ಗಣಿ ಸಚಿವಾಲಯ
azadi ka amrit mahotsav

ಕೆಲವು ಖನಿಜಗಳಿಗೆ ಸಂಬಂಧಿಸಿದಂತೆ ರಾಯಲ್ಟಿ ದರವನ್ನು ನಿರ್ದಿಷ್ಟಪಡಿಸಲು ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-1957ರ ಎರಡನೇ ಅನುಸೂಚಿಯ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ

Posted On: 09 MAR 2022 1:31PM by PIB Bengaluru

ಗ್ಲಾಕೊನೈಟ್, ಪೊಟಾಶ್, ಎಮರಾಲ್ಡ್, ಪ್ಲಾಟಿನಂ ಗುಂಪಿನ ಲೋಹಗಳು (ಪಿಜಿಎಂ), ಆಂಡಲೂಸೈಟ್, ಸಿಲ್ಲಿಮ್ಯಾನೈಟ್ ಮತ್ತು ಮಾಲಿಬ್ಡೆನಮ್‌ಗೆ ಸಂಬಂಧಿಸಿದಂತೆ ರಾಯಲ್ಟಿ ದರವನ್ನು ನಿರ್ದಿಷ್ಟಪಡಿಸುವ ನಿಟ್ಟಿನಲ್ಲಿ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಎರಡನೇ ಅನುಸೂಚಿಗೆ ( ಮೂಲಕ 'ಕಾಯ್ದೆ' ಎಂದು ಕರೆಯಲಾಗುತ್ತದೆ) ತಿದ್ದುಪಡಿ ಮಾಡುವ ಗಣಿ ಸಚಿವಾಲಯದ ಪ್ರಸ್ತಾಪಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ

ಅನುಮೋದನೆಯು ಗ್ಲಾಕೊನೈಟ್, ಪೊಟಾಶ್, ಎಮರಾಲ್ಡ್, ಪ್ಲಾಟಿನಂ ಗುಂಪಿನ ಲೋಹಗಳು, ಆಂಡಲೂಸೈಟ್ ಮತ್ತು ಮಾಲಿಬ್ಡೆನಮ್‌ಗೆ ಸಂಬಂಧಿಸಿದಂತೆ ಖನಿಜ ಬ್ಲಾಕ್‌ಗಳ ಹರಾಜನ್ನು ಖಾತರಿಪಡಿಸುತ್ತದೆ. ಮೂಲಕ ಖನಿಜಗಳ ಆಮದನ್ನು ಕಡಿಮೆ ಮಾಡುತ್ತದೆ, ಗಣಿಗಾರಿಕೆ ವಲಯದಲ್ಲಿ ಮತ್ತು ಉತ್ಪಾದನಾ ವಲಯದಲ್ಲಿ ಸಬಲೀಕರಣ ಅವಕಾಶವನ್ನು ಸೃಷ್ಟಿಸುತ್ತದೆ, ಜೊತೆಗೆ ಇದು ಸಮಾಜದ ದೊಡ್ಡ ವರ್ಗದ ಸಮಗ್ರ ಬೆಳವಣಿಗೆಯನ್ನು ಖಾತರಿಪಡಿಸಲು ಸಹಾಯ ಮಾಡುತ್ತದೆಖನಿಜ ಬಹುರೂಪಗಳಾದ ಆಂಡಲೂಸೈಟ್, ಸಿಲ್ಲಿಮ್ಯಾನೈಟ್ ಮತ್ತು ಕ್ಯಾನೈಟ್‌ಗೆ ರಾಯಲ್ಟಿಯ ದರವನ್ನು ಒಂದೇ ಮಟ್ಟದಲ್ಲಿ ಇರಿಸಲಾಗಿದೆ.

