹೇಳುವ ಮೂಲಕ ಅದರ ಪ್ರಾಮುಖ್ಯವನ್ನು ಒತ್ತಿ ಹೇಳಿದರು. ಐಐಎಸ್‌ಸಿ CeNSE ಫ್ಯಾಬ್ರಿಕೇಶನ್ ಘಟಕದಲ್ಲಿ ಜೋಡಿಸಲಾದ ʻಜಿಎಎನ್ʼ ಟ್ರಾನ್ಸಿಸ್ಟರ್ ಗಳನ್ನು ಸಚಿವರು ವೀಕ್ಷಿಸಿದರು.
ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕಾರ್ಯತಂತ್ರಾತ್ಮಕ ಸಾಮರ್ಥ್ಯಗಳನ್ನು ಸೃಷ್ಟಿಸುವುದು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಡಿಜಿಟಲ್ ಇಂಡಿಯಾ ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಈ ಉದ್ದೇಶಗಳನ್ನು ಸಾಧಿಸಲು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ʻಮೈಟಿವೈʼ MeiTY ದೃಷ್ಟಿಕೋನದ 1000 ದಿನಗಳ ಯೋಜನೆ ರೂಪಿಸಿದೆ, ಇದು ʻಹೈಟೆಕ್ʼ /ʻಸ್ಟ್ರಾಟೆಜಿಕ್ ಟೆಕ್ʼ ಅನ್ನು ಪ್ರಮುಖ ಅಂಶವಾಗಿ ಒಳಗೊಂಡಿದೆ. 5ಜಿ, ಬಾಹ್ಯಾಕಾಶ ಮತ್ತು ರಕ್ಷಣಾ ಉದ್ದೇಶಗಳಿಗೆ ಬಳಸಬಹುದಾದ ʻಗ್ಯಾಲಿಯಮ್ ನಿಟ್ರೈಡ್ʼ ತಂತ್ರಜ್ಞಾನವು ಕಾರ್ಯತಂತ್ರಾತ್ಮಕ ಪ್ರಾಮುಖ್ಯವನ್ನು ಹೊಂದಿದೆ.
ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಇತ್ತೀಚೆಗೆ ಕಂಡುಬಂದ ಕೋವಿಡ್ ಪ್ರೇರಿತ ಅಡಚಣೆಗಳ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಈ ಸಣ್ಣ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ, ಭಾರತವನ್ನು ಜಗತ್ತಿನ ಹೊಸ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿ ಪಾಲುದಾರ ಸ್ಥಾನಕ್ಕೆ ಕೊಂಡೊಯ್ಯಲು ಯಶಸ್ವಿಯಾಯಿತು ಎಂದು ಸಚಿವರು ವಿವರಿಸಿದರು.
“ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಸೆಮಿಕಂಡಕ್ಟರ್ ವಿನ್ಯಾಸ ಕ್ಷೇತ್ರದಲ್ಲಿ ಅದ್ಭುತ ಅವಕಾಶವಿದೆ" ಎಂದು ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು. ಭಾರತದಲ್ಲಿ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕಗಳನ್ನು ಸ್ಥಾಪಿಸಲು ಮತ್ತು ಭಾರತವನ್ನು ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿನ್ಯಾಸ ಮತ್ತು ಉತ್ಪಾದನೆಗೆ (ಇಎಸ್ ಡಿಎಂ) ಜಾಗತಿಕ ಕೇಂದ್ರವನ್ನಾಗಿ ಮಾಡಲು ಇತ್ತೀಚೆಗೆ ಘೋಷಿಸಿದ 10 ಶತಕೋಟಿ ಡಾಲರ್ ಪ್ರೋತ್ಸಾಹಕ ಪ್ಯಾಕೇಜ್ ಬಗ್ಗೆ ಅವರು ಪ್ರಸ್ತಾಪಿಸಿದರು.
"ಡಿಜಿಟಲ್ ಇಂಡಿಯಾ ಮತ್ತು ರಾಷ್ಟ್ರದಲ್ಲಿ ಫ್ಯಾಬ್‌ಗಳ ಕನಸನ್ನು ನನಸಾಗಿಸಲು ಸೆಮಿಕಂಡಕ್ಟರ್ ತಯಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಐಐಟಿಗಳಂತಹ ಸಂಸ್ಥೆಗಳಲ್ಲಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಶಿಕ್ಷಣ ಮತ್ತು ತರಬೇತಿ ಅತ್ಯಗತ್ಯ" ಎಂದು ಶ್ರೀ ರಾಜೀವ್ ಚಂದ್ರಶೇಖರ್ ಹೇಳಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಫ್ಯಾಬ್ ಮಾದರಿಯು ತಂತ್ರಜ್ಞಾನದ ದೇಶೀಯ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಆ ಮೂಲಕ ಸೆಲ್ಯುಲಾರ್ ಮೂಲಸೌಕರ್ಯ ಮತ್ತು ವ್ಯೂಹಾತ್ಮಕ ತಂತ್ರಜ್ಞಾನಗಳಲ್ಲಿ ಅಂತಿಮ ನಿಯೋಜನೆಯನ್ನು ಉತ್ತೇಜಿಸಲು ಸ್ಥಾಪಿಸಲಾದ ಅತ್ಯಾಧುನಿಕ ಇನ್ ಕ್ಯುಬೇಶನ್ ಆಗಿದೆ.
ʻಪಿಎಲ್ಐʼ ಮತ್ತು ʻಡಿಎಲ್ಐʼ ಯೋಜನೆಗಳ ಜೊತೆಗೆ, ʻಜಿಎಎನ್ʼ ಪರಿಸರ ವ್ಯವಸ್ಥೆಯು ನಾವಿನ್ಯತೆಗೆ ಚಾಲಕ ಶಕ್ತಿಯಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಗಂಭೀರವಾಗಿ ಪರಿಗಣಿಸಲು ನವೋದ್ಯಮಗಳು ಮತ್ತು ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ. ಮೊದಲ ನವೋದ್ಯಮ ʻಅಗ್ನಿಟ್ ಸೆಮಿಕಂಡಕ್ಟರ್ಸ್ ಪ್ರೈವೇಟ್ ಲಿಮಿಟೆಡ್ʼ ಅನ್ನು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆಯ ಎಸ್‌ಐಡಿ ಇನ್‌ಕ್ಯುಬೇಟರ್ - ʻಟಿಬಿಐ-ಇನ್ಸೆಎನ್ಎಸ್(InCeNSE ) ನಲ್ಲಿ ಸೇರಿಸಲಾಗಿದೆ. ಇದು ತನ್ನ ಮೊದಲ ಸುತ್ತಿನ ಏಂಜಲ್ ಫಂಡಿಂಗ್ ಅನ್ನು ಹೆಚ್ಚಿಸಿದೆ. ʻಜಿಇಐಸಿಐʼ ರಚಿಸಿದ ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೊದಲ ಸ್ಟಾರ್ಟ್ ಅಪ್ ಇದಾಗಲಿದೆ.
***
(Release ID: 1805592)
Visitor Counter : 236