ಅನುಮೋದನೆಯು ದೇಶದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಅನೇಕ ಪ್ರಮುಖ ಖನಿಜಗಳ ಆಮದಿಗೆ ಪರ್ಯಾಯ ವ್ಯವಸ್ಥೆಗೆ ಅವಕಾಶ ಕಲ್ಪಿಸುತ್ತದೆ. ಮೂಲಕ ಅಮೂಲ್ಯವಾದ ವಿದೇಶೀ ವಿನಿಮಯ ಉಳಿಸುತ್ತದೆಇದು ಖನಿಜಗಳ ಸ್ಥಳೀಯ ಉತ್ಪಾದನೆಯ ಮೂಲಕ ದೇಶದ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಅನುಮೋದನೆಯು ಗ್ಲಾಕೊನೈಟ್, ಪೊಟಾಶ್, ಎಮರಾಲ್ಡ್, ಪ್ಲಾಟಿನಂ ಸಮೂಹದ ಲೋಹಗಳು, ಆಂಡಲೂಸೈಟ್ ಮತ್ತು ಮಾಲಿಬ್ಡೆನಮ್‌ಗೆ ಸಂಬಂಧಿಸಿದಂತೆ ಖನಿಜ ಬ್ಲಾಕ್ ಗಳ ಹರಾಜನ್ನು ದೇಶದಲ್ಲಿ ಮೊದಲ ಬಾರಿಗೆ ಖಚಿತಪಡಿಸುತ್ತದೆ.

ದೇಶದ ಖನಿಜ ಸಂಪತ್ತಿನ ಹಂಚಿಕೆಯಲ್ಲಿ ಪಾರದರ್ಶಕತೆ ಮತ್ತು ತಾರತಮ್ಯರಹಿತತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹರಾಜಿನ ಮೂಲಕ ಖನಿಜ ರಿಯಾಯಿತಿಗಳನ್ನು ನೀಡುವ ಹೊಸ ನೀತಿ ಆರಂಭಿಸಲು 2015ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಅಂದಿನಿಂದ ಹರಾಜು ನೀತಿಯು ಪ್ರಬುದ್ಧವಾಗಿದೆ. ಖನಿಜ ವಲಯಕ್ಕೆ ಮತ್ತಷ್ಟು ಉತ್ತೇಜನ ನೀಡಲು, 2021ರಲ್ಲಿ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ. ಸುಧಾರಣೆಗಳ ಭಾಗವಾಗಿ, ಖನಿಜ ಬ್ಲಾಕ್‌ಗಳ ಹರಾಜಿಗೆ, ಉತ್ಪಾದನೆಯನ್ನು ಹೆಚ್ಚಿಸಲು, ದೇಶದಲ್ಲಿ ಸುಗಮ ವ್ಯಾಪಾರವನ್ನು ಸುಧಾರಿಸಲು ಮತ್ತು ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಖನಿಜ ಉತ್ಪಾದನೆಯ ಕೊಡುಗೆಯನ್ನು ಹೆಚ್ಚಿಸಲು ಸರಕಾರ ಮೂಲಕ ಪ್ರಮುಖ ಉತ್ತೇಜನ ನೀಡಿದೆ.

ಗೌರವಾನ್ವಿತ ಪ್ರಧಾನಮಂತ್ರಿಯವರು ಮುಂದಿಟ್ಟ ʻಆತ್ಮನಿರ್ಭರ ಭಾರತ್‌ʼ ಆಶಯದಂತೆ ಗಣಿ ಸಚಿವಾಲಯವು ದೇಶದಲ್ಲಿ ಖನಿಜಗಳ ಅನ್ವೇಷಣೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಂಡಿದ್ದು, ಇದು ಹರಾಜಿಗೆ ಹೆಚ್ಚಿನ ಬ್ಲಾಕ್‌ಗಳ ಲಭ್ಯತೆಗೆ ಕಾರಣವಾಗಿದೆ. ಕೇವಲ ಕಬ್ಬಿಣದ ಅದಿರು, ಬಾಕ್ಸೈಟ್, ಸುಣ್ಣದ ಕಲ್ಲುಗಳಂತಹ ಸಾಂಪ್ರದಾಯಿಕ ಖನಿಜಗಳಿಗೆ ಮಾತ್ರವಲ್ಲದೆ ಆಳದಲ್ಲಿ ಅಡಗಿರುವ ಖನಿಜಗಳು, ರಸಗೊಬ್ಬರ ಖನಿಜಗಳು, ನಿರ್ಣಾಯಕ ಖನಿಜಗಳು ಮತ್ತು ಖನಿಜಗಳಿಗೆ ಸಂಬಂಧಿಸಿದಂತೆಯೂ ಅನ್ವೇಷಣಾ ಚಟುವಟಿಕೆಗಳು ಹೆಚ್ಚಿವೆ.

ಕಳೆದ 4-5 ವರ್ಷಗಳಲ್ಲಿ, ʻಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಖನಿಜ ಪರಿಶೋಧನಾ ನಿಗಮ ಲಿಮಿಟೆಡ್ʼನಂತಹ ಕೇಂದ್ರ ಸಂಸ್ಥೆಗಳು ಅನ್ವೇಷಣೆಯನ್ನು ನಡೆಸಿ, ದೇಶದಲ್ಲಿ ಇಲ್ಲಿಯವರೆಗೆ ಗಣಿಗಾರಿಕೆ ಮಾಡದ ಹಲವಾರು ಖನಿಜಗಳ ಬ್ಲಾಕ್‌ಗಳ ಕುರಿತ ವರದಿಗಳನ್ನು ರಾಜ್ಯ ಸರಕಾರಗಳಿಗೆ ಹಸ್ತಾಂತರಿಸಿವೆ. ಗ್ಲಾಕೊನೈಟ್/ ಪೊಟಾಶ್, ಎಮರಾಲ್ಡ್, ಪ್ಲಾಟಿನಂ ಸಮೂಹದ ಲೋಹಗಳು(ಪಿಜಿಎಂ), ಆಂಡಲೂಸೈಟ್ ಮತ್ತು ಮಾಲಿಬ್ಡೆನಮ್ ನಂತಹ ಖನಿಜಗಳ ವಿಷಯಕ್ಕೆ ಬಂದಾಗ, ಭಾರತವು ದೇಶೀಯ ಅಗತ್ಯಗಳನ್ನು ಪೂರೈಸಲು ಸಂಪೂರ್ಣವಾಗಿ ಖನಿಜಗಳ ಆಮದನ್ನು ಅವಲಂಬಿಸಿದೆ. ಖನಿಜ ಸ್ವಾವಲಂಬನೆಯ ಪ್ರಮುಖ ಹೆಜ್ಜೆಯಾಗಿ, ಅನೇಕ ರಾಜ್ಯ ಸರಕಾರಗಳು ಅಂತಹ ಖನಿಜ ಬ್ಲಾಕ್‌ಗಳನ್ನು ಹರಾಜಿಗಾಗಿ ಗುರುತಿಸಿವೆ. ಆದಾಗ್ಯೂ, ಖನಿಜಗಳಿಗೆ ರಾಯಲ್ಟಿಯ ದರವನ್ನು ಪ್ರತ್ಯೇಕವಾಗಿ ಒದಗಿಸಿರಲಿಲ್ಲ ಮತ್ತು ಖನಿಜಗಳ ಗಣಿಗಾರಿಕೆಗೆ ಸೂಕ್ತ ಉತ್ತೇಜನ ದೊರೆತಿರಲಿಲ್ಲ.

ಹೀಗಾಗಿ, ಹರಾಜಿನಲ್ಲಿ ಉತ್ತಮ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಸಲುವಾಗಿ ಸಚಿವಾಲಯವು ಸಮಂಜಸವಾದ ರಾಯಲ್ಟಿ ದರಗಳನ್ನು ಪ್ರಸ್ತಾಪಿಸಿತ್ತು, ಇದನ್ನು ಗೌರವಾನ್ವಿತ ಪ್ರಧಾನ ಮಂತ್ರಿಯವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ. ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳು/ ಇಲಾಖೆಯೊಂದಿಗೆ ವ್ಯಾಪಕ ಸಮಾಲೋಚನೆ ನಂತರ ದರಗಳನ್ನು ನಿಗದಿಪಡಿಸಲಾಗಿದೆ. ಖನಿಜ ಬ್ಲಾಕ್‌ಗಳ ಹರಾಜಿಗೆ ಅಗತ್ಯವಿರುವ ಖನಿಜಗಳ ʻಸರಾಸರಿ ಮಾರಾಟ ಬೆಲೆʼ (ಎಎಸ್‌ಪಿ) ಲೆಕ್ಕಾಚಾರಕ್ಕೂ ಗಣಿ ಸಚಿವಾಲಯವು ಸೂಕ್ತ ವಿಧಾನವನ್ನು ಒದಗಿಸುತ್ತದೆ.

ರಾಜ್ಯ ಸರಕಾರಗಳ ಸಕ್ರಿಯ ಸಹಕಾರದೊಂದಿಗೆ ದೇಶದಲ್ಲಿ 145ಕ್ಕೂ ಹೆಚ್ಚು ಖನಿಜ ಬ್ಲಾಕ್‌ಗಳನ್ನು ಯಶಸ್ವಿಯಾಗಿ ಹರಾಜು ಮಾಡಲಾಗಿದೆ. 2021ರಲ್ಲಿ ಮಾಡಲಾದ ಸುಧಾರಣೆಗಳಿಂದ ಮತ್ತಷ್ಟು ಉತ್ತೇಜನ ದೊರೆತಿದ್ದು, 2021-22 ಆರ್ಥಿಕ ವರ್ಷದಲ್ಲಿ 146ಕ್ಕೂ ಹೆಚ್ಚು ಬ್ಲಾಕ್‌ಗಳನ್ನು ಹರಾಜಿಗೆ ಇಡಲಾಗಿದೆ. ಇದರಲ್ಲಿ 34 ಬ್ಲಾಕ್‌ಗಳನ್ನು ಆರ್ಥಿಕ ವರ್ಷದಲ್ಲಿ ಯಶಸ್ವಿಯಾಗಿ ಹರಾಜು ಮಾಡಲಾಗಿದೆ. ಗ್ಲಾಕೊನೈಟ್/ ಪೊಟಾಶ್, ಎಮರಾಲ್ಡ್, ಪ್ಲಾಟಿನಂ ಸಮೂಹದ ಲೋಹಗಳು(ಪಿಜಿಎಂ), ಆಂಡಲೂಸೈಟ್ ಮತ್ತು ಮಾಲಿಬ್ಡೆನಮ್‌ನಂತಹ ಖನಿಜಗಳಿಗೆ ರಾಯಲ್ಟಿ ಮತ್ತು ʻಎಎಸ್‌ಪಿʼ ನಿರ್ದಿಷ್ಟ ಪಡಿಸಿರುವುದರಿಂದ ಹರಾಜಿಗಾಗಿ ಬ್ಲಾಕ್‌ಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ.

ಗ್ಲೌಕೊನೈಟ್ ಮತ್ತು ಪೊಟಾಶ್‌ನಂತಹ ಖನಿಜಗಳನ್ನು ಕೃಷಿಯಲ್ಲಿ ರಸಗೊಬ್ಬರವಾಗಿ ಬಳಸಲಾಗುತ್ತದೆ. ಪ್ಲಾಟಿನಂ ಸಮೂಹದ ಲೋಹಗಳು (ಪಿಜಿಎಂ) ಅಧಿಕ ಮೌಲ್ಯದ ಲೋಹಗಳಾಗಿದ್ದು ಇವುಗಳನ್ನು ವಿವಿಧ ಕೈಗಾರಿಕೆಗಳಲ್ಲಿ ಹಾಗೂ ನವೀನ ಅನ್ವಯಿಕೆಗಳಲ್ಲಿ ಬಳಸಲಾಗುತ್ತದೆ. ಆಂಡಲೂಸೈಟ್, ಮಾಲಿಬ್ಡಿನಮ್‌ನಂತಹ ಖನಿಜಗಳು ಕೈಗಾರಿಕಾ ಉಪಯೋಗಕ್ಕೆ ಬಳಸಲಾಗುವ ಪ್ರಮುಖ ಖನಿಜಗಳಾಗಿವೆ.

ಖನಿಜಗಳ ದೇಶೀಯ ಗಣಿಗಾರಿಕೆಯನ್ನು ಪ್ರೋತ್ಸಾಹಿಸುವುದು ರಾಷ್ಟ್ರೀಯ ಹಿತಾಸಕ್ತಿಯ ಕ್ರಮವಾಗಿದೆ. ಇದರಿಂದ ಪೊಟ್ಯಾಶ್ ರಸಗೊಬ್ಬರಗಳು ಮತ್ತು ಇತರ ಖನಿಜಗಳ ಆಮದನ್ನು ಕಡಿಮೆ ಮಾಡಲು ನೆರವಾಗುತ್ತದೆ. ಗಣಿ ಸಚಿವಾಲಯ ಕೈಗೊಂಡಿರುವ ಕ್ರಮವು ಗಣಿಗಾರಿಕೆ ವಲಯದಲ್ಲಿ ಉದ್ಯೋಗದ ಸೃಷ್ಟಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಇದು ಕೆಳಹಂತದ ಕೈಗಾರಿಕೆಗಳಿಗೆ ಖನಿಜದ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಕೃಷಿಗೆ ಸಹಾಯಕವಾಗಲಿದೆ.

***


(Release ID: 1804385) Visitor Counter : 